OTTಯಲ್ಲಿ 'ಪುಷ್ಪ' ಚಿತ್ರ ರಿಲೀಸ್ ಯಾವಾಗ: ಏನಂತಾರೆ 'ಮೈತ್ರಿ ಮೂವಿ ಮೇಕರ್ಸ್'?

ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ ಚಿತ್ರ ಬಾಕ್ಸಾಫೀಸ್ ಚಿಂದಿ ಮಾಡುತ್ತಿದೆ. ಚಿತ್ರ ರಿಲೀಸ್ ಆಗಿ‌ ಮೂರು ವಾರಗಳು ಕಳೆದರು, ಚಿತ್ರದ ಕಲೆಕ್ಷನ್ ಕುಂದಿಲ್ಲ. ಅಷ್ಟೇ ಯಾಕೆ ಚಿತ್ರದ ಮೂರನೇ ವಾರಕ್ಕೂ ಚಿತ್ರ ದಾಖಲೆಯ ಮೊತ್ತ ಕಲೆ ಹಾಕಿದೆ.

ಚಿತ್ರದ ಕಲೆಕ್ಷನ್ ಏರುತ್ತಿರುವಾಗ ಚಿತ್ರದ ಬಗ್ಗೆ ಒಂದಷ್ಟು ಗಾಸಿಪ್‌ಗಳು ಹರಿದಾಡ ತೊಡಗಿವೆ. ಪುಷ್ಪ ಚಿತ್ರ ಓಟಿಟಿಯಲ್ಲಿ ತೆರೆ ಕಾಣಲಿದೆ ಎನ್ನುವ ಸುದ್ದಿ ಹಬ್ಬಿದೆ. ಚಿತ್ರವನ್ನು ಜನ ಥಿಯೇಟರ್‌ನಲ್ಲಿ ನೋಡಿ ಎಂಜಾಯ್ ಮಾಡುತ್ತಿರುವಾಗ, ಚಿತ್ರ ಓಟಿಟಿಗೆ ಬರುತ್ತದೆ ಎನ್ನುವ ಸುದ್ದಿ ಹಬ್ಬಿದೆ.

ಆದರೆ ಈ ಸುದ್ದಿ ಸುಳ್ಳು, ಎಂದು ಚಿತ್ರ ತಂಡ ತೆಲುಗು ಮಾಧ್ಯಮಗಳಿಗೆ ಸ್ಪಷ್ಟ ಪಡಿಸಿದೆ. ಸಿನಿಮಾ ಥಿಯೇಟರ್‌ನಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಹೀಗಿರುವಾಗ ಓಟಿಟಿಯಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಹೇಗೆ ಸಾಧ್ಯ ಎಂದಿದೆ ಮೈತ್ರಿ ಮೂವೀಸ್.

ಸದ್ಯಕ್ಕೆ ಓಟಿಟಿಯಲ್ಲಿ ರಿಲೀಸ್ ಆಗಲ್ಲ ಪುಷ್ಪ!

ಸದ್ಯಕ್ಕೆ ಓಟಿಟಿಯಲ್ಲಿ ರಿಲೀಸ್ ಆಗಲ್ಲ ಪುಷ್ಪ!

