ಅಲ್ಲು ಅರ್ಜುನ್ 'ಪುಷ್ಪ-2' ಓಟಿಟಿ ಪಾರ್ಟ್ನರ್ ಸಿಕ್ಕಾಯ್ತು; ದಾಖಲೆ ಮೊತ್ತಕ್ಕೆ ಡೀಲ್

ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ 'ಪುಷ್ಪ'-2 ಸಿನಿಮಾ ಡಿಸೆಂಬರ್ 6ಕ್ಕೆ ತೆರೆಗೆ ಬರಲಿದೆ. ಸಿನಿಮಾ ಚಿತ್ರೀಕರಣ ಮತ್ತೆ ಆರಂಭವಾಗಿದ್ದು ಕ್ಲೈಮ್ಯಾಕ್ಸ್ ಸನ್ನಿವೇಶ ಸೆರೆಹಿಡಿಯಲಾಗುತ್ತಿದೆ. ಕೆಲ ದಿನಗಳ ಹಿಂದೆ ಅಲ್ಲು ಅರ್ಜುನ್- ಸುಕುಮಾರ್ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು ಎನ್ನುವ ಮಾತುಗಳು ಕೇಳಿಬಂದಿದ್ದು ಗೊತ್ತೇಯಿದೆ.

3 ವರ್ಷಗಳ ಹಿಂದೆ 'ಪುಷ್ಪ' ಸಿನಿಮಾ ತೆರೆಗೆ ಬಂದು ಬಾಕ್ಸಾಫೀಸ್ ಶೇಕ್ ಮಾಡಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಸದ್ದು ಮಾಡಿತ್ತು. ಅದೇ ಕಾರಣಕ್ಕೆ ಸೀಕ್ವೆಲ್ ಬಗ್ಗೆ ಭಾರೀ ಹೈಪ್ ಕ್ರಿಯೇಟ್ ಆಗಿದೆ. ಈಗಾಗಲೇ ಒಂದೆರಡು ಹಾಡು, ಟೀಸರ್ ರಿಲೀಸ್ ಆಗಿ ಹಿಟ್ ಆಗಿದೆ. ಆಗಸ್ಟ್ 15ಕ್ಕೆ ಬರಬೇಕಿದ್ದ ಸಿನಿಮಾ ಕಾರಣಾಂತರಗಳಿಂದ ತಡವಾಗುತ್ತಿದೆ. ಲೇಟ್ ಆದರೂ ಒಳ್ಳೆ ಸಿನಿಮಾ ಕೊಡ್ತೀವಿ ಎಂದು ಚಿತ್ರತಂಡ ಹೇಳ್ತಿದೆ.

Allu arjun starrer Pushpa-2 gets whopping price for OTT rights

ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್‌ನಲ್ಲಿ 'ಪುಷ್ಪ' ಸರಣಿ ಸಿನಿಮಾ ನಿರ್ಮಾಣವಾಗುತ್ತಿದೆ. ಮೊದಲ ಭಾಗಕ್ಕಿಂತ ಹಲವು ಪಟ್ಟು ದೊಡ್ಡದಾಗಿ ಸಿನಿಮಾ ಸಿದ್ಧವಾಗುತ್ತಿದೆ. ಈ ಹಿಂದೆ 'ಬಾಹುಬಲಿ', 'ಕೆಜಿಎಫ್' ಸರಣಿಯ ಮೊದಲ ಸಿನಿಮಾಗಳು ಬ್ಲಾಕ್‌ಬಸ್ಟರ್ ಹಿಟ್ ಆದಾಗ ಎರಡನೇ ಭಾಗದ ಮೇಲೆ ನಿರೀಕ್ಷೆ ಹೆಚ್ಚಾಗಿತ್ತು. ಅದಕ್ಕೆ ತಕ್ಕಂತೆ ಹಲವು ಪಟ್ಟು ದೊಡ್ಡದಾಗಿ ಸೀಕ್ವೆಲ್ ತೆರೆಗೆ ತಂದಿದ್ದರು. ಅದೇ ಲೆಕ್ಕಾಚಾರ 'ಪುಷ್ಪ' ವಿಚಾರದಲ್ಲಿ ನಡೀತಿದೆ.

