For Quick Alerts
  ALLOW NOTIFICATIONS  
  For Daily Alerts

  RRR ಬಳಿಕ ದಕ್ಷಿಣದ ಭಾರತದ ಸಿನಿಮಾಗಳ ಮೇಲೆ ನೆಟ್‌ಫ್ಲಿಕ್ಸ್‌ ಕಣ್ಣು: ಕನ್ನಡ ಲೆಕ್ಕಕ್ಕೇ ಇಲ್ವಾ?

  |

  ಕೊರೊನಾ ಬಳಿಕ ಓಟಿಟಿ ಹಾಗೂ ಥಿಯೇಟರ್‌ಗಳ ನಡುವೆ ಪೈಪೋಟಿ ಶುರುವಾಗಿದೆ. ನೂರಾರು ಕೋಟಿ ರೂಪಾಯಿ ಕೊಟ್ಟು ಸಿನಿಮಾಗಳನ್ನು ಖರೀದಿ ಮಾಡುತ್ತಿವೆ. ಈ ಕಾರಣಕ್ಕೆ ಸೂಪರ್‌ಸ್ಟಾರ್ ಸಿನಿಮಾಗಳೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗದೆ, ನೇರವಾಗಿ ಓಟಿಟಿಯಲ್ಲಿ ರಿಲೀಸ್ ಆಗುತ್ತಿವೆ. ಇನ್ನು ಕೆಲವು ಸಿನಿಮಾಗಳು ಥಿಯೇಟರ್‌ನಲ್ಲಿ ರಿಲೀಸ್ ಆಗಿದ್ದರೂ, ಓಟಿಟಿಯಲ್ಲೂ ಸಕ್ಸಸ್ ಭರ್ಜರಿ ಸಕ್ಸಸ್ ಕಂಡಿದೆ.

  ಇತ್ತೀಚೆಗೆ ನೆಟ್‌ಫ್ಲಿಕ್ಸ್‌ನಲ್ಲಿ ರಾಜಮೌಳಿ ನಿರ್ದೇಶಿಸಿದ RRR ಸಿನಿಮಾ ಭರ್ಜರಿ ರೆಸ್ಪಾನ್ಸ್ ಗಿಟ್ಟಿಸಿಕೊಂಡಿತ್ತು. ವಿದೇಶಿಗರಿಗೂ RRR ಸಿನಿಮಾ ಇಷ್ಟ ಆಗಿತ್ತು. ಇದೊಂದು ಸಿನಿಮಾ ನೆಟ್‌ಫ್ಲಿಕ್ಸ್‌ಗೆ ಸಿಕ್ಕಾಪಟ್ಟೆ ಯಶಸ್ಸು ತಂದುಕೊಟ್ಟಿತ್ತು.

  ಮಾಡಿದ ತಪ್ಪಿನಿಂದ ಬುದ್ಧಿಕಲಿತ ಚಿರಂಜೀವಿ: ಈ ಬಾರಿ ಎಚ್ಚರಿಕೆಯ ಹೆಜ್ಜೆಮಾಡಿದ ತಪ್ಪಿನಿಂದ ಬುದ್ಧಿಕಲಿತ ಚಿರಂಜೀವಿ: ಈ ಬಾರಿ ಎಚ್ಚರಿಕೆಯ ಹೆಜ್ಜೆ

  ಅದ್ಯಾವಾಗ RRR ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಭರ್ಜರಿ ಸಕ್ಸಸ್ ಆಯ್ತೋ ಅಲ್ಲಿಂದ ದಕ್ಷಿಣ ಭಾರತದ ಸಿನಿಮಾಗಳ ಖರೀದಿಗೆ ಹೆಚ್ಚು ಒಲವು ತೋರುತ್ತಿದೆ. ಸೂಪರ್‌ಸ್ಟಾರ್ ಸಿನಿಮಾಗಳ ಮೇಲೆ ಕಣ್ಣಿಟ್ಟಿದೆ ಎನ್ನಲಾಗಿದೆ.

