ವಿವಾದಾತ್ಮಕ 'ದಿ ಕೇರಳ ಸ್ಟೋರಿ' ಸ್ಟ್ರೀಮಿಂಗ್ ಡೇಟ್ ಘೋಷಿಸಿದ ಜೀ5; ಕನ್ನಡದಲ್ಲಿ ರಿಲೀಸ್ ಮಾಡುವಂತೆ ಮನವಿ

ಕಳೆದ ವರ್ಷ ತೆರೆಕಂಡು ಭಾರೀ ವಿವಾದ ಸೃಷ್ಟಿಸಿದ್ದ 'ದಿ ಕೇರಳ ಸ್ಟೋರಿ' ಕೊನೆಗೂ ಓಟಿಟಿಗೆ ಬರ್ತಿದೆ. ಅಧಿಕೃತವಾಗಿ ಸ್ಟ್ರೀಮಿಂಗ್ ದಿನಾಂಕ ಘೋಷಣೆಯಾಗಿದೆ. ತೆರೆಕಂಡು 9 ತಿಂಗಳ ಬಳಿಕ ಸಿನಿಮಾ ಓಟಿಟಿ ಕಡೆ ಮುಖ ಮಾಡಿದೆ. ಈ ಚಿತ್ರದ ಸ್ಟ್ರೀಮಿಂಗ್‌ ರೈಟ್ಸ್ ಕೊಳ್ಳಲು ಯಾರು ಮುಂದೆ ಬರ್ತಿಲ್ಲ ಎನ್ನುವ ಗುಸುಗುಸು ಕೇಳಿಬಂದಿತ್ತು.

ಸುದಿಪ್ತೊ ಸೇನ್ ನಿರ್ದೇಶನದ 'ದಿ ಕೇರಳ ಸ್ಟೋರಿ' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಜೊತೆ ಭಾರೀ ವಿವಾದ ಸೃಷ್ಟಿಸಿತ್ತು. ತಮಿಳುನಾಡು, ಪಶ್ಚಿಮ ಬಂಗಾಳದಲ್ಲಿ ಸಿನಿಮಾ ಸರಿಯಾಗಿ ಪ್ರದರ್ಶನವಾಗಿರಲಿಲ್ಲ. ವಿವಾದಾತ್ಮಕ ಅಂಶಗಳಿವೆ ಎನ್ನುವ ಕಾರಣಕ್ಕೆ ಪಶ್ಚಿಮ ಬಂಗಾಳದಲ್ಲಿ ಸಿನಿಮಾ ಬ್ಯಾನ್ ಮಾಡಲಾಗಿತ್ತು. ಬಳಿಕ ಈ ಬಗ್ಗೆ ದೂರು ದಾಖಲಾಗಿ ಭಾರೀ ರಾದ್ಧಾಂತವಾಗಿತ್ತು.

Adah Sharma starrer The Kerala Story OTT Release Date Confirmed

ಯಾವುದೇ ನಿರೀಕ್ಷೆ ಇಲ್ಲದೇ ಮಾರ್ಚ್ 5ರಂದು ಬಿಡುಗಡೆಯಾಗಿದ್ದ ಸಿನಿಮಾ ನೋಡ ನೋಡುತ್ತಲೇ ದೊಡ್ಡಮಟ್ಟದಲ್ಲಿ ಪ್ರೇಕ್ಷಕರನ್ನು ಸೆಳೆದಿತ್ತು. ಕರ್ನಾಟಕದಲ್ಲೂ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಂಡಿತ್ತು. 300 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿ ಸಿನಿಮಾ ದಾಖಲೆ ಬರೆದಿತ್ತು. ಸ್ಟಾರ್ ನಟರಿಲ್ಲದೇ ಬಂದಿದ್ದ ಸಿನಿಮಾ ಈ ಪಾಟಿ ಸದ್ದು ಮಾಡಿದ್ದು ವಿಶೇಷ.

ಅದಾ ಶರ್ಮಾ, ಯೊಗಿನಾ ಬಿಹಾನಿ, ಸೋನಿಯಾ ಬಲಾನಿ, ಸಿದ್ದಿ ಇದ್ನಾನಿ, ಪ್ರಣವ್ ಮಿಶ್ರಾ 'ದಿ ಕೇರಳ ಸ್ಟೋರಿ' ಚಿತ್ರ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಕೇರಳದಲ್ಲಿ ಮಹಿಳೆಯರ ಬಲವಂತದ ಮತಾಂತರ ಮತ್ತು ಮೂಲಭೂತೀಕರಣ ಕುರಿತಾದ ಸಿನಿಮಾ ಎನ್ನುವ ಕಾರಣಕ್ಕೆ ಈ ಸಿನಿಮಾ ಕೋಲಾಹಲ ಸೃಷ್ಟಿಸಿತ್ತು. ಸಿನಿಮಾ ಬಿಡುಗಡೆ ಮಾಡದಂತೆ ಕೆಲವೆಡೆ ಪ್ರತಿಭಟನೆ ನಡೆದಿತ್ತು. ಕೇರಳದಲ್ಲಿ ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ಸಿನಿಮಾ ಬಿಡುಗಡೆಗೆ ತಡೆಯುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದವು.

