Bigg Boss OTT: ಜದ್- ಆಕಾಂಕ್ಷ ಪುರಿ ಲಿಪ್‌ಲಾಕ್: ವೀಕ್ಷಕರಲ್ಲಿ ಕ್ಷಮೆ ಕೇಳಿದ ಸಲ್ಮಾನ್ ಖಾನ್

ಹಿಂದಿ ಬಿಗ್‌ಬಾಸ್ ಓಟಿಟಿ ಸೀಸನ್-2 ಇತ್ತೀಚೆಗೆ ಭಾರೀ ಸದ್ದು ಮಾಡ್ತಿದೆ. ಮುಖ್ಯವಾಗಿ ಮಾಡೆಲ್, ನಟ ಜದ್ ಹದೀದ್ ಹಾಗೂ ಸಹ ಸ್ಪರ್ಧಿ ಆಕಾಂಕ್ಷ ಪೂರಿ ಅನುಚಿತ ವರ್ತನೆ ಚರ್ಚೆ ಹುಟ್ಟಾಕ್ಕಿದೆ. ಬಿಗ್‌ಬಾಸ್ ಶೋನಲ್ಲಿ ಮನರಂಜನೆ ಜೊತೆಗೆ ವಿವಾದಗಳಿಗೂ ಬರವಿರಲ್ಲ. ಆದರೆ ಸಲ್ಮಾನ್ ಖಾನ್ ನಡೆಸಿಕೊಡುತ್ತಿರುವ ಓಟಿಟಿ ಶೋನಲ್ಲಿ ಅದು ಕೊಂಚ ಹೆಚ್ಚಾಗುತ್ತಲೇ ಇದೆ.

ಆನ್ ಸ್ಕ್ರೀನ್ ಲಿಪ್‌ಲಾಕ್‌ ದೃಶ್ಯಗಳಿಂದ ಸಲ್ಮಾನ್ ಖಾನ್ ದೂರವೇ ಉಳಿದಿದ್ದಾರೆ. ಆದರೆ ಸಲ್ಲು ಹೋಸ್ಟ್ ಮಾಡುತ್ತಿರುವ ಬಿಗ್‌ಬಾಸ್ ಓಟಿಟಿ- 2ರಲ್ಲಿ ಸ್ಪರ್ಧಿಗಳು ದೊಡ್ಮನೆ ಒಳಗೆ ಕ್ಯಾಮರಾಗಳ ಮುಂದೆ ಲಿಪ್‌ಲಾಕ್ ಮಾಡುತ್ತಿರುವುದಕ್ಕೆ ಕೋಪಗೊಂಡಿದ್ದಾರೆ. ಜದ್ ಹದೀದ್ ಹಾಗೂ ಆಕಾಂಕ್ಷ ಪೂರಿ 30 ಸೆಕೆಂಡ್‌ಗಳ ಕಾಲ ತುಟಿಗೆ ತುಟಿ ಸೇರಿಸಿ ಕಾಣಿಸಿಕೊಂಡಿದ್ದರು. ವೀಕೆಂಡ್‌ ಎಪಿಸೋಡ್‌ನಲ್ಲಿ ಈ ಬಗ್ಗೆ ಸಲ್ಲು ಆಕ್ರೋಶ ವ್ಯಕ್ತಪಡಿಸಿದರು. ಪ್ರೇಕ್ಷಕರ ಕ್ಷಮೆ ಕೇಳಿದ ಭಾಯ್ಜಾನ್ ಮತ್ತೊಮ್ಮೆ ಇದು ಪುನರಾವರ್ತನೆ ಆದರೆ ಶೋ ಬಿಟ್ಟು ಹೋಗುವುದಾಗಿ ಎಚ್ಚರಿಸಿದರು.

