For Quick Alerts
  ALLOW NOTIFICATIONS  
  For Daily Alerts

  'ಫಸ್ಟ್ ನೈಟ್' ಬಗ್ಗೆ ಆಲಿಯಾ ಭಟ್ ಮಾತು: ನಕ್ಕು ಸುಸ್ತಾದ ಕರಣ್-ರಣ್ವೀರ್ ಸಿಂಗ್

  |

  ಆಲಿಯಾ ಭಟ್ ತಾಯಿಯಾಗಲಿದ್ದಾರೆ. ಇದೇ ವರ್ಷದ ಏಪ್ರಿಲ್‌ನಲ್ಲಿ ರಣ್ಬೀರ್ ಕಪೂರ್ ಅನ್ನು ವಿವಾಹವಾದ ಈ ನಟಿ ಕೆಲವು ದಿನಗಳ ಹಿಂದಷ್ಟೆ ತಾವು ತಾಯಿಯಾಗುತ್ತಿರುವ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಸಂತಸದಿಂದ ಹಂಚಿಕೊಂಡಿದ್ದರು.

  ಆಲಿಯಾ-ರಣ್ಬೀರ್ ಕಪೂರ್ ವಿವಾಹವಾದ ಬಳಿಕ ಆಲಿಯಾ, ಕರಣ್ ಜೋಹರ್‌ರ ಹೊಸ ಶೋ ಕಾಫಿ ವಿತ್ ಕರಣ್‌ನಲ್ಲಿ ಭಾಗವಹಿಸಿದ್ದರು. ಸಹಜವಾಗಿಯೇ ಕರಣ್ ಜೋಹರ್ ಆಲಿಯಾರನ್ನು ಅವರ ಮದುವೆಯ ಬಗ್ಗೆ ಕೆಲವು ಪ್ರಶ್ನೆ ಕೇಳಿದ್ದಾರೆ.

  ಎರಡು ತಿಂಗಳ ಹಿಂದೆಯೇ ಹೊರಬಿದ್ದಿತ್ತು ಆಲಿಯಾ ಭಟ್ ಪ್ರೆಗ್ನೆನ್ಸಿ ಸುದ್ದಿ! ಹೇಗೆ?ಎರಡು ತಿಂಗಳ ಹಿಂದೆಯೇ ಹೊರಬಿದ್ದಿತ್ತು ಆಲಿಯಾ ಭಟ್ ಪ್ರೆಗ್ನೆನ್ಸಿ ಸುದ್ದಿ! ಹೇಗೆ?

  ತಮ್ಮ ಮದುವೆ ಬಗ್ಗೆ 'ಕಾಫೀ ವಿತ್ ಕರಣ್' ಶೋನಲ್ಲಿ ಮಾತನಾಡಿರುವ ಆಲಿಯಾ ಭಟ್ ಫಸ್ಟ್ ನೈಟ್ ಬಗ್ಗೆಯೂ ಮಾತನಾಡಿದ್ದಾರೆ. ಆಲಿಯಾರ ಮಾತು ಕೇಳಿ ಕರಣ್ ಜೋಹರ್ ಹಾಗೂ ರಣ್ವೀರ್ ಸಿಂಗ್ ಬಿದ್ದು ಬಿದ್ದು ನಕ್ಕಿದ್ದಾರೆ.

