twitter
    For Quick Alerts
    ALLOW NOTIFICATIONS  
    For Daily Alerts

    14 ದೇಶಗಳಲ್ಲಿ 'ಮೇಜರ್' ನಂ 1: ನೆಟ್‌ಫ್ಲಿಕ್ಸ್‌ ಕೊಟ್ಟ ವರದಿಯಲ್ಲೇನಿದೆ?

    |

    ಒಟಿಟಿಯಲ್ಲಿ ತೆಲುಗು ಸಿನಿಮಾಗಳ ದರ್ಬಾರ್ ಮುಂದುವರೆದಿದೆ. ಒಂದರ ಹಿಂದೊಂದು ಸಿನಿಮಾಗಳು ಒಟಿಟಿಯಲ್ಲೂ ಗೆಲ್ಲುತ್ತಿವೆ. ಹಾಗಂತ ಕೇವಲ ಆಂಧ್ರ-ತೆಲಂಗಾಣದಲ್ಲಷ್ಟೇ ಅಲ್ಲ. ವಿದೇಶದಲ್ಲಿಯೂ ತೆಲುಗು ಸಿನಿಮಾಗಳಿಗೆ ವೀಕ್ಷಕರ ಸಂಖ್ಯೆ ಹೆಚ್ಚುತ್ತಿದೆ.

    ತೆಲುಗಿನ ಎರಡು ಸಿನಿಮಾಗಳು ನೆಟ್‌ಫ್ಲಿಕ್ಸ್‌ನಲ್ಲಿ ಬೇಜಾನ್ ಸದ್ದು ಮಾಡುತ್ತಿದೆ. ಅದು ಕೇವಲ ದೇಶದಲ್ಲಷ್ಟೇ ಅಲ್ಲ. ವಿದೇಶದಲ್ಲಿಯೂ ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ಅದರಲ್ಲಿ ಅಡಿವಿ ಶೇಷ್ ಅಭಿನಯದ 'ಮೇಜರ್' ಸಿನಿಮಾ ಕೂಡ ಒಂದು.

    RRR ಬಳಿಕ ನೆಟ್‌ಫ್ಲಿಕ್ಸ್ ಕಡೆ ವಾಲುತ್ತಿದ್ದಾರಂತೆ ಟಾಲಿವುಡ್‌ ತಾರೆಯರು: ಯಾಕೆ?RRR ಬಳಿಕ ನೆಟ್‌ಫ್ಲಿಕ್ಸ್ ಕಡೆ ವಾಲುತ್ತಿದ್ದಾರಂತೆ ಟಾಲಿವುಡ್‌ ತಾರೆಯರು: ಯಾಕೆ?

    ಮಹೇಶ್ ಬಾಬು ನಿರ್ಮಿಸಿದ್ದ 'ಮೇಜರ್' ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಸೌಂಡು ಮಾಡಿದೆ. ಒಟಿಟಿ ವೇದಿಕೆಯೇ ಬಿಡುಗಡೆ ಮಾಡಿದ ಲಿಸ್ಟ್‌ನಲ್ಲಿ 'ಮೇಜರ್' ಸಿನಿಮಾ 14 ದೇಶಗಳಲ್ಲಿ ಸದ್ದು ಮಾಡುತ್ತಿದೆ. ಅಷ್ಟಕ್ಕೂ ನೆಟ್‌ಫ್ಲಿಕ್ಸ್ ಕೊಟ್ಟ ವರದಿಯಲ್ಲಿ ಏನಿದೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

    ನೆಟ್‌ಫ್ಲಿಕ್ಸ್‌ನಲ್ಲಿ 'ಮೇಜರ್' ಸಿನಿಮಾ ನಂ1

    ನೆಟ್‌ಫ್ಲಿಕ್ಸ್‌ನಲ್ಲಿ 'ಮೇಜರ್' ಸಿನಿಮಾ ನಂ1

    ಶಶಿ ಕಿರಣ್ ಟಿಕ್ಕಾ ನಿರ್ದೇಶಿಸಿರುವ 'ಮೇಜರ್' ಥಿಯೇಟರ್‌ಗಿಂತ ಒಟಿಟಿ ವೇದಿಕೆಯಲ್ಲಿಯೇ ಹೆಚ್ಚು ಸದ್ದು ಮಾಡುತ್ತಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಅಡಿವಿ ಶೇಷ್ ಸಿನಿಮಾ ಈಗ ಸ್ಟ್ರೀಮಿಂಗ್ ಆಗುತ್ತಿದ್ದು, ದಾಖಲೆಗಳನ್ನು ಬ್ರೇಕ್ ಮಾಡುತ್ತಿದೆ. ಸದ್ಯ ನೆಟ್‌ಫಿಕ್ಸ್ ನೀಡಿರುವ ಮಾಹಿತಿ ಪ್ರಕಾರ, ತನ್ನ ವೇದಿಕೆಯಲ್ಲಿ ಈ ಸಿನಿಮಾ ದಕ್ಷಿಣ ಏಷ್ಯಾದಲ್ಲಿ ಮೊದಲ ಸ್ಥಾನದಲ್ಲಿದೆ. ಇಂಗ್ಲಿಷ್ ಕೆಟಗರಿಯನ್ನು ಬಿಟ್ಟು ಉಳಿದ ಎಲ್ಲಾ ಭಾಷೆಯ ವಿಭಾಗದಲ್ಲಿ ನಂ 1 ಸ್ಥಾನದಲ್ಲಿದೆ.

