ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಒಟಿಟಿ ಸಿನಿಮಾಗಳು: ಪಟ್ಟಿ ಇಲ್ಲಿದೆ

ವಿಶ್ವ ಪ್ರಸಿದ್ಧ ಗೋವಾ ಅಂತಾರಾಷ್ಟ್ರೀಯ ಸಿನಿಮೋತ್ಸವ ಇನ್ನೆರಡು ದಿನ ಇರುವಂತೆಯೇ ಜನಪ್ರಿಯ ಒಟಿಟಿ ಅಮೆಜಾನ್ ಪ್ರೈಂ ಸಿನಿಮೋತ್ಸವದಲ್ಲಿ ಪ್ರದರ್ಶನಗೊಳ್ಳಲಿರುವ ಅಮೆಜಾನ್ ಒರಿಜಿನಲ್ ಸಿನಿಮಾಗಳ ಪಟ್ಟಿ ಘೋಷಿಸಿದೆ.

ಇದೇ ಮೊದಲ ಬಾರಿ ಭಾರತದಲ್ಲಿ ಒಟಿಟಿಯಲ್ಲಿ ನೇರವಾಗಿ ಬಿಡುಗಡೆಗೊಂಡ ಸಿನಿಮಾಗಳು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ.

ನವೆಂಬರ್ 20 ರಂದು ಆರಂಭವಾಗುವ ಗೋವಾ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಅಮೆಜಾನ್ ಒರಿಜಿನಲ್ ಸಿನಿಮಾ ಆದ 'ಸರ್ದಾರ್ ಉದ್ಧಮ್' ಪ್ರದರ್ಶನಗೊಳ್ಳಲಿದೆ. ಅದರ ಜೊತೆಗೆ 'ದಿ ಫ್ಯಾಮಿಲಿ ಮ್ಯಾನ್' ವೆಬ್ ಸರಣಿ ಪ್ರಸಾರವಾಗಲಿದೆ. ಇವುಗಳ ಜೊತೆಗೆ ಹಾರರ್ ಸಿನಿಮಾ 'ಚೋರಿ' ನೇರವಾಗಿ ಅಮೆಜಾನ್ ಪ್ರೈಂ ಹಾಗೂ ಸಿನಿಮೋತ್ಸವದಲ್ಲಿ ಒಟ್ಟಿಗೆ ಪ್ರಸಾರವಾಗಲಿದೆ. ನುಶ್ರತ್ ಬರೂಚಾ ನಟಿಸಿ ವಿಶಾಲ್ ಫರಿಯಾ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ.

Amazon Prime Announce Line Up For Goa Film Fest

ಇದರ ಜೊತೆಗೆ ಗೋವಾ ಅಂತಾರಾಷ್ಟ್ರೀಯ ಸಿನಿಮಾದೊಟ್ಟಿಗೆ ಸಹಭಾಗಿತ್ವವನ್ನು ಸಹ ಅಮೆಜಾನ್ ಹೊಂದಿದ್ದು, ಸಿನಿಮೋತ್ಸವ ನಡೆವ ಅಷ್ಟೂ ದಿನಗಳು ಅಮೆಜಾನ್ ಪ್ರೈಂ ಅಪ್ಲಿಕೇಶನ್‌ನ ಹೋಮ್‌ ಪೇಜ್‌ನಲ್ಲಿ ಸತ್ಯಜಿತ್‌ ರೇ ಅವರ ಸಿನಿಮಾಗಳನ್ನು ಪ್ರದರ್ಶಿಸಲಾಗುತ್ತದೆ. ಭಾರತದ ಅತ್ಯುತ್ತಮ ಸಿನಿಮಾ ನಿರ್ದೇಶಕ ಸತ್ಯಜಿತ್ ರೇಗೆ ಗೌರವಪೂರ್ವಕವಾಗಿ ಅಮೆಜಾನ್ ಈ ಕಾರ್ಯ ಮಾಡುತ್ತಿದೆ. ನವೆಂಬರ್ 20 ರಿಂದ 28 ರವರೆಗೆ ಅಮೆಜಾನ್ ಹೋಮ್‌ ಪೇಜ್‌ನಲ್ಲಿ ಸತ್ಯಜಿತ್ ರೇ ನಿರ್ದೇಶಿಸಿರುವ ವಿವಿಧ ಸಿನಿಮಾಗಳು ಕಾಣ ಸಿಗುತ್ತವೆ.

