ನನ್ನ ಮೇಲೆ ಆಸಿಡ್ ಹಾಕಲು ಅಟ್ಟಾಡಿಸಿಕೊಂಡು ಬಂದಿದ್ದರು: ನಟಿ

ದಿನಗಳು ಕಳೆದಂತೆ ಬಿಗ್‌ಬಾಸ್ ಒಟಿಟಿ ಹೆಚ್ಚ-ಹೆಚ್ಚು ವೀಕ್ಷಕರನ್ನು ಆಕರ್ಷಿಸುತ್ತಿದೆ. ಹಲವು ಕುತೂಹಲಕಾರಿ ವಿಷಯಗಳನ್ನು ಸ್ಪರ್ಧಿಗಳು ಪರಸ್ಪರ ಹಂಚಿಕೊಳ್ಳುತ್ತಿದ್ದಾರೆ.

ಶಮಿತಾ ಶೆಟ್ಟಿ ತಮ್ಮ ಜೀವನದ ಕಹಿ ಅನುಭವಗಳ ಬಗ್ಗೆ ಬಿಗ್‌ಬಾಸ್ ಒಟಿಟಿಯಲ್ಲಿ ಈಗಾಗಲೇ ಮಾತನಾಡಿದ್ದಾರೆ. ಶಮಿತಾ ಶೆಟ್ಟಿ ಮಾತ್ರವೇ ಅಲ್ಲದೆ ಹಲವು ನಟ-ನಟಿಯರು ತಮ್ಮ ಜೀವನದ ಕರಾಳ ಅನುಭವಗಳ ಬಗ್ಗೆ ಬಿಗ್‌ಬಾಸ್ ಒಟಿಟಿ ಮನೆಯಲ್ಲಿ ಮಾತನಾಡಿದ್ದಾರೆ. ಕೆಲವರು ಬಿಗ್‌ಬಾಸ್‌ ಮನೆಯಿಂದ ಹೊರಗೆ ಬಂದ ಬಳಿಕ ಮಾತನಾಡುತ್ತಿದ್ದಾರೆ.

ಭೋಜ್‌ಪುರಿ ನಟಿ ಅಕ್ಷರಾ ಸಿಂಗ್ ಕೆಲವು ದಿನಗಳ ಹಿಂದಷ್ಟೆ ಬಿಗ್‌ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ. 29 ದಿನಗಳ ಕಾಲ ಬಿಗ್‌ಬಾಸ್ ಒಟಿಟಿ ಮನೆಯಲ್ಲಿ ಇದ್ದ ಅಕ್ಷರಾ ಹೊರಗೆ ಬಂದ ಮೇಲೆ ಮನೆಯ ಅನುಭವಗಳ ಬಗ್ಗೆ ಮಾಧ್ಯಮಗಳೊಟ್ಟಿಗೆ ಮಾತನಾಡಿದ್ದಾರೆ. ಈ ಸಮಯ ತಮ್ಮ ಜೀವನದಲ್ಲಿ ನಡೆದ ಕರಾಳ ಅನುಭವದ ಬಗ್ಗೆಯೂ ಅಕ್ಷರಾ ಮಾತನಾಡಿದ್ದಾರೆ.

ನನ್ನ ಮಾಜಿ ಪ್ರಿಯಕರ ನನ್ನನ್ನು ಕೊಲ್ಲಲು ನಿರ್ಧರಿಸಿದ್ದ, ಪ್ರತಿದಿನ ನನಗೆ ಕಾಟ ಕೊಡುತ್ತಿದ್ದ. ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ. ನನ್ನ ವೃತ್ತಿಯನ್ನು ಹಾಳು ಮಾಡುವುದಾಗಿ ಹೇಳಿದ್ದ. ಒಮ್ಮೆಯಂತೂ ಕೆಲವು ಹುಡುಗರ ಕೈಗೆ ಆಸಿಡ್ ಬಾಟಲಿ ಕೊಟ್ಟು ನನ್ನ ಮೇಲೆ ಎರಚಲು ಕಳಿಸಿದ್ದ. ಬೀದಿಯಲ್ಲಿ ಮಾದಕ ವಸ್ತು ಸೇವಿಸುವ ಆ ಹುಡುಗರು ಹಣಕ್ಕಾಗಿ ನನ್ನ ಮೇಲೆ ಆಸಿಡ್ ಎರಚಲು ಬಂದಿದ್ದರು. ಅವರಿಂದ ಬಚಾವಾಗಲು ರಸ್ತೆಯಲ್ಲಿ ಓಡಿದ್ದೆ ನಾನು'' ಎಂದು ಕರಾಳ ದಿನವನ್ನು ನೆನಪು ಮಾಡಿಕೊಂಡಿದ್ದಾರೆ ಅಕ್ಷರಾ ಸಿಂಗ್.