'ಪುಷ್ಪ'-2 ಬಜೆಟ್ ಹಾಗೂ ಕಲಾವಿದರು, ತಂತ್ರಜ್ಞರ ಸಂಭಾವನೆ ಎಲ್ಲವೂ ಹೆಚ್ಚಾಗಿದೆ. ಕ್ರೇಜ್‌ಗೆ ತಕ್ಕಂತೆ ಮೇಕಿಂಗ್, ಪ್ರಮೋಷನ್ ಪ್ಲಾನ್ ಮಾಡಲಾಗುತ್ತಿದೆ. ಹಿಂದಿ ಬೆಲ್ಟ್‌ನಲ್ಲಿ ಕೂಡ ಪುಷ್ಪರಾಜ್‌ಗೆ ಪ್ರೇಕ್ಷಕರು ಬಹುಪರಾಕ್ ಎಂದಿದ್ದರು. ಹಾಗಾಗಿ ಆ ಮಾರ್ಕೆಟ್ ಅನ್ನುವ ಕೂಡ ಟಾರ್ಗೆಟ್ ಮಾಡಲಾಗುತ್ತಿದೆ. ಪಾರ್ಟ್‌-1 ಬರೋಬ್ಬರಿ 350 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿತ್ತು. 1000 ಕೋಟಿ ರೂ. ಕಲೆಕ್ಷನ್ ಟಾರ್ಗೆಟ್ ಮಾಡಿ ಸೀಕ್ವೆಲ್ ತೆರೆಗೆ ತರಲಾಗುತ್ತಿದೆ.

ಡಿಸೆಂಬರ್ 6ಕ್ಕೆ 'ಪುಷ್ಪ'-2 ಸಿನಿಮಾ ತೆರೆಗೆ ಬರಲಿದೆ. ಸದ್ಯ ಚಿತ್ರದ ಡಿಜಿಟಲ್ ಪಾರ್ಟ್ನರ್ ಸಿಕ್ಕಿದ್ದಾರೆ. ನೆಟ್‌ಫ್ಲಿಕ್ಸ್ ಸಂಸ್ಥೆ ಚಿತ್ರದ ಓಟಿಟಿ ರೈಟ್ಸ್ ಕೊಂಡುಕೊಂಡಿದೆ ಎಂದು ಸುದ್ದಿಯಾಗಿದೆ. ಬರೋಬ್ಬರಿ 270 ಕೋಟಿ ರೂ.ಗೆ ಡೀಲ್ ಕುದುರಿದೆ ಎಂದು ಹೇಳಲಾಗುತ್ತಿದೆ. ಭಾರತೀಯ ಚಿತ್ರರಂಗದಲ್ಲಿ ಇದು ಹೊಸ ದಾಖಲೆ ಎನ್ನುವ ಮಾತುಗಳು ಕೇಳಿಬರ್ತಿದೆ. ದೊಡ್ಡ ಸಿನಿಮಾಗಳು ಕೂಡ ಬಹಳ ಬೇಗ ಓಟಿಟಿ ಬರುತ್ತವೆ. ಆ ಲೆಕ್ಕದಲ್ಲಿ ಜನವರಿ 2ನೇ ವಾರದಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗುವ ನಿರೀಕ್ಷೆಯಿದೆ.

Allu arjun starrer Pushpa-2 gets whopping price for OTT rights

'ಪುಷ್ಪ-2' ಚಿತ್ರದ ಎಲ್ಲಾ ಭಾಷೆಗಳ ಓಟಿಟಿ ರೈಟ್ಸ್ ನೆಟ್‌ಫ್ಲಿಕ್ಸ್ ಪಾಲಾಗಿದೆ. ಈ ಹಿಂದೆ ಮೊದಲ ಭಾಗ ಅಮೇಜಾನ್ ಪ್ರೈಂ ವೀಡಿಯೋದಲ್ಲಿ ರಿಲೀಸ್ ಆಗಿದೆ. ಇನ್ನು ಪ್ರೀಕ್ವೆಲ್‌ನಲ್ಲಿದ್ದ ಬಹುತೇಕ ಕಲಾವಿದರು ಸೀಕ್ವೆಲ್‌ನಲ್ಲಿ ಇದ್ದಾರೆ. ರಶ್ಮಿಕಾ ಮಂದಣ್ಣ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಬಾರಿ ಅಲ್ಲು ಅರ್ಜುನ್ ಹಾಗೂ ಫಹಾದ್ ಫಾಸಿಲ್ ನಡುವಿನ ಫೈಟ್ ಪ್ರೇಕ್ಷಕರಿಗೆ ಥ್ರಿಲ್ ಕೊಡಲಿದೆ.

ಡಿಸೆಂಬರ್ 6ಕ್ಕೆ ಕೂಡ 'ಪುಷ್ಪ'-2 ಸಿನಿಮಾ ರಿಲೀಸ್ ಆಗುತ್ತಾ? ಎನ್ನುವ ಗೊಂದಲ ಕೆಲವರಲ್ಲಿತ್ತು. ಇದೀಗ ನಿರ್ಮಾಪಕರು ಮಾತನಾಡಿ ಆ ವಿಚಾರ ಖಚಿತಪಡಿಸಿದ್ದಾರೆ. ಇನ್ನು ಅದೇ ದಿನ ರಶ್ಮಿಕಾ ಮಂದಣ್ಣ ನಟನೆಯ ಬಾಲಿವುಡ್ 'ಚಾವ' ಸಿನಿಮಾ ಕೂಡ ತೆರೆಗೆ ಬರಲಿದೆ.

More from Filmibeat

English summary
Pushpa 2: The Rule OTT Rights Sold for a Whopping Amount;
Read more about: allu arjun pushpa tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X