OTTಯಲ್ಲಿ ಭರ್ಜರಿ ದಾಖಲೆ ಬರೆದ 'ಅಖಂಡ'!

ನಂದಮೂರಿ ಬಾಲಕೃಷ್ಣ ಅವರು ಅಭಿನಯದ ಅಖಂಡ ಸಿನಿಮಾ, ಕಳೆದ ವರ್ಷ ಡಿಸೆಂಬರ್‌ನಲ್ಲಿ ಬಿಡುಗಡೆಯಾಯಿತು. ಬಿಗ್ ಓಪನಿಂಗ್ ಪಡೆದುಕೊಂಡ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಹಿಟ್ ಆಗಿ ಹೊರಹೊಮ್ಮಿತು. ಬಾಲಕೃಷ್ಣ ಮತ್ತು ನಿರ್ದೇಶಕ ಬೋಯಪಟಿ ಶ್ರೀನು ಕಾಂಬಿನೇಷನ್ ಬಾಕ್ಸ್ ಆಫೀಸ್‌ನಲ್ಲಿ ಮೂರನೇ ಹಿಟ್ ಚಿತ್ರವನ್ನು ನೀಡಿದೆ.

Recommended Video

ನಂದಮೂರಿ ಅಡ್ಡಾಗೆ ಮಾಣಿಕ್ಯ ಬೆಡಗಿ ಸೇರ್ಪಡೆ!

ಅಖಂಡ ಸಿನಿಮಾ ಥಿಯೇಟರ್‌ಗಳಲ್ಲಿ ಯಶಸ್ವಿ 50 ದಿನಗಳನ್ನು ಪೂರೈಸಿದೆ. ಈಗ OTT ಸರದಿ. ಈ ಚಿತ್ರ Ottಯಲ್ಲಿ ರಿಲೀಸ್‌ ಆಗಲು ಸಾಕಷ್ಟು ಅಭಿಮಾನಿಗಳು ಕಾಯುತ್ತಲಿದ್ದರು. ಇದೇ ಜನವರಿ 21ರ ಸಂಜೆ ಅಖಂಡ ಸಿನಿಮಾ ಓಟಿಟಿಯಲ್ಲಿ ಬಿಡುಗಡೆಯಾಗಿದೆ.

'ಅಖಂಡ' ಡಿಸ್ನಿ ಪ್ಲಸ್ ಹಾಟ್‌ ಸ್ಟಾರ್ ಓಟಿಟಿ ಪ್ಲಾಟ್‌ ಫಾರ್ಮ್‌ನಲ್ಲಿ ರಿಲೀಸ್‌ ಆಗಿದೆ. ಚಿತ್ರ ರಿಲೀಸ್ ಆದ, 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಸಾರ್ವಕಾಲಿಕ ದಾಖಲೆಯನ್ನು ಸೃಷ್ಟಿಸಿದೆ. ಚಿತ್ರ ಓಟಿಟಿಗೆ ಬರುತ್ತಲೇ, ಸಿನಿಮಾ ನೋಡುಗರ ಸಂಖ್ಯೆ ಗಗನಕ್ಕೇರಿದೆ. ಇಲ್ಲಿ ತನಕ ಯಾವ ತೆಲುಗು ಸಿನಿಮಾ ಮಾಡದ ರೆಕಾರ್ಡ್‌ ಮಾಡಿದೆ ಅಖಂಡ.

24 ಗಂಟೆ ಒಳಗೆ 1 ಮಿಲಿಯನ್ ವೀಕ್ಷಣೆ ಪಡೆದ ಅಖಂಡ!

24 ಗಂಟೆ ಒಳಗೆ 1 ಮಿಲಿಯನ್ ವೀಕ್ಷಣೆ ಪಡೆದ ಅಖಂಡ!

ಅಖಂಡ ಸಿನಿಮಾ ಒಟ್ಟು 2 ಗಂಟೆ 47 ನಿಮಿಷಗಳಿದೆ. ಈ ಚಿತ್ರ ಈಗಾಗಲೇ ಒಂದು ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆ ಪಡೆದಿದೆ. ಓಟಿಟಿ ಯಲ್ಲಿ ರಿಲೀಸ್ ಆಗಿ 24 ಗಂಟೆಗಳ ಒಳಗೆಯೇ ಒಂದು ಮಿಲಿಯನ್ ವೀಕ್ಷಣೆ ಗಳಿಸಿ ದಾಖಲೆ ಮಾಡಿದೆ ಅಖಂಡ ಸಿನಿಮಾ. ಇನ್ನು OTT ಟ್ರ್ಯಾಕರ್‌ಗಳ ಪ್ರಕಾರ OTT ಪ್ಲಾಟ್‌ ಫಾರ್ಮ್‌ಗಳಲ್ಲಿ ಇದುವರೆಗೆ ತೆಲುಗು ಚಲನಚಿತ್ರವೊಂದಕ್ಕೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ರೆಸ್ಪಾನ್ಸ್ ವ್ಯಕ್ತ ಆಗಿರಲಿಲ್ಲ ಅಂತೆ.

Ottಯಲ್ಲೂ ಹೆಚ್ಚಾಯ್ತು ಬಾಲಯ್ಯ ಅಭಿಮಾನಿ ಬಳಗ!

Ottಯಲ್ಲೂ ಹೆಚ್ಚಾಯ್ತು ಬಾಲಯ್ಯ ಅಭಿಮಾನಿ ಬಳಗ!