ಮಾಧ್ಯಮಗಳ ಜೊತೆಗೆ ಪುಷ್ಪ ಓಟಿಟಿ ರಿಲೀಸ್ ಬಗ್ಗೆ ಮಾತನಾಡಿರುವ ಮೈತ್ರಿ ಮೂವೀಸ್ ಹೀಗೆ ಹೇಳಿದೆ‌. "ಸಿನಿಮಾ ಮಂದಿರಗಳಲ್ಲಿ ಪುಷ್ಪ ಚೆನ್ನಾಗಿ ಓಡುತ್ತಿದೆ. ಅಲ್ಲದೆ ಬಾಲಿವುಡ್‌ನಿಂದ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ. ಮೊದಲ ವಾರಕ್ಕಿಂತ, ಮೂರನೇ ವಾರ ಹಿಂದಿ ಅವತರಣಿಕೆ ಹೆಚ್ಚು ಗಳಿಕೆ ಮಾಡಿದೆ. ಅಲ್ಲದೇ ವಿಶ್ವಾದ್ಯಂತ‌ 300 ಕೋಟಿ ಕಲೆಕ್ಷನ್‌ನತ್ತ ಪುಷ್ಪ ಸಾಗಿದೆ. ಹಾಗಾಗಿ ಚಿತ್ರವನ್ನು ಸದ್ಯಕ್ಕೆ ಓಟಿಟಿಯಲ್ಲಿ ರಿಲೀಸ್ ಮಾಡುವುದಿಲ್ಲ, ಜನವರಿ 7 ರಂದು ಚಿತ್ರ ಅಮೇಜಾನ್‌ನಲ್ಲಿ ಬಿಡುಗಡೆ ಆಗುತ್ತೆ ಎನ್ನುವುದು ಕೇವಲ ಗಾಳಿ ಸುದ್ದಿ" ಎಂದು ಹೇಳಿಕೆ ನೀಡಲಾಗಿದೆ.

ಚಿತ್ರ ರಿಲೀಸ್ ಆದ 50 ದಿನದ ಬಳಿಕ ottಯಲ್ಲಿ ರಿಲೀಸ್!

ಚಿತ್ರ ರಿಲೀಸ್ ಆದ 50 ದಿನದ ಬಳಿಕ ottಯಲ್ಲಿ ರಿಲೀಸ್!

ಸದ್ಯಕ್ಕೆ ಎಲ್ಲೆಡೆ ಪುಷ್ಪ ಚಿತ್ರ ಇದೆ ಜನವರಿ 7ರಂದು ottಯಲ್ಲಿ ತೆರೆಗೆ ಬರಲಿದೆ ಎನ್ನುವ ಮಾಹಿತಿ ಹಾರಿದಾಡುತ್ತಿದೆ. ಆದರೆ ಈ ನಡುವೆ ಇದು ಕೇವಲ ಗಾಳಿ ಸುದ್ದಿ ಎಂದಿದೆ ಪುಷ್ಪ ಚಿತ್ರದ ಪ್ರೊಡಕ್ಷನ್‌ ಸಂಸ್ಥೆ, ಮೈತ್ರಿ ಮೂವೀಸ್. ಪುಷ್ಪ ಮತ್ತು ಅಮೇಜಾನ್ ಪ್ರೈಮ್‌ ವಿಡಿಯೋ ನಡುವೆ ಒಪ್ಪಂದ ಆಗಿದೆ. ಅದು ಚಿತ್ರ ರಿಲೀಸ್‌ ಆಗಿ 50 ದಿನಕ್ಕೆ ಒಟಿಟಿಯಲ್ಲಿ ಚಿತ್ರ ರಿಲೀಸ್ ಮಾಡಲು ಒಪ್ಪಂದ ಆಗಿದೆಯಂತೆ, ಹಾಗಾಗಿ ಪುಷ್ಪ ಓಟಿಟಿಯಲ್ಲಿ ತೆರೆಗೆ ಬರುವುದು ಫೆಬ್ರವರಿಯಲ್ಲಿ. ಇದನ್ನು ಮೈತ್ರಿ ಮೂವೀಸ್ ಹಂಚಿಕೊಂಡಿರುವುದಾಗಿ ವರದಿ ಆಗಿದೆ.

RRR ರಿಲೀಸ್ ರದ್ದು, ರಾಧೆ ಶ್ಯಾಮ್‌ ರಿಲೀಸ್‌ ಡೌಟು!

RRR ರಿಲೀಸ್ ರದ್ದು, ರಾಧೆ ಶ್ಯಾಮ್‌ ರಿಲೀಸ್‌ ಡೌಟು!