    100 ದಿನ ಪೂರೈಸಿದ ರಾಜಮೌಳಿಯ RRR: ನೆಟ್‌ಫ್ಲಿಕ್ಸ್ ಸಿಇಓ ಮನಗೆದ್ದ ಭಾರತದ ಸಿನಿಮಾ!100 ದಿನ ಪೂರೈಸಿದ ರಾಜಮೌಳಿಯ RRR: ನೆಟ್‌ಫ್ಲಿಕ್ಸ್ ಸಿಇಓ ಮನಗೆದ್ದ ಭಾರತದ ಸಿನಿಮಾ!

    14 ದೇಶಗಳಲ್ಲಿ ಟಾಪ್‌ನಲ್ಲಿದೆ

    14 ದೇಶಗಳಲ್ಲಿ ಟಾಪ್‌ನಲ್ಲಿದೆ

    ನೆಟ್‌ಫ್ಲಿಕ್ಸ್‌ನಲ್ಲಿ 'ಮೇಜರ್' ಸಿನಿಮಾ ರಿಲೀಸ್ ಆಗುತ್ತಿದ್ದಂತೆ ನೋಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಬೆನ್ನಲ್ಲೇ ಸುಮಾರು 14 ದಿನಗಳಲ್ಲಿ 'ಮೇಜರ್' ಟಾಪ್ 10 ಸ್ಥಾನದೊಳಗೆ ಇದೆ ಎಂದು ಸ್ವತ: ನೆಟ್‌ಫ್ಲಿಕ್ಸ್ ವರದಿ ನೀಡಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಸಿನಿಮಾಗೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದ್ದರಿಂದ ನೋಡುಗರ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾಗಿದೆ ಎಂದು ನಿರ್ಮಾಣ ಸಂಸ್ಥೆ ಅಧಿಕೃತವಾಗಿ ಹೇಳಿಕೊಂಡಿದೆ.

    'ಮೇಜರ್' ಸಂದೀಪ್ ಉನ್ನಿಕೃಷ್ಣನ್ ಸಿನಿಮಾ

    ಅಡಿವಿ ಶೇಷ್ ಅಭಿನಯದ 'ಮೇಜರ್' ಉಗ್ರರೊಂದಿಗಿನ ಹೋರಾಟದಲ್ಲಿ ವೀರಮರಣವನ್ನಪ್ಪಿದ ಯೋಧ ಸಂದೀಪ್ ಉನ್ನಿಕೃಷ್ಣನ್ ಅವರ ಚರಿತ್ರೆಯನ್ನು ಆಧರಿಸಿದೆ. 26/11 ಮುಂಬೈ ಟೆರರ್ ಅಟ್ಯಾಕ್‌ ವೇಳೆ ಸಂದೀಪ್ ಉನ್ನಿಕೃಷ್ಣನ್ ನಾಗರೀಕರ ಜೀವವನ್ನು ರಕ್ಷಿಸಿಸುವ ವೇಳೆ ತನ್ನ ಜೀವವನ್ನು ಕಳೆದುಕೊಂಡಿದ್ದರು. ಈ ಘಟನೆಯನ್ನು ಆಧರಿಸಿ, 'ಮೇಜರ್' ಸಿನಿಮಾವನ್ನು ನಿರ್ಮಾಣ ಮಾಡಲಾಗಿತ್ತು.

    ಥಿಯೇಟರ್‌ನಲ್ಲೂ ಸಖತ್ ರೆಸ್ಪಾನ್ಸ್

    ಥಿಯೇಟರ್‌ನಲ್ಲೂ ಸಖತ್ ರೆಸ್ಪಾನ್ಸ್

    'ಮೇಜರ್' ಸಿನಿಮಾ ಥಿಯೇಟರ್‌ನಲ್ಲಿಯೂ ಉತ್ತಮ ಗಳಿಕೆ ಕಂಡಿತ್ತು. ಈ ಸಿನಿಮಾದ ಲೈಫ್‌ ಟೈಮ್ ಕಲೆಕ್ಷನ್ 64 ಕೋಟಿ ರೂ. ಎನ್ನಲಾಗಿದೆ. ಇದರಲ್ಲಿ ನಿರ್ಮಾಪಕರಿಗೆ ಸುಮಾರು 30 ಕೋಟಿ ರೂ. ಸಿಕ್ಕಿದೆ ಎಂದು ಟಾಲಿವುಡ್‌ನಲ್ಲಿ ವರದಿಯಾಗಿದೆ. ಈ ಸಿನಿಮಾವನ್ನು ಮಹೇಶ್ ಬಾಬು ಸೋನಿ ಪಿಕ್ಚರ್ಸ್ ಸಂಸ್ಥೆಯೊಂದಿಗೆ ಸೇರಿಕೊಂಡು ನಿರ್ಮಾಣ ಮಾಡಿದ್ದರು. ನಿರೀಕ್ಷೆ ಮಾಡಿದಂತೆ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಉತ್ತಮ ಗಳಿಕೆ ಕಂಡಿತ್ತು. ಆದ್ರೀಗ ಒಟಿಟಿಯಲ್ಲಿ ಥಿಯೇಟರ್‌ಗಿಂತ ಹೆಚ್ಚಿನ ರೆಸ್ಪಾನ್ಸ್ ಸಿಗುತ್ತಿದೆ.

    English summary
    Adivi Sesh Starrer Major Movie at No 1 in South Asia on Netflix OTT Platform, Know More.
    Saturday, July 16, 2022, 10:30
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X