'ಅಮರನ್', 'ಲಕ್ಕಿ ಭಾಸ್ಕರ್' ಓಟಿಟಿ ರಿಲೀಸ್ ಡೇಟ್; ಎಲ್ಲಿ, ಯಾವಾಗ ನೋಡಬಹುದು

ಈ ವರ್ಷ ದೀಪಾವಳಿ ಸಂಭ್ರಮದಲ್ಲಿ ಇಂಟ್ರೆಸ್ಟಿಂಗ್ ಸಿನಿಮಾಗಳು ತೆರೆಗಪ್ಪಳಿಸಿ ಸದ್ದು ಮಾಡಿದ್ದವು. ಅದರಲ್ಲಿ ತಮಿಳಿನ 'ಅಮರನ್' ಹಾಗೂ ತೆಲುಗಿನ 'ಲಕ್ಕಿ ಶಂಕರ್' ಚಿತ್ರಗಳು ಪ್ರೇಕ್ಷಕರ ಮನಗೆದ್ದಿದ್ದವು. ಎರಡೂ ಚಿತ್ರಕ್ಕೂ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. 3ನೇ ವಾರವೂ 'ಅಮರನ್' ಬಾಕ್ಸಾಫೀಸ್ ಶೇಕ್ ಮಾಡ್ತಿದೆ.

ಮೇಜರ್ ಮುಕುಂದ್ ವರದರಾಜನ್ ಜೀವನಾಧರಿತ 'ಅಮರನ್' ಚಿತ್ರಕ್ಕೆ ಪ್ರೇಕ್ಷರು ಫಿದಾ ಆಗಿದ್ದಾರೆ. ಶಿವ ಕಾರ್ತಿಕೇಯನ್ ಚಿತ್ರದಲ್ಲಿ ವರದರಾಜನ್ ಪಾತ್ರಕ್ಕೆ ಜೀವ ತುಂಬಿದ್ದಾರೆ. ಪತ್ನಿ ರೆಬೆಕಾ ಪಾತ್ರದಲ್ಲಿ ಸಾಯಿ ಪಲ್ಲವಿ ಮಿಂಚಿದ್ದಾರೆ. ಇವರಿಬ್ಬರ ನಟನೆ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕೇವಲ 15 ದಿನಗಳಲ್ಲಿ ಸಿನಿಮಾ 200 ಕೋಟಿ ರೂ.ಗೂ ಅಧಿಕ ಗಳಿಕೆ ಕಂಡು ದಾಖಲೆ ಬರೆದಿದೆ.

Amaran and Lucky Baskhar OTT Release Date When and Where to Watch

ರಾಜ್‌ಕುಮಾರ್ ಪೆರಿಯಸ್ವಾಮಿ ಎಂಬುವವರು 'ಅಮರನ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಕಮಲ್ ಹಾಸನ್ ಸಹ ಚಿತ್ರ ನಿರ್ಮಾಣಕ್ಕೆ ಕೈ ಜೋಡಿಸಿದ್ದಾರೆ. ಭುವನ್ ಅರೋರ, ರಾಹುಲ್ ಬೋಸ್, ಶ್ಯಾಮ್ ಪ್ರಸಾದ್ ಸೇರಿದಂತೆ ಘಟಾನುಘಟಿ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕಾಗಿ ದೇಹ ದಂಡಿಸಿ ಬಹಳ ಖಡಕ್ ಲುಕ್‌ನಲ್ಲಿ ಶಿವಕಾರ್ತಿಕೇಯನ್ ನಟಿಸಿದ್ದಾರೆ.

60 ಕೋಟಿ ರೂ.ಗೆ ನೆಟ್‌ಫ್ಲಿಕ್ಸ್ ಸಂಸ್ಥೆ 'ಅಮರನ್' ಚಿತ್ರದ ಓಟಿಟಿ ರೈಟ್ಸ್ ಕೊಂಡುಕೊಂಡಿದೆ. ಆದರೆ ಈಗಾಗಲೇ ವಿದೇಶಗಳಲ್ಲಿ ಸಿನಿಮಾ ಸ್ಟ್ರೀಮಿಂಗ್ ಆರಂಭಿಸಿದೆ. ವಿದೇಶದ ಐಂಥುಸನ್(Einthusan) ಓಟಿಟಿಯಲ್ಲಿ ಸಿನಿಮಾ ವೀಕ್ಷಣೆಗೆ ಲಭ್ಯವಿದೆ. ಈಗಾಗಲೇ ಕೆಲವರು ಚಿತ್ರವನ್ನು ಡೌನ್ಲೋಡ್ ಮಾಡಿ ಆನ್‌ಲೈನ್‌ನಲ್ಲಿ ಲೀಕ್ ಮಾಡಿದ್ದಾರೆ ಎನ್ನಲಾಗ್ತಿದೆ. ನವೆಂಬರ್ 29ಕ್ಕೆ ಭಾರತದಲ್ಲಿ ಸಿನಿಮಾ ಸ್ಟ್ರೀಮಿಂಗ್ ಆರಂಭಿಸಲಿದೆ.

