'ದಿ ಲಾರ್ಡ್‌ ಆಫ್‌ ದಿ ರಿಂಗ್ಸ್' ವೆಬ್ ಸರಣಿ ಘೋಷಿಸಿದ ಅಮೆಜಾನ್ ಪ್ರೈಂ

ಜಗತ್‌ಪ್ರಸಿದ್ಧ ಸಿನಿಮಾ ಸರಣಿ 'ದಿ ಲಾರ್ಡ್ ಆಫ್ ದಿ ರಿಂಗ್ಸ್‌'ನ ಹೊಸ ವೆಬ್ ಸರಣಿಯನ್ನು ಅಮೆಜಾನ್ ಪ್ರೈಂ ಘೋಷಿಸಿದೆ.

'ದಿ ಲಾರ್ಡ್ ಆಫ್‌ ದಿ ರಿಂಗ್ಸ್' ಸಿನಿಮಾ ಸರಣಿಯ ಮೂರು ಸಿನಿಮಾಗಳು ಈವರೆಗೆ ಬಿಡುಗಡೆ ಆಗಿದ್ದು, ಮೂರೂ ಸಿನಿಮಾಗಳು ಸೂಪರ್ ಹಿಟ್ ಆಗುವ ಜೊತೆಗೆ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗೂ ಭಾಜನವಾಗಿವೆ. ಇದೀಗ 'ದಿ ಲಾರ್ಡ್‌ ಆಫ್ ದಿ ರಿಂಗ್ಸ್' ನಾಲ್ಕನೇ ಸಿನಿಮಾ ಬದಲಿಗೆ ವೆಬ್ ಸರಣಿಯನ್ನು ಅಮೆಜಾನ್ ಪ್ರೈಂ ಸಹಯೋಗದೊಂದಿಗೆ ನಿರ್ಮಿಸಲಾಗುತ್ತಿದ್ದು, ನಿನ್ನೆಯಷ್ಟೆ ವೆಬ್ ಸರಣಿಯ ಹೆಸರನ್ನು ಅಧಿಕೃತವಾಗಿ ಘೋಷಿಸಲಾಗಿದೆ.

ಅಮೆಜಾನ್‌ನಲ್ಲಿ ಪ್ರಸಾರವಾಗಲಿರುವ 'ದಿ ಲಾರ್ಡ್ ಆಫ್‌ ದಿ ರಿಂಗ್ಸ್'ನ ವೆಬ್ ಸರಣಿಯ ಹೆಸರು 'ದಿ ರಿಂಗ್ಸ್ ಆಫ್ ಪವರ್' ಎಂದಾಗಿರಲಿದೆ. 'ದಿ ಲಾರ್ಡ್ ಆಫ್‌ ದಿ ರಿಂಗ್ಸ್' ಸರಣಿಯ ಸಿನಿಮಾಗಳಲ್ಲಿ ರಿಂಗ್‌ನ ಹುಟ್ಟಿನ ಬಗ್ಗೆ ಕೇವಲ ಕತೆಯಷ್ಟೆ ಇದೆ. ರಿಂಗ್‌ ಕಳೆದು ಹೋದ 2500 ವರ್ಷಗಳ ನಂತರ ಆ ರಿಂಗ್ ಗೋಲಮ್ ಎಂಬ ಕುಳ್ಳ ವ್ಯಕ್ತಿಗೆ ಸಿಕ್ಕು ಅದನ್ನು ಆತ ತನ್ನ ಸಂಬಂಧಿ ಫ್ರೋಡೊಗೆ ಕೊಟ್ಟ ಬಳಿಕ ಏನೇನಾಗುತ್ತದೆ ಎಂಬ ಕತೆಯನ್ನು 'ದಿ ಲಾರ್ಡ್ ಆಫ್‌ ದಿ ರಿಂಗ್ಸ್‌'ನ ಮೂರು ಸಿನಿಮಾಗಳು ಹೊಂದಿವೆ.