ಸಾವು ಕ್ಷುಲ್ಲಕ ಎನಿಸಿಬಿಟ್ಟಿತ್ತು: ಅಕ್ಷರಾ

ಸಾವು ಕ್ಷುಲ್ಲಕ ಎನಿಸಿಬಿಟ್ಟಿತ್ತು: ಅಕ್ಷರಾ

''ಅದು ಬಹಳ ಕಷ್ಟದ ದಿನಗಳು. ಯಾವ ಮಹಿಳೆಗೂ ಅಂಥಹಾ ಕಷ್ಟದ ದಿನಗಳು ಬರಬಾರದು. ನನಗಂತೂ ಸಾವಿನ ಬಗ್ಗೆ ಭಯವೇ ಹೋಗಿತ್ತು. ನಾನು ಅನುಭವಿಸುತ್ತಿದ್ದ ಕಷ್ಟದ ಮುಂದೆ ಸಾವು ದೊಡ್ಡದಲ್ಲ ಎನ್ನಿಸಿತ್ತು. ಸಾಯಿಸುವುದು ಬಿಟ್ಟರೆ ಹೆಚ್ಚಿನದ್ದೇನೂ ಮಾಡಲು ಸಾಧ್ಯವಿಲ್ಲ ತಾನೆ'' ಎನಿಸಿತ್ತು ನನಗೆ. ನಾನು ಖಿನ್ನತೆಗೆ ಒಳಗಾಗಿದ್ದೆ. ನನ್ನ ತಂದೆಯೇ ನನ್ನನ್ನು ಕಾಪಾಡಿದರು'' ಎಂದಿದ್ದಾರೆ ಅಕ್ಷರಾ ಸಿಂಗ್.

ನನ್ನ ತಂದೆಯ ಮಾತುಗಳು ಧೈರ್ಯ ತುಂಬಿದವು: ಅಕ್ಷರಾ

ನನ್ನ ತಂದೆಯ ಮಾತುಗಳು ಧೈರ್ಯ ತುಂಬಿದವು: ಅಕ್ಷರಾ

''ನಾನು ಖಿನ್ನತೆಯಲ್ಲಿದ್ದಾಗ ನನ್ನ ತಂದೆ ನನ್ನೊಂದಿಗೆ ಮಾತನಾಡುತ್ತಿದ್ದರು ಅದು ನನಗೆ ಬಹಳ ಧೈರ್ಯ ತುಂಬಿತು. ಇನ್ನು ಮುಂದಿನ ನಿನ್ನ ಬದುಕನ್ನು ಹೀಗೆಯೇ ಹೆದರಿಕೊಂಡು ಬದುಕುವುದಾದರೆ ನೀನು ಆತ್ಮಹತ್ಯೆ ಮಾಡಿಕೊಳ್ಳುವುದು ಒಳ್ಳೆಯದು ಎಂದು ನನ್ನ ತಂದೆ ಹೇಳಿದ್ದರು. ಅವರು ನನಗೆ ಬಹಳ ಧೈರ್ಯ ತುಂಬಿದರು. ಅಪ್ಪನ ಮಾತುಗಳಿಂದಾಗಿಯೇ ನಾನು ಖಿನ್ನತೆಯಿಂದ ಹೊರಗೆ ಬಂದೆ. ಧೈರ್ಯವಾಗಿ ಜೀವನವನ್ನು ಎದುರಿಸುವುದು ಕಲಿತೆ'' ಎಂದಿದ್ದಾರೆ ಅಕ್ಷರಾ ಸಿಂಗ್.

