'ಪುಷ್ಪ'-2 ಸಿನಿಮಾ HD ಪ್ರಿಂಟ್ ಆನ್‌ಲೈನ್‌ನಲ್ಲಿ ಲೀಕ್; ಶೀಘ್ರದಲ್ಲೇ ಓಟಿಟಿಗೆ?

ಅಲ್ಲು ಅರ್ಜುನ್ ನಟನೆಯ 'ಪುಷ್ಪ'-2 ಸಿನಿಮಾ ಬಾಕ್ಸಾಫೀಸ್‌ ಶೇಕ್ ಮಾಡ್ತಿದೆ. ಮತ್ತೊಂದು ಕಡೆ ಬೇರೆ ಬೇರೆ ಕಾರಣಗಳಿಂದ ಸಿನಿಮಾ ಸುದ್ದಿ ಆಗುತ್ತಿದೆ. ಪ್ರೀಮಿಯರ್ ಶೋ ವೇಳೆ ನಡೆದ ಕಾಲ್ತುಳಿತ ಪ್ರಕರಣವನ್ನು ತೆಲುಗು ರಾಜ್ಯಗಳಲ್ಲಿ ಭಾರೀ ಚರ್ಚೆ ಹುಟ್ಟಾಕ್ಕಿದೆ. ರಾಜಕೀಯ ತಿರುವು ಪಡೆದುಕೊಂಡಿದೆ.

ಸುಕುಮಾರ್ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ 'ಪುಷ್ಪ'-2 ಸಿನಿಮಾ ಡಿಸೆಂಬರ್ 5ಕ್ಕೆ ತೆರೆಗೆ ಬಂದಿತ್ತು. ಅದಕ್ಕೂ ಒಂದು ದಿನ ಮುನ್ನ ಪೇಯ್ಡ್ ಪ್ರೀಮಿಯರ್ ಶೋಗಳು ನಡೆದಿದ್ದವು. ಈಗಾಗಲೇ ಸಿನಿಮಾ 1500 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ. ಚಿತ್ರದ ಡಿಜಿಟಲ್ ರೈಟ್ಸ್ ಭಾರೀ ಮೊತ್ತಕ್ಕೆ ನೆಟ್‌ಫ್ಲಿಕ್ಸ್ ಸ್ವಂತ ಮಾಡಿಕೊಂಡಿದೆ.

Allu Arjun s Pushpa-2 Makers issues clarification on movie Ott Release

3 ವರ್ಷಗಳ ಹಿಂದೆ ಬಂದಿದ್ದ 'ಪುಷ್ಪ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಹಾಗಾಗಿ ಸಹಜವಾಗಿಯೇ ಸೀಕ್ವೆಲ್ ನಿರೀಕ್ಷೆ ಹುಟ್ಟಾಕ್ಕಿತ್ತು. ಅದಕ್ಕೆ ತಕ್ಕಂತೆ ಸಾಂಗ್ಸ್, ಟೀಸರ್, ಟ್ರೈಲರ್ ರಿಲೀಸ್ ಆಗಿ ಹಿಟ್ ಆಗಿತ್ತು. ಇನ್ನು ಕ್ರೇಜ್ ನೋಡಿ ದಿಢಿರನೇ ಟಿಕೆಟ್ ದರ ಹೆಚ್ಚಿಸಲಾಗಿತ್ತು. ಹಲವು ಪಟ್ಟು ಟಿಕೆಟ್ ದರ ಹೆಚ್ಚಾಗಿ ಚಿತ್ರದ ಗಳಿಕೆಗೆ ಪ್ಲಸ್ ಆಗಿತ್ತು.

'ಪುಷ್ಪ'ರಾಜ್ ಆರ್ಭಟಕ್ಕೆ ಬಾಕ್ಸಾಫೀಸ್ ದಾಖಲೆಗಳು ಧೂಳಿಪಟವಾಯಿತು. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕರೂ ಜನ ಸಿನಿಮಾ ನೋಡಲು ಮುಗಿಬಿದ್ದರು. ಕನ್ನಡಕ್ಕೂ ಸಿನಿಮಾ ಡಬ್ ಆಗಿ ತೆರೆಗೆ ಬಂದಿದೆ. ಕನ್ನಡ ವರ್ಷನ್ ಗಳಿಕೆ ಕೂಡ ಹುಬ್ಬೇರಿಸುವಂತಿದೆ. ಬೆಂಗಳೂರಿನಲ್ಲಿ ಚಿತ್ರದ ಟಿಕೆಟ್ ದರ 1500 ಗಡಿ ದಾಟಿತ್ತು.

1500 ಕೋಟಿ ರೂ. ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿರುವ ಚಿತ್ರಕ್ಕೆ ಪೈರಸಿ ಪೆಟ್ಟು ಬಿದ್ದಿದೆ. ಚಿತ್ರ ಆನ್‌ಲೈನ್‌ನಲ್ಲಿ ಲೀಕ್ ಆಗಿದೆ. HD ಪ್ರಿಂಟ್ ಆನ್‌ಲೈನ್‌ನಲ್ಲಿ ಹರಿದಾಡುತ್ತಿದೆ ಎನ್ನಲಾಗ್ತಿದೆ. ಹಾಗಾಗಿ ಸಹಜವಾಗಿಯೇ ಇದು ಚಿತ್ರದ ಗಳಿಕೆ ಮೇಲೆ ಪರಿಣಾಮ ಬೀರಲಿದೆ. ಇನ್ನು ಓಟಿಟಿಗೆ ಬರುವ ಮುನ್ನವೇ ಸಿನಿಮಾ ಪೈರಸಿ ಆಗಿರುವುದು ಬೇಸರದ ಸಂಗತಿ.

