ತಂದೆಯಿಂದ ಕಿರುಕುಳ, 17 ವಯಸ್ಸಿಗೆ ಪೋರ್ನ್ ಸ್ಟಾರ್ ಪಟ್ಟ: ಅಂತರಂಗ ಬಿಚ್ಚಿಟ್ಟ ನಟಿ
ಬಿಗ್‌ಬಾಸ್ ಮನೆ ಸೆಲೆಬ್ರಿಟಿಗಳಿಗೆ ತಮ್ಮ ಭೂತವನ್ನು, ವಾಸ್ತವವನ್ನು ತೆರೆದಿಡುವ ವೇದಿಕೆ. ಹಲವು ಸೆಲೆಬ್ರಿಟಿಗಳ ಜೀವನದ ಕಹಿ ಘಟನೆಗಳು ಬಿಗ್‌ಬಾಸ್‌ನಲ್ಲಿ ಬಿಚ್ಚಿಕೊಂಡಿವೆ.
ಇದೀಗ ಬಿಗ್‌ಬಾಸ್ ಒಟಿಟಿ ಪ್ರಸಾರವಾಗುತ್ತಿದ್ದು, ಈ ರಿಯಾಲಿಟಿ ಶೋನಲ್ಲಿಯೂ ಹಲವು ಸೆಲೆಬ್ರಿಟಿಗಳ ಬದುಕಿನ ಕಹಿ ಘಟನೆಗಳು, ಅವರ ಸಂಘರ್ಷಗಳು, ಕನಸುಗಳು, ಆಸೆಗಳು, ಸಮಸ್ಯೆಗಳು ಎಲ್ಲವೂ ಹೊರ ಬರುತ್ತಿವೆ.
ಬಿಗ್‌ಬಾಸ್ ಒಟಿಟಿಯ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದ, ಈಗ ಮನೆಯಿಂದ ಎಲಿಮಿನೇಟ್ ಆಗಿರುವ ಉರ್ಫಿ ಜಾವೇದ್ ತಮ್ಮ ಬದುಕಿನಲ್ಲಿ ತಾವು ಎದುರಿಸಿದ ಅತಿ ಕ್ಲಿಷ್ಟಕರ ಘಟನೆಗಳ ಬಗ್ಗೆ ಮಾತನಾಡಿದ್ದಾರೆ. ಇನ್ನೂ ಹದಿನೇಳು ವರ್ಷ ವಯಸ್ಸಿದ್ದಾಗಲೇ ಪೋರ್ನ್ ನಟಿ ಎಂಬ ಪಟ್ಟ ಹಣೆಗೆ ಅಂಟಿದ್ದರ ಬಗ್ಗೆಯೂ ಭಾವುಕರಾಗಿ ಉರ್ಫಿ ಮಾತನಾಡಿದ್ದಾರೆ.
ಉರ್ಫಿ ಜಾವೇದ್ ಇನ್ನೂ ಹದಿನೇಳು ವರ್ಷದವಳಾಗಿದ್ದಾಗ ಆಕೆಯ ಚಿತ್ರಗಳನ್ನು ಕೆಲವು ಕಿಡಿಗೇಡಿಗಳು ಪೋರ್ನ್ ಸೈಟ್‌ನಲ್ಲಿ ಅಪ್‌ಲೋಡ್ ಮಾಡಿಬಿಟ್ಟಿದ್ದರಂತೆ. ಆ ಸಮಯದಲ್ಲಿ ಸಾಕಷ್ಟು ಮಾನಸಿಕ ಹಿಂಸೆಯನ್ನು ತಾವು ಅನುಭವಿಸಿದ್ದಾಗಿ ನಟಿ ಹೇಳಿದ್ದಾರೆ. ''ಆ ಸಮಯದಲ್ಲಿ ಮನೆಯವರಿಂದ ನನಗೆ ತುಸುವೂ ಸಹಕಾರ ಸಿಗಲಿಲ್ಲ. ನನ್ನನ್ನು ಬಹಳಷ್ಟು ತೆಗಳಿದರು, ದೈಹಿಕ ಹಲ್ಲೆ ಮಾಡಿದರು'' ಎಂದಿದ್ದಾರೆ ನಟಿ.

ನನ್ನ ಪೋರ್ನ್ ಸ್ಟಾರ್ ಎಂದು ಕರೆದಿದ್ದರು: ಉರ್ಫಿ
ನನ್ನ ಚಿತ್ರಗಳು ಪೋರ್ನ್ ಸೈಟ್‌ಗಳಲ್ಲಿ ಕಾಣಿಸಿಕೊಂಡಾಗ ನಮ್ಮ ಸಂಬಂಧಿಗಳು ನನ್ನನ್ನು ಪೋರ್ನ್ ಸ್ಟಾರ್ ಎಂದು ಗುಪ್ತನಾಮದಿಂದ ಕರೆಯುತ್ತಿದ್ದರು. ನಾನು ನಿಜವಾಗಿಯೂ ಪೋರ್ನ್ ಸಿನಿಮಾಗಳಲ್ಲಿ ನಟಿಸುತ್ತೇನೆಂದು ತಿಳಿದುಕೊಂಡಿದ್ದರು. ಪೋರ್ನ್ ಸಿನಿಮಾಗಳಿಂದ ಹಣ ಸಂಪಾದನೆ ಮಾಡುತ್ತಿದ್ದೀನೆಂದು ನನ್ನ ಬ್ಯಾಂಕ್ ಖಾತೆಗಳನ್ನು, ನನ್ನ ಕೋಣೆ ಎಲ್ಲವನ್ನೂ ಹುಡುಕಿದ್ದರು'' ಎಂದಿದ್ದಾರೆ ಉರ್ಫಿ.