ಸತ್ಯಜಿತ್ ರೇ ಅವರ 11 ಸಿನಿಮಾಗಳನ್ನು ಅಮೆಜಾನ್ ಪ್ರೈಂ ಪ್ರದರ್ಶಿಸಲಿದೆ. 'ಅಭಿಜಿನ್', 'ಅಪರಿಜಿತೊ', 'ಅಶನಿ ಸಂಕೇತ್', 'ಚಿರಿಕಾನಾ', ''ಹಿರಕ್ ರಾಜರ್ ದೇಶೆ', 'ಪತೇರ್ ಪಾಂಚಾಲಿ', 'ಸೀಮಬದ್ಧ', 'ಸೊನಾರ್ ಕೆಲ್ಲ', 'ಶತರಂಜ್‌ ಕೆ ಕಿಲಾಡಿ', 'ಚಾರುಲತಾ', 'ಜಲಸಾಗರ್' ಸಿನಿಮಾಗಳನ್ನು ಅಮೆಜಾನ್ ಪ್ರೈಂ ಪ್ರದರ್ಶಿಸಲಿದೆ. ಇವುಗಳ ಜೊತೆಗೆ ಸೌಮಿತ್ರ ಚಟರ್ಜಿ ನಿರ್ಮಿಸಿರುವ ಸತ್ಯಜಿತ್ ರೇ ಕುರಿತ ಡಾಕ್ಯುಮೆಂಟರಿಯನ್ನು ಪ್ರದರ್ಶನ ಮಾಡಲಾಗುತ್ತದೆ.

ನವೆಂಬರ್ 20 ರಂದು ಗೋವಾನಲ್ಲಿ 52ನೇ ಸಿನಿಮೋತ್ಸವ ಆರಂಭವಾಗುತ್ತಿದೆ. ಏಷ್ಯಾದ ಪ್ರತಿಷ್ಠಿತ ಹಾಗೂ ಭಾರತದ ಅತಿ ದೊಡ್ಡ ಸಿನಿಮೋತ್ಸವವೆಂದು ಗೋವಾ ಸಿನಿಮೋತ್ಸವ ಹೆಸರು ಗಳಿಸಿದೆ. ನವೆಂಬರ್ 28 ರಂದು ಸಿನಿಮೋತ್ಸವ ಕೊನೆಯಾಗಲಿದೆ. ಸಿನಿಮೋತ್ಸದ ಸ್ಪರ್ಧಾ ವಿಭಾಗದಲ್ಲಿ ಪ್ರದರ್ಶಿತಗೊಳ್ಳುವ ಸಿನಿಮಾಗಳ ಪಟ್ಟಿಯನ್ನು ಈಗಾಗಲೇ ನೀಡಲಾಗಿದೆ.