ಕೆಲವೊಮ್ಮೆ ಸಿನಿಮಾ ಆನ್‌ಲೈನ್‌ನಲ್ಲಿ ಲೀಕ್ ಆದ ತಕ್ಷಣ ಓಟಿಟಿಯಲ್ಲಿ ಸ್ಟ್ರೀಮಿಂಗ್ ಮಾಡಿಬಿಡುವ ಸಾಧ್ಯತೆ ಇರುತ್ತದೆ. ಹಿಂದೆ ಕೆಲ ಸಿನಿಮಾಗಳ ವಿಚಾರದಲ್ಲಿ ಹೀಗೆ ಆಗಿತ್ತು. ಇದೇ ಕಾರಣಕ್ಕೆ 'ಪುಷ್ಪ'-2 ಕೂಡ ಬೇಗ ಓಟಿಟಿಗೆ ಬರುತ್ತದೆ ಎನ್ನುವ ಗುಸುಗುಸು ಶುರುವಾತ್ತು. ಸದ್ಯ ಚಿತ್ರದ ಓಟಿಟಿ ಸ್ಟ್ರೀಮಿಂಗ್ ದಿನಾಂಕದ ಬಗ್ಗೆ ಚಿತ್ರತಂಡವೇ ಮಾಹಿತಿ ನೀಡಿದೆ. ಎಲ್ಲಾ ವದಂತಿಗೆ ತೆರೆ ಎಳೆದಿದೆ.

"ಪುಷ್ಪ'-2 ಓಟಿಟಿ ಸ್ಟ್ರೀಮಿಂಗ್ ಬಗ್ಗೆ ವದಂತಿ ಹರಿದಾಡುತ್ತಿದೆ. ಕ್ರಿಸ್‌ಮಸ್ ರಜೆಯಲ್ಲಿ ಸಿನಿಮಾವನ್ನು ದೊಡ್ಡ ಪರದೆಯಲ್ಲೇ ನೋಡಿ. 56 ದಿನಗಳವರೆಗೂ ಸಿನಿಮಾ ಓಟಿಟಿಗೆ ಬರಲ್ಲ" ಎಂದು ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಟ್ವೀಟ್ ಮಾಡಿ ಮಾಹಿತಿ ನೀಡಿದೆ. ಈ ಲೆಕ್ಕದಲ್ಲಿ ಸಂಕ್ರಾಂತಿಗೂ ಸಿನಿಮಾ ಓಟಿಟಿಗೆ ಬರುವುದು ಅನುಮಾನ ಎನ್ನುವಂತಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಪೈರಸಿ ಸರ್ವೇ ಸಾಧಾರಣ ಎನ್ನುವಂತಾಗಿದೆ. ಕೆಲವೊಮ್ಮೆ ಸಿನಿಮಾ ಲೀಕ್ ಆಗಿದ್ದರೂ ಓಟಿಟಿಗೆ ಬಂದರೂ ಜನ ಚಿತ್ರಮಂದಿರದಲ್ಲೇ ನೋಡಲು ಬಯಸುತ್ತಾರೆ. ದೊಡ್ಡ ಪರದೆಯಲ್ಲಿ ಸಿನಿಮಾ ನೋಡುವ ಅನುಭವವೇ ಬೇರೆ. ಇತ್ತೀಚೆಗೆ 'ಲಕ್ಕಿ ಭಾಸ್ಕರ್' ಓಟಿಟಿಗೆ ಬಂದು ಸದ್ದು ಮಾಡಿತ್ತು. ಆದರೆ ಸಿನಿಮಾ ಓಟಿಟಿಗೆ ಬಂದಮೇಲೆ ಕೆಲವರು ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಮುಗಿಬಿದ್ದಿದ್ದು ವಿಶೇಷ.

ಇನ್ನು ಕಾಲ್ತುಳಿತ ಪ್ರಕರಣ ಕಾರಣ ಚಿತ್ರತಂಡ ದೊಡ್ಡದಾಗಿ 'ಪುಷ್ಪ'-2 ಸಕ್ಸಸ್ ಸೆಲೆಬ್ರೇಟ್ ಮಾಡ್ತಿಲ್ಲ. ಪ್ರಕರಣದಲ್ಲಿ ಅಲ್ಲು ಅರ್ಜುನ್‌ಗೆ ಹಿನ್ನಡೆ ಆಗಿದೆ. ಅನುಮತಿ ಇಲ್ಲದೇ ಇದ್ದರೂ ಅಲ್ಲು ಅರ್ಜುನ್ ಚಿತ್ರಮಂದಿರಕ್ಕೆ ಬಂದಿದ್ದು ತಪ್ಪು. ಆತ ಬಂದು ಸುಮ್ಮನೆ ಸಿನಿಮಾ ನೋಡಿ ಹೋಗಬೇಕಿತ್ತು. ರ್ಯಾಲಿ ರೀತಿ ಜನರ ಕಡೆ ಕೈಬೀಸಿದರು. ಇದು ಘಟನೆಗೆ ಒಂದು ರೀತಿಯಲ್ಲಿ ಕಾರಣ ಎಂದು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಆರೋಪಿಸಿದ್ದಾರೆ.

More from Filmibeat

English summary
Pushpa-2 The Rule won't be on any OTT before 56 days, Says makers;
Read more about: pushpa allu arjun ott
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X