ಕೇರಳದಲ್ಲಿ ನಡೆದ ನೈಜ ಘಟನೆಗಳನ್ನು ಆಧರಿಸಿ 'ದಿ ಕೇರಳ ಸ್ಟೋರಿ' ಸಿನಿಮಾ ಮಾಡಿರುವುದಾಗಿ ಚಿತ್ರತಂಡ ಹೇಳಿತ್ತು. ಆದರೆ ಇದು ಕಟ್ಟುಕತೆ ಎಂದು ಕೆಲವರು ವಾದಿಸಿದ್ದರು. ಶಾಂತಿ, ಸುವ್ಯವಸ್ಥೆ ಕಾರಣವೊಡ್ಡಿ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಸರ್ಕಾರ ಸಿನಿಮಾ ನಿಷೇಧಿಸಿತ್ತು. ತಮಿಳುನಾಡಿನಲ್ಲಿ ಪ್ರೇಕ್ಷಕರ ಅಭಾವ ನೆಪವೊಡ್ಡಿ ಸಿನಿಮಾ ನಿಲ್ಲಿಸಿದ್ದರು. ಇನ್ನು ಮಧ್ಯಪ್ರದೇಶ, ಉತ್ತರ ಪ್ರದೇಶ ಹಾಗೂ ಹರ್ಯಾಣದಲ್ಲಿ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಲಾಗಿತ್ತು.

ಇಷ್ಟೆಲ್ಲಾ ಕೋಲಾಹಲಕ್ಕೆ ಕಾರಣವಾಗಿದ್ದ 'ದಿ ಕೇರಳ ಸ್ಟೋರಿ' ಸಿನಿಮಾ ಓಟಿಟಿ ಬರುವುದು ಬಹಳ ತಡವಾಗಿತ್ತು. ಅಂತು ಇಂತೂ ಇದೀಗ ಜೀ5 ಸಿನಿಮಾ ಸ್ಟ್ರೀಮಿಂಗ್ ದಿನಾಂಕ ಘೋಷಿಸಿದೆ. ಫೆಬ್ರವರಿ 16ರಂದು 'ದಿ ಕೇರಳ ಸ್ಟೋರಿ' ವೀಕ್ಷಕರ ಮುಂದೆ ಬರಲಿದೆ. ಚಿತ್ರವನ್ನು ಕನ್ನಡಕ್ಕೂ ಡಬ್ ಮಾಡಿ ರಿಲೀಸ್ ಮಾಡಿ ಎಂದು ಕೆಲವರು ಮನವಿ ಮಾಡುತ್ತಿದ್ದಾರೆ.

ವಿಫುಲ್ ಅಮೃತ್‌ಲಾಲ್ ಶಾ 'ದಿ ಕೇರಳ ಸ್ಟೋರಿ' ಚಿತ್ರವನ್ನು ನಿರ್ಮಾಣ ಮಾಡಿದ್ದರು. ಸಿಬಿಎಫ್‌ಸಿ ಸಿನಿಮಾ ನೋಡಿ 10 ದೃಶ್ಯಗಳಿಗೆ ಕತ್ತರಿ ಹಾಕಿ A ಸರ್ಟಿಫಿಕೇಟ್ ಕೊಟ್ಟಿತ್ತು. ಶಾಲಿನಿ, ಗೀತಾಂಜಲಿ ಹಾಗೂ ನಿಮ್ಹಾ ಎನ್ನುವ ಮೂವರು ಯುವತಿಯರು ವಿದ್ಯಾಭ್ಯಾಸಕ್ಕಾಗಿ ಕಾಸರಗೋಡಿನ ಕಾಲೇಜು ಸೇರುತ್ತಾರೆ. ಹಾಸ್ಟೆಲ್‌ ರೂಮ್‌ ಮೇಟ್‌ ಆಸಿಫಾ ಕೇರಳ ಮೂಲದ ಈ ಮೂವರು ಯುವತಿಯರನ್ನು ಮತಾಂತರ ಮಾಡುತ್ತಾಳೆ. ಮುಂದೆ ಏನೆಲ್ಲಾ ಆಗುತ್ತೆ ಎನ್ನುವುದು ಸಿನಿಮಾ ಕಥೆ.

ಮತಾಂತರಗೊಂಡು ಫಾತಿಮಾ ಆಗಿ ಬದಲಾದ ಶಾಲಿನಿ ಇರಾನ್ ಗಡಿಯಲ್ಲಿ ಅಮೇರಿಕಾ- ಅಫ್ಘಾನಿಸ್ತಾನದ ಸೇನೆಯ ವಶಕ್ಕೆ ಸಿಲುಕುವುದರೊಂದಿಗೆ ಸಿನಿಮಾ ಕಥೆ ಶುರುವಾಗುತ್ತಿದೆ. ಅಲ್ಲಿಂದ ಮುಂದೆ ಫ್ಲಾಶ್‌ಬ್ಯಾಕ್ ತಂತ್ರ ಬಳಸಿ ಸುದಿಪ್ತೋ ಸೇನ್ ಕಥೆ ಹೇಳುತ್ತಾ ಹೋಗುತ್ತಾರೆ.

More from Filmibeat

English summary
The Kerala Story OTT Release Date And Platform;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X