'ಅಮರನ್' ಮಾತ್ರವಲ್ಲ ತೆಲುಗಿನ 'ಲಕ್ಕಿ ಭಾಸ್ಕರ್' ಚಿತ್ರಕ್ಕೂ ಚಿತ್ರಮಂದಿರಗಳಲ್ಲಿ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ವೆಂಕಿ ಅಟ್ಲೂರಿ ನಿರ್ದೇಶನದ ಕ್ರೈಂ ಡ್ರಾಮಾ ಚಿತ್ರದ ಮುಖ್ಯಭೂಮಿಕೆಯಲ್ಲಿ ದುಲ್ಕರ್ ಸಲ್ಮಾನ್ ಹಾಗೂ ಮೀನಾಕ್ಷಿ ಚೌಧರಿ ನಟಿಸಿದ್ದಾರೆ. 90ರ ದಶಕದಲ್ಲಿ ನಡೆಯುವ ಕಥೆ ಈ ಚಿತ್ರದಲ್ಲಿದೆ.

Amaran and Lucky Baskhar OTT Release Date When and Where to Watch

ಮುಂಬೈನ ಮಗಧ ಬ್ಯಾಂಕ್ ಕ್ಯಾಷಿಯರ್ ಭಾಸ್ಕರ್ ಜೀವನದ ಏಳುಬೀಳಿನ ಕಥೆ ಚಿತ್ರದಲ್ಲಿದೆ. ಮಧ್ಯಮ ವರ್ಗದ ಕುಟುಂಬದ ಆಧಾರಸ್ತಂಭವಾದ ಭಾಸ್ಕರ್ ತನ್ನ ಕಷ್ಟಗಳನ್ನು ಪರಿಹರಿಸಿಕೊಳ್ಳಲು ಹಿಡಿಯ ಮಾರ್ಗ, ಅದರಿಂದ ಎದುರಾಗುವ ಸಮಸ್ಯೆಗಳು, ಅದನ್ನೆಲ್ಲಾ ಮೀರಿ ಹೇಗೆ ಗೆಲ್ಲುತ್ತಾನೆ ಎನ್ನುವ ಕಥೆಯನ್ನು ಇಲ್ಲಿ ಹೇಳಲಾಗಿದೆ.

'ಲಕ್ಕಿ ಭಾಸ್ಕರ್' ಸಿನಿರಸಿಕರ ಮನಗೆದ್ದಿದ್ದಾನೆ. ಮಲಯಾಳಂ ನಟ ದುಲ್ಕರ್ ಸಲ್ಮಾನ್ ಈಗ ತೆಲುಗು ನಟ ಎನ್ನುವಷ್ಟರ ಮಟ್ಟಿಗೆ ಅಲ್ಲಿ ಜನಪ್ರಿಯರಾಗಿದ್ದಾರೆ. ಅವರ ನಟನೆಗು ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಇತ್ತೀಚಿನ ವರ್ಷಗಳಲ್ಲಿ ಬಹಳ ವಿಭಿನ್ನವಾದ ಸಿನಿಮಾ ಎನಿಸಿಕೊಂಡಿದೆ. ಬೆಳಕಿನ ಹಬ್ಬಕ್ಕೆ ಬಂದ ಭಾಸ್ಕರ್‌ಗೂ ಲಕ್ ಕೈ ಹಿಡಿದಿತ್ತು.

ಈಗಾಗಲೇ ಸಾಕಷ್ಟು ಜನ ಬೆಳ್ಳಿತೆರೆಯಲ್ಲಿ ಸಿನಿಮಾ ನೋಡಿದ್ದಾರೆ. ಕೆಲವರು ಓಟಿಟಿ ಸ್ಟ್ರೀಮಿಂಗ್‌ ಯಾವಾಗ ಎಂದು ಕಾಯುತ್ತಿದ್ದಾರೆ. ನೆಟ್‌ಫ್ಲಿಕ್ಸ್ ಸಂಸ್ಥೆಯೇ ಈ ಚಿತ್ರದ ರೈಟ್ಸ್ ಕೂಡ ಕೊಂಡುಕೊಂಡಿದೆ. 'ಅಮರನ್' ಸ್ಟ್ರೀಮಿಂಗ್ ಮರುದಿನವೇ ಅಂದರೆ ಅಕ್ಟೋಬರ್ 30ರಂದು 'ಲಕ್ಕಿ ಭಾಸ್ಕರ್' ಓಟಿಟಿ ವೀಕ್ಷಣೆಗೆ ಸಿಗಲಿದೆ.

ದುಲ್ಕರ್ ಸಲ್ಮಾನ್ ನಟಿಸಿರುವುದರಿಂದ ಕೇರಳದಲ್ಲೂ 'ಲಕ್ಕಿ ಭಾಸ್ಕರ್' ಚಿತ್ರ ಸೂಪರ್ ಹಿಟ್ ಆಗಿದೆ. ಈಗಾಗಲೇ 20 ಕೋಟಿ ರೂ. ಗಳಿಕೆ ಕಂಡಿರುವುದಾಗಿ ಹೇಳಲಾಗುತ್ತಿದೆ. ತೆಲುಗು ಸಿನಿಮಾ ಮಲಯಾಳಂಗೆ ಡಬ್ ಆಗಿ ಇಷ್ಟು ಕಲೆಕ್ಷನ್ ಮಾಡಿರುವುದು ವಿಶೇಷ ಎನ್ನಲಾಗ್ತಿದೆ. ಈಗಾಗಲೇ ಈ ಸಿನಿಮಾ ವಿಶ್ವದಾದ್ಯಂತ 100 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವ ಅಂದಾಜಿದೆ.

More from Filmibeat

English summary
Sivakarthikeyan's Amaran and Dulquer Salmaan's Lucky Baskhar OTT details;
Read more about: ott dulquer salmaan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X