Akanksha Puri,Jad Hadids kiss on Bigg Boss OTT 2, Salman Khan apologises to audience

'ವೀಕೆಂಡ್ ಕಾ ವಾರ್' ಎಪಿಸೋಡ್ ಆರಂಭದಲ್ಲಿ ಕಳೆದ ವಾರ ಬಿಗ್‌ಬಾಸ್ ಮನೆಯಲ್ಲಿ ಏನೆಲ್ಲಾ ಆಯಿತು ಎನ್ನುವುದರ ಪರಾಮರ್ಶೆ ಆಯಿತು. ಸ್ಪರ್ಧಿಗಳ ಅನುಚಿತ ವರ್ತನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಅಷ್ಟೇನು ಕಠಿಣ ಸೆನ್ಸಾರ್ ನಿಮಯಗಳು ಇಲ್ಲದೇ ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ಶೋ ಪ್ರಸಾರ ಆಗುತ್ತಿದ್ದರೂ ಜದ್ ವರ್ತನೆ ವಿಡಿಯೋ ಪ್ಲೇ ಮಾಡಿಲ್ಲ ಎಂದು ಹೇಳಿದ್ದಾರೆ.

ಜದ್ ವರ್ತನೆಗೆ ಸಲ್ಲು ಖಂಡನೆ

ಶೋನಲ್ಲಿ ನಡೆದ ಇಂತಹ ಘಟನೆಯ ಬಗ್ಗೆ ವೀಕ್ಷಕರಲ್ಲಿ ಸಲ್ಮಾನ್ ಖಾನ್ ಕ್ಷಮೆ ಕೇಳಿದರು. ಇಂತಹ ಸ್ಪರ್ಧಿಗಳ ಮೇಲೆ ನನಗೆ ನಂಬಿಕೆ ಇಲ್ಲ ಎಂದರು. ವೀಕೆಂಡ್ ವಾರ್‌ ಎಪಿಸೋಡ್‌ನಲ್ಲಿ ಜದ್ ಹದೀದ್‌ನ ಪ್ರತ್ಯೇಕವಾಗಿ ಸಲ್ಲು ಪ್ರಶ್ನಿಸಿದರು. ವೈಯಕ್ತಿಕವಾಗಿ ತಿಳಿದಿರುವ ಮಹಿಳೆಯರೊಂದಿಗೆ ಹೀಗೆ ವರ್ತಿಸುತ್ತೀಯಾ? ಎಂದು ಮೂದಲಿಸಿದರು. ಜದ್ ವರ್ತನೆಯನ್ನು ಖಂಡಿಸಿದರು. ಮೊದಲಿಗೆ ಜದ್ ತನ್ನನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದರೂ ನಂತರ ಸಲ್ಲು ಬಳಿ ಕ್ಷಮೆ ಕೇಳಿದ್ದಾರೆ. "ನಿಜವಾಗಿಯೂ ತನ್ನ ವರ್ತನೆಗೆ ಪಶ್ಚಾತ್ತಾಪಪಡುತ್ತಿದ್ದೇನೆ" ಎಂದಿದ್ದಾರೆ.

Akanksha Puri,Jad Hadids kiss on Bigg Boss OTT 2, Salman Khan apologises to audience

ಸಲ್ಮಾನ್ ಖಾನ್ ಎಚ್ಚರಿಕೆ

ಜದ್ ತನ್ನನ್ನು ಸಮರ್ಥಿಸಿಕೊಳ್ಳಲು ಮುಂದಾದಾಗ ಸಲ್ಲು "ನೀವೇನು ಇಲ್ಲಿ ಸಿನಿಮಾ ಪಾತ್ರ, ವೆಬ್‌ಸೀರಿಸ್ ಪಾತ್ರ ಮಾಡ್ತಿಲ್ಲ, ಇದೇನು ಸ್ಕ್ರಿಪ್ಟ್‌ ಅಲ್ಲ, ಹೀಗೆ ಮಾಡುವಂತೆ ನಿಮಗ್ಯಾರು ಆದೇಶ ನೀಡಲಿಲ್ಲ ಎಂದು ಗರಂ ಆಗಿದ್ದರು. ನಂತರ ಜಡ್ ತಣ್ಣಗಾದರು. ಇಂತಹ ವರ್ತನೆ ಕೆಲವರಿಗೆ ಇಷ್ಟವಾಗಬಹುದು. ಆದರೆ ಸಾಕಷ್ಟು ಜನರಿಗೆ ಬೇಸರ ತರುತ್ತದೆ. ಈ ವಾರ ಇದೇ ಹೈಲೆಟ್ ಅಂದುಕೊಂಡಿದ್ದೀಯಾ ಅನಿಸುತ್ತದೆ. ಕುಟುಂಬ ಗೌರವ, ನಮ್ಮ ಸಂಸ್ಕೃತಿ ಇದೇನಾ ನಮಗೆ ಕಲಿಸಿದ್ದು? ಎಂದು ಸಲ್ಲು ಪ್ರಶ್ನಿಸಿದ್ದಾರೆ.

