For Quick Alerts
  ALLOW NOTIFICATIONS  
  For Daily Alerts

  ದೊಡ್ಡ ಪರದೆಯಿಂದ ಸಣ್ಣ ಪರದೆಯತ್ತ ಮುಖ ಐಶ್ವರ್ಯಾ ರೈ

  |

  ಸಣ್ಣ ಪರದೆಯೆಂದರೆ ಮೂಗು ಮುರಿಯುತ್ತಿದ್ದ ಸ್ಟಾರ್ ನಟ-ನಟಿಯರು ಈಗ ನಾ ಮುಂದು, ತಾ ಮುಂದು ಎಂದು ಸಣ್ಣ ಪರದೆ ಕಡೆಗೆ ಮುಖ ಮಾಡುತ್ತಿದ್ದಾರೆ.

  ಹೌದು, ಒಟಿಟಿಗಳ ಶಕ್ತಿ ಸಿನಿಮಾ ಮಂದಿಗೆ ಅರ್ಥವಾಗಿದೆ. ಸಿನಿಮಾಗಳಿಗಿಂತಲೂ ಸಾಕಷ್ಟು ಸೇಫ್, ಶ್ರಮವೂ ಕಡಿಮೆ ಮತ್ತು ಹಣಕ್ಕೂ ಕೊರತೆ ಇಲ್ಲ ಎಂಬುದು ಅರ್ಥವಾಗಿದೆ. ಹಾಗಾಗಿ ಸಾಲು-ಸಾಲಾಗಿ ಒಟಿಟಿಗಳೆಡೆಗೆ ಬರುತ್ತಿದ್ದಾರೆ ನಟ-ನಟಿಯರು.

  ಸಿನಿಮಾಗಳಲ್ಲಿ ಸಹ ಅಳೆದು-ತೂಗಿ ನಟಿಸುತ್ತಿದ್ದ ಐಶ್ವರ್ಯಾ ರೈ ಒಟಿಟಿಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈಗಾಗಲೇ ಪತಿ ಅಭಿಷೇಕ್ ಬಚ್ಚನ್ ಅಮೆಜಾನ್ ಪ್ರೈಂ ನ 'ಬ್ರೀತ್' ವೆಬ್ ಸರಣಿಯಲ್ಲಿ ನಟಿಸಿದ್ದಾರೆ. ಅವರ ನಟನೆಯ ಲೂಡೊ ಸಹ ನೆಟ್‌ಫ್ಲಿಕ್ಸ್‌ ನಲ್ಲಿ ಬಿಡುಗಡೆ ಆಗಿದೆ. ಈಗ ಐಶ್ವರ್ಯಾ ರೈ ಸಹ ಒಟಿಟಿಯಲ್ಲಿ ನಟಿಸಲು ಸಜ್ಜಾಗುತ್ತಿದ್ದಾರೆ.

  ಮಹಿಳಾ ಪ್ರಧಾನ ಆಕ್ಷನ್ ಸಿನಿಮಾ ಒಂದರ ಕತೆಯ ಬಗ್ಗೆ ಐಶ್ವರ್ಯಾ ರೈ ಚರ್ಚಿಸುತ್ತಿದ್ದು, ನೆಟ್‌ಫ್ಲಿಕ್ಸ್‌ ಒರಿಜಿನಲ್‌ ಇದಾಗಿರಲಿದೆ. ಐಶ್ವರ್ಯಾ ರೈ ಕತೆ ಒಪ್ಪಿಕೊಂಡಲ್ಲಿ ಸಿನಿಮಾವು ನೇರವಾಗಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗಲಿದೆ.

  ನೆಟ್‌ಫ್ಲಿಕ್ಸ್‌ ಜೊತೆಗೆ ಐಶ್ವರ್ಯಾ ಈಗಾಗಲೇ ಮಾತು ಮುಂದುವರೆಸಿದ್ದು, ಸನಿಹದಲ್ಲಿಯೇ ಚಿತ್ರೀಕರಣ ಸಹ ಪ್ರಾರಂಭವಾಗಲಿದೆ ಎಂದು ಆನ್‌ಲೈನ್ ಪತ್ರಿಕೆ ವರದಿ ಮಾಡಿದೆ. ಒಟಿಟಿಗಳ ಬಗ್ಗೆ ಐಶ್ವರ್ಯಾಗೆ ಮೊದಲಿನಿಂದೂ ಆಸಕ್ತಿ ಇತ್ತಂತೆ. ಅಭಿಷೇಕ್ ಬಚ್ಚನ್, ಬ್ರೀತ್ ವೆಬ್ ಸರಣಿಯಲ್ಲಿ ನಟಿಸಲು ಐಶ್ವರ್ಯಾ ರೈ ಕಾರಣ ಎನ್ನಲಾಗಿತ್ತು.

  ಐಶ್ವರ್ಯಾ ರೈ ಬಹಳ ಕಡಿಮೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 2018 ರಲ್ಲಿ ನಟಿಸಿದ್ದ ಫನ್ನೆ ಖಾನ್ ಅವರ ನಟನೆಯ ಕೊನೆಯ ಸಿನಿಮಾ. ಮಣಿರತ್ನಂ ನಿರ್ದೇಶಿಸುತ್ತಿರುವ ಬಹುತಾರಾಗಣದ ಸಿನಿಮಾ 'ಪೊನ್ನಿಯನ್ ಸೆಲ್ವನ್' ಸಿನಿಮಾದಲ್ಲಿ ಸಹ ಐಶ್ವರ್ಯಾ ನಟಿಸುತ್ತಿದ್ದಾರೆ.

  English summary
  Actress Aishwarya Rai will make her digital debut with a Netflix original movie soon. She is in talks with Netflix.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X