ಒಂದೂವರೆ ವರ್ಷದ ನಂತರ ಓಟಿಟಿಗೆ ಬಂತು ಕನ್ನಡದ ಚಿತ್ರ, ಈ ಚಿತ್ರದ ಹಾಡಿಗೆ ಧ್ವನಿಯಾಗಿತ್ತು ಸಿಂಹಪ್ರಿಯಾ ಜೋಡಿ.!

ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಚಿತ್ರ ನೋಡಲು ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಅಂಗೈಯಲ್ಲಿಯೇ ಮನರಂಜನೆ ಇದೆ. ಚಿತ್ರ ನೋಡಲು ನೆಟ್‌ಫ್ಲಿಕ್ಸ್ , ಅಮೆಜಾನ್, ಜೀ 5 ಹಾಟ್ ಸ್ಟಾರ್ ಹೀಗೆ ಹತ್ತು ಹಲವು ಓಟಿಟಿ ವೇದಿಕೆಗಳಿವೆ.

ಆದರೆ.. ಹೀಗೆ ಇರುವ ಬಹುತೇಕ ಓಟಿಟಿಗಳು ಕನ್ನಡ ಚಿತ್ರಕ್ಕೆ ಮಣೆ ಹಾಕುವುದು ಕಡಿಮೆ. ಇರುವುದರಲ್ಲಿ ಜೀ 5 ಮತ್ತು ಅಮೆಜಾನ್ ಪ್ರೈಮ್‌ನಲ್ಲಿ ಆಗಾಗ ಕನ್ನಡ ಹೊಸ ಚಿತ್ರಗಳು ಪ್ರಸಾರವಾಗುತ್ತವೆ. ಅಲ್ಲಿಯೂ ಕೂಡ ಸ್ಟಾರ್ ವ್ಯಾಲ್ಯೂ ಚಿತ್ರಕ್ಕೆ ಮೊದಲ ಪ್ರಾಶಸ್ತ್ಯ ನೀಡಲಾಗುತ್ತೆ. ಚೂರು ಪಾರು ಪ್ರಚಾರವನ್ನು ಮಾಡಿ ಬಿಡುಗಡೆ ಮಾಡಲಾಗುತ್ತೆ. ಮಿಕ್ಕಂತೆ ಹೊಸಬರ ಚಿತ್ರ ಇದ್ದರೆ ಅದು ಓಟಿಟಿಯಲ್ಲಿ ಬಿಡುಗಡೆಯಾಗಿದ್ದು ಕೂಡ ಬಹುತೇಕರಿಗೆ ಗೊತ್ತಾಗುವುದಿಲ್ಲ. ಇದಕ್ಕೆ ಯದಾ ಯದಾ ಹಿ ಮತ್ತೊಂದು ಉದಾಹರಣೆ.

after-15-months-of-its-release-kannada-film-yada-yada-hi-is-now-streaming-on-sun-nxt

ಹೌದು. ವಸಿಷ್ಠ ಸಿಂಹ, ಹರಿಪ್ರಿಯಾ ಮತ್ತು ದಿಗಂತ್ ಅಭಿನಯದ ಕ್ರೈಮ್ ಥ್ರಿಲ್ಲರ್ ಯದಾ ಯದಾ ಹಿ ಚಿತ್ರ, ಕಳೆದ ವರ್ಷ ಜೂನ್ ಎರಡರಂದು ತೆರೆಗೆ ಬಂದಿತ್ತು. ಈ ಚಿತ್ರದಲ್ಲಿ ಮೊದಲ ಬಾರಿ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ತೆರೆಯನ್ನು ಹಂಚಿಕೊಂಡಿದ್ದರು. ಚಿತ್ರದ ಟೈಟಲ್ ಸಾಂಗ್‌ಗೆ ಇಬ್ಬರು ಧ್ವನಿಯಾಗಿದ್ದರು ಕೂಡ. ಇನ್ನೂ ತೆಲುಗು ಮೂಲದ ಅಶೋಕ್ ತೇಜ ನಿರ್ದೇಶನದ ಈ ಚಿತ್ರದಲ್ಲಿ ದಿಗಂತ್ ಮೊದಲ ಬಾರಿ ಪೊಲೀಸ್ ಪಾತ್ರವನ್ನು ನಿರ್ವಹಿಸಿದ್ದರು. ಲಂಚ ತಿನ್ನುವ ಅಧಿಕಾರಿಯಾಗಿ ಪ್ರೇಕ್ಷಕರನ್ನು ನಗಿಸಿದ್ದರು. ತೆಲುಗಿನ ಪ್ರಸಿದ್ಧ ಕಾದಂಬರಿಯನ್ನಾಧರಿಸಿ ಮಾಡಲಾಗಿದ್ದ ಈ ಚಿತ್ರಕ್ಕೆ ಹೈದ್ರಾಬಾದ್‌ ಮೂಲದ ರಾಜೇಶ್ ಅಗರ್‌ವಾಲ್ ಬಂಡವಾಳ ಹೂಡಿದ್ದರು. ಜಾಕ್ ಮಂಜು ಚಿತ್ರವನ್ನು ಕರುನಾಡಿನೆಲ್ಲೆಡೆ ವಿತರಿಸಿದ್ದರು.