  ಮೊದಲ ರಾತ್ರಿಯ ಬಗ್ಗೆ ಆಲಿಯಾ ಮಾತು

  ಮೊದಲ ರಾತ್ರಿಯ ಬಗ್ಗೆ ಆಲಿಯಾ ಮಾತು

  ಶೋನಲ್ಲಿ ಕರಣ್ ಜೋಹರ್, ಆಲಿಯಾ ಭಟ್ ಅನ್ನು, 'ಈಗಷ್ಟೆ ಮದುವೆ ಆಗಿದ್ದೀಯ, ಮದುವೆಯ ಬಗ್ಗೆ ನಿನಗೆ ಇದ್ದ ಯಾವ ಕಲ್ಪನೆ ಸುಳ್ಳೆಂದು ಮನದಟ್ಟಾಯಿತು? ಎಂದು ಕೇಳುತ್ತಾರೆ. ಅದಕ್ಕೆ ಉತ್ತರಿಸುವ ಆಲಿಯಾ ಭಟ್, ''ಫಸ್ಟ್ ನೈಟ್' (ಮೊದಲ ರಾತ್ರಿ) ಎಂಬುದೇನೂ ಇರುವುದಿಲ್ಲ, ಆ ದಿನ ಏನೂ ನಡೆಯುವುದೂ ಇಲ್ಲ. ಮದುವೆ ದಿನ ಬಹಳ ಸುಸ್ತಾಗಿರುತ್ತೇವೆ, ಇನ್ನು ಮೊದಲ ರಾತ್ರಿಯಲ್ಲಿ ಏನು ತಾನೇ ಮಾಡಲು ಸಾಧ್ಯ, ಸುಮ್ಮನೆ ಮಲಗುತ್ತೇವೆ ಅಷ್ಟೆ'' ಎಂದಿದ್ದಾರೆ. ಆಲಿಯಾರ ಉತ್ತರ ಕೇಳಿ ಕರಣ್ ಹಾಗೂ ರಣ್ವೀರ್ ಚೆನ್ನಾಗಿ ನಕ್ಕಿದ್ದಾರೆ.

  ಮೊದಲ ಮಗುವಿನ ನಿರೀಕ್ಷೆಯಲ್ಲಿ ಆಲಿಯಾ-ರಣ್‌ಬೀರ್: ಬೇಬಿ ಕಮಿಂಗ್ ಸೂನ್ ಎಂದ ನಟಿ!ಮೊದಲ ಮಗುವಿನ ನಿರೀಕ್ಷೆಯಲ್ಲಿ ಆಲಿಯಾ-ರಣ್‌ಬೀರ್: ಬೇಬಿ ಕಮಿಂಗ್ ಸೂನ್ ಎಂದ ನಟಿ!

  ಏಪ್ರಿಲ್ 14 ರಂದು ನಡೆದ ವಿವಾಹ

  ಏಪ್ರಿಲ್ 14 ರಂದು ನಡೆದ ವಿವಾಹ

  ಆಲಿಯಾ ಭಟ್ ಹಾಗೂ ರಣ್ಬೀರ್ ಕಪೂರ್ ವಿವಾಹ ಏಪ್ರಿಲ್ 14 ರಂದು ನಡೆಯಿತು. ಮುಂಬೈನಲ್ಲಿಯೇ ವಿವಾಹ ನಡೆದಿದ್ದು, ಮದುವೆ ಸಮಾರಂಭದಲ್ಲಿ ಆಲಿಯಾ ಹಾಗೂ ರಣ್ಬೀರ್ ಕಪೂರ್ ಚೆನ್ನಾಗಿ ಡ್ಯಾನ್ಸ್ ಮಾಡಿದ್ದರು. ಅತಿಥಿಗಳೊಟ್ಟಿಗೆ, ಕುಟುಂಬ ಸದಸ್ಯರೊಟ್ಟಿಗೆ ಬೆರೆತಿದ್ದರು. ಸಹಜವಾಗಿಯೇ ಬಹಳ ಸುಸ್ತಾಗಿರುತ್ತಾರೆ, ಅದೇ ದಿನ ಮೊದಲ ರಾತ್ರಿಯೂ ಇದ್ದಿದ್ದರಿಂದ ಪಾಪ ಆಲಿಯಾ ಭಟ್ ತಮ್ಮ ಅನುಭವವನ್ನೇ ಕರಣ್ ಶೋ ನಲ್ಲಿ ಹೇಳಿಕೊಂಡಿದ್ದಾರೆ.

