For Quick Alerts
  ALLOW NOTIFICATIONS  
  For Daily Alerts

  ಹೊಚ್ಚ ಹೊಸ ಒಟಿಟಿ ವೇದಿಕೆ ಮೂಲಕ ಮಾದಕ ನಟಿ ರೀಎಂಟ್ರಿ

  By ಜೇಮ್ಸ್ ಮಾರ್ಟಿನ್
  |

  ಕೊರೊನಾ ಸೋಂಕು ಹೆಚ್ಚಾಗಿ ಚಿತ್ರರಂಗ ಕೂಡಾ ತತ್ತರಿಸುತ್ತಿದೆ. ಲಾಕ್ ಡೌನ್ ಸಂದರ್ಭದಲ್ಲಿ ಹೊಸ ಸಾಧ್ಯತೆಗಳು, ಹೊಸ ಬಗೆ ಚಿತ್ರಗಳನ್ನು ತೆರೆಗೆ ತರುವ ಯತ್ನ ಕೂಡಾ ಜಾರಿಯಲ್ಲಿದೆ. ಈ ನಡುವೆ ಒಟಿಟಿ ಹೊಸ ವೇದಿಕೆಯಾಗಿ ಬೆಳೆಯುತ್ತಿದ್ದು, ಒಂದು ಕಾಲದ ಮಾದಕ ನಟಿ ನಮಿತಾ ಕೂಡಾ ಒಟಿಟಿಗೆ ಮಾರು ಹೋಗಿದ್ದಾರೆ.

  ತೆಲುಗು ಚಿತ್ರರಂಗದಲ್ಲಿ ದೊಡ್ಡ ದೊಡ್ಡ ಸಿನಿಮಾಗಳು ತೆರೆಗೆ ಬರಲು ಸಿದ್ಧವಾಗಿದ್ದರೆ, ಕೆಲವರು ಒಟಿಟಿಗಾಗಿಯೇ ಸಿನಿಮಾ ನಿರ್ಮಿಸುತ್ತಿದ್ದಾರೆ. ಮದುವೆ ಬಳಿಕ ಸಿನಿಮಾ ರಂಗದಿಂದ ಹೊರಗುಳಿದಿದ್ದ ನಮಿತಾ ಈಗ ತಮ್ಮದೇ ಆದ ಒಟಿಟಿ ಫ್ಲಾಟ್ ಫಾರ್ಮ್ ಮೂಲಕ ರೀ ಎಂಟ್ರಿ ಕೊಡುತ್ತಿದ್ದಾರೆ.

  ಶ್ರೀರಾಮನಾಗಿ ದಿಗಂತ್, ಸದ್ದಿಲ್ಲದೆ ಬಿಡುಗಡೆ ಆಯ್ತು ವೆಬ್ ಸೀರೀಸ್ಶ್ರೀರಾಮನಾಗಿ ದಿಗಂತ್, ಸದ್ದಿಲ್ಲದೆ ಬಿಡುಗಡೆ ಆಯ್ತು ವೆಬ್ ಸೀರೀಸ್

  ನಮಿತಾ ಕನಸಿಗೆ ನೆರವಾಗುತ್ತಿರುವ ಸಾಫ್ಟ್ ವೇರ್ ಇಂಜಿನಿಯರ್ ರವಿವರ್ಮಾ ಎಂಬುವರು ಹೊಸ ಒಟಿಟಿ ವೇದಿಕೆ ವಿನ್ಯಾಸಗೊಳಿಸಿದ್ದಾರೆ. ಹೊಸ ಒಟಿಟಿ ವೇದಿಕೆಗೆ ನಮಿತಾ ಟಾಕೀಸ್ ಎಂದು ಹೆಸರಿಡಲಾಗಿದೆ.

  Recommended Video

  ಶಕೀಲಾ ಬಾಳಲ್ಲಿ 15 ಜನ ಪುರುಷರು ಬಂದು ಹೋದರು,ಆದ್ರೆ... | Filmibeat Kannada

  'ನಮಿತಾ ಟಾಕೀಸ್' ಮೂಲಕ ಕಿರುಚಿತ್ರಗಳು ಮತ್ತು ಹೊಸ ನಿರ್ದೇಶಕರನ್ನು ಉತ್ತೇಜಿಸುವ ಉದ್ದೇಶವನ್ನು ನಮಿತಾ ಹೊಂದಿದ್ದಾರೆ. ಚಲನಚಿತ್ರಗಳಲ್ಲದೆ, ವೆಬ್ ಸರಣಿಗಳು ಸಹ ತಮ್ಮ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಮನರಂಜನೆ ನೀಡಲಿವೆ ಎಂದು ನಮಿತಾ ಹೇಳಿದ್ದಾರೆ.

  English summary
  Namitha is launching a new OTT platform named Namitha Talkies with Ravi Varma, a software engineer.
  Friday, May 7, 2021, 9:03
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X