ಖ್ಯಾತ ನಿರ್ದೇಶಕನೊಂದಿಗೆ ಅಕ್ರಮ ಸಂಬಂಧ: ಕಂಗನಾ ಎದುರು ಸತ್ಯ ಬಿಚ್ಚಿಟ್ಟ ನಟಿ!
ನಟಿ ಕಂಗನಾ ರನೌತ್ ನಡೆಸಿಕೊಡುತ್ತಿರುವ ಶೋ 'ಲಾಕ್ ಅಪ್' ದಿನೇ ದಿನೇ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಿದೆ. ಆರಂಭದಲ್ಲಿ ಇದು 'ಬಿಗ್‌ಬಾಸ್'ನ ಪೇಲವ ನಕಲು ಎನಿಸಿಕೊಂಡಿತ್ತು, ಆದರೆ ಬಿಗ್‌ಬಾಸ್‌ಗಿಂತಲೂ ಭಿನ್ನ ದಾರಿ ಹಾದಿ ಹಿಡಿದು ತನ್ನದೇ ಅಭಿಮಾನಿಗಳನ್ನು, ವೀಕ್ಷಕರನ್ನು ಗಳಿಸಿಕೊಳ್ಳುತ್ತಿದೆ.
ಒಟಿಟಿಯಲ್ಲಿ ಪ್ರಸಾರವಾಗುತ್ತಿರುವ ಈ ಶೋ ಬಿಗ್‌ಬಾಸ್ ಅನ್ನು ಹೋಲುವಂತೆಯೇ ಇದೆಯಾದರೂ ಅದಕ್ಕಿಂತಲೂ ಹೆಚ್ಚು ವಿವಾದ, ಜಗಳಗಳನ್ನು ಒಳಗೊಂಡಿದೆ. ಕೆಲವು ದಿನಗಳ ಹಿಂದಷ್ಟೆ ಕ್ಯಾಮೆರಾ ಮುಂದೆ ಲೈವ್ ಆಗಿ ಪೂನಂ ಪಾಂಡೆ ಟಿ ಶರ್ಟ್ ತೆಗೆದಿದ್ದು ಇದೇ ಶೋನಲ್ಲಿ. ನಂತರ ಇದೀಗ ನಟಿಯೊಬ್ಬರು ತಾವು ಖ್ಯಾತ ಬಾಲಿವುಡ್ ನಿರ್ದೇಶಕನೊಟ್ಟಿಗೆ ಅಕ್ರಮ ಸಂಬಂಧ ಹೊಂದಿದ್ದಾಗಿ ಹೇಳಿಕೊಂಡಿದ್ದಾರೆ.
ನಟಿ ಮಂದಾನಾ ಕರೀಮಿ ತಾವು ಬಾಲಿವುಡ್‌ನ ಜನಪ್ರಿಯ ನಿರ್ದೇಶಕನೊಬ್ಬನೊಟ್ಟಿಗೆ ಗುಪ್ತ ಸಂಬಂಧದಲ್ಲಿದ್ದುದಾಗಿ ಅದರಿಂದ ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದಾಗಿಯೂ ಶೋನಲ್ಲಿ ಹೇಳಿಕೊಂಡಿದ್ದಾರೆ. ಮಂದಾನಾ ಕರೀಮಿಯ ಕತೆ ಕೇಳಿ ನಟಿ ಕಂಗನಾ ಸೇರಿದಂತೆ ಶೋನಲ್ಲಿದ್ದ ಹಲವರು ಭಾವುಕರಾಗಿದ್ದಾರೆ.

