ಕಪೂರ್ ಕುಟುಂಬದ ಪದ್ಧತಿ ನೋಡಿ ಶಾಕ್ ಆದ ಸೊಸೆ ಆಲಿಯಾ

ರಣ್ಬೀರ್ ಕಪೂರ್ ಹಾಗೂ ಆಲಿಯಾ ಭಟ್ ವಿವಾಹ ಬಾಲಿವುಡ್‌ನಲ್ಲಿ ಇತ್ತೀಚೆಗೆ ನಡೆದ ಟಾಪ್ ವಿವಾಹಗಳಲ್ಲಿ ಒಂದು. ಬಾಲಿವುಡ್‌ನ ಇಬ್ಬರು ಎ ಗ್ರೇಡ್ ಸ್ಟಾರ್‌ ನಟ-ನಟಿಯರ ವಿವಾಹ ದೊಡ್ಡ ಮಟ್ಟದಲ್ಲಿಯೇ ಸುದ್ದಿಯಾಗಿತ್ತು.

ವಿವಾಹವಾಗುವ ಮುನ್ನ ಕಳೆದೊಂದೆರಡು ವರ್ಷದಿಂದಲೂ ಆಲಿಯಾ ಭಟ್, ಕಪೂರ್ ಕುಟುಂಬದ ಸಂಪರ್ಕದಲ್ಲಿದ್ದರು. ಕಳೆದ ವರ್ಷದಾರಂಭದಲ್ಲಿಯೇ ಇವರ ವಿವಾಹವಾಗಬೇಕಿತ್ತು ಆದರೆ ರಿಷಿ ಕಪೂರ್ ನಿಧನದ ಕಾರಣದಿಂದ ವಿವಾಹ ತಡವಾಯಿತು.

ಕಪೂರ್ ಕುಟುಂಬ ತನ್ನದೇ ಆದ ಘನ ಇತಿಹಾಸವುಳ್ಳ ಕುಟುಂಬ. ಭಾರತೀಯ ಸಿನಿಮಾ ರಂಗವನ್ನು ಕಟ್ಟಿ ಬೆಳೆಸಿದ ಕುಟುಂಬವದು. ಇಂಥಹಾ ದೊಡ್ಡ ಕುಟುಂಬಕ್ಕೆ ಭಟ್ ಕುಟುಂಬದ ಕುಡಿ ಆಲಿಯಾ ಹೋದಾಗ ಹಲವು ಸಾಂಸ್ಕೃತಿಕ ಶಾಕ್‌ಗಳು ಆಲಿಯಾಗೆ ಎದುರಾದವಂತೆ. ಈ ಬಗ್ಗೆ ಒಂದು ಮುಖ್ಯ ವಿಷಯದ ಬಗ್ಗೆ ಆಲಿಯಾ ಭಟ್, ಕಾಫಿ ವಿತ್ ಕರಣ್ ಶೋನಲ್ಲಿ ಮಾತನಾಡಿದ್ದಾರೆ.

ಕಾಫಿ ವಿತ್ ಕರಣ್ ಶೋನ ಸೀಸನ್ 7 ರಲ್ಲಿ ಮೊದಲ ಅತಿಥಿಯಾಗಿ ರಣ್ವೀರ್ ಸಿಂಗ್‌ ಜೊತೆಗೆ ಪಾಲ್ಗೊಂಡಿದ್ದ ನಟಿ ಆಲಿಯಾ ಭಟ್, ''ಕಪೂರ್ ಕುಟುಂಬ ನಾನಂದುಕೊಂಡಿದ್ದಕ್ಕಿಂತಲೂ ಬಹಳ ದೊಡ್ಡ ಕುಟುಂಬ. ನಾನು ಅಕ್ಕ, ಅಪ್ಪ-ಅಮ್ಮ ಬಿಟ್ಟರೆ ಇನ್ಯಾರೂ ನಮ್ಮ ಕುಟುಂಬದಲ್ಲಿಲ್ಲ. ಇದ್ದರೂ ಅವರುವರು ಪ್ರತ್ಯೇಕವಾಗಿ ವಾಸಿಸುತ್ತಾರೆ, ಪ್ರತ್ಯೇಕವಾಗಿಯೇ ಆಚರಣೆಗಳನ್ನು ಮಾಡುತ್ತಾರೆ, ಆದರೆ ಕಪೂರ್ ಕುಟುಂಬದಲ್ಲಿ ಹಾಗಲ್ಲ. ಇದು ನನಗೆ ಮೊದಲ ದೊಡ್ಡ ಸಾಂಸ್ಕೃತಿಕ ಬದಲಾವಣೆ ಎನಿಸಿತು'' ಎಂದಿದ್ದಾರೆ ಆಲಿಯಾ ಭಟ್.

