ಲೈಂಗಿಕ ಭಂಗಿಗಳ ಪ್ರದರ್ಶನ; 'ಹೌಸ್ ಅರೆಸ್ಟ್' ರಿಯಾಲಿಟಿ ಶೋ ಬಗ್ಗೆ ಆಕ್ರೋಶ

ಓಟಿಟಿಗೆ ಸೆನ್ಸಾರ್‌ಶಿಪ್ ಬೇಕು ಎನ್ನುವ ಮಾತು ಪದೇ ಪದೆ ಕೇಳಿಬರುತ್ತಿರುತ್ತದೆ. ದೇಶ ವಿದೇಶದ ಕಂಟೆಂಟ್‌ ಈಗ ಬಹಳ ಸುಲಭವಾಗಿ ನಮ್ಮ ಮೊಬೈಲ್‌ ಫೋನ್‌ಗಳಿಗೆ ಬಂದುಬಿಡುತ್ತದೆ. ಅಶ್ಲೀಲ, ಅಸಭ್ಯ ದೃಶ್ಯಗಳು, ಸಂಭಾಷಣೆ ಇರುವ ಸಿನಿಮಾ, ವೆಬ್ ಸೀರಿಸ್‌ಗಳು ವೀಕ್ಷಣೆಗೆ ಸಿಗುತ್ತಿದೆ. ಅದೇ ಸಾಲಿಗೆ ರಿಯಾಲಿಟಿ ಶೋಗಳು ಸೇರಿಕೊಳ್ತಿವೆ.

ಕೆಲ ಓಟಿಟಿ ಆಪ್‌ಗಳಲ್ಲಿ ಚಿತ್ರವಿಚಿತ್ರ ರಿಯಾಲಿಟಿ ಶೋಗಳು ಸ್ಟ್ರೀಮಿಂಗ್ ಆಗುತ್ತಿದೆ. ಉಲ್ಲು ಆಪ್‌ನಲ್ಲಿ ಪ್ರಸಾರವಾಗುವ 'ಹೌಸ್ ಅರೆಸ್ಟ್' ರಿಯಾಲಿಟಿ ಶೋನ ಒಂದು ದೃಶ್ಯ ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಅದರಲ್ಲಿ ಸ್ಪರ್ಧಿಗಳು ಲೈಂಗಿಕ ಭಂಗಿಗಳನ್ನು ಪ್ರದರ್ಶಿಸುವುದನ್ನು ನೋಡಬಹುದು. ನಿರೂಪಕ ಏಜಾಜ್ ಖಾನ್ ಸ್ಪರ್ಧಿಗಳನ್ನು ಪ್ರೇರೇಪಿಸಿ ಇಂತಹ ಟಾಸ್ಕ್‌ಗಳನ್ನು ಕೊಡುತ್ತಿದ್ದಾರೆ. ಕೂಡಲೇ ಈ ಶೋ ಹಾಗೂ ಆಪ್ ಅನ್ನು ಬ್ಯಾನ್ ಮಾಡಿ ಎನ್ನುವ ಆಗ್ರಹ ವ್ಯಕ್ತವಾಗುತ್ತಿದೆ.

Ajaz Khan s latest series House Arrest on Ullu has sparked controversy due to its content

ಸದ್ಯ ಈ ಶೋ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೀತಿದೆ. ಇಂತಹ ಶೋಗಳಿಂದ ನಮ್ಮ ಸಂಸ್ಕೃತಿ ಹಾಳಾಗುತ್ತಿದೆ, ಇಂತಹ ಟಾಸ್ಕ್‌ಗಳ ಮೂಲಕ ಯಾವ ರೀತಿಯ ಸಂದೇಶವನ್ನು ಸಮಾಜಕ್ಕೆ ಕೊಡುತ್ತಿದ್ದಾರೆ? ಎಂದು ಅಸಮಾಧಾನ ವ್ಯಕ್ತವಾಗುತ್ತಿದೆ. 18 ಒಟಿಟಿ ಪ್ಲಾಟ್‌ಫಾರ್ಮ್‌ಗಳನ್ನು ಹಾಗೂ 19 ವೆಬ್‌ಸೈಟ್‌ಗಳನ್ನು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಬ್ಯಾನ್ ಮಾಡಿದೆ. ಆದರೆ ಉಲ್ಲು ಆಪ್ ಬ್ಯಾನ್ ಆಗಿಲ್ಲ.

ಶಿವಸೇನಾ ಸಂಸದೆ ಪ್ರಿಯಾಂಕಾ ಚತುರ್ವೇದಿ ವಿವಾದಾತ್ಮಕ ಶೋ ಟಾಸ್ಕ್ ವೀಡಿಯೋವನ್ನು 'ಎಕ್ಸ್‌' ಖಾತೆಯಲ್ಲಿ ಹಂಚಿಕೊಂಡು ಪ್ರತಿಕ್ರಿಯಿಸಿದ್ದಾರೆ. "ಉಲ್ಲು ಆಪ್ ಮತ್ತು ಆಲ್ಟ್ ಬಾಲಾಜಿಯಂತಹ ಆಪ್‌ಗಳು ಅಶ್ಲೀಲ ವಿಷಯವನ್ನು ಹೊಂದಿರುವ ಆಪ್‌ಗಳ ಮೇಲಿನ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ನಿಷೇಧದಿಂದ ತಪ್ಪಿಸಿಕೊಂಡಿವೆ. ಈ ವಿಚಾರವನ್ನು ನಾನು ಸ್ಥಾಯಿ ಸಮಿತಿಯಲ್ಲಿ ಪ್ರಸ್ತಾಪಿಸಿದ್ದೀನಿ. ಅವರ ಉತ್ತರಕ್ಕಾಗಿ ಕಾಯುತ್ತಿದ್ದೇನೆ" ಎಂದು ಟ್ವೀಟ್ ಮಾಡಿದ್ದಾರೆ.

