'ಬಘೀರ' ನಂತರ 'ಓಟಿಟಿ'ಗೆ ಬಂತು 'ರುಕ್ಷ್ಮಿಣಿ ವಸಂತ್' ಅಭಿನಯದ ಮತ್ತೊಂದು 'ಚಿತ್ರ'...!
ಚಿತ್ರಮಂದಿರಕ್ಕೆ ಚಿತ್ರವೊಂದು ಬಂದು 20-25 ದಿನದೊಳಗೆ ಚಿತ್ರ ಓಟಿಟಿಯಲ್ಲಿ ತೆರೆಗೆ ಬಂದರೆ, ಪ್ರೇಕ್ಷಕರು ಚಿತ್ರಮಂದಿರಕ್ಕಾದರೂ ಯಾಕೆ ಬರುತ್ತಾರೆ ಅನ್ನುವ ಚರ್ಚೆ ಚಿತ್ರರಂಗದಲ್ಲಿ ನಡೆಯುತ್ತಾನೇ ಇದೆ. ಆದರೆ ಇದಕ್ಕೆ ಉತ್ತರ ಇನ್ನೂ ಸಿಕ್ಕಿಲ್ಲ. ಬದಲಿಗೆ ಚಿತ್ರದ ಸೋಲಿಗೆ ಪ್ರೇಕ್ಷಕರೇ ಕಾರಣ ಎನ್ನುವ ಅಭಿಪ್ರಾಯವನ್ನೇ ಚಿತ್ರರಂಗದ ಅನೇಕರು ಇಲ್ಲಿ ವ್ಯಕ್ತಪಡಿಸುತ್ತಾರೆ. ಗೆದ್ದರೆ ಚಿತ್ರ ಗೆದ್ದಿದ್ದು ನಮ್ಮಿಂದ ಎನ್ನುವ ಅಹಂ, ದರ್ಪ ತೋರಿಸುತ್ತಾರೆ. ಸೋಲಿಗೆ ಪ್ರೇಕ್ಷಕರನ್ನೇ ನೇರವಾಗಿ ಹೊಣೆಯಾಗಿಸುತ್ತಾರೆ. ಇದೆಲ್ಲ ಏನೇ ಇರಲಿ ಸದ್ಯ ರುಕ್ಷ್ಮಿಣಿ ವಸಂತ್ ಅಭಿನಯದ ಚಿತ್ರವೊಂದು ಓಟಿಟಿಗೆ ಬಂದಿದೆ.
ಹೌದು, ಬೀರ್‌ಬಲ್ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ರುಕ್ಮಿಣಿ ವಸಂತ್, ಸಪ್ತಸಾಗರದಾಚೆ ಎಲ್ಲೋ ಸೈಡ್ ಎ ಮತ್ತು ಸೈಡ್ ಬಿ ಚಿತ್ರಗಳ ಮೂಲಕ ಕರುನಾಡಿನೆಲ್ಲೆಡೆ ಮನೆ ಮಾತಾದರು. ಅಕ್ಕ-ಪಕ್ಕದ ರಾಜ್ಯದವರ ಕಣ್ಣಿಗೂ ಬಿದ್ದರು. ಇಂಥಾ ರುಕ್ಮಿಣಿ ವಸಂತ್ ಅಭಿನಯದ ಮೂರು ಚಿತ್ರಗಳು ನವೆಂಬರ್ ಮೊದಲ ವಾರದಲ್ಲಿ ತೆರೆಗೆ ಬಂದಿದ್ದವು. ಆ ಪೈಕಿ ಬಘೀರ ಒಂದಾದರೆ, ಭೈರತಿ ರಣಗಲ್ ಮತ್ತೊಂದಾಗಿತ್ತು. ಮಗದೊಂದು ತೆಲುಗಿನ ಚಿತ್ರ ಅಪ್ಪುಡೋ ಇಪ್ಪುಡೋ ಎಪ್ಪುಡೋ

ಇನ್ನೂ ಎಲ್ಲರಿಗೆ ಗೊತ್ತಿರುವಂತೆ ಈಗಾಗಲೇ ಬಘೀರ ಓಟಿಟಿಯಲ್ಲಿ ಬಿಡುಗಡೆಯಾಗಿದೆ. ನೆಟ್‌ಪ್ಲಿಕ್ಸ್‌ನಲ್ಲಿ ಟ್ರೆಂಡಿಂಗ್‌ನಲ್ಲಿದೆ. ಇದರ ನಡುವೆ ಈಗ ರುಕ್ಮಿಣಿ ವಸಂತ್ ಅಭಿನಯದ 'ಅಪ್ಪುಡೋ ಇಪ್ಪುಡೋ ಎಪ್ಪುಡೋ' ಚಿತ್ರ ಆನ್ ಲೈನ್‌ನಲ್ಲಿ ಅಧಿಕೃತವಾಗಿ ಪ್ರಸಾರವಾಗಿದೆ. ಚಿತ್ರ ಅಮೆಜಾನ್ ಫ್ರೈಮ್‌ನಲ್ಲಿ ಬಿಡುಗಡೆಯಾಗಿದೆ.
