OTT this week: ಈ ವಾರ ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗ್ತಿರೋ ಇಂಟ್ರೆಸ್ಟಿಂಗ್ ಸಿನಿಮಾ, ವೆಬ್ ಸೀರಿಸ್ ಲಿಸ್ಟ್
ತಮಿಳು, ತೆಲುಗು, ಹಿಂದಿಯ ಭಾಷೆಯ 4 ದೊಡ್ಡ ಸಿನಿಮಾಗಳು ಈ ವಾರ ತೆರೆಗಪ್ಪಳಿಸಿ ಪ್ರೇಕ್ಷಕರನ್ನು ರಂಜಿಸ್ತಿವೆ. 'ಜೈಲರ್', 'ಭೋಳಾ ಶಂಕರ್' ಜೊತೆ ಬಾಲಿವುಡ್‌ನ 'OMG-2', 'ಗದರ್-2' ಸಿನಿಮಾಗಳು ರಿಲೀಸ್ ಆಗಿದೆ. ಮತ್ತೊಂದು ಕಡೆ ಓಟಿಟಿಯಲ್ಲೂ ಒಂದಕ್ಕಿಂತ ಒಂದು ಇಂಟ್ರೆಸ್ಟಿಂಗ್ ಸಿನಿಮಾಗಳು ಸ್ಟ್ರೀಮಿಂಗ್ ಆಗಲಿವೆ. ಈಗಾಗಲೇ ಕೆಲ ಸಿನಿಮಾಗಳು ಡಿಜಿಟಲ್ ಫ್ಲಾಟ್‌ಪಾರ್ಮ್‌ಗೆ ಎಂಟ್ರಿ ಕೊಟ್ಟಾಗಿದೆ.
ಹೊಸ ಹೊಸ ಸಿನಿಮಾಗಳ ಜೊತೆಗೆ ವೆಬ್ ಸೀರಿಸ್‌ಗಳು ಕೂಡ ಈ ವಾರ ಓಟಿಟಿಗೆ ಬರ್ತಿದೆ. ಒಂದೇ ಒಂದು ಸಾಂಗ್‌ನಿಂದ ಸಖತ್ ಸದ್ದು ಮಾಡಿದ 'ಜರಾ ಹಟ್ಕೆ ಜರಾ ಬಚ್ಕೇ' ಸಿನಿಮಾ ಕೂಡ ಸ್ಟ್ರೀಮಿಂಗ್ ಆಗಲಿದೆ. ಇನ್ನು 'ಹಿಡಿಂಬ', 'ಮೇಡ್ ಇನ್ ಹೆವೆನ್' ವೆಬ್ ಸೀರಿಸ್ ಹೀಗೆ ಲಿಸ್ಟ್ ಬಹಳ ದೊಡ್ಡದಾಗಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಬಹಳ ವಿಭಿನ್ನ ಇಂಗ್ಲೀಷ್ ವೆಬ್ ಸೀರಿಸ್‌ಗಳು ಬರ್ತಿವೆ.

