24 ಗಂಟೆಗಳಲ್ಲಿ 50 ಕೋಟಿ ನಿಮಿಷ ಸ್ಟ್ರೀಮಿಂಗ್: ಓಟಿಟಿಯಲ್ಲಿ 'ವಿಕ್ರಾಂತ್ ರೋಣ' ದಾಖಲೆ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ 'ವಿಕ್ರಾಂತ್ ರೋಣ' ಚಿತ್ರಕ್ಕೆ ಓಟಿಟಿಯಲ್ಲೂ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಕಿಚ್ಚ ಹುಟ್ಟುಹಬ್ಬದ ಸಂಭ್ರಮದಲ್ಲೇ ಈ ಆಕ್ಷನ್ ಅಡ್ವೆಂಚರ್ ಥ್ರಿಲ್ಲರ್ ಸಿನಿಮಾ ಜೀ5 ಓಟಿಟಿ ಫ್ಲಾಟ್‌ಫಾರ್ಮ್‌ಗೆ ಬಂದಿತ್ತು. ಸಿನಿಮಾ ನೋಡಲು ಪ್ರೇಕ್ಷಕರು ಮುಗಿಬಿದ್ದಿದ್ದು, ಬರೀ 24 ಗಂಟೆಗಳಲ್ಲಿ 50 ಕೋಟಿ ನಿಮಿಷ ಸ್ಟ್ರೀಮಿಂಗ್ ಪಡೆದುಕೊಂಡು ಮುನ್ನುಗ್ಗುತ್ತಿದೆ.

ಅನೂಪ್ ಭಂಡಾರಿ ನಿರ್ದೇಶನದ 'ವಿಕ್ರಾಂತ್ ರೋಣ' ಸಿನಿಮಾ ಜುಲೈ 28ಕ್ಕೆ ತೆರೆ ಕಂಡಿತ್ತು. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸಿನಿಮಾ ಪ್ರೇಕ್ಷಕರನ್ನು ರಂಜಿಸಿತ್ತು. ಪೊಲೀಸ್ ಇನ್ಸ್‌ಪೆಕ್ಟರ್ 'ವಿಕ್ರಾಂತ್ ರೋಣ' ಆಗಿ ಕಿಚ್ಚ ಅಬ್ಬರಿಸಿದ್ದರು. ನಿರೂಪ್ ಭಂಡಾರಿ, ನೀತಾ ಅಶೋಕ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.

ಫ್ಯಾಂಟಮ್ ಪ್ರಪಂಚದಲ್ಲಿ ಕಿಚ್ಚನ ಆರ್ಭಟಕ್ಕೆ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದರು. 3 ವರ್ಷಗಳಿಂದ ಕಾದಿದ್ದಕ್ಕೂ ಒಳ್ಳೆ ಮನರಂಜನೆ ಸಿಕ್ಕಿತ್ತು. 3ಡಿ ಹಾಗೂ 3ಡಿಯಲ್ಲಿ ಸಿನಿಮಾ ತೆರೆಗಪ್ಪಳಿಸಿ ಬಾಕ್ಸಾಫೀಸ್ ಮಾಡಿತ್ತು.

After Box office Success, Kiccha Sudeeps Vikrant Rona Sets OTT Record

'ವಿಕ್ರಾಂತ್ ರೋಣ' ಸಿನಿಮಾ 200 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ ಎಂದು ಸ್ವತಃ ಜೀ5 ಸಂಸ್ಥೆ ಹೇಳಿಕೊಂಡಿತ್ತು. ಹೊಸ ಅವತಾರದಲ್ಲಿ ಕಿಚ್ಚನನ್ನು ನೋಡಿ ಅಭಿಮಾನಿಗಳು ಖುಷಿಯಾಗಿದ್ದರು. ಎಲ್ಲಾ ವಿಭಾಗಗಳಲ್ಲೂ ಒಳ್ಳೆ ಅಂಕ ಗಿಟ್ಟಿಸಿಕೊಂಡ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಜಾಕ್ ಮಂಜು ಹಾಗೂ ಅಲಂಕಾರ್ ಪಾಂಡಿಯನ್ ನಿರ್ಮಾಣದ ಸಿನಿಮಾ ಉತ್ತರ ಭಾರತದಲ್ಲೂ ಸಖತ್ ಸದ್ದು ಮಾಡಿತ್ತು. ಇದೀಗ ಡಿಜಿಟಲ್ ಫ್ಲಾಟ್‌ಫಾರ್ಮ್‌ನಲ್ಲಿ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ.

After Box office Success, Kiccha Sudeeps Vikrant Rona Sets OTT Record

ಸುದೀಪ್ ಈ ಬಾರಿ ಹುಟ್ಟುಹಬ್ಬಕ್ಕೆ ಯಾವುದೇ ಹೊಸ ಸಿನಿಮಾ ಘೋಷಿಸಲಿಲ್ಲ. ಹೊಸ ಸಿನಿಮಾ ಟೀಸರ್, ಪೋಸ್ಟರ್‌ ಕೂಡ ಗಿಫ್ಟ್ ಆಗಿ ಸಿಗಲಿಲ್ಲ. ತಮ್ಮ ಹುಟ್ಟುಹಬ್ಬಕ್ಕೆ 'ವಿಕ್ರಾಂತ್ ರೋಣ' ಸಿನಿಮಾ ಓಟಿಟಿಗೆ ಬರುತ್ತಿರುವುದೇ ದೊಡ್ಡ ಗಿಫ್ಟ್ ಎಂದು ಹೇಳಿದ್ದರು. 24 ಗಂಟೆಗಳಲ್ಲಿ 'ವಿಕ್ರಾಂತ್ ರೋಣ' 50 ಕೋಟಿ ನಿಮಿಷಗಳ ಸ್ಟ್ರೀಮಿಂಗ್ ಕಂಡು ಸದ್ದು ಮಾಡ್ತಿದೆ. ಅಭಿಮಾನಿಗಳು ಈ ಸುದ್ದಿ ಕೇಳಿ ಥ್ರಿಲ್ಲಾಗಿದ್ದಾರೆ. ಸೋಶಿಯಲ್ ಮೀಡಿಯಾ ಪೋಸ್ಟ್‌ಗಳ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಶೀಘ್ರದಲ್ಲೇ ಕಿಚ್ಚ ಸುದೀಪ್ ಹೊಸ ಸಿನಿಮಾ ಘೋಷಣೆ ಮಾಡಲಿದ್ದಾರೆ. ಅನೂಪ್ ಭಂಡಾರಿ ಕಾಂಬಿನೇಷನ್‌ನಲ್ಲೂ ಮತ್ತೊಂದು ಸಿನಿಮಾ ಸಿದ್ಧವಾಗಲಿದೆ.

More from Filmibeat

English summary
After Box Office Success, Kiccha Sudeep's 'Vikrant Rona' Sets OTT Record. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X