  ಜುಲೈ 7 ರಂದು ಪ್ರಸಾರವಾಗಲಿದೆ ಎಪಿಸೋಡ್

  ಜುಲೈ 7 ರಂದು ಪ್ರಸಾರವಾಗಲಿದೆ ಎಪಿಸೋಡ್

  ಜುಲೈ 7 ರಿಂದ ಪ್ರಸಾರವಾಗಲಿರುವ 'ಕಾಫಿ ವಿತ್ ಕರಣ್' ಸೀಸನ್ ಏಳರ ಮೊದಲ ಎಪಿಸೋಡ್‌ನ ಟೀಸರ್ ಇದೀಗ ಪ್ರಸಾರವಾಗಿದ್ದು, ಕಾಫಿ ವಿತ್ ಕರಣ್‌ ಕಾರ್ಯಕ್ರಮದ ಮೊದಲ ಅತಿಥಿಗಳಾಗಿ ರಣ್ವೀರ್ ಸಿಂಗ್ ಹಾಗೂ ಆಲಿಯಾ ಭಟ್ ಆಗಮಿಸಿದ್ದಾರೆ. ಇಬ್ಬರೂ ಕರಣ್‌ರ ಆಪ್ತ ಸ್ನೇಹಿತರಾಗಿದ್ದು, ಪರಸ್ಪರ ಸಹ ಆಪ್ತ ಸ್ನೇಹಿತರಾಗಿದ್ದಾರೆ. ಆಲಿಯಾ ಹಾಗೂ ರಣ್ವೀರ್ ಸಿಂಗ್ 'ಗಲ್ಲಿ ಬಾಯ್' ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಆಲಿಯಾ ಭಟ್‌ರ ಪತಿ ರಣ್ಬೀರ್ ಕಪೂರ್‌ರ ಹಳೆಯ ಗರ್ಲ್‌ ಫ್ರೆಂಡ್‌ ದೀಪಿಕಾ ಅನ್ನೇ ರಣ್ವೀರ್ ಸಿಂಗ್ ವಿವಾಹವಾಗಿದ್ದಾರೆ. ಆದರೆ ಈಗ ಈ ಎರಡೂ ಜೋಡಿ ಬಹಳ ಆತ್ಮೀಯವಾಗಿದೆ.

  ತಾಯಿಯಾಗುತ್ತಿರುವ ನಟಿ ಆಲಿಯಾ ಭಟ್

  ತಾಯಿಯಾಗುತ್ತಿರುವ ನಟಿ ಆಲಿಯಾ ಭಟ್

  ಇನ್ನು ಆಲಿಯಾ ಭಟ್ ತಾಯಿಯಾಗುತ್ತಿರುವ ಸುದ್ದಿ ಘೋಷಿಸುತ್ತಿದ್ದಂತೆ ನೆಟ್ಟಿಗರು ಹಲವು ರೀತಿ ಕಮೆಂಟ್ ಮಾಡಿದ್ದಾರೆ. ಆಲಿಯಾ ಹಾಗೂ ರಣ್ಬೀರ್ ಕಪೂರ್ ವಿವಾಹವಾದಾಗಲೇ ಆಲಿಯಾ ಗರ್ಭಿಣಿ ಆಗಿದ್ದಳು ಎಂದಿದ್ದಾರೆ. ಆಲಿಯಾ, ಗರ್ಭಿಣಿ ಆದ ಬಳಿಕವೇ ವಿವಾಹವಾಗಿದ್ದಾರೆ. ಆದರೆ ಸುದ್ದಿಯನ್ನು ಬೇಕೆಂದೇ ತಡವಾಗಿ ಹಂಚಿಕೊಂಡಿದ್ದಾರೆ ಎಂದೆಲ್ಲ ಕಮೆಂಟ್ ಮಾಡಿದ್ದರು. ತಾವು ತಾಯಿಯಾಗುತ್ತಿರುವ ಸುದ್ದಿಯನ್ನು ಜೂನ್ 27 ರಂದು ಆಲಿಯಾ ಭಟ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

  English summary
  Actress Alia Bhatt talked about first night in Koffee with Karan show. She said there is no thing such as Suhagrath, we will be tiered and cant do anything.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X