ಒಂದು ಆಯಾಮದ ಪ್ರಕಾರ ನೋಡಿದರೆ ಪುಷ್ಪ ಈ ಸಮಯದಲ್ಲಿ ಓಟಿಟಿಯಲ್ಲಿ ರಿಲೀಸ್‌ ಅಗುವುದಿಲ್ಲ ಎನ್ನುವುದನ್ನು ನಂಬಲೇ ಬೇಕು. ಕಾರಣ RRR ಚಿತ್ರ ಪೋಸ್ಟ್ ಪೋನ್‌ ಆಗಿದೆ. ಸದ್ಯಕ್ಕೆ ಥಿಯೇಟರ್‌ನಲ್ಲಿ ರಿಲೀಸ್ ಆಗುವ ದೊಡ್ಡ ಚಿತ್ರಗಳು ಯಾವುವು ಇಲ್ಲ. ತಮಿಳಿನಲ್ಲಿ ಅಜಿತ್ ಅಭಿನಯದ ವಲಿಮೈ ಜನವರಿ 13 ರಿಲೀಸ್ ದಿನಾಂಕ ನಿಗಧಿ ಮಾಡಿಕೊಂಡಿದೆ. ಅಲ್ಲಿ ತನಕ ಪುಷ್ಪ ಥಿಯೇಟರ್‌ನಲ್ಲಿ ಇರಬಹುದು. ಇನ್ನುನಟ ಪ್ರಭಾಸ್‌ ಅಭಿನಯದ 'ರಾಧೆ ಶ್ಯಾಮ್' ಚಿತ್ರ ರಿಲೀಸ್‌ ಅಗುವುದು ಕೂಡ ಅನುಮಾನ ಎನ್ನಲಾಗಿದೆ. ಹಾಗಾಗಿ ಇದು ಕೂಡ ಪುಷ್ಪ ಚಿತ್ರಕ್ಕೆ ಪ್ಲಸ್‌ ಪಾಯಿಂಟ್ ಆಗಲಿದೆ. ಹಾಗಾಗಿ ಸದ್ಯಕ್ಕೆ ಪುಷ್ಪ ಓಟಿಟಿಯಲ್ಲಿ ಜನವರಿ 7ಕ್ಕೆ ರಿಲೀಸ್ ಅಗುವುದು ಅನುಮಾನ.

ಅಲ್ಲು ಅರ್ಜುನ್, ರಶ್ಮಿಕಾ, ಸಮಂತಾಗೆ ಹೆಸರು ತಂದು ಕೊಟ್ಟ ಪುಷ್ಪ!

ಅಲ್ಲು ಅರ್ಜುನ್, ರಶ್ಮಿಕಾ, ಸಮಂತಾಗೆ ಹೆಸರು ತಂದು ಕೊಟ್ಟ ಪುಷ್ಪ!

ಪುಷ್ಪ ಚಿತ್ರ ಕೇವಲ ಒಂದು ಚಿತ್ರ ಆಗಿ ಮಾತ್ರ ಉಳಿದಿಲ್ಲ. ಪುಷ್ಪ ಚಿತ್ರದ ಸಕ್ಸಸ್ ಇಡೀ ತಂಡಕ್ಕೆ ಬಹಳ ಮುಖ್ಯ ಆಗಿತ್ತು. ಈ ಚಿತ್ರ, ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಸಮಂತಾ ಅವರ ತೂಕವನ್ನು ಮತ್ತಷ್ಟು ಹೆಚ್ಚು ಮಾಡಿದೆ. ಈ ಚಿತ್ರದ ಮೂಲಕ ಈ ಮೂವರು ಹೊಸ ದಾಖಲೆಗಳನ್ನು ಬರೆದಿದ್ದಾರೆ. ಪುಷ್ಪ ಚಿತ್ರದ ಹಲವು ಕಲಾವಿದರಿಗೆ ಬೇಡಿಕೆ ಕೂಡ ಹೆಚ್ಚಾಗಿದೆ.

More from Filmibeat

English summary
Allu Arjun, Samantha, Rashmika Mandanna Starrer Pushpa Release In OTT, What Makers Says, Know More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X