'ಪ್ರೈಮ್ ಡೇ'ಗೆ ಹಲವು ಸಿನಿಮಾ ಜೊತೆಗೆ ರಿಯಾಯಿತಿ ಘೋಷಿಸಿದ ಅಮೆಜಾನ್ ಪ್ರೈಂ
ಅಮೆಜಾನ್ ಪ್ರೈಮ್ ಸದಸ್ಯರಿಗೆ ಪ್ರೈಮ್ ವೀಡಿಯೋ ಮನರಂಜನೆಯ ಗುಚ್ಛವನ್ನೇ ಘೋಷಿಸಿದೆ. ಅತ್ಯಂತ ನಿರೀಕ್ಷಿತ ಅಮೆಜಾನ್ ಒರಿಜಿನಲ್ ಸಿರೀಸ್‌ಗಳು ಮತ್ತು ಜನಪ್ರಿಯ ಸಿನಿಮಾಗಳು ವಿವಿಧ ಭಾಷೆಗಳಲ್ಲಿ ಪ್ರೈಮ್ ಡೇಯಲ್ಲಿ ಲಭ್ಯವಾಗಲಿದೆ.
ಇತ್ತೀಚೆಗೆ ಬಿಡುಗಡೆಯಾದ ಹಿಂದಿ ಸಿನಿಮಾ 'ರನ್‌ವೇ 34', ತೆಲುಗಿನ 'ಸರ್ಕಾರು ವಾರಿ ಪಾಟ' , ಮತ್ತು 'ಸಾಮ್ರಾಟ್ ಪ್ರಥ್ವಿರಾಜ್' ಜೊತೆಗೆ, ಕ್ರಿಸ್ ಪ್ಯಾಟ್ ನಟನೆಯ ಆಕ್ಷನ್ ಥ್ರಿಲ್ಲರ್ ಅಮೆಜಾನ್ ಒರಿಜಿನಲ್ ದಿ ಟರ್ಮಿನಲ್ ಲಿಸ್ಟ್, ಹೊಸ ಹಾಸ್ಯ ಸಿರೀಸ್ ಕಾಮಿಕ್‌ಸ್ತಾನ್ ಹಾಗೂ ತೆಲುಗಿನ 'ಮಾಡರ್ನ್ ಲವ್ ಹೈದರಾಬಾದ್' ಇನ್ನೂ ಹಲವು ವೆಬ್ ಸರಣಿ, ಸಿನಿಮಾಗಳು ಲಭ್ಯವಾಗಲಿವೆ.
ವಿಶೇಷ ಪ್ರೈಮ್ ಡೇ ಕೊಡುಗೆಯಾಗಿ, ಪ್ರೈಮ್ ವೀಡಿಯೋ ಚಾನೆಲ್‌ಗಳ ಮೂಲಕ ಆಡ್ ಆನ್ ಸಬ್‌ಸ್ಕ್ರಿಪ್ಷನ್‌ಗಳ ಮೇಲೆ 50% ವರೆಗೆ ರಿಯಾಯಿತಿಯನ್ನು ಸಹ ಘೋಷಿಸಲಾಗಿದೆ. ಜುಲೈ 23 ಮತ್ತು 24 ರಂದು ಪ್ರೈಮ್ ಡೇ ನಡೆಯಲಿದೆ.

ಪ್ರೈಮ್ ವೀಡಿಯೋದಲ್ಲಿ ಇತ್ತೀಚೆಗೆ ಬಿಡುಗಡೆಯಾದ 'ಸರ್ಕಾರಿ ವಾರಿ ಪಾಟ', 'ರನ್‌ವೇ 34', 'ಸಾಮ್ರಾಟ್ ಪ್ರಥ್ವಿರಾಜ್' ರೀತಿಯ ವಿವಿಧ ಭಾಷೆಗಳ ಜನಪ್ರಿಯ ಸಿನಿಮಾದ ಮೂಲಕ 'ಪ್ರೈಮ್ ಡೇ' ಸಂಭ್ರಮಾಚರಣೆ ಆರಂಭವಾಗಲಿದೆ. ಇಷ್ಟೇ ಅಲ್ಲ, ಇನ್ನೂ ಎರಡು ಭಾರತೀಯ ಅಮೆಜಾನ್ ಒರಿಜಿನಲ್ ಸಿರೀಸ್ ಕೂಡ ಬಿಡುಗಡೆಯಾಗಲಿದೆ. 'ಮಾಡರ್ನ್ ಲವ್ ಹೈದರಾಬಾದ್'. ಜುಲೈ 7 ರಂದು ಬಿಡುಗಡೆಯಾಗಲಿದೆ. ಕಾಮಿಕ್‌ಸ್ತಾನ್ ಸೀಸನ್ 3 ಜುಲೈ 15 ರಂದು ಬಿಡುಗಡೆಯಾಗಲಿದೆ.