ನಿರೂಪಕಿ ಮಹಿಳಾ ಸ್ಪರ್ಧಿಯನ್ನು ಕಾಮಸೂತ್ರದ ಬಗ್ಗೆ ಕೇಳುವುದು, ಆಕೆ ಅಷ್ಟಾಗಿ ಗೊತ್ತಿಲ್ಲ ಎನ್ನುವುದು, ಬಳಿಕ ಇನ್ನಿಬ್ಬರು ಸ್ಪರ್ಧಿಗಳಿಗೆ ಆ ಭಂಗಿಗಳನ್ನು ತೋರಿಸುವಂತೆ ಹೇಳುವುದು, ಅವರು ಖುಲ್ಲಂ ಖುಲ್ಲಾ ಮಾಡಿ ತೋರಿಸುವುದನ್ನು ವೀಡಿಯೋದಲ್ಲಿ ನೋಡಬಹುದು. ನೆಟ್ಟಿಗರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

ಸುಪ್ರೀಂ ಕೋರ್ಟ್ ಇತ್ತೀಚೆಗೆ ತನ್ನ ತೀರ್ಪಿಲ್ಲಿ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ ವಿಷಯದ ಕಂಟೆಂಟ್ ಬಹಳ ಕಳವಳ ವ್ಯಕ್ತಪಡಿಸಿತ್ತು. ಓಟಿಟಿ ಮತ್ತು ಸಾಮಾಜಿಕ ಮಾಧ್ಯಮ ಸೈಟ್‌ಗಳು ಸಹ ಜವಾಬ್ದಾರಿಯನ್ನು ಹೊಂದಿವೆ ಎಂದು ತಿಳಿಸಿತ್ತು. ಶೀಘದಲ್ಲೇ ನಿರೂಪಕ ಏಜಾಜ್ ಖಾನ್ ವಿರುದ್ಧ ದೂರು ದಾಖಲಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಜಾರ್ಖಂಡ್‌ನ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಕೂಡ ಈ ವೀಡಿಯೋವನ್ನು 'ಎಕ್ಸ್' ಖಾತೆಯಲ್ಲಿ ಹಂಚಿಕೊಂಡು ಮಾಹಿತಿ ಮತ್ತು ಪ್ರಸಾರ ಸಚಿವಾಲಯವನ್ನು ಟ್ಯಾಗ್ ಮಾಡಿದ್ದಾರೆ. "ಇದು ಸರಿಯಲ್ಲ, ನಮ್ಮ ಕಮಿಟಿ ಕ್ರಮ ಕೈಗೊಳ್ಳಬೇಕು" ಎಂದು ಬರೆದಿದ್ದಾರೆ. ಅಧಿಕೃತವಾಗಿ ಈ ವಿವಾದದ ಬಗ್ಗೆ ಉಲ್ಲು ಆಪ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

'ಹೌಸ್ ಅರೆಸ್ಟ್' ರಿಯಾಲಿಟಿ ಶೋ ಹುಚ್ಚಾಟ ಇಷ್ಟಕ್ಕೆ ನಿಲ್ಲುವುದಿಲ್ಲ. ಸ್ಪರ್ಧಿಗಳು ಬಟ್ಟೆ ಬಿಚ್ಚುವುದು, ಲಿಪ್‌ಲಾಕ್ ಮಾಡುವುದು ರೀತಿಯ ಟಾಸ್ಕ್‌ಗಳನ್ನು ಕೊಡಲಾಗಿತ್ತು. ಓಟಿಟಿ ಎನ್ನುವ ಕಾರಣಕ್ಕೆ ಎಂಥಹ ದೃಶ್ಯಗಳನ್ನು ತೋರಿಸಬಹುದು ಎಂದು ಭಾವಿಸಿದಂತೆ ಕಾಣುತ್ತಿದೆ. ಸ್ಪರ್ಧಿಗಳು ಅಶ್ಲೀಲವಾಗಿ ಸಂಭಾಷಣೆ ನಡೆಸುವುದನ್ನು ಕೂಡ ನೋಡಬಹುದು. ಬಿಗ್‌ಬಾಸ್ ಮಾದರಿಯಲ್ಲೇ ಈ ಶೋ ಕಾಣುತ್ತದೆ. ಒಂದಷ್ಟು ಪುರುಷ ಹಾಗೂ ಮಹಿಳಾ ಸ್ಪರ್ಧಿಗಳನ್ನು ಮನೆಯೊಳಗೆ ಸೇರಿಸಿ ಅವರಿಗೆ ಟಾಸ್ಕ್‌ಗಳನ್ನು ಕೊಟ್ಟು ವೀಕ್ಷಕರನ್ನು ರಂಜಿಸುವ ಪ್ರಯತ್ನ ಮಾಡಲಾಗುತ್ತದೆ.

More from Filmibeat

English summary
Priyanka Chaturvedi condemned House Arrest on the Ullu app for promoting bad content
Read more about: bollywood hindi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X