Pushpa-2 OTT: ಭಾರೀ ಮೊತ್ತಕ್ಕೆ 'ಪುಷ್ಪ'-2 ಓಟಿಟಿ ರೈಟ್ಸ್ ಸೇಲ್: ಡಿಜಿಟಲ್ ಪಾರ್ಟ್ನರ್ ಬದಲಾಗಿದ್ಯಾಕೆ?

ಅಲ್ಲು ಅರ್ಜುನ್ ನಟನೆಯ 'ಪುಷ್ಪ'-2 ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. 2 ವರ್ಷಗಳ ಹಿಂದೆ ಬಂದ 'ಪುಷ್ಪ' ಸಿನಿಮಾ ಸೂಪರ್ ಹಿಟ್ ಆಗಿತ್ತು. ಹಿಂದಿ ಬೆಲ್ಟ್‌ನಲ್ಲಿ ಕೂಡ ಭರ್ಜರಿ ಕಲೆಕ್ಷನ್ ಮಾಡಿತ್ತು. ಹಾಗಾಗಿ ಸಹಜವಾಗಿಯೇ ಮುಂದಿನ ಭಾಗ ಕುತೂಹಲ ಮುಡಿಸಿದೆ. ಈಗಾಗಲೇ ಟೀಸರ್, ಪೋಸ್ಟರ್ ರಿಲೀಸ್ ಆಗಿ ಹಿಟ್ ಆಗಿದೆ.

'ಪುಷ್ಪ' ಚಿತ್ರ ಬಾಕ್ಸಾಫೀಸ್ ‍ಶೇಕ್ ಮಾಡಿದ್ದು ಮಾತ್ರವಲ್ಲ ರಾಷ್ಟ್ರಪ್ರಶಸ್ತಿಗಳನ್ನು ಪಡೆದು ಸದ್ದು ಮಾಡಿತ್ತು. ಮೊದಲ ಚಿತ್ರ ತಂದುಕೊಟ್ಟ ಸಕ್ಸಸ್‌ನಿಂದ ಥ್ರಿಲ್ಲಾಗಿರುವ ಸುಕುಮಾರ್ ಅಂಡ್ ಟೀಮ್ ಹಲವು ಪಟ್ಟು ದೊಡ್ಡದಾಗಿ ಸೀಕ್ವೆಲ್ ಕೊಟ್ಟಿಕೊಡುತ್ತಿದೆ. ಭರದಿಂದ ಸಿನಿಮಾ ಚಿತ್ರೀಕರಣ ನಡೀತಿದೆ. ಆಗಸ್ಟ್ 15ಕ್ಕೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ 'ಪುಷ್ಪ'ರಾಜ್ ಆರ್ಭಟ ಶುರುವಾಗಲಿದೆ. ಸದ್ಯ ಚಿತ್ರದ ಓಟಿಟಿ ಪಾರ್ಟ್ನರ್ ಬಗ್ಗೆ ಮಾಹಿತಿ ಲಭ್ಯವಾಗಿದೆ.

Allu Arjuns Pushpa 2: The Rule OTT Streaming Partner Confirmed

'ಪುಷ್ಪ'-2 ಸಿನಿಮಾ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿ ಪ್ರದರ್ಶನ ಕಂಡ ಬಳಿಕ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ತೆಲುಗು ಜೊತೆಗೆ ಹಿಂದಿ, ತಮಿಳು, ಕನ್ನಡ ಹಾಗೂ ಮಲಯಾಳಂ ಡಿಜಿಟಲ್ ರೈಟ್ಸ್ ಕೊಂಡುಕೊಂಡಿರುವುದಾಗಿ ನೆಟ್‌ಫ್ಲಿಕ್ಸ್ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದೆ. ಮೊದಲ ಭಾಗಕ್ಕಿಂತ ಬಹಳ ಅದ್ಧೂರಿಯಾಗಿ 'ಪುಷ್ಪ' ಎರಡನೇ ಭಾಗ ಮೂಡಿ ಬರ್ತಿದೆ. ಅದಕ್ಕೆ ತಕ್ಕಂತೆ ಮೇಕಿಂಗ್, ರಿಲೀಸ್, ಪ್ರಮೋಷನ್ ಪ್ಲ್ಯಾನ್ ನಡೀತಿದೆ.

ಅಂದಾಜು 150 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ 'ಪುಷ್ಪ' ಸಿನಿಮಾ 350 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು. ಆದರೆ 1000 ಕೋಟಿ ರು. ಕಲೆಕ್ಷನ್ ಟಾರ್ಗೆಟ್ ಮಾಡಿ ಸೀಕ್ವೆಲ್ ನಿರ್ಮಾಣ ಮಾಡಲಾಗುತ್ತಿದೆ. ಅದಕ್ಕೆ ತಕ್ಕಂತೆ ಬಜೆಟ್ ಹೆಚ್ಚಾಗಿದೆ. ಕಲಾವಿದರ ಸಂಭಾವನೆ ಕೂಡ ಜಾಸ್ತಿಯಾಗಿದೆ. ಇದೇ ಕಾರಣಕ್ಕೆ ಭಾರೀ ಮೊತ್ತಕ್ಕೆ ಓಟಿಟಿ ರೈಟ್ಸ್ ಮಾರಾಟವಾಗಿರುವ ಬಗ್ಗೆ ಚರ್ಚೆ ನಡೀತಿದೆ.