ಬಾಲಯ್ಯ ಅವರ ಸಿನಿಮಾಗಳಿಗೆ ಹೆಚ್ಚಾಗಿ ಕೌಟುಂಬಿಕ ಪ್ರೇಕ್ಷಕರು ಇದ್ದಾರೆ. ಜೊತೆಗೆ ಈ ಮೂಲಕ ಬಾಲಯ್ಯ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ ಎನ್ನುವುದು ಮತ್ತೆ ಸಾಬೀತಾಗಿದೆ. OTT ಯಲ್ಲಿ ಬಾಲಯ್ಯ ಅವರಿಗೆ ಹೆಚ್ಚಿನ ಫಾಲೋಯರ್‌ಗಳು ಹುಟ್ಟಿಕೊಂಡಿದ್ದಾರೆ. ಅವರ ಫಾಲೋಯರ್ ಸಂಖ್ಯೆ ದೊಡ್ಡ ಏರಿಕೆಗೆ ಆಗಿದೆ. ಇದಕ್ಕೆ ಅವರು ನಡೆಸಿಕೊಡುವ 'ಅನ್‌ ಸ್ಟಾಪಬಲ್ ವಿತ್ ಎನ್‌ ಬಿ ಕೆ' ಶೋ ಕೂಡ ಒಂದು ಕಾರಣ ಆಗಿದೆ ಎನ್ನಲಾಗುತ್ತಿದೆ.

ವಾರಾಂತ್ಯದಲ್ಲಿ ದೊಡ್ಡ ದಾಖಲೆ ಬರೆಯುವ ನಿರೀಕ್ಷೆ ಇದೆ!

ವಾರಾಂತ್ಯದಲ್ಲಿ ದೊಡ್ಡ ದಾಖಲೆ ಬರೆಯುವ ನಿರೀಕ್ಷೆ ಇದೆ!

ಶುಕ್ರವಾರ ಸಂಜೆ 6 ಗಂಟೆಗೆ ಬಿಡುಗಡೆಯಾಗಿ ದಾಖಲೆ ಮಟ್ಟದ ವೀಕ್ಷಣೆ ಪಡೆದ ಈ ಚಿತ್ರ, ವಾರಾಂತ್ಯದಲ್ಲಿ ಅಂದರೆ ಈ ಶನಿವಾರ ಮತ್ತು ಭಾನುವಾರ ಜನವರು 22 ಮತ್ತು 23ರಂದು ಮತ್ತಷ್ಟು ದೊಡ್ಡ ಮಟ್ಟದ ದಾಖಲೆ ಮಾಡಬಹುದು ಎನ್ನುವ ನಿರೀಕ್ಷೆಗಳು ಮೂಡಿವೆ.

ಈ ಚಿತ್ರದಲ್ಲಿ ನಟ ಬಾಲಕೃಷ್ಣ ಜೊತೆಗೆ ನಟಿ ಪ್ರಜ್ಞಾ ಜೈಸ್ವಾಲ್ ನಾಯಕಿಯಾಗಿ ನಟಿಸಿದ್ದಾರೆ. ತಮನ್ ಚಿತ್ರದ ಸಂಗೀತ ನಿರ್ದೇಶಕರು. ಮಿರಿಯಾಲ ರವೀಂದರ್ ರೆಡ್ಡಿ ಚಿತ್ರವನ್ನು ನಿರ್ಮಿಸಿದ್ದಾರೆ.

Ottಯಲ್ಲಿ ಬಾಲಯ್ಯನದ್ದೇ ಹವಾ!

Ottಯಲ್ಲಿ ಬಾಲಯ್ಯನದ್ದೇ ಹವಾ!

ನಂದಮೂರಿ ಬಾಲಕೃಷ್ಣ ಅವರ ಸಿನಿಮಾಗಳೇ ಒಂದು ರೀತಿ ವಿಭಿನ್ನ. ಎಲ್ಲದರಲ್ಲೂ ಅವರು ಒಂದು ಕೈ ಹೆಚ್ಚು ಎಂದು ಹೇಳಬಹುದು. ಅದು ಫೈಟ್ ಆಗಿರಲಿ, ಡೈಲಾಗ್ಸ್ ಆಗಿರಲಿ, ಡಾನ್ಸ್ ಆಗಿರಲಿ ಎಲ್ಲದರಲ್ಲೂ ಬಾಲಯ್ಯ ಅವರು ಡಿಫ್ರೆಂಟ್. ಅವರು ಹೊಡೆಯುವ ಡೈಲಾಗ್ಸ್‌ಗಳಿಗೇನೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಈಗ ಅಖಂಡ ಸಿನಿಮಾ ಮೂಲಕ ಚಿತ್ರ ಮಂದಿರಗಳ ಗಲ್ಲಾ ಪೆಟ್ಟಿಗೆ ಮಾತ್ರ ಅಲ್ಲ. ಓಟಿಟಿಯಲ್ಲೂ ದಾಖಲೆ ಬರೆದು ಮತ್ತಷ್ಟು ಬೇಡಿಕೆ ಹೆಚ್ಚಿಸಿಕೊಂಡದ್ದಾರೆ ಬಾಲಯ್ಯ.

More from Filmibeat

English summary
Akhanda Movie Big Record In OTT Platform Disney+ Hotstar
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X