ಇಬ್ಬರು ಒಟ್ಟಿಗೆ ಹೊರಗೆ ಬಂದರು

ಇಬ್ಬರು ಒಟ್ಟಿಗೆ ಹೊರಗೆ ಬಂದರು

ಅಕ್ಷರಾ ಸಿಂಗ್ ಬಿಗ್‌ಬಾಸ್‌ ಒಟಿಟಿ ಮನೆಯಲ್ಲಿ 29 ದಿನ ಇದ್ದರು. ಬಿಗ್‌ಬಾಸ್ ಮನೆಯಲ್ಲಿ ಪ್ರತೀಕ್ ಸೇಹಜ್‌ಪಾಲ್‌ ಜೊತೆಗೆ ಅಕ್ಷರಾ ಸಿಂಗ್‌ ಆತ್ಮೀಯತೆ ಹೊಂದಿದ್ದರು. ಪ್ರತೀಕ್ ಸಹ ಅಕ್ಷರಾ ಜೊತೆ ಆತ್ಮೀಯವಾಗಿದ್ದ ಆದರೆ ಅಚಾನಕ್ಕಾಗಿ ಪ್ರತೀಕ್ ನೇಹಾ ಬಾಸಿನ್‌ ಹಿಂದೆ ಬಿದ್ದ. ಇದನ್ನು ಸಹಿಸದ ಅಕ್ಷರಾ ಸಿಂಗ್ ಮತ್ತೊಬ್ಬ ಸ್ಪರ್ಧಿ ಮಿಲಿಂದ್ ಗಬಾ ಜೊತೆ ಸೇರಿ ಹೊಸ ಆಟ ಹೆಣೆದರು. ಆದರೆ ಕಳೆದ ವಾರದ ಅಕ್ಷರಾ ಸಿಂಗ್ ಬಿಗ್‌ಬಾಸ್ ಮನೆಯಿಂದ ಎಲಿಮಿನೇಟ್ ಆದರು, ಅವರೊಟ್ಟಿಗೆ ಮಿಲಿಂದ್ ಸಹ ಎಲಿಮಿನೇಟ್ ಆದರು.

ಅಪಘಾತದಲ್ಲಿ ತೀರಿಕೊಂಡ ಬಾಯ್‌ಫ್ರೆಂಡ್ ಬಗ್ಗೆ ಹೇಳಿದ್ದ ಶಮಿತಾ

ಅಪಘಾತದಲ್ಲಿ ತೀರಿಕೊಂಡ ಬಾಯ್‌ಫ್ರೆಂಡ್ ಬಗ್ಗೆ ಹೇಳಿದ್ದ ಶಮಿತಾ

ಬಿಗ್‌ಬಾಸ್ ಒಟಿಟಿ ಮನೆಯಲ್ಲಿ ಶಮಿತಾ ಶೆಟ್ಟಿ ಹೆಚ್ಚು ಜನಪ್ರಿಯತೆ ಗಳಿಸಿರುವ ಸ್ಪರ್ಧಿಯಾಗಿದ್ದಾರೆ. ಆರಂಭದಲ್ಲಿ ಸ್ಪರ್ಧಿಗಳೊಟ್ಟಿಗೆ ಹೊಂದಿಕೊಳ್ಳಲು ಬಹಳ ಕಷ್ಟಪಟ್ಟ ಶಮಿತಾ ಇತ್ತೀಚೆಗೆ ಆರಾಮವಾಗಿ ಆಟವಾಡುತ್ತಿದ್ದಾರೆ. ಶಮಿತಾ ಶೆಟ್ಟಿ ತಮ್ಮ ಜೀವನದಲ್ಲಿ ಆದ ಕೆಟ್ಟ ಘಟನೆ ಬಗ್ಗೆ ಮಾತನಾಡಿದ್ದರು, ''ನನ್ನ ಮೊದಲ ಬಾಯ್‌ಫ್ರೆಂಡ್ ರಸ್ತೆ ಅಪಘಾತದಲ್ಲಿ ನಿಧನ ಹೊಂದಿದ'' ಎಂದು ಶಮಿತಾ ಶೆಟ್ಟಿ ಬಿಗ್‌ಬಾಸ್ ಮನೆಯಲ್ಲಿ ಹೇಳಿದರು. ಈ ಮಾಹಿತಿಯನ್ನು ಶಮಿತಾ ಮುಂಚೆ ಎಲ್ಲಿಯೂ ಹೇಳಿಕೊಂಡಿರಲಿಲ್ಲ.

More from Filmibeat

English summary
Bigg Boss OTT contestant and actress Akshara Singh talked about her dark past. She said her ex boyfriend sent rowdies to throw acid on her.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X