ಆದರೆ ದುರಂತ ಚಿತ್ರಮಂದಿರದಲ್ಲಿ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾದ 'ಅಪ್ಪುಡೋ ಇಪ್ಪುಡೋ ಎಪ್ಪುಡೋ', ಓಟಿಟಿಯಲ್ಲಿ ಕೂಡ ಮುಗ್ಗರಿಸಿದೆ. ಚಿತ್ರ ನೋಡಿದ ಯಾರು ಚಿತ್ರದ ಬಗ್ಗೆ ಒಳ್ಳೆಯ ಮಾತುಗಳನ್ನಾಡುತ್ತಿಲ್ಲ. ಬದಲಿಗೆ ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡದೆ ಇದ್ದಿದ್ದೇ ಒಳ್ಳೇಯದಾಯಿತು ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಕಾರ್ತಿಕೇಯ ಹಾಗೂ ಕಾರ್ತಿಕೇಯ 2 ಚಿತ್ರಗಳ ಮೂಲಕ ದೇಶವ್ಯಾಪಿ ಜನಮನ್ನಣೆ ಗಳಿಸಿದ ನಿಖಿಲ್ ಸಿದ್ಧಾರ್ಥ್‌ಗೆ ಈ ತರಹದ ಚಿತ್ರ ಮಾಡುವ ಅವಶ್ಯಕತೆಯಾದರೂ ಏನಿತ್ತು ಎಂದು ಕಿಡಿ ಕಾರುತ್ತಿದ್ದಾರೆ. ರುಕ್ಮಿಣಿ ವಸಂತ್ ಅವರ ಅಸಂಖ್ಯಾತ ಅಬಿಮಾನಿಗಳು ಈ ಚಿತ್ರವನ್ನು ನೋಡಿ ಬೇಸರ ಮಾಡಿಕೊಂಡಿದ್ದಾರೆ.
ಸದ್ಯಕ್ಕೆ 'ಅಪ್ಪುಡೋ ಇಪ್ಪುಡೋ ಎಪ್ಪುಡೋ' ಚಿತ್ರವನ್ನು ನೋಡಿದ ಅನೇಕರು ನಿಖಿಲ್ ಸಿದ್ಧಾರ್ಥ್ ಮತ್ತು ರುಕ್ಮಿಣಿ ವಸಂತ್ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಚಿತ್ರದ ನಿರ್ದೇಶಕ ಸುಧೀರ್ ವರ್ಮಾ ಅವರನ್ನು ತೆಗಳುತ್ತಿದ್ದಾರೆ. ಇನ್ನೂ ಕೆಲವರು ಚಿತ್ರ ತೆರೆಗೆ ಬಂದು ಇನ್ನೂ ನಾಲ್ಕು ವಾರ ಆಗಿಲ್ಲ ಆಗಲೇ ಚಿತ್ರವನ್ನು ಓಟಿಟಿ ವೇದಿಕೆಯಲ್ಲಿ ಬಿಡುಗಡೆಯಾದರೆ ಹೇಗೆ ಎಂಬ ಪ್ರಶ್ನೆಯನ್ನು ಮಾಡುತ್ತಿದ್ದಾರೆ. ನಿರ್ಮಾಪಕ ಮತ್ತು ನಿರ್ದೇಶಕರ ಈ ಧೋರಣೆಯಿಂದನೇ ಚಿತ್ರಮಂದಿರಕ್ಕೆ ಪ್ರೇಕ್ಷಕರು ಬರುತ್ತಿಲ್ಲ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.
ಇನ್ನುಳಿದಂತೆ ಈ ಚಿತ್ರದ ಚಿತ್ರೀಕರಣ ಬಹುತೇಕ ವಿದೇಶದಲ್ಲಿ ಶೂಟಿಂಗ್ ಆಗಿದ್ದು ರುಕ್ಮಿಣಿ ವಸಂತ್, ತಾರಾ ಹೆಸರಿನ ಪಾತ್ರದಲ್ಲಿ ನಟಿಸಿದ್ದಾರೆ. ನಿಖಿಲ್, ರುಕ್ಮಿಣಿ ಜೊತೆ ವಿವಾ ಹರ್ಷ, ದಿವ್ಯಾನ್ಷ ಕೌಶಿಕ್ ಹಾಗೂ ಇನ್ನಿತರರು ನಟಿಸಿದ್ದಾರೆ. ರೇಸರ್ ಆಗಬೇಕೆಂಬ ಕನಸು ಕಾಣುವ ನಾಯಕ ಅದಕ್ಕಾಗಿ ದುಡ್ಡು ಸಂಪಾದಿಸಲು ಏನೆಲ್ಲಾ ಕೆಲಸ ಮಾಡುತ್ತಾನೆ, ಅದರಿಂದ ಅವನು ಎದುರಿಸುವ ಸಮಸ್ಯೆಗಳೇನು? ಕೊನೆಗೆ ಆ ಸಮಸ್ಯೆಯಿಂದ ಹೇಗೆ ಹೊರ ಬರುತ್ತಾನೆ ಅನ್ನೋದು ಸಿನಿಮಾ ಕಥೆ. ಮಿಕ್ಕಂತೆವಿಜಯ್ ಸೇತುಪತಿ ಜೊತೆ ರುಕ್ಮಿಣಿ ವಸಂತ್ ಅಭಿನಯಿಸಿರುವ 'ಏಸ್' ಚಿತ್ರದಲ್ಲಿ ರುಕ್ಮಿಣಿ ಕಾಣಸಿಗಲಿದ್ದಾರೆ.ಇನ್ನೂ ಶಿವಕಾರ್ತಿಕೆಯನ್ ಅಭಿನಯದ ತಮಿಳು ಚಿತ್ರದ ಚಿತ್ರೀಕರಣ ಕೂಡ ಮುಕ್ತಾಯದ ಹಂತದಲ್ಲಿದೆ.


Click it and Unblock the Notifications