Amazon Prime Announce The Lord Of The Rings: The Rings Of Power Web Series

ಅಮೆಜಾನ್‌ ಹೊರತರಲಿರುವ 'ದಿ ರಿಂಗ್ಸ್ ಆಫ್ ಪವರ್' ವೆಬ್ ಸರಣಿಯು 2500 ವರ್ಷಗಳ ಹಿಂದೆ ರಿಂಗ್ಸ್‌ನ ಉಗಮ, ಅದರ ಬಳಕೆ ದುರ್ಬಳಕೆ, ರಿಂಗ್ಸ್‌ನ ಶಕ್ತಿ, ರಿಂಗ್ಸ್ ಅನ್ನು ನಾಶ ಮಾಡಿದ್ದು, ಒಂದು ರಿಂಗ್‌ ಉಳಿದಿದ್ದು ಇತರೆ ವಿಷಯಗಳನ್ನು ಒಳಗೊಂಡಿರಲಿದೆ.

'ದಿ ರಿಂಗ್ಸ್ ಆಫ್ ಪವರ್' ವೆಬ್ ಸರಣಿಯನ್ನು ಜೆಡಿ ಪೇಯ್ನ್ ಹಾಗೂ ಪ್ಯಾಟ್ರಿಕ್ ಮೆಕೆ ನಿರ್ದೇಶಿಸಲಿದ್ದಾರೆ. ''ರಿಂಗ್‌ನ ಏಳಿಗೆ, ಡಾರ್ಕ್ ಲಾರ್ಡ್‌ ಸೋರ್‌ಮನ್‌ನ ಉಗಮ, ನ್ಯುಮೇನಿಯರ್‌, ಮನುಷ್ಯರೂಪಿ ದೈವಗಳು ಹಾಗೂ ಮನುಷ್ಯರ ನಡುವಿನ ಕೊನೆಯ ಒಡಂಬಡಿಕೆ ಇನ್ನೂ ಹಲವು ವಿಷಯಗಳನ್ನು ಈ ಹೊಸ ವೆಬ್ ಸರಣಿ ಒಳಗೊಂಡಿರಲಿದೆ. ಡಾರ್ಕ್ ಲಾರ್ಡ್‌ ಸೋರ್‌ಮನ್‌ನ ಉಗಮ, ನ್ಯುಮೇನಿಯರ್‌, ಮನುಷ್ಯರೂಪಿ ದೈವಗಳು ಇವುಗಳೆಲ್ಲ 'ದಿ ಲಾರ್ಡ್‌ ಆಫ್‌ ದಿ ರಿಂಗ್ಸ್' ಸಿನಿಮಾಗಳಲ್ಲಿವೆ. ಆದರೆ ಸಿನಿಮಾಗಳಲ್ಲಿ ಈ ವರೆಗೆ 'ದಿ ಲಾರ್ಡ್‌ ಆಫ್‌ ದಿ ರಿಂಗ್ಸ್' ಅಭಿಮಾನಿಗಳು ನೋಡಿರುವ ಕತೆಗಿಂತಲೂ ಹಿಂದಿನ ಕತೆಯನ್ನು 'ದಿ ರಿಂಗ್ಸ್ ಆಫ್ ಪವರ್' ವೆಬ್ ಸರಣಿ ಹೇಳಲಿದೆ.

ಹೊಸ ವೆಬ್ ಸರಣಿಯ ಚಿತ್ರೀಕರಣ ಕಳೆದ ವರ್ಷ ಆಗಸ್ಟ್‌ನಲ್ಲಿಯೇ ಪೂರ್ಣವಾಗಿದೆ. ವೆಬ್ ಸರಣಿಯ ಬಹುತೇಕ ಚಿತ್ರೀಕರಣ ನ್ಯೂಜಿಲ್ಯಾಂಡ್‌ನಲ್ಲಿ ನಡೆದಿದೆ. ವೆಬ್ ಸರಣಿಯ ಮೊದಲ ಎಪಿಸೋಡ್‌ ಸೆಪ್ಟೆಂಬರ್ 02, 2022ಕ್ಕೆ ಬಿಡುಗುಡೆ ಆಗಲಿದೆ. ಬಳಿಕ ಪ್ರತಿ ವಾರಕ್ಕೆ ಒಂದೊಂದು ಎಪಿಸೋಡ್‌ ಪ್ರಸಾರವಾಗುತ್ತಾ ಸಾಗಲಿದೆ.

