For Quick Alerts
  ALLOW NOTIFICATIONS  
  For Daily Alerts

  'ದಿ ಫ್ಯಾಮಿಲಿ ಮ್ಯಾನ್-2'; ಸಮಂತಾ ನಟನೆಗೆ ಮೋಹಕ ತಾರೆ ರಮ್ಯಾ ಫಿದಾ

  |

  ಟಾಲಿವುಡ್ ನಟಿ ಸಮಂತಾ ಅಕ್ಕಿನೇನಿ ಸದ್ಯ ಟಾಕ್ ಆಫ್ ದಿ ಟೌನ್. ದಿ ಫ್ಯಾಮಿಲಿ ಮ್ಯಾನ್-2 ವೆಬ್ ಸೀರಿಸ್ ಬಿಡುಗಡೆಯಾದ ಬಳಿಕ ಸಮಂತಾ ಖ್ಯಾತಿ ಮತ್ತಷ್ಟು ಎತ್ತರಕ್ಕೆ ಏರಿದೆ. ರಾಜಿಯಾಗಿ ಸಮಂತಾ ಎಲ್ಲರ ಹೃದಯ ಗೆದ್ದಿದ್ದಾರೆ. ಗ್ಲಾಮ್ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಸ್ಯಾಮ್ ಮೊದಲ ಬಾರಿಗೆ ರಾಜಿಯಂತ ರೆಬಲ್ ಮಹಿಳಾ ಪಾತ್ರದಲ್ಲಿ ಮಿಂಚಿದ್ದಾರೆ.

  ಸಮಂತಾಗಾಗಿ The Family Man 2 ಸಿನಿಮಾ ನೋಡಿ ಮೆಚ್ಚಿಕೊಂಡ Ramya | Filmibeat Kannada

  ಸಮಂತಾ ಅದ್ಭುತ ನಟನೆಗೆ ಅಭಿಮಾನಿಗಳು ಮಾತ್ರವಲ್ಲದೇ ಅನೇಕ ಸಿನಿ ಗಣ್ಯರು ಸಹ ಫಿದಾ ಆಗಿದ್ದಾರೆ. ನಟನೆ ಜೊತೆಗೆ ಸಮಂತಾ ಆಕ್ಷನ್ ದೃಶ್ಯಗಳಲ್ಲೂ ಮಿಂಚಿದ್ದಾರೆ. ಯಾವುದೇ ಡ್ಯೂಪ್ ಬಳಸದೆ ಸ್ಯಾಮ್ ಸಾಕಷ್ಟು ಸ್ಟಂಟ್ ಮಾಡಿದ್ದಾರೆ. ಇತ್ತೀಚಿಗೆ ಸ್ಟಂಟ್ ಮಾಡುತ್ತಿದ್ದ ವಿಡಿಯೋವನ್ನು ಹಂಚಿಕೊಂಡಿದ್ದರು. ಈ ಆಕ್ಷನ್ ವಿಡಿಯೋಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  ಸಮಂತಾ ವಿಡಿಯೋ ನೋಡಿ ಅವಾಕ್ಕಾದ ರಶ್ಮಿಕಾ ಮಂದಣ್ಣ, ಕೀರ್ತಿ ಸುರೇಶ್ಸಮಂತಾ ವಿಡಿಯೋ ನೋಡಿ ಅವಾಕ್ಕಾದ ರಶ್ಮಿಕಾ ಮಂದಣ್ಣ, ಕೀರ್ತಿ ಸುರೇಶ್

  ಇದೀಗ ಸ್ಯಾಂಡಲ್ ವುಡ್ ನ ಮೋಹಕ ತಾರೆ ರಮ್ಯಾ ಕೂಡ ಸಮಂತಾ ನಟನೆಗೆ ಫಿದಾ ಆಗಿದ್ದಾರೆ. ದಿ ಫ್ಯಾಮಿಲಿ ಮ್ಯಾನ್-2 ವೀಕ್ಷಿಸಿದ ರಮ್ಯಾ, ಸಮಂತನಾ ನಟನೆಯನ್ನು ಮೆಚ್ಚಿಕೊಂಡಿದ್ದಾರೆ. ಸಮಂತಾಗಾಗಿ ಫ್ಯಾಮಿಲಿ ಮ್ಯಾನ್-2 ನೋಡಿರುವುದಾಗಿ ರಮ್ಯಾ ಹೇಳಿದ್ದಾರೆ.

  ದಿ ಫ್ಯಾಮಿಲಿ ಮ್ಯಾನ್ ಮೊದಲ ಭಾಗ ನೋಡಿಲ್ಲ ಆದರೆ ಸಮಂತಾಗಾಗಿ ಪಾರ್ಟ್-2 ನೋಡಿರುವುದಾಗಿ ಹೇಳಿದ್ದಾರೆ. 'ಸಮಂತಾ ಎಷ್ಟು ಅಧ್ಭುತವಾಗಿ ನಟಿಸಿದ್ದಾರೆ. ನಾನು ಫ್ಯಾಮಿಲಿ ಮ್ಯಾನ್ ನೋಡಿಲ್ಲ. ಆದರೆ ಸಮಂತಾಗಾಗಿ ಫ್ಯಾಮಿಲಿ ಮ್ಯಾನ್-2 ನೋಡಿದೆ. ಅದ್ಭುತ ಪ್ರದರ್ಶನ. ಎಲ್ಲಾ ಸ್ಟಂಟ್ ಗಳನ್ನು ಸ್ವತಹ ಅವರೇ ಮಾಡಿದ್ದಾರೆ. ಸ್ಯಾಮ್ ನೀವು ಮತ್ತೊಬ್ಬ ಅಭಿಮಾನಿಯನ್ನು ಸಂಪಾದಿಸಿದ್ದೀರಿ' ಎಂದು ರಮ್ಯಾ ತನ್ನ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

  ಇತ್ತೀಚಿಗೆ ರಮ್ಯಾ ಸಾಕಷ್ಟು ಸಿನಿಮಾಗಳು ಮತ್ತು ವೆಬ್ ಸರಣಿಗಳನ್ನು ವೀಕ್ಷಿಸುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಅಭಿಮಾನಿಗಳ ಜೊತೆ ಆಗಾಗ ಸಂವಾದ ನಡೆಸುವ ರಮ್ಯಾ ಇತ್ತೀಚಿಗೆ ಒಂದಿಷ್ಟು ವೆಬ್ ಸರಣಿಗಳನ್ನು ನೋಡಿರುವ ಬಗ್ಗೆಯೂ ಹಂಚಿಕೊಂಡಿದ್ದರು.

  ಇನ್ನು ಸಮಂತಾ ಸ್ಟಂಟ್ ಗೆ ನಟಿ ರಶ್ಮಿಕಾ, ಕೀರ್ತಿ ಸುರೇಶ್, ಅನುಪಮಾ ಪರಮೇಶ್ವರನ್ ಸೇರಿದಂತೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  English summary
  Kannada Actress Ramya likes Samantha Acting in The Family man-2.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X