ಮಂದಾನಾ ಕರೀಮಿ, ಪಾಯಲ್ ರೊಹ್ಟಗಿ, ಸೈಶಾ ಶಿಂಧೆ, ಶಿವಂ ಶರ್ಮಾ ಅವರುಗಳಿಗೆ ಈ ವಾರ ಅತಿ ಕಡಿಮೆ ಮತಗಳು ಬಂದಿದ್ದವು. ಕಡಿಮೆ ಮತ ಬಂದವರು ಎಲಿಮಿನೇಶನ್‌ನಿಂದ ತಪ್ಪಿಸಿಕೊಳ್ಳಲು ತಮ್ಮ ಜೀವನದಲ್ಲಿ ನಡೆದಿರುವ ಅತಿ ಕೆಟ್ಟ ಘಟನೆ ಅಥವಾ ತಾವು ಮುಚ್ಚಿಟ್ಟ ಘಟನೆಯೊಂದನ್ನು ಎಲ್ಲರ ಮುಂದೆ ಹೇಳಿಕೊಳ್ಳಬೇಕಾಗಿರುತ್ತದೆ.
ಈ ಅವಕಾಶವನ್ನು ಪಾಯಲ್ ಹಾಗೂ ಸೈಶಾ ಕೈಬಿಟ್ಟರು. ಆದರೆ ಮಂದಾನಾ ಕರೀಮಿ ತಮ್ಮ ಜೀವನದ ಕರಾಳ ಘಟನೆಯ ಬಗ್ಗೆ ಎಲ್ಲರ ಎದುರು ಹೇಳಿಕೊಂಡರು. ತಮಗೆ ಬಾಲಿವುಡ್‌ನ ಖ್ಯಾತ ನಿರ್ದೇಶಕನೊಂದಿಗೆ ಸಂಬಂಧ ಇದ್ದುದಾಗಿ ಹೇಳಿದ ಕರೀಮಿ, ಅದರಿಂದಾಗಿ ತಾವು ಗರ್ಭಿಣಿ ಆಗಿದ್ದ ವಿಷಯವನ್ನು ಹೇಳಿಕೊಂಡರು. ಈ ವೇಳೆ ನಟಿ ಕಂಗನಾ ರನೌತ್ ಸಹ ಕೆಲ ಕಾಲ ಭಾವುಕರಾಗಿ ಕಣ್ಣೀರು ಹಾಕಿದರು. ಶೋನ ಇತರ ಸ್ಪರ್ಧಿಗಳು ಸಹ ಕಣ್ಣೀರು ಹಾಕಿ ಬೇಸರ ವ್ಯಕ್ತಪಡಿಸಿದರು. ನಟಿ ಮಂದಾನಾ ಕರೀಮಿಯನ್ನು ಸಮಾಧಾನಪಡಿಸಿದರು.
''ನಾನು ಪತಿ ಗೌರವ್ ಗುಪ್ತಾನಿಂದ ದೂರವಾದಾಗ ಬಹಳ ಬೇಸರದಲ್ಲಿದ್ದೆ. ಆಗಲೇ ನನಗೆ ಆ ನಿರ್ದೇಶಕನ ಪರಿಚಯವಾಯ್ತು. ನಾವಿಬ್ಬರೂ ಆಪ್ತವಾಗಿದ್ದೆವು. ಪರಸ್ಪರ ಸಂಬಂಧ ಹೊಂದಿದ್ದವು. ಒಮ್ಮೆ ನಾವು ತಂದೆ-ತಾಯಿ ಆಗುವ ಬಗ್ಗೆ ಯೋಚಿಸಿದೆವು. ಅಂತೆಯೇ ನಾನು ಗರ್ಭಿಣಿ ಆದೆ ಆದರೆ ಆತ ಆ ನಂತರ...'' ಎಂದು ಹೇಳುತ್ತಾ ಮಂದಾನಾ ಕಣ್ಣೀರು ಹಾಕಿದ್ದಾರೆ.

ನಟಿ ಕಂಗಾನಾ ರನೌತ್ ಸಹ ತಾವು ಜೀವನದಲ್ಲಿ ಸಾಕಷ್ಟು ಪುರುಷರಿಂದ ಮೋಸ ಹೋಗಿರುವುದಾಗಿ ಈ ಹಿಂದೆ ಹೇಳಿಕೊಂಡಿದ್ದರು. ಒಬ್ಬನಂತೂ ನನ್ನನ್ನು ಸೌದಿಯ ಅರಬಿ ದೊರೆಗಳಿಗೆ ಮಾರಲು ಮುಂದಾಗಿದ್ದ ಎಂದೂ ಕಂಗನಾ ಹೇಳಿದ್ದರು. ನಟ ಹೃತಿಕ್ ರೋಷನ್ ಸಹ ತಮ್ಮೊಟ್ಟಿಗೆ ಸಂಬಂಧ ಬೆಳೆಸಿ ಮೋಸ ಮಾಡಿದ ಎಂದು ಹೇಳಿಕೊಂಡಿದ್ದರು. ಈ ಕಾರಣದಿಂದಾಗಿ ನಟಿ ಮಂದಾನಾ ಕರೀಮಿ ತಾವು ನಿರ್ದೇಶಕನಿಂದ ಮೋಸ ಹೋದ ಕತೆ ಹೇಳಿದಾಗ ಕಂಗನಾ ತುಸು ಹೆಚ್ಚೇ ಭಾವುಕರಾದರು.
''ಆ ಬಾಲಿವುಡ್ ನಿರ್ದೇಶಕ ಮಹಿಳೆಯರ ಹಕ್ಕುಗಳ ಬಗ್ಗೆ ಹಲವು ಸಿನಿಮಾಗಳನ್ನು ತೆಗೆದಿದ್ದಾನೆ. ಬಾಲಿವುಡ್ ಸಿನಿ ಪ್ರೇಮಿಗಳ ಆದರ್ಶ ಅವನು. ಆದರೆ ನನಗೆ ಹೀಗೆ ಮಾಡಿದ'' ಎಂದು ಕರೀಮಿ ಹೇಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಶೋನ ಪ್ರೋಮೊ ಅಷ್ಟೆ ಇದೀಗ ಬಿಡುಗಡೆ ಆಗಿದ್ದು, ಶೋ ಆಲ್ಟ್ ಬಾಲಾಜಿಯಲ್ಲಿ ಶೀಘ್ರದಲ್ಲಿಯೇ ಪ್ರಸಾರವಾಗಲಿದೆ.
ಮಂದಾನಾ ಕರೀಮಿಗೆ ಕೈ ಕೊಟ್ಟ ಬಾಲಿವುಡ್‌ನ ಆ ಜನಪ್ರಿಯ ನಿರ್ದೇಶಕ ಯಾರೆಂದು ತಿಳಿದುಕೊಳ್ಳಲು ಪ್ರೇಕ್ಷಕರು ಕಾತರರಾಗಿದ್ದಾರೆ. ಕಂಗನಾ ನಡೆಸಿಕೊಡುವ ಈ ರಿಯಾಲಿಟಿ ಶೋ ಆಲ್ಟ್ ಬಾಲಾಜಿಯಲ್ಲಿ ಪ್ರಸಾರವಾಗುತ್ತದೆ.


Click it and Unblock the Notifications