ಭಜನೆ ಹೇಳಲು ಬರುತ್ತಾ ಎಂದಿದ್ದ ರಣ್ಬೀರ್

ಭಜನೆ ಹೇಳಲು ಬರುತ್ತಾ ಎಂದಿದ್ದ ರಣ್ಬೀರ್

''ಕಪೂರ್ ಕುಟುಂಬದಲ್ಲಿ ಎಲ್ಲರೂ ಒಟ್ಟಿಗೆ ಊಟ ಮಾಡುತ್ತಾರೆ, ಒಟ್ಟಿಗೆ ಹಬ್ಬಗಳನ್ನು ಆಚರಣೆ ಮಾಡುತ್ತಾರೆ. ದೇವರಿಗೆ ಆರತಿ ಮಾಡುವುದು ಸಹ ಎಲ್ಲರೂ ಒಟ್ಟಿಗೆ ಮಾಡುತ್ತಾರೆ. ನಾನು ಮೊದಲು ಹೋದಾಗಂತೂ ರಣ್ಬೀರ್ ನನ್ನನ್ನು ಬೈದು-ಬೈದು ಕೇಳುತ್ತಿದ್ದ, ನಿನಗೆ ಆರತಿ ಮಾಡಲು ಬರುತ್ತಾ, ನಿನಗೆ ಜಯ ಮತಾದಿ ಭಜನೆ ಹೇಳಲು ಬರುತ್ತಾ ಎಂದು'' ಎಂದು ನೆನಪಿಸಿಕೊಂಡಿದ್ದಾರೆ ಆಲಿಯಾ ಭಟ್.

ದೀಪಾವಳಿ ಜವಾಬ್ದಾರಿ ಹೊತ್ತಿದ್ದ ಆಲಿಯಾ

ದೀಪಾವಳಿ ಜವಾಬ್ದಾರಿ ಹೊತ್ತಿದ್ದ ಆಲಿಯಾ

''ಒಮ್ಮೆಯಂತೂ ದೀಪಾವಳಿಯ ಪೂರ್ಣ ಜವಾಬ್ದಾರಿ ನನಗೆ ಕೊಟ್ಟುಬಿಟ್ಟಿದ್ದರು, ನನಗೆ ಅವರ ಮನೆಯಲ್ಲಿ ದೀಪಾವಳಿ ಎಷ್ಟು ದೊಡ್ಡ ಇವೆಂಟ್ ಎಂಬುದು ಗೊತ್ತಿರಲಿಲ್ಲ. ನಾನು ನನಗೆ ತೋಚಿದಂತೆ ಎಲ್ಲ ಅರೇಂಜ್‌ ಮೆಂಟ್ಸ್ ಮಾಡಿದೆ. ಆದರೆ ಮನೆಯ ಇತರ ಸದಸ್ಯರು ನನಗೆ ಸಹಾಯ ಮಾಡಿದರು. ಅವರು ಎಲ್ಲ ಹಬ್ಬಗಳನ್ನು ಒಟ್ಟಿಗೆ ಆಚರಣೆ ಮಾಡುತ್ತಾರೆ. ಕುಟುಂಬವೆಲ್ಲ ಒಟ್ಟಾಗಿಯೇ ಅವರು ಸಂಭ್ರಮ ಮಾಡುತ್ತಾರೆ'' ಎಂದಿದ್ದಾರೆ ಆಲಿಯಾ.

