ಅಕ್ಷಯ್ ಕುಮಾರ್ ನಟನೆಯ 'ಲಕ್ಷ್ಮಿ ಬಾಂಬ್' ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ

ಖ್ಯಾತ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ ಲಕ್ಷ್ಮಿ ಬಾಂಬ್ ಸಿನಿಮಾ ತನ್ನ ಭಿನ್ನತೆಯಿಂದಾಗಿ ಅಕ್ಷಯ್ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ.

ಕೊರೊನಾ ಇಲ್ಲದೇ ಇದ್ದಿದ್ದರೆ ಈ ವೇಳೆಗಾಗಲೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಬೇಕಿದ್ದ ಈ ಹಾರರ್ ಸಿನಿಮಾ ಕೊರೊನಾ ಕಾರಣದಿಂದ ಕೆಲವಾರು ತಿಂಗಳುಗಳು ತಡವಾಗಿದೆ. ಆದರೆ ಸಿನಿಮಾವು ಒಟಿಟಿ ಫ್ಲಾಟ್‌ಫಾರ್ಮ್‌ ಮೂಲಕ ಪ್ರೇಕ್ಷಕರನ್ನು ತಲುಪುತ್ತಿದೆ.

ತೆಲುಗಿನ ಕಾಂಚನಾ ಸಿನಿಮಾದ ರೀಮೇಕ್ ಆಗಿರುವ ಈ ಸಿನಿಮಾ ಒಟಿಟಿ ಫ್ಲಾಟ್‌ಫಾರ್ಮ್‌ ಡಿಸ್ನಿ ಹಾಟ್‌ಸ್ಟಾರ್‌ಗೆ ಭಾರಿ ದುಬಾರಿ ಮೊತ್ತಕ್ಕೆ ಮಾರಾಟವಾಗಿದೆ. ಸಿನಿಮಾವು ಬಿಡುಗಡೆಗೊಳ್ಳುವ ದಿನಾಂಕವನ್ನು ಡಿಸ್ನಿ ಹಾಟ್‌ಸ್ಟಾರ್‌ಗೆ ಘೋಷಿಸಿದೆ.

ನವೆಂಬರ್ 9 ರಂದು ಬಿಡುಗಡೆ

ನವೆಂಬರ್ 9 ರಂದು ಬಿಡುಗಡೆ

ಅಕ್ಷಯ್ ನಟನೆಯ ಲಕ್ಷ್ಮಿ ಬಾಂಬ್ ಹಾರರ್ ಸಿನಿಮಾ ನವೆಂಬರ್ 9 ರಂದು ಡಿಸ್ನಿ ಹಾಟ್‌ಸ್ಟಾರ್‌ ನಲ್ಲಿ ವಿಶ್ವದಾದ್ಯಂತ ಬಿಡುಗಡೆ ಆಗಲಿದೆ. ಒಟಿಟಿಯಲ್ಲಿ ನೇರವಾಗಿ ಬಿಡುಗಡೆ ಆಗಲಿರುವ ಅಕ್ಷಯ್‌ ರ ಮೊದಲ ಸಿನಿಮಾ ಇದಾಗಿದೆ.

ಐಪಿಎಲ್ ಮುಗಿದ ಮೇಲೆ ಬಿಡುಗಡೆ

ಐಪಿಎಲ್ ಮುಗಿದ ಮೇಲೆ ಬಿಡುಗಡೆ

ತಿಂಗಳ ಮುಂಚೆಯೇ ಲಕ್ಷ್ಮಿ ಬಾಂಬ್ ಸಿನಿಮಾವನ್ನು ಹಾಟ್‌ಸ್ಟಾರ್ ಕೊಂಡುಕೊಂಡಿತ್ತು. ಆದರೆ ಐಪಿಎಸ್ ಸೀಸನ್ ಮುಗಿದ ಬಳಿಕವೇ ಸಿನಿಮಾ ಬಿಡುಗಡೆ ಮಾಡುವ ನಿರ್ಣಯಕ್ಕೆ ಹಾಟ್‌ಸ್ಟಾರ್ ಬಂದಿದೆ. ನವೆಂಬರ್‌ನಲ್ಲಿ ಐಪಿಎಲ್ ಮುಗಿದ ಬಳಿಕ ಸಿನಿಮಾ ಬಿಡುಗಡೆ ಆಗಲಿದೆ.

ಮಂಗಳಮುಖಿ ಪಾತ್ರದಲ್ಲಿ ಅಕ್ಷಯ್ ಕುಮಾರ್

ಮಂಗಳಮುಖಿ ಪಾತ್ರದಲ್ಲಿ ಅಕ್ಷಯ್ ಕುಮಾರ್

ಲಕ್ಷ್ಮಿ ಬಾಂಬ್ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಮಂಗಳಮುಖಿ ಪಾತ್ರ ನಿರ್ವಹಿಸುತ್ತಿದ್ದಾರೆ. ವಿಡಿಯೋ ಸಂದರ್ಶನದಲ್ಲಿ ಅಕ್ಷಯ್ ಹೇಳಿದಂತೆ, ತಮ್ಮ ಈವರೆಗಿನ ವೃತ್ತಿ ಜೀವನದಲ್ಲಿ ಅತ್ಯಂತ ಸವಾಲಿನ ಪಾತ್ರ ಇದಾಗಿತ್ತಂತೆ.

Recommended Video

TRP ಗೋಸ್ಕರ ನನ್ನ ಕುಟುಂಬದ ನೆಮ್ಮದಿ ಹಾಳು ಮಾಡಿದ್ದು ಇಷ್ಟ ಆಗಿಲ್ಲ| Raksh | Filmibeat Kannada
ಹಲವು ಸಿನಿಮಾಗಳು ಬಿಡುಗಡೆಗೆ ಕಾದಿವೆ

ಹಲವು ಸಿನಿಮಾಗಳು ಬಿಡುಗಡೆಗೆ ಕಾದಿವೆ

ಸುಶಾಂತ್‌ ರ ಕೊನೆಯ ಸಿನಿಮಾ 'ದಿಲ್ ಬೇಚಾರಾ' ಸಹ ಹಾಟ್‌ಸ್ಟಾರ್‌ನಲ್ಲಿಯೇ ಬಿಡುಗಡೆ ಆಗಿತ್ತು. ಅಕ್ಷಯ್ ಕುಮಾರ್ ಅವರ ಲಕ್ಷ್ಮಿ ಬಾಂಬ್ ನಂತರ ಅಜಯ್ ದೇವಗನ್ ರ 'ಭುಜ್', ಅಭಿಷೇಕ್ ಬಚ್ಚನ್ ರ ಬಿಗ್ ಬುಲ್ ಸಿನಿಮಾಗಳು ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆ ಆಗಲಿವೆ.

More from Filmibeat

English summary
Akshay Kumar starer Laxmmi Bomb movie is going to release on November 09 on Disney Hotstar OTT platform.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X