ಅಮೆಜಾನ್ ಪ್ರೈಂ ಈಗಾಗಲೇ ವೆಬ್ ಸರಣಿಯ ಎರಡನೇ ಸೀಸನ್‌ನ ಚಿತ್ರೀಕರಣವನ್ನೂ ಪ್ರಾರಂಭ ಮಾಡಿದೆ. ಈ ವೆಬ್ ಸರಣಿಯಲ್ಲಿ ಕಿತಿಯಾ ಅಡೈ, ರಾಬರ್ಟ್ ಅರಾಮಯೊ, ಒವೈನ್ ಆರ್ಥರ್, ಮ್ಯಾಕ್ಸಿಮ್ ಬಾಲ್ಡ್ರಿ, ನಜಾನಿನ್ ಬೊನ್ಯಾಡಿ, ಚಾರ್ಲಸ್‌ ಎಡ್ವರ್ಡ್, ಕ್ರಿಸ್ಟಿಯಾನ್ ಗ್ರೇವ್‌ಯೀಲ್ಡ್ ಇನ್ನೂ ಹಲವರು ನಟಿಸಿದ್ದಾರೆ.

ಎಚ್‌ಬಿಓ ನಲ್ಲಿ ಪ್ರಸಾರವಾದ 'ಗೇಮ್ ಆಫ್ ಥ್ರೋನ್ಸ್' ವೆಬ್ ಸರಣಿ ಜಗತ್‌ಪ್ರಸಿದ್ಧವಾಗಿತ್ತು. ಜನಪ್ರಿಯ ಒಟಿಟಿ ವೇದಿಕೆ ನೆಟ್‌ಫ್ಲಿಕ್ಸ್‌ 'ಮನಿ ಹೈಸ್ಟ್', 'ಸ್ಕ್ವಿಡ್ ಗೇಮ್ಸ್', 'ಡಾರ್ಕ್', 'ಲುಸಿಫರ್', 'ನಾರ್ಕೊಸ್' ಇನ್ನೂ ಹಲವು ಜನಪ್ರಿಯ ವೆಬ್ ಸರಣಿಯನ್ನು ಪ್ರಸಾರ ಮಾಡುತ್ತಿದೆ. ಹಾಟ್‌ಸ್ಟಾರ್‌ ಒಟಿಟಿಯು ಮಾರ್ವೆಲ್‌ನ 'ಲೋಕಿ', 'ಕ್ಯಾಪ್ಟನ್ ಅಮೆರಿಕ' 'ಎಟರ್ನಲ್ಸ್' ಇನ್ನಿತರೆ ಜನಪ್ರಿಯ ವೆಬ್ ಸರಣಿಗಳನ್ನು ಪ್ರಸಾರ ಮಾಡುತ್ತಿದೆ. ಇವೆಲ್ಲದಕ್ಕೂ ಪ್ರತಿಸ್ಪರ್ಧೆ ನೀಡಲೆಂದೇ ಅಮೆಜಾನ್ ಪ್ರೈಂ ಈಗ 'ದಿ ಲಾರ್ಡ್ ಆಫ್‌ ದಿ ರಿಂಗ್ಸ್' ಸರಣಿಗೆ ಕೈಯಿಟ್ಟಿದೆ.

More from Filmibeat

English summary
Amazon prime announce new series of The Lord Of The Rings. new series name is 'The Rings Of Power'. Series will release on September 02, 2022.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X