   ಬಾಲಿವುಡ್‌ನಿಂದ ಸೌತ್‌ಗೆ ನೆಟ್‌ಫ್ಲಿಕ್ಸ್

  ಬಾಲಿವುಡ್‌ನಿಂದ ಸೌತ್‌ಗೆ ನೆಟ್‌ಫ್ಲಿಕ್ಸ್

  ನೆಟ್‌ಫ್ಲಿಕ್ಸ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯವಾಗಿರುವ ಓಟಿಟಿ ವೇದಿಕೆ. ಕಂಟೆಂಟ್ ಅದ್ಭುತವಾಗಿದ್ದರೆ, ದುಬಾರಿ ಮೊತ್ತವನ್ನು ನೀಡಿ ಸಿನಿಮಾವನ್ನು ಖರೀದಿ ಮಾಡುತ್ತೆ. ಭಾರತದಲ್ಲಿ ಬಾಲಿವುಡ್ ಸಿನಿಮಾಗಳ ಕಡೆಗೆನೇ ಹೆಚ್ಚು ಗಮನ ಹರಿಸಿತ್ತು. ಬಾಲಿವುಡ್‌ನ ಜನಪ್ರಿಯ ಫಿಲ್ಮ್ ಮೇಕರ್ಸ್ ಸಿನಿಮಾಗಳನ್ನೇ ಖರೀದಿ ಮಾಡಿದೆ. ಅಲ್ಲದೆ ಬಾಲಿವುಡ್ ಸಿನಿಮಾಗಳನ್ನು ನಿರ್ಮಾಣ ಮಾಡಿದೆ. ಈ ಮಧ್ಯೆ ಆಗಾಗ ದಕ್ಷಿಣ ಭಾರತದ ಸಿನಿಮಾಗಳನ್ನು ಖರೀದಿಸಿದ್ದು ಬಿಟ್ಟರೆ, ಹೆಚ್ಚು ಗಮನ ಹರಿಸಿರಲಿಲ್ಲ. RRR ಬಳಿಕ ನೆಟ್‌ಫ್ಲಿಕ್ಸ್ ತನ್ನ ಸ್ಟ್ರಾಟಜಿಯನ್ನು ಬದಲಿಸಿದೆ.

  ಯಶ್ - ಶಂಕರ್ ಕಾಂಬಿನೇಷನ್‌ ಚಿತ್ರಕ್ಕೆ ನೆಟ್‌ಫ್ಲಿಕ್ಸ್- ಕರಣ್ ಜೋಹರ್ ಬಂಡವಾಳ?ಯಶ್ - ಶಂಕರ್ ಕಾಂಬಿನೇಷನ್‌ ಚಿತ್ರಕ್ಕೆ ನೆಟ್‌ಫ್ಲಿಕ್ಸ್- ಕರಣ್ ಜೋಹರ್ ಬಂಡವಾಳ?

   ನೆಟ್‌ಫ್ಲಿಕ್ಸ್‌ಗೆ 'ಗಾಡ್ ಫಾದರ್'

  ನೆಟ್‌ಫ್ಲಿಕ್ಸ್‌ಗೆ 'ಗಾಡ್ ಫಾದರ್'

  RRR ಯಶಸ್ಸಿನ ಬಳಿಕ ನೆಟ್‌ಫಿಕ್ಸ್ ದಕ್ಷಿಣ ಭಾರತದ ಕಡೆಗೆ ಮುಖ ಮಾಡಿದೆ. ಸದ್ಯ ಮೆಗಾಸ್ಟಾರ್ ಚಿರಂಜೀವಿ ಹಾಗೂ ಸಲ್ಮಾನ್ ಖಾನ್ ಕಾಂಬಿನೇಷನ್‌ ಸಿನಿಮಾ 'ಗಾಡ್ ಫಾದರ್' ಅನ್ನು ದುಬಾರಿ ಮೊತ್ತ ಕೊಟ್ಟು ಖರೀದಿ ಮಾಡಿದೆ. ಮೂಲಗಳ ಪ್ರಕಾರ, ಈ ಸಿನಿಮಾ 67 ಕೋಟಿ ರೂಪಾಯಿಗೆ ಖರೀದಿ ಮಾಡಿದೆ ಎನ್ನಲಾಗಿದೆ. ಇನ್ನು ಚಿರಂಜೀವಿ ಅಭಿನಯದ 154ನೇ ಸಿನಿಮಾವನ್ನೂ 50 ಕೋಟಿ ರೂಪಾಯಿಗೆ ಖರೀದಿ ಮಾಡಿದೆ ಅನ್ನೋ ಸುದ್ದಿನೂ ಇದೆ.