ಕ್ರಿಸ್ ಪ್ಯಾಟ್ ನಟನೆಯ ದಿ ಟರ್ಮಿನಲ್ ಲಿಸ್ಟ್ ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಮಲಯಾಳಂ, ಕನ್ನಡ ಭಾಷೆಗಳಲ್ಲಿ ಪ್ರೈಮ್ ಡೇ ಸಮೀಪದಲ್ಲಿ ಬಿಡುಗಡೆಯಾಗಲಿದೆ.
ಇದರ ಜೊತೆಗೆ, ಮೊದಲ ಬಾರಿಗೆ ಪ್ರೈಮ್ ಸದಸ್ಯರಿಗೆ ಪ್ರೈಮ್ ವೀಡಿಯೋ ಚಾನೆಲ್‌ಗಳಲ್ಲಿ ಲಭ್ಯವಿರುವ 12 ಜನಪ್ರಿಯ ವೀಡಿಯೋ ಸ್ಟ್ರೀಮಿಂಗ್ ಸೇವೆಗಳಿಂದ ಹೆಚ್ಚುವರಿ ಸಬ್‌ಸ್ಕ್ರಿಪ್ಷನ್‌ಗಳ ಮೇಲೆ 50% ರಿಯಾಯಿತಿಯನ್ನೂ ಘೋಷಿಸಲಾಗುತ್ತಿದೆ. ಪ್ರೈಮ್ ವೀಡಿಯೋ ಚಾನೆಲ್‌ಗಳ ಮೂಲಕ ಸಾವಿರಾರು ಹೆಚ್ಚುವರಿ ಸಿನಿಮಾ, ವೆಬ್ ಸರಣಿಗಳನ್ನು ಪ್ರೈಮ್ ಸದಸ್ಯರು ಪಡೆಯಬಹುದಾಗಿದೆ. ಯಾವುದೇ ಲಾಗಿನ್ ಕಿರಿ-ಕಿರಿ ಇಲ್ಲದೆ ಮತ್ತು ಎಲ್ಲ ಪ್ರೈಮ್ ವೀಡಿಯೋ ವೈಶಿಷ್ಟ್ಯಗಳಾದ ಐಎಂಡಿಬಿ ಎಕ್ಸ್‌ರೇ, ಒಂದೆ ವಾಚ್‌ಲಿಸ್ಟ್ ನಲ್ಲಿ ಆನಂದಿಸಬಹುದಾಗಿದೆ ಮತ್ತು ಆಫ್‌ಲೈನ್ ವೀಕ್ಷಣೆಗಾಗಿ ಲೈಬ್ರರಿ ಡೌನ್‌ಲೋಡ್ ಮಾಡಬಹುದಾಗಿದೆ. ಇದರಲ್ಲಿ 12 ಒಟಿಟಿ ಸೇವೆಗಳಿದ್ದು, ಎಎಂಸಿ+, ಏಕಾರ್ನ್ ಟಿವಿ, ಹಾಯು, ಡಿಸ್ಕವರಿ+, ಲಯನ್ಸ್‌ಗೇಟ್ ಪ್ಲೇ, ಎರೋಸ್ ನೌ, ಡೊಕುಬೇ, ಮುಬಿ, ಹೋಯ್‌ಚೋಯ್, ಮನೋರಮಾ ಮ್ಯಾಕ್ಸ್, ಶಾರ್ಟ್ಸ್ ಟಿವಿ ಮತ್ತು ನಮ್ಮಫ್ಲಿಕ್ಸ್ ಇರಲಿದೆ.


Click it and Unblock the Notifications











