ಅಧಿಕ ಮೊತ್ತಕ್ಕೆ ಮಾರಾಟವಾದ ಅಕ್ಷಯ್ ಕುಮಾರ್ ಅಭಿನಯದ 'ಲಕ್ಷ್ಮಿ ಬಾಂಬ್'

ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ ಬಹುನಿರೀಕ್ಷೆಯ ಸಿನಿಮಾ ಲಕ್ಷ್ಮಿ ಬಾಂಬ್. ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದ್ದ ಲಕ್ಷ್ಮಿ ಬಾಂಬ್ ಸಿನಿಮಾ ಅದ್ದೂರಿಯಾಗಿ ಚಿತ್ರಮಂದಿರಗಳಲ್ಲಿ ತೆರೆಗೆ ಬರಲು ಸಿದ್ಧವಾಗಿತ್ತು. ಆದರೆ ಕೊರೊನಾ ಹಾವಳಿಯ ಪರಿಣಾಮ ಸಿನಿಮಾ ಡಿಜಿಟಲ್ ಫ್ಲಾಟ್ ಫಾರ್ಮ್ ನಲ್ಲಿ ತೆರೆಗೆ ಬರುತ್ತಿದೆ.

Recommended Video

Navya Swamy, Corona Positive:ಕಿರುತೆರೆ ನಟಿ ನವ್ಯಾ ಸ್ವಾಮಿಗೆ ಕೊರೊನಾ ವೈರಸ್ ಪಾಸಿಟಿವ್ | Filmibeat Kannada

ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ನಲ್ಲಿ ರಿಲೀಸ್ ಆಗುತ್ತಿದೆ. ಬಾಲಿವುಡ್ ನ 7 ಬಿಗ್ ಬಜೆಟ್ ಸಿನಿಮಾಗಳು ಹಾಟ್ ಸ್ಟಾರ್ ನಲ್ಲಿ ನೇರವಾಗಿ ರಿಲೀಸ್ ಆಗುತ್ತಿವೆ. ವಿಶೇಷ ಅಂದರೆ ಅಕ್ಷಯ್ ಕುಮಾರ್ ಅಭಿನಯದ ಲಕ್ಷ್ಮಿ ಬಾಂಬ್ ಸಿನಿಮಾ ದಾಖಲೆ ಮೊತ್ತಕ್ಕೆ ಮಾರಾಟವಾಗಿದೆ ಎಂದು ಹೇಳಲಾಗುತ್ತಿದೆ.

ಮೂಲಗಳ ಪ್ರಕಾರ ಸಿನಿಮಾ ಬರೋಬ್ಬರಿ 125 ಕೋಟಿಗೆ ಮಾರಾಟವಾಗಿದೆ ಎಂದು ಹೇಳಲಾಗುತ್ತಿದೆ. ಸಾಮಾನ್ಯವಾಗಿ ದೊಡ್ಡ ಸಿನಿಮಾದ ಸಿನಿಮಾ ಡಿಜಿಟಲ್ ಹಕ್ಕು ಹೆಚ್ಚು ಅಂದರೆ 60 ರಿಂದ 70ರ ಕೋಟಿ ವರೆಗೂ ಮಾರಾಟವಾಗುತ್ತೆ. ಆದರೆ ನೇರವಾಗಿ ಡಿಜಿಟಲ್ ಫ್ಲಾಟ್ ಫಾರ್ಮ್ ನಲ್ಲಿ ತೆರೆಗೆ ಬರುತ್ತಿರುವ ಲಕ್ಷ್ಮಿ ಬಾಂಬ್ ಸಿನಿಮಾ ದಾಖಲೆ ಮೊತ್ತಕ್ಕೆ ಮಾರಾಟವಾಗಿದೆ.

Akshay Kumars Lakshmi Bomb Movie Digital Sale For Record Price

ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿದ್ದರೆ ಲಕ್ಷ್ಮಿ ಬಾಂಬ್ ದೊಡ್ಡ ಮೊತ್ತದ ಕಲೆಕ್ಷನ್ ಮಾಡುತ್ತಿತ್ತು. ಏನಿಲ್ಲ ಅಂದರು ಲಕ್ಷ್ಮಿ ಬಾಂಬ್ 250 ಕೋಟಿಗೂ ಅಧಿಕ ಬಾಚಿಕೊಳ್ಳುತ್ತಿತ್ತು ಎನ್ನುತ್ತಾರೆ ಬಾಕ್ಸ್ ಆಫೀಸ್ ಪರಿಣಿತರು. ಲಕ್ಷ್ಮಿ ಬಾಂಬ್ ದಕ್ಷಿಣ ಭಾರತದ ಸೂಪರ್ ಹಿಟ್ ಕಾಂಚನ ಸಿನಿಮಾ ರಿಮೇಕ್ ಆಗಿದೆ. ಹಾರರ್ ಕಾಮಿಡಿ ಸಿನಿಮಾ ಇದಾಗಿದ್ದು, ತಮಿಳಿನಲ್ಲಿ ಕೋಟಿ ಕೋಟಿ ಬಾಚಿಕೊಂಡಿತ್ತು. ಈಗ ಬಾಲಿವುಡ್ ನಲ್ಲಿ ಕಮಾಲ್ ಮಾಡಲು ಸಿದ್ಧವಾಗಿದೆ.

More from Filmibeat

English summary
Bollywood Actor Akshay kumar starrer lakshmi bomb movie digital sale for record price.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X