ಅತ್ಯಾಚಾರ ನಡೆಸಲು ಪ್ರಯತ್ನಿಸಿದ ಪೊಲೀಸ್ ಅಧಿಕಾರಿಯ ಕೊಲೆ ಎಂಬ ಸುದ್ದಿಯೊಂದಿಗೆ ಮುನ್ನಾರ್‌ನಲ್ಲಿ ತೆರೆದುಕೊಳ್ಳುವ ಚಿತ್ರದಲ್ಲಿ ಹರಿಪ್ರಿಯಾ ಪ್ರಿಯಾಂಕ ಶೆಟ್ಟಿ ಎಂಬ ಉದ್ಯಮಿ ಪಾತ್ರವನ್ನು ನಿರ್ವಹಿಸಿದ್ದರೆ ವಸಿಷ್ಠ ಸಿಂಹ ಆದಿತ್ಯ ವರ್ಮಾ ಪಾತ್ರವನ್ನು ನಿರ್ವಹಿಸಿದ್ದರು. ಇನ್ನೂ ದೂದ್ ಪೇಡಾ ದಿಗಂತ್ ಎಸ್‌ಐ ಅಶೋಕ್ ತೇಜ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಹರಿಪ್ರಿಯಾ ಮತ್ತು ದಿಗಂತ್ ಈ ಕೊಲೆ ಪ್ರಕರಣವನ್ನು ಹೇಗೆ ಎದುರಿಸುತ್ತಾರೆ, ಹೇಗೆ ಭೇದಿಸುತ್ತಾರೆ ಎನ್ನುವ ಕಥಾಹಂದರವನ್ನೊಂದಿದ್ದ ಈ ಚಿತ್ರದ ಚಿತ್ರೀಕರಣವನ್ನು ಸುಮಾರು 55 ದಿನಗಳ ಕಾಲ ಕೇರಳ, ಚಿಕ್ಕಮಗಳೂರು, ಹೈದರಾಬಾದ್ ಹಾಗೂ ಬೆಂಗಳೂರು ಸುತ್ತಮುತ್ತ ಮಾಡಲಾಗಿತ್ತು.

ವಸಿಷ್ಠ ಸಿಂಹ, ಹರಿಪ್ರಿಯಾ ಮತ್ತು ದಿಗಂತ್ ಹೊರತು ಪಡಿಸಿದರೆ ಚಿತ್ರದಲ್ಲಿ ಹಿರಿಯ ನಟ ಅವಿನಾಶ್ ಕೂಡ ಇದ್ದರು. ಹರ್ಷವರ್ಧನ್ ರಾಜ್ ಮತ್ತು ಶ್ರೀಚರಣ್ ಪಾಕಳ ಚಿತ್ರದ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದರು. ಚಿತ್ರಕ್ಕೆ ಯೋಗಿ ಅವರ ಛಾಯಾಗ್ರಹಣ ಮತ್ತು ಶ್ರೀಕಾಂತ್ ಅವರ ಸಂಕಲನ ಚಿತ್ರಕ್ಕಿತ್ತು. ಹೀಗೆ ಸರಿ ಸುಮಾರು ಒಂದೂವರೆ ವರ್ಷದ ಹಿಂದೆ ತೆರೆಗೆ ಬಂದು ನಾನಾ ಕಾರಣಕ್ಕೆ ಸದ್ದು ಮಾಡಿ, ಸುದ್ದಿಯಾಗಿದ್ದ ಯದಾ ಯದಾ ಹಿ ಈಗ ಓಟಿಟಿ ಅಂಗಳಕ್ಕೆ ಬಂದಿದೆ. ಆದರೆ ಈ ಬಾರಿ ಸದ್ದಿಲ್ಲದೇ ಸನ್‌ ನೆಕ್ಸ್ಟ್ ನಲ್ಲಿ ಪ್ರಸಾರವಾಗುತ್ತಿದೆ. ಆಸಕ್ತ ಚಿತ್ರಪ್ರೇಮಿಗಳು ಚಿತ್ರವನ್ನು ನೋಡಬಹುದು.

More from Filmibeat

Read more about: ott vasishta simha haripriya
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X