'ಎನಿ ಡೇ ನೌ'; ನಿರ್ದೇಶನ: ಹ್ಯಾಮಿ ರಾಮೆಝನ್‌; ಫಿನ್‌ಲ್ಯಾಂಡ್‌, 'ಚಾರ್ಲೆಟ್‌' ಪರುಗ್ವೆ, 'ಇಂಟ್ರೆಗೇಡ್‌' ನಿರ್ದೇಶನ ರಾದು ಮೌಂಟೀನ್‌, ರೋಮಾನಿಯಾ, 'ಲ್ಯಾಂಡ್‌ ಆಫ್‌ ಡ್ರೀಮ್ಸ್‌', ನಿರ್ದೇಶನ, ಶಿರೀನ್‌ ನಿಶಾತ್‌, ಶೋಜಾ ಅಜಾರಿ; ನ್ಯು ಮೆಕ್ಸಿಕೊ, ಅಮೆರಿಕಾ, 'ಲೀಡರ್‌' ನಿರ್ದೇಶನ ಕಟಿಯಾ ಪ್ರಿವೆಜೆಂಕವ್‌; ಪೋಲೆಂಡ್‌, 'ಮಾಸ್ಕೊ ಡಸ್‌ ನಾಟ್‌ ಹ್ಯಾಪ್ಪನ್‌' ನಿರ್ದೇಶನ ದಿಮಿತ್ರಿ ಫೆದ್ರೊ; ರಷ್ಯಾ, 'ನೋ ಗ್ರೌಂಡ್‌ ಬೆನೆತ್‌ ದ ಫೀಟ್‌' ನಿರ್ದೇಶನ ಮೊಹ್ಮದ್‌ ರಾಬ್ಬಿ ಮೃಧಾ; ಬಾಂಗ್ಲಾದೇಶ, 'ಒನ್ಸ್‌ ವಿ ವೇರ್‌ ಗುಡ್‌ ಫಾರ್‌ ಯು' ನಿರ್ದೇಶನ ಬ್ರಾಂಕೊ ಸೆಮಿತ್‌; ಕ್ರೋಷಿಯಾ, ಬೋಸ್ನಿಯಾ, ಹಾರ್ಜೆಗೊವಿನಾ, 'ರಿಂಗ್‌ ವಾಂಡರಿಂಗ್‌' ನಿರ್ದೇಶನ ಮಸಾಕಾಝು ಕನೆಕೊ; ಜಪಾನ್‌, 'ಸೇವಿಂಗ್‌ ಒನ್‌ ಹು ವಾಸ್‌ ಡೆಡ್‌' ನಿರ್ದೇಶನ ವಕ್ಲಾವ್‌ ಕದ್ರಂಕಾ; ಸಿಜೆಕ್‌ ರಿಪಬ್ಲಿಕ್‌. 'ದ ಡಾರ್ಮ್‌' ನಿರ್ದೇಶನ ರೋಮನ್‌ ವಾಸಿನೋವ್‌; ರಷ್ಯಾ. 'ದಿ ಫಸ್ಟ್‌ ಫಾಲನ್‌' ನಿರ್ದೇಶನ ರೋಡ್ರಿಗೊ ಡಿ ಒಲಿವೆರಾ; ಬ್ರಾಝಿಲ್‌. ಇವುಗಳ ಜೊತೆಗೆ ಭಾರತೀಯ ಸಿನಿಮಾಗಳಾದ ಮರಾಠಿಯ 'ಗೋದಾವರಿ' ನಿರ್ದೇಶನ: ನಿಖಿಲ್‌ ಮಹಾಜನ್‌. 'ಮಿ ವಸಂತರಾವ್‌; ನಿ: ನಿಪುಮ್‌ ಅವಿನಾಶ್‌ ಧರ್ಮಾಧಿಕಾರಿ ಹಾಗೂ ಡಿಮಸಾ ಭಾಷೆಯ 'ಸೆಮ್ಖೋರ್‌' ನಿರ್ದೇಶನ ಆಮೀ ಬುರಾ ಸ್ಪರ್ಧಿಸಲಿವೆ. ಭಾರತದಿಂದ ಸ್ಪರ್ಧೆಗೆ ಈ ಮೂರು ಸಿನಿಮಾಗಳಷ್ಟೆ ಆಯ್ಕೆಯಾಗಿವೆ.

ಉತ್ತಮ ಚಲನಚಿತ್ರ ಸುವರ್ಣ ಮಯೂರ ಪ್ರಶಸ್ತಿ ನೀಡಲಾಗುತ್ತದೆ. ಈ ಪ್ರಶಸ್ತಿಯು ₹40,00,000/ ನಗದು ಬಹುಮಾನವನ್ನು ಒಳಗೊಂಡಿದೆ. ಚಿತ್ರದ ನಿರ್ದೇಶಕರು ಹಾಗೂ ನಿರ್ಮಾಪಕರಿಗೆ ಸಮನಾಗಿ ಹಂಚಲಾಗುತ್ತದೆ. ನಿರ್ದೇಶಕರಿಗೆ ಸುವರ್ಣ ಮಯೂರ ನೀಡಲಾಗತ್ತದೆ. ಜೊತೆಗೆ ಪ್ರಮಾಣ ಪತ್ರವನ್ನೂ ನೀಡಲಾಗುತ್ತದೆ. ನಿರ್ಮಾಪಕರಿಗೆ ನಗದು ಪ್ರಶಸ್ತಿಯೊಂದಿಗೆ ಪ್ರಮಾಣಪತ್ರವನ್ನು ನೀಡಲಾಗುತ್ತದೆ.

More from Filmibeat

English summary
Amazon prime announce line up for Goa film fest starting from November 20. Amazon prime will stream Satyajit Ray's movies till film fest end.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X