ಫೋಟೊ ತೆಗೆಸಿಕೊಳ್ಳುವ ತುರ್ತಿನಲ್ಲಿದ್ದ ಆಲಿಯಾ

ಫೋಟೊ ತೆಗೆಸಿಕೊಳ್ಳುವ ತುರ್ತಿನಲ್ಲಿದ್ದ ಆಲಿಯಾ

''ಮದುವೆ ದಿನವಂತೂ ಸೂರ್ಯಾಸ್ಥವಾಗುತ್ತಿರುವ ವೇಳೆ ನನಗೆ ಫೋಟೊ ತೆಗೆಸಿಕೊಳ್ಳುವ ಆತುರವಾಗಿತ್ತು, ಆದರೆ ಪಂಡಿತರು ಪೂಜೆ ಮಾಡುತ್ತಿದ್ದರು. ರಣ್ಬೀರ್ ಕಪೂರ್ ಅಂತೂ ಪೂಜೆಯಲ್ಲಿ ಮುಳುಗಿ ಹೋಗಿದ್ದರು, ಹೊರಗೆ ನೋಡಿದರೆ ಸನ್‌ಸೆಟ್ ಆಗುತ್ತಿದೆ. ನನಗೆ ಸನ್‌ಸೆಟ್‌ ಜೊತೆ ಫೋಟೊ ಬೇಕಿದೆ. ಪೂಜಾರಿಯನ್ನು ಬೇಗ ಬೇಗ ಪೂಜೆ ಮಾಡುವಂತೆ ಒತ್ತಾಯ ಮಾಡಿದ್ದಾಯ್ತು. ರಣ್ಬೀರ್ ಕಪೂರ್ ಪೂಜೆ ವಿಷಯದಲ್ಲಿ ಬಹಳ ಕಟ್ಟುನಿಟ್ಟು'' ಎಂದಿದ್ದಾರೆ ಆಲಿಯಾ.

ವಿಡಿಯೋ ಕಾಲ್ ಮಾಡಿ ಆರತಿ ತೋರಿಸುತ್ತಾರೆ: ಆಲಿಯಾ

ವಿಡಿಯೋ ಕಾಲ್ ಮಾಡಿ ಆರತಿ ತೋರಿಸುತ್ತಾರೆ: ಆಲಿಯಾ

ಕರಣ್ ಜೋಹರ್ ಸಹ ಮಧ್ಯದಲ್ಲಿ ಮಾತನಾಡಿ, ''ರಣ್ಬೀರ್ ಕಪೂರ್ ಹಾಗೆ ಸ್ಟೈಲಿಸ್ಟ್ ಆಗಿ ಕಾಣುತ್ತಾರೆ ಆದರೆ ಬಹಳ ಧಾರ್ಮಿಕ ವ್ಯಕ್ತಿ. ಪೂಜೆ, ಪುನಸ್ಕಾರಗಳ ವಿಷಯದಲ್ಲಿ ಬಹಳ ಆಸಕ್ತಿವಹಿಸುತ್ತಾರೆ. ಸ್ವತಃ ಕೆಲವು ಮಂತ್ರಗಳನ್ನು ಸಹ ಹೇಳುತ್ತಾರೆ'' ಎಂದರು. ಮುಂದುವರೆದು ಮಾತನಾಡಿದ ಆಲಿಯಾ, ''ಪೂಜೆಗಳ ವಿಷಯದಲ್ಲಿ ಕಪೂರ್ ಕುಟುಂಬ ಬಹಳ ಶಿಸ್ತು, ರಿಷಿ ಕಪೂರ್ ಇದ್ದಾಗಲೂ, ಮನೆಯಲ್ಲಿ ಆರತಿ ಮಾಡಿದಾಗ, ಕುಟುಂಬ ಸದಸ್ಯರು ಹೊರಗಡೆ ಇದ್ದರೆ ಅವರಿಗೆ ವಿಡಿಯೋ ಕಾಲ್ ಮಾಡಿ ಆರತಿ ತೋರಿಸುತ್ತಿದ್ದರು. ಈಗಲೂ ಅಷ್ಟೆ ಮನೆಯಲ್ಲಿ ಆರತಿ ಆಗುವಾಗ ಯಾರಾದರೂ ಅನಿವಾರ್ಯ ಕಾರಣದಿಂದ ಹೊರಗೆ ಇದ್ದರೆ, ಅವರಿಗೆ ವಿಡಿಯೋ ಕಾಲ್ ಮಾಡಲಾಗುತ್ತದೆ'' ಎಂದಿದ್ದಾರೆ.

More from Filmibeat

English summary
Actress Alia Bhatt says she adopting herself to Kapoor families traditions after marrying Ranbir Kapoor. She said Kapoors do everything together. They eat, do pooja, celebrate festival together.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X