For Quick Alerts
  ALLOW NOTIFICATIONS  
  For Daily Alerts

  RRR ಬಳಿಕ ನೆಟ್‌ಫ್ಲಿಕ್ಸ್ ಕಡೆ ವಾಲುತ್ತಿದ್ದಾರಂತೆ ಟಾಲಿವುಡ್‌ ತಾರೆಯರು: ಯಾಕೆ?

  |

  ರಾಜಮೌಳಿ ನಿರ್ದೇಶಿಸಿದ RRR ಸಿನಿಮಾ ವಿಶ್ವ ಮಟ್ಟದಲ್ಲಿ ಸದ್ದು ಮಾಡಿದೆ. ಬಾಕ್ಸಾಫೀಸ್‌ನಲ್ಲೂ ಸಾವಿರ ಕೋಟಿಯ ಗಡಿ ದಾಟಿ ಅಚ್ಚರಿ ಮೂಡಿಸಿತ್ತು. ಇಷ್ಟೇ ಅಲ್ಲದೆ ವಿಶ್ವದ ಮಾರುಕಟ್ಟೆಯಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಭಾರತದ ನಾಲ್ಕನೇ ಸಿನಿಮಾ ಎಂಬ ದಾಖಲೆಯನ್ನೂ ಬರೆದಿದೆ.

  ಎಲ್ಲಕ್ಕಿಂತ ಹೆಚ್ಚಾಗಿ ಸಾವಿರ ಕೋಟಿ ಗಡಿ ದಾಟಿದ ರಾಜಮೌಳಿಯ ಎರಡನೇ ಸಿನಿಮಾವಿದು. RRR ಸಿನಿಮಾ ಥಿಯೇಟರ್‌ನಲ್ಲಿ ಎಷ್ಟು ಸದ್ದು ಮಾಡುತ್ತಿದೆಯೋ ಅದಕ್ಕಿಂತ ಹೆಚ್ಚು ಸೌಂಡ್ ಓಟಿಟಿಯಲ್ಲಿ ಮಾಡುತ್ತಿದೆ. ಈ ಸಿನಿಮಾ ನೋಡಿ ಹಾಲಿವುಡ್ ತಾರೆಯರೆಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  RRR ಬಳಿಕ ನೆಟ್‌ಫ್ಲಿಕ್ಸ್ ಕಡೆ ಒಲವು

  RRR ಸಿನಿಮಾದ ಯಶಸ್ಸು ಥಿಯೇಟರ್‌ನಲ್ಲಿ ಹೇಗಾಗಿದೆ ಅನ್ನುವುದಕ್ಕೆ ಬಾಕ್ಸಾಫೀಸ್‌ ಕಲೆಕ್ಷನ್ ಕಣ್ಮುಂದೆ ಇದೆ. ಅದೇ ರೀತಿ ಇನ್ನೊಂದು ಕಡೆ ಒಟಿಟಿ ವೇದಿಕೆ ನೆಟ್‌ಫ್ಲಿಕ್ಸ್‌ನಲ್ಲೂ ಬೇಜಾನ್ ಸದ್ದು ಮಾಡುತ್ತಿದೆ. ಈ ಸಿನಿಮಾ ಮೇ 20ರಂದು ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆಗಿತ್ತು. ಅಂದಿನಿಂದ ವಿಶ್ವದ ಮೂಲೆ ಮೂಲೆಯಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಲೇ ಇದೆ.