   ತೆಲುಗು, ತಮಿಳು, ಮಲಯಾಳಂ ಕಡೆ ಒಲವು

  ತೆಲುಗು, ತಮಿಳು, ಮಲಯಾಳಂ ಕಡೆ ಒಲವು

  ನೆಟ್‌ಫ್ಲಿಕ್ಸ್ ಸದ್ಯಕ್ಕೀಗ ತೆಲುಗು, ತಮಿಳು ಹಾಗೂ ಮಲಯಾಳಂ ಸಿನಿಮಾಗಳನ್ನು ಖರೀದಿ ಮಾಡಲು ಉತ್ಸಾಹ ತೋರಿದೆ ಎನ್ನಲಾಗಿದೆ. ಮೆಗಾಸ್ಟಾರ್ ಚಿರಂಜೀವಿ, ಜೂ.ಎನ್‌ಟಿಆರ್, ರಾಮ್‌ಚರಣ್, ಪ್ರಭಾಸ್ ಸಿನಿಮಾಗಳ ಮೇಲೆ ಕಣ್ಣಿಟ್ಟಿದೆ. ತಮಿಳಿನಲ್ಲಿ ಪಾ.ರಂಜಿತ್ ನಿರ್ದೇಶನದ ಸಿನಿಮಾವನ್ನು ಖರೀದಿ ಮಾಡುತ್ತಿದೆ ಅನ್ನೋ ಮಾತು ಕೇಳಿ ಬರುತ್ತಿದೆ. ಈ ಮೂಲಕ ಅಮೆಜಾನ್ ಹಾಗೂ ಡಿಸ್ನಿ+ಹಾಟ್‌ಸ್ಟಾರ್‌ಗೆ ಕಾಂಪಿಟೇಷನ್ ಕೊಡುವುದಕ್ಕೆ ಸಜ್ಜಾಗಿದೆ ಅನ್ನೋ ಮಾತು ಕೇಳಿ ಬರುತ್ತಿದೆ.

  ಮತ್ತೆ ಬಂತು 'ಜಮ್ತಾರಾ': ನಿಮ್ಮ ಮೊಬೈಲ್ ಜಾಗೃತೆ!ಮತ್ತೆ ಬಂತು 'ಜಮ್ತಾರಾ': ನಿಮ್ಮ ಮೊಬೈಲ್ ಜಾಗೃತೆ!

   ಕನ್ನಡ ಸಿನಿಮಾ ಬಗ್ಗೆ ಇನ್ನೂ ಒಲವಿಲ್ಲ

  ಕನ್ನಡ ಸಿನಿಮಾ ಬಗ್ಗೆ ಇನ್ನೂ ಒಲವಿಲ್ಲ

  ನೆಟ್‌ಫ್ಲಿಕ್ಸ್ ತೆಲುಗು, ತಮಿಳು, ಮಲಯಾಳಂ ಸಿನಿಮಾಗಳನ್ನು ಖರೀದಿ ಮಾಡಲು ಒಲವು ತೋರಿದೆ ಅಷ್ಟೇ. ಆದರೆ, ಕನ್ನಡ ಸಿನಿಮಾ ಕಡೆ ಮನಸ್ಸು ಕೂಡ ಮಾಡಿಲ್ಲ. 'ಕೆಜಿಎಫ್', 'ವಿಕ್ರಾಂತ್ ರೋಣ'ದಂತಹ ಬ್ಲಾಕ್ಸ್ ಬಸ್ಟರ್ ಸಿನಿಮಾ ನೀಡಿದರೂ, ನೆಟ್‌ಫಿಕ್ಸ್ ಕನ್ನಡ ಸಿನಿಮಾ ಖರೀದಿ ಬಗ್ಗೆ ಮಾತ್ರ ಆಸಕ್ತಿ ತೋರಿಲ್ಲ ಎನ್ನಲಾಗುತ್ತದೆ.

  English summary
  After RRR Success Netflix Focusing More On Telugu,Tamil, Malayalam Movies. But Not Kannada Movies, Know More.
  Tuesday, September 27, 2022, 17:59
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X