ತಂದೆಯಿಂದ ದೈಹಿಕ, ಮಾನಸಿಕ ಕಿರುಕುಳ: ಉರ್ಫಿ
ನನ್ನ ತಂದೆಯಂತೂ ನನಗೆ ದೈಹಿಕವಾಗಿ ಮಾನಸಿಕವಾಗಿ ಬಹಳ ಹಿಂಸೆ ನೀಡುತ್ತಿದ್ದರು. ನಾನು ಎದುರು ಬೀಳಲು ಸಹ ಆಗುತ್ತಿರಲಿಲ್ಲ. ಮಹಿಳೆಯರು ಮೌನವಾಗಿಯಷ್ಟೆ ಇರಬೇಕು ಎಂದು ನಮಗೆ ಹೇಳಿಕೊಡಲಾಗಿತ್ತು. ಸತತವಾಗಿ ಎರಡು ವರ್ಷ ನಾನು ಆ ಹಿಂಸೆಯನ್ನು ತಡೆದುಕೊಂಡಿದ್ದೆ. ನನ್ನನ್ನು ಕೆಟ್ಟ ಕೆಟ್ಟ ಹೆಸರುಗಳಿಂದ ಕರೆಯಲಾಗುತ್ತಿತ್ತು. ನಾನು ನನ್ನ ಹೆಸರನ್ನು ಸಹ ಮರೆತು ಹೋಗಿದ್ದೆ. ನಾನು ಅನುಭವಿಸಿದ ಕಷ್ಟವನ್ನು ಇನ್ನಾವ ಹೆಣ್ಣು ಮಕ್ಕಳು ಸಹ ಅನುಭವಿಸುವುದು ಬೇಡ ಎಂದಿದ್ದಾರೆ ಉರ್ಫಿ.

ಮನೆ ಬಿಟ್ಟು ಓಡಿ ಹೋಗಿದ್ದ ಉರ್ಫಿ
ತಮ್ಮ ತಂದೆಯ ಕಾಟ ತಾಳಲಾರದೆ ಉರ್ಫಿ ಇಬ್ಬರು ತಂಗಿಯರನ್ನು ಕರೆದುಕೊಂಡು ಮನೆ ಬಿಟ್ಟು ಓಡಿ ಹೋಗಿದ್ದರು. ತಂಗಿಯರೊಡನೆ ಉದ್ಯಾನವೊಂದರಲ್ಲಿ ವಾಸವಿದ್ದ ಉರ್ಫಿ ಕಾಲ್ ಸೆಂಟರ್ ಒಂದರಲ್ಲಿ ಕೆಲಸ ಪಡೆದುಕೊಂಡು. ಆ ನಂತರ ಉರ್ಫಿಯ ತಂದೆ ಮತ್ತೊಂದು ಮದುವೆ ಆಗಿ ತಾಯಿಯನ್ನು ತ್ಯಜಿಸಿದರು. ನಂತರ ತಾಯಿ ಸೇರಿದಂತೆ ಒಟ್ಟು ಐದು ಮಂದಿ ಸಹೋದರ-ಸಹೋದರಿಯರ ಹೊರೆ ಉರ್ಫಿಯ ಮೇಲೆ ಬಿದ್ದಿತ್ತು.

ಧಾರಾವಾಹಿ ಪಾತ್ರಕ್ಕೆ ಆಯ್ಕೆಯಾದ ಉರ್ಫಿ
ಕಾಲ್ ಸೆಂಟರ್‌ನಲ್ಲಿ ದುಡಿಯುತ್ತಿದ್ದ ಉರ್ಫಿ ಟಿವಿ ಆಡಿಷನ್‌ಗೆ ಸಹ ಹೋಗುತ್ತಿದ್ದು, 2016 ರಲ್ಲಿ 'ಬಡೆ ಬಹನ್ ಕಿ ದುಲ್ಹನಿಯಾ' ಧಾರವಾಹಿಗೆ ಆಯ್ಕೆ ಆದರು. ಆ ನಂತರ 'ಚಂದ್ರ ನಂದಿನಿ', 'ಮೇರಿ ದುರ್ಗಾ', 'ಸಾಥ್ ಫೇರೋಂಕಿ ಹೇರಾ ಫೇರಿ', 'ಬೇಫನಾ', 'ಜೀ ಮಾ', 'ದಯಾ', 'ಯೇ ರಿಶ್ತಾ ಕ್ಯಾ ಕೆಹಲಾತಾ ಹೈ', 'ಕಸೌಟಿ ಜಿಂದಜೀ ಕಿ', 'ಯೇ ಮೇರಾ ಹಮ್ ಸಫರ್' ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಈವರೆಗೆ ಹತ್ತು ಧಾರಾವಾಹಿಗಳಲ್ಲಿ ಉರ್ಫಿ ಅಭಿನಯಿಸಿದ್ದಾರೆ. ಬಿಗ್‌ಬಾಸ್ ಒಟಿಟಿಯಲ್ಲಿ ಪಾಲ್ಗೊಂಡಿದ್ದ ಉರ್ಫಿ ಮೊದಲ ವಾರದ ಬಳಿಕ ಎಲಿಮಿನೇಟ್ ಆಗಿದ್ದಾರೆ.


Click it and Unblock the Notifications