  ರಾಜಮೌಳಿ ನಿರ್ದೇಶಿಸಿದ ಈ ಸಿನಿಮಾಗೆ ವಿಶ್ವದ ಅತ್ಯುತ್ತಮ ನಿರ್ದೇಶಕರು ಹಾಗೂ ವಿಮರ್ಶಕರು ಮೆಚ್ಚುಗೆ ಸೂಚಿಸಿದ್ದಾರೆ. ಜಕ್ಕಣ್ಣನ ಕಲ್ಪನೆ, ಪರಿಕಲ್ಪನೆ, ಆಕ್ಟರ್‌ಗಳ ಆಕ್ಷನ್, ನಟನೆ ಎಲ್ಲದಕ್ಕೂ ಮೆಚ್ಚುಗೆ ಸಿಕ್ಕಿದೆ. ನೆಟ್‌ಫಿಕ್ಸ್‌ನಲ್ಲಿ ಸಿನಿಮಾದ ಹಿಂದಿ ವರ್ಷನ್ ರಿಲೀಸ್ ಆಗಿತ್ತು. ಈ ವರ್ಷನ್ ಅನ್ನು ನೋಡಿಯೇ ಭೇಷ್ ಎನ್ನುತ್ತಿದ್ದಾರೆ. ಈ ಕಾರಣಕ್ಕೆ ತೆಲುಗು ನಟರು ನೆಟ್‌ಫ್ಲಿಕ್ಸ್ ಕಡೆ ಒಲವು ತೋರುತ್ತಿದ್ದಾರಂತೆ.

  ವಿಶ್ವದ ಮೂಲೆ ಮೂಲೆಗೂ ತಲುಪಿದ ಸಿನಿಮಾ

  RRR ಹಿಂದಿ ವರ್ಷನ್ ಅನ್ನು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಮಾಡಲಾಗಿತ್ತು. ಇದೇ ವರ್ಷನ್‌ ಅನ್ನು ವಿಶ್ವದ ಮೂಲೆ ಮೂಲೆಯಲ್ಲಿರುವ ಜನರು ನೋಡಿದ್ದಾರೆ. ಉಳಿದಂತೆ ತೆಲುಗು ವರ್ಷನ್ ಅನ್ನು ಜೀ 5ನಲ್ಲಿ ಬಿಡುಗಡೆ ಮಾಡಲಾಗಿತ್ತು. ಆದರೆ ಹಿಂದಿ ಅವತರಣಿಕೆ ತೆಲುಗು ಭಾಷೆಗಿಂತ ಹೆಚ್ಚು ರೀಚ್ ಆಗಿದೆ ಎನ್ನಲಾಗಿದೆ.

  ಈ ಕಾರಣಕ್ಕೆ ಟಾಲಿವುಡ್‌ನ ಸ್ಟಾರ್ ನಟರು ತಮ್ಮ ಸಿನಿಮಾವನ್ನು ಒಟಿಟಿಯಲ್ಲಿಯೇ ಬಿಡುಗಡೆ ಮಾಡುವುದಕ್ಕೆ ಒಲವು ತೋರುತ್ತಿದ್ದಾರಂತೆ. ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ರಿಲೀಸ್ ಮಾಡಿದರೆ, ಹೆಚ್ಚು ಜನರಿಗೆ ರಿಲೀಸ್ ಆಗಲಿದೆ ಎಂಬುದು ಅವರ ಕಲ್ಪನೆ.

  After RRR Telugu Stars Loving OTT platform Netflix Reports From Tollywood

  ಹಿಂದಿ ಬಿಟ್ಟರೆ ತೆಲುಗು ಸಿನಿಮಾ ಅತೀ ದೊಡ್ಡ ಮಾರುಕಟ್ಟೆ ಇದೆ. ಈ ಕಾರಣಕ್ಕೆ ಒಟಿಟಿ ವೇದಿಕೆಗಳೂ ಕೂಡ ದಕ್ಷಿಣ ಭಾರತದ ಕಡೆಗೆ ಲಗ್ಗೆ ಇಡುತ್ತಿವೆ. ಇನ್ನೊಂದು ಕಡೆ ಸ್ಟಾರ್ ನಟರು ಕೂಡ ನೆಟ್‌ಫ್ಲಿಕ್ಸ್ ಅಂತಹ ಒಟಿಟಿ ವೇದಿಕೆ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಟಾಲಿವುಡ್‌ನಲ್ಲಿ ವರದಿಯಾಗುತ್ತಿದೆ.

  English summary
  After RRR Telugu Stars Loving OTT platform Netflix Reports From Tollywood, Know More.
  Saturday, July 9, 2022, 9:35
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X