twitter
    For Quick Alerts
    ALLOW NOTIFICATIONS  
    For Daily Alerts

    ಅಬ್ಬಾ! 'ಪುಷ್ಪ' ಸಿನಿಮಾಕ್ಕೆ ಇಷ್ಟು ದೊಡ್ಡ ಮೊತ್ತ ಕೊಟ್ಟಿತೇ ಅಮೆಜಾನ್ ಪ್ರೈಂ

    |

    'ಪುಷ್ಪ' ಸಿನಿಮಾ ಹೊಸ ದಾಖಲೆಗಳನ್ನು ಬರೆಯುತ್ತಲೇ ಸಾಗುತ್ತಿದೆ. ತೆಲುಗು ರಾಜ್ಯಗಳು, ದಕ್ಷಿಣ ಭಾರತದಲ್ಲಿ ಮಾತ್ರವೇ ಅಲ್ಲದೆ ಹಿಂದಿ ಪ್ರಾಬಲ್ಯದ ರಾಜ್ಯಗಳಲ್ಲಿ ಹಿಂದಿ ಸಿನಿಮಾಗಳನ್ನೇ ಮಣಿಸಿ ಗೆಲುವು ಸಾಧಿಸಿದೆ ಅಲ್ಲು ಅರ್ಜುನ್ ನಟನೆಯ ಈ ಸಿನಿಮಾ.

    Recommended Video

    306 ಕೋಟಿ, ಅಲ್ಲು ಅರ್ಜುನ್ ಸಿನಿಮಾ ಜೀವನದಲ್ಲೇ ಇಷ್ಟು ದುಡ್ಡು ನೋಡಿಲ್ಲ

    ಡಿಸೆಂಬರ್ 17ಕ್ಕೆ ಬಿಡುಗಡೆ ಆಗಿದ್ದ 'ಪುಷ್ಪ' ಈ ವರೆಗೆ 300 ಕೋಟಿಗೂ ಹೆಚ್ಚು ಹಣ ಗಳಿಸಿದೆ. ವಿದೇಶದಲ್ಲೂ ಸಹ ದೊಡ್ಡ ಮಟ್ಟದ ಕಲೆಕ್ಷನ್ ಕಾಣುತ್ತಿರುವ 'ಪುಷ್ಪ' ಆಸ್ಟ್ರೆಲಿಯಾ, ಫಿಜಿ, ನ್ಯೂಜಿಲ್ಯಾಂಡ್‌ಗಳಂತಹಾ ಭಾರತೀಯ ಸಿನಿಮಾದ ಪ್ರಭಾವ ಕಡಿಮೆ ಇರುವ ದೇಶಗಳಲ್ಲಿಯೂ ಉತ್ತಮ ಪ್ರದರ್ಶನ ಕಾಣುತ್ತಿದೆ.

    ಇದೀಗ ಈ ಸಿನಿಮಾವು ಒಟಿಟಿಗೆ ಹೆಜ್ಜೆ ಇಡುತ್ತಿದೆ. ಬಿಡುಗಡೆ ಆದ ಇಪ್ಪತ್ತೇ ದಿನದಲ್ಲಿ ಒಟಿಟಿಗೆ ಬರುತ್ತಿದ್ದು, ಜನವರಿ 07ರಂದು ಅಮೆಜಾನ್ ಪ್ರೈಂನಲ್ಲಿ 'ಪುಷ್ಪ' ಸ್ಟ್ರೀಮ್ ಆಗಲಿದೆ. 'ಪುಷ್ಪ' ಸಿನಿಮಾವನ್ನು ಭಾರಿ ದೊಡ್ಡ ಮೊತ್ತಕ್ಕೆ ಅಮೆಜಾನ್ ಖರೀದಿಸಿದೆ ಎನ್ನಲಾಗುತ್ತಿದೆ.

    ದೊಡ್ಡ ಮೊತ್ತ ನೀಡಿದ ಅಮೆಜಾನ್ ಪ್ರೈಂ

    ದೊಡ್ಡ ಮೊತ್ತ ನೀಡಿದ ಅಮೆಜಾನ್ ಪ್ರೈಂ

    'ಪುಷ್ಪ' ಸಿನಿಮಾಕ್ಕಾಗಿ 30 ಕೋಟಿ ಹಣವನ್ನು ಅಮೆಜಾನ್ ಪ್ರೈಂ ನೀಡಿದೆ ಎನ್ನಲಾಗುತ್ತಿದೆ. ಚಿತ್ರಮಂದಿರದಲ್ಲಿ ಬಿಡುಗಡೆ ಆಗಿ ಹಿಟ್ ಆದ ಸಿನಿಮಾ ಒಂದಕ್ಕೆ ಇಷ್ಟು ದೊಡ್ಡ ಮೊತ್ತವನ್ನು ಅಮೆಜಾನ್ ಪ್ರೈಂ ನೀಡಿರುವುದು ಇದು ಮೊದಲ ಬಾರಿ ಎನ್ನಲಾಗುತ್ತಿದೆ. ಅಮೆಜಾನ್‌ನಲ್ಲಿ ತೆಲುಗು, ತಮಿಳು, ಕನ್ನಡ, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಅಮೆಜಾನ್‌ ಪ್ರೈಂನಲ್ಲಿ 'ಪುಷ್ಪ' ವೀಕ್ಷಣೆಗೆ ಲಭ್ಯವಿದೆ. ಅಲ್ಲು ಅರ್ಜುನ್ ಒಡೆತನದ 'ಆಹಾ' ಒಟಿಟಿ ಇದ್ದರೂ 'ಪುಷ್ಪ' ಸಿನಿಮಾವನ್ನು ಅಮೆಜಾನ್‌ ಪ್ರೈಂಗೆ ಮಾರಾಟ ಮಾಡಲಾಗಿದೆ.

    ಬಾಲಿವುಡ್ ನಟರನ