ಅಮೇಜಾನ್ ಪ್ರೈಮ್
1. 'ಆದಿಪುರುಷ್'
ಈ ವರ್ಷ ವಿಚಿತ್ರ ಕಾರಣಕ್ಕೆ ಸಿಕ್ಕಾಪಟ್ಟೆ ಸದ್ದು ಮಾಡಿದ ಪ್ಯಾನ್ ಇಂಡಿಯಾ ಸಿನಿಮಾ 'ಆದಿಪುರುಷ್'. ಪ್ರಭಾಸ್ ಶ್ರೀರಾಮನಾಗಿ ನಟಿಸಿದ ಸಿನಿಮಾ ಭಾರೀ ವಿವಾದಗಳನ್ನು ಸೃಷ್ಟಿಸಿತ್ತು. ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟುಹಾಕಿದ್ದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಸೋಲುಂಡಿತ್ತು. ರಾಮಾಯಣ ಕಾವ್ಯ ಆಧರಿಸಿ ನಿರ್ಮಾಣವಾಗಿದ್ದ ಈ ಪೌರಾಣಿಕ ಸಿನಿಮಾ ಜೂನ್ 16ಕ್ಕೆ ತೆರೆಗಪ್ಪಳಿಸಿತ್ತು. ಆದರೆ ರಾಮಾಯಣದ ಪಾತ್ರಗಳನ್ನು ಅನುಚಿತವಾಗಿ ತೋರಿಸಿದ್ದಾರೆ ಎನ್ನುವ ಕಾರಣಕ್ಕೆ ಭಾರೀ ಟೀಕೆ ಎದುರಿಸಬೇಕಾಯಿತು. ಇದ್ದಕ್ಕಿದ್ದಂತೆ ಪ್ರೈಮ್ ವೀಡಿಯೋದಲ್ಲಿ 'ಆದಿಪುರುಷ್' ಸ್ಟ್ರೀಮಿಂಗ್ ಆಗ್ತಿದೆ. ಯಾವುದೇ ಅನೌನ್ಸ್‌ಮೆಂಟ್ ಇಲ್ಲದೇ ಸಿನಿಮಾ ರಿಲೀಸ್ ಮಾಡಿದ್ದಾರೆ.
2. 'ಮಾವೀರನ್'
ತಮಿಳಿನಲ್ಲಿ ಶಿವ ಕಾರ್ತಿಕೇಯನ್ ನಟನೆಯ 'ಮಾವೀರನ್' ಸಿನಿಮಾ ಕೂಡ ಈಗಾಗಲೇ ಸ್ಟ್ರೀಮಿಂಗ್ ಆಗ್ತಿದೆ. ಈ ಸಿನಿಮಾ 'ಮಾವೀರುಡು' ತೆಲುಗಿಗೂ ಡಬ್ ಆಗಿತ್ತು. 2 ಭಾಷೆಗಳಲ್ಲಿ ಒಟ್ಟಿಗೆ ಓಟಿಟಿಯಲ್ಲಿ ಸಿಗಲಿದೆ. 33 ಕೋಟಿ ರೂ.ಗೆ ಈ ಚಿತ್ರವನ್ನು ಅಮೇಜಾನ್ ಸಂಸ್ಥೆ ರೈಟ್ಸ್ ಖರೀದಿಸಿತ್ತು. ಸಿನಿಮಾ ಬಾಕ್ಸಾಫೀಸ್‌ನಲ್ಲಿ 75 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು.
3. ರೆಡ್ ವೈಟ್ & ರಾಯಲ್ ಬ್ಲೂ
4. ಮೇಡ್ ಇನ್ ಹೆವೆನ್ ಸೀಸನ್-2
5. ಓನ್ಲಿ ಮರ್ಡರ್ಸ್ ಇನ್ ದಿ ಬಿಲ್ಡಿಂಗ್ ಸೀಜನ್ 3
6. ಮಾಯಾಂನ್
7. ಮನುಚರಿತ್ರ
8. ಸತ್ಯ ಪ್ರೇಮ್‌ಕಿ ಕಥ
ನೆಟ್‌ಫ್ಲಿಕ್ಸ್
1. ಹಾರ್ಟ್ ಆಫ್ ಸ್ಟೋನ್
ಬಾಲಿವುಡ್ ಬೆಡಗಿ ಆಲಿಯಾ ಭಟ್ ಲೀಡ್ ರೋನ್‌ನಲ್ಲಿ ನಟಿಸಿದ ಹಾಲಿವುಡ್ ಸಿನಿಮಾ 'ಹಾರ್ಟ್ ಆಫ್ ಸ್ಟೋನ್' (ಆಗಸ್ಟ್ 11) ಸ್ಟ್ರೀಮಿಂಗ್ ಆಗ್ತಿದೆ. ಗಾಲ್ ಗಾಡೋಟ್, ಜಾಮೀ ಡೋರ್ನನ್ ಮುಖ್ಯಭೂಮಿಕೆಯಲ್ಲಿ ಈ ಚಿತ್ರಕ್ಕೆ ಟಾಮ್ ಹಾರ್ಪಾರ್ ಆಕ್ಷನ್ ಕಟ್ ಹೇಳಿದ್ದಾರೆ. ಇದೊಂದು ಸ್ಪೈ ಆಕ್ಷನ್ ಥ್ರಿಲ್ಲರ್ ಸಿನಿಮಾ ಆಗಿದ್ದು ಓಟಿಟಿ ವೀಕ್ಷಕರಿಗೆ ಇಷ್ಟವಾಗಲಿದೆ.
2. ಪದ್ಮಿನಿ(ಆಗಸ್ಟ್ 11)
3. ಅನ್‌ಟೋಲ್ಡ್ ಜಾನೀಫುಟ್ಬಾಲ್(ಆಗಸ್ಟ್ 8)
4. ಜಾಂಬೀವರ್ಸ್ (ಕೊರಿಯಾನ್ ಸರಣಿ)
5. ಪೆಯಿನ್ ಕಿಲ್ಲರ್(ಆಗಸ್ಟ್ 10)
6. ಬಿಹೈಂಡ್ ಯುವರ್ ಟಚ್(ಆಗಸ್ಟ್ 12)
7. ಲೇಡೀಸ್ ಫಸ್ಟ್(ಆಗಸ್ಟ್ 8)
8. ಮೆಕ್ ಕ್ಯಾಡೆಟ್ಸ್(ಆಗಸ್ಟ್ 10)

ಜೀ 5
1. ದಿ ಕಾಶ್ಮೀರ್ ಫೈಲ್ಸ್ ಅನ್‌ರಿಪೋರ್ಟೆಡ್ (ಡಾಕ್ಯೂ ಸೀರಿಸ್)
2. ಅಭರ್ ಪ್ರಳಯ್(ಆಗಸ್ಟ್ 11)
ಆಹಾ ಓಟಿಟಿ
1. ಹಿಡಿಂಬ(ತೆಲುಗು ಸಿನಿಮಾ)
2. ವಾನ್‌ಮುಂಡ್ರು
ಡಿಸ್ನಿ ಪ್ಲಸ್ ಹಾಟ್ ಸ್ಟಾರ್
1. ನಯ್ಮರ್
2. ಕಮಾಂಡೋ
ಸೋನಿಲಿವ್
1. ದಿ ಜೆಂಗಬೂರು ಕರ್ಸ್
2. ಪ್ಯಾರಾಸೈಟ್
3. ಬ್ರೋಕರ್
4. ಕಾನ್ಫಿಡೆನ್ಷಿಯಲ್ ಅಸೈನ್ಮೆಂಟ್ 2
5. ಪೋರ್‌ತೊಳಿಲ್(ಆಗಸ್ಟ್ 11)


Click it and Unblock the Notifications