ಆಕಾಂಕ್ಷಾ ಪೂರಿ ಎಲಿಮಿನೇಟ್

ಈ ದೇಶ ಸಂಪ್ರದಾಯಗಳನ್ನು ಗೌರವಿಸುತ್ತದೆ ಎನ್ನುವುದನ್ನು ಮರೆಯಬೇಡಿ. ಇನ್ನೊಮ್ಮೆ ಇದು ಪುನರಾವರ್ತನೆ ಆದರೆ ನಿನ್ನನ್ನು ನೇರವಾಗಿ ಎಲಿಮಿನೇಟ್ ಮಾಡ್ತೀನಿ ಎಂದು ಸಲ್ಲು ಎಚ್ಚರಿಸಿದರು. ಜದ್ ನನಗೆ 4 ವರ್ಷದ ಮಗಳಿದ್ದಾಳೆ ಎಂದಾಗ ಶಾಕ್ ಆಗಿದ್ದಲ್ಲದೇ ಸಲ್ಲು ಮತ್ತಷ್ಟು ಸೀರಿಯಸ್ ಆದರು. ಏನಾದರೂ ಮಾಡಬೇಕಾದರೆ ಅದರ ಪರಿಣಾಮ ಏನಾಗುತ್ತದೆ ಎಂದು ಯೋಚಿಸುವಂತೆ ಸಲ್ಲು ಬುದ್ದಿವಾದ ಹೇಳಿದರು. ಇನ್ನು ಶೋನಿಂದ ಈ ವಾರ ಆಕಾಂಕ್ಷಾ ಪೂರಿ ಎಲಿಮಿನೇಟ್ ಆಗಿದ್ದಾರೆ.

ಬೇಬಿಕಾ ಧುರ್ವೆ ವಿರುದ್ಧ ಸಲ್ಲು ಗರಂ

ಇನ್ನು ಶೋನಲ್ಲಿ ಮತ್ತೊಬ್ಬ ಸ್ಪರ್ಧಿ ಬೇಬಿಕಾ ಧುರ್ವೆ ವರ್ತನೆಯ ಬಗ್ಗೆ ಕೂಡ ಸಲ್ಮಾನ್ ಖಾನ್ ಆಕ್ರೋಶ ವ್ಯಕ್ತಪಡಿಸಿದರು. ಸಹ ಸ್ಪರ್ಧಿಗಳ ಜೊತೆ ಆಕೆ ಅನುಚಿತವಾಗಿ ಮಾತನಾಡಿದ್ದರು. ಜ್ಯೋತಿಷಿ ಜನಾರ್ದನ್ ಪುತ್ರಿಯಾದ ಬೇಬಿಕಾ ಇಷ್ಟು ಕೆಟ್ಟದಾಗಿ ಹೇಗೆ ವರ್ತಿಸಿದರು? ಎಂದು ಸಲ್ಮಾನ್ ಅಚ್ಚರಿ ವ್ಯಕ್ತಪಡಿಸಿದರು. ಆಕೆ ಇತರ ಸ್ಪರ್ಧಿಗಳ ಜೊತೆ ನಡೆದುಕೊಳ್ಳುವಂತೆ, ಮಾತನಾಡುವಂತೆ ತನ್ನೊಟ್ಟಿಗೂ ಒಂದಲ್ಲ ಒಂದು ದಿನ ಮಾತನಾಡಬಹುದು ಎಂದು ಸಲ್ಲು ಆತಂಕ ವ್ಯಕ್ತಪಡಿಸಿದರು.

More from Filmibeat

English summary
Akanksha Puri, Jad Hadid's kiss on Bigg Boss OTT 2, Salman Khan apologises to audience. Sallu also schools Bebika Dhurve for her behaviour. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X