ಇತ್ತೀಚೆಗೆ ಅಮೇಜಾನ್ ಪ್ರೈಂ ಸಂಸ್ಥೆ ದೊಡ್ಡ ದೊಡ್ಡ ಸಿನಿಮಾಗಳ ಡಿಜಿಟಲ್ ರೈಟ್ಸ್ ಕೊಂಡುಕೊಳ್ಳುತ್ತಿಲ್ಲ. ಪೈಪೋಟಿಗೆ ಬಿದ್ದು ನೆಟ್‌ಫ್ಲಿಕ್ಸ್‌ ಸಿನಿಮಾಗಳನ್ನು ಸ್ಟ್ರೀಮಿಂಗ್ ಮಾಡುತ್ತಿದೆ. ಜ್ಯೂ. ಎನ್‌ಟಿಆರ್ ನಟನೆಯ 'ದೇವರ' ಚಿತ್ರವನ್ನು ಸಹ ಭಾರೀ ಮೊತ್ತಕ್ಕೆ ನೆಟ್‌ಫ್ಲಿಕ್ಸ್ ಕೊಂಡುಕೊಂಡಿದೆ. 'ಸಲಾರ್' ಓಟಿಟಿ ರೈಟ್ಸ್ ಸಹ ಇದೇ ಸಂಸ್ಥೆಯ ಪಾಲಾಗಿದೆ.

'ಪುಷ್ಪ-2: ದಿ ರೂಲ್' ಸಿನಿಮಾ ಬಗ್ಗೆ ಹೇಳುವುದಾದರೆ ಪ್ರೀಕ್ವೆಲ್‌ನಲ್ಲಿದ್ದ ಸಾಕಷ್ಟು ಪಾತ್ರಗಳು ಇಲ್ಲೂ ಮುಂದುವರೆಯಲಿದೆ. ಸಾಮಾನ್ಯ ಸ್ಮಗ್ಲರ್ ಆಗಿದ್ದ ಪುಷ್ಪರಾಜ್, ಮಾಫಿಯಾ ಡಾನ್ ಆಗಿ ಬೆಳೆಯುವ ಕಥೆಯನ್ನು ಹಿಂದಿನ ಭಾಗದಲ್ಲಿ ನೋಡಿದ್ದೆವು. ಅಲ್ಲಿಂದ ಮುಂದೆ ಆತನ ಆರ್ಭಟ ಹೇಗಿರುತ್ತದೆ. ದೇಶ ವಿದೇಶಕ್ಕೆ ತನ್ನ ಸಾಮ್ರಾಜ್ಯ ಹೇಗೆ ವಿಸ್ತರಿಸುತ್ತಾನೆ? ಪೊಲೀಸ್ ಆಫೀಸರ್ ಭನ್ವರ್ ಸಿಂಗ್ ಶೇಖಾವತ್ ಹಾಗೂ ಪುಷ್ಪ ನಡುವಿನ ಹಾವು ಏಣಿ ಆಟ ಹೇಗಿರುತ್ತದೆ? ಅನ್ನೋದನ್ನು ನೋಡಬೇಕು.

ಶ್ರೀವಲ್ಲಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ಮುಂದುವರೆಯಲಿದ್ದಾರೆ. ಪುಷ್ಪರಾಜ್ ಪತ್ನಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಡಾಲಿ ಧನಂಜಯ ಕೂಡ ಜಾಲಿ ರೆಡ್ಡಿಯಾಗಿ ಮತ್ತೆ ಪುಷ್ಪನ ಎದುರು ಅಬ್ಬರಿಸಲಿದ್ದಾರೆ. ಪ್ರಕಾಶ್ ರಾಜ್, ಜಗಪತಿ ಬಾಬು ಈ ಬಾರಿ ತಂಡವನ್ನು ಸೇರಿಕೊಳ್ಳಲಿದ್ದಾರೆ. ಮತ್ತೊಮ್ಮೆ ದೇವಿಶ್ರೀ ಪ್ರಸಾದ್ ತಮ್ಮ ಹಾಡುಗಳಿಂದ ಅಭಿಮಾನಿಗಳನ್ನು ಕುಣಿಸುವ ಪ್ರಯತ್ನದಲ್ಲಿದ್ದಾರೆ.

ಈಗಾಗಲೇ 'ಪುಷ್ಪ'-2 ಸಿನಿಮಾ ವಿತರಕರ ಲಿಸ್ಟ್ ಕೂಡ ಸಿಕ್ಕಿಬಿಟ್ಟಿದೆ. ಮೈಸೂರು ಟಾಕೀಸ್ ಸಂಸ್ಥೆ ಕರ್ನಾಟಕದಲ್ಲಿ ಸಿನಿಮಾ ಬಿಡುಗಡೆ ಮಾಡಲಿದೆ. ತಮಿಳುನಾಡಿನಲ್ಲಿ ರೆಡ್ ಜೈಂಟ್, ಕೇರಳದಲ್ಲಿ ಎಲ್‌ಜಿಎಫ್ ಸ್ಟುಡಿಯೋಸ್, ಟೀ-ಸೀರಿಸ್ ಹಾಗೂ ಎಎ ಫಿಲ್ಮ್ಸ್ ಉತ್ತರ ಭಾರತ ಹಾಗೂ ಯಶ್‌ ರಾಜ್ ಫಿಲ್ಮ್ಸ್ ಓವರ್‌ಸೀಸ್‌ನಲ್ಲಿ ಸಿನಿಮಾ ವಿತರಿಸಲಿದೆ.

More from Filmibeat

English summary
Pushpa 2: The Rule on OTT: Streaming Partner Details Inside;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X