ಮೆಗಾಸ್ಟಾರ್ ಚಿರಂಜೀವಿ ಅಭಿಮಾನಿಗಳ ಕ್ಷಮೆ ಕೇಳಿದ ಒಟಿಟಿ
ಮೆಗಾಸ್ಟಾರ್ ಚಿರಂಜೀವಿ ಅಭಿಮಾನಿಗಳ ಸಂಖ್ಯೆ ಕೋಟಿಗಳಲ್ಲಿದೆ. ಅಭಿಮಾನಿಗಳ ಪಾಲಿಗೆ ಆರಾಧ್ಯ ದೈವ ಮೆಗಾಸ್ಟಾರ್ ಚಿರಂಜೀವಿ.
ಆದರೆ ತೆಲುಗಿನದ್ದೇ ಆದ ಒಟಿಟಿಯೊಂದು ಇದೀಗ ಚಿರಂಜೀವಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಆ ನಂತರ ತನ್ನ ತಪ್ಪು ತಿದ್ದಿಕೊಂಡು ಕ್ಷಮಾಪಣೆ ಸಹ ಕೇಳಿದೆ.
ತೆಲುಗಿನ 'ಆಹಾ' ಒಟಿಟಿ ಇತ್ತೀಚೆಗೆ ಸಖತ್ ಖ್ಯಾತಿ ಗಳಿಸಿದೆ. ಆಹಾ ದಲ್ಲಿ ಸಮಂತಾ ನಡೆಸಿಕೊಡುವ 'ಸ್ಯಾಮ್ ಜ್ಯಾಮ್' ಹೆಸರಿನ ಟಾಕ್ ಶೋ ಅಂತೂ ಸಖತ್ ಹಿಟ್ ಆಗಿದೆ. ಈ ಟಾಕ್ ಶೋ ಗೆ ಮೆಗಾಸ್ಟಾರ್ ಚಿರಂಜೀವಿ, ವಿಜಯ್ ದೇವರಕೊಂಡ, ತಮನ್ನಾ ಇನ್ನೂ ಹಲವು ಸ್ಟಾರ್‌ಗಳು ಬಂದಿದ್ದಾರೆ. ಇತ್ತೀಚೆಗೆ ಅಲ್ಲು ಅರ್ಜುನ್ ಸಹ ಬಂದಿದ್ದರು. ಆಗಲೇ ಆಗಿದ್ದ ಯಡವಟ್ಟು.

ಟಾಕ್ ಶೋ ಗೆ ಬಂದಿದ್ದ ಅಲ್ಲು ಅರ್ಜುನ್
ಸ್ಯಾಮ್ ಜ್ಯಾಮ್ ಟಾಕ್ ಶೋ ಗೆ ಅಲ್ಲು ಅರ್ಜುನ್ ಬಂದಿದ್ದು, ಈ ಎಪಿಸೋಡ್‌ನ ಪ್ರಚಾರಕ್ಕಾಗಿ ಹಲವು ಪ್ರೋಮೋಗಳನ್ನು ಒಟಿಟಿಯು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿತ್ತು. ಆದರೆ ಒಂದು ಪ್ರೋಮೋ ದಲ್ಲಿ ಅಲ್ಲು ಅರ್ಜುನ್ ಅನ್ನು 'ಮೆಗಾಸ್ಟಾರ್' ಎಂದು ಸಂಭೋದಿಸಲಾಗಿತ್ತು. ಇದು ಚಿರು ಅಭಿಮಾನಿಗಳ ಕೆಂಗಣ್ಣಿಗೆ ಕಾರಣವಾಯಿತು.

ಅಲ್ಲು ಅರ್ಜುನ್ ಅನ್ನು 'ಮೆಗಾಸ್ಟಾರ್' ಎಂದ ಆಹಾ
ಆಹಾ ಒಟಿಟಿಯನ್ನು, ಅಲ್ಲು ಅರ್ಜುನ್ ಅನ್ನು ಸಮಂತಾ ಅನ್ನುನ ಗುರಿಯಾಗಿಸಿ ಮೆಗಾಸ್ಟಾರ್ ಚಿರಂಜೀವಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪ ಎತ್ತಿದರು. ಅಲ್ಲು ಅರ್ಜುನ್ ಅನ್ನು ಸಖತ್ ಟ್ರೋಲ್ ಮಾಡಲಾಯಿತು.

ಕ್ಷಮೆ ಕೋರಿದ ಆಹಾ ಒಟಿಟಿ
ಕೊನೆಗೆ ತನ್ನ ತಪ್ಪು ತಿದ್ದಿಕೊಂಡ ಆಹಾ, ಸಾಮಾಜಿಕ ಜಾಲತಾಣದಲ್ಲಿ ಕ್ಷಮೆ ಕೋರಿ, 'ನಿಮ್ಮ ಪ್ರೀತಿಯಿಂದಲೇ ನಾವು ಇಷ್ಟು ದೂರ ಬಂದಿದ್ದೇವೆ. ಉದ್ದೇಶಪೂರ್ವಕವಲ್ಲದ ತಪ್ಪು ನಮ್ಮಿಂದ ಆಗಿದೆ. ನಮ್ಮ ತಪ್ಪಿನಿಂದ ಯಾರಿಗೆ ಬೇಸರವಾಗಿದೆಯೋ ಅವರಿಗೆಲ್ಲ ಕ್ಷಮೆ ಕೋರುತ್ತಿದ್ದೇವೆ' ಎಂದಿದೆ ಆಹಾ.

ಇರುವುದು ಒಬ್ಬರೇ ಮೆಗಾಸ್ಟಾರ್
ಅಷ್ಟೇ ಅಲ್ಲದೆ, 'ಇಡೀಯ ಸಿನಿಮಾ ಉದ್ಯಮದಲ್ಲಿ ಒಬ್ಬರೇ ಮೆಗಾಸ್ಟಾರ್ ಇರುವುದು ಅವರು ಯಾರೆಂದು ನಾವು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ' ಎಂದಿದೆ ಒಟಿಟಿ. ಆಹಾ ಕೋರಿದ ಕ್ಷಮೆಯನ್ನು ಮನ್ನಿಸಿದ್ದಾರೆ ಚಿರಂಜೀವಿ ಅಭಿಮಾನಿಗಳು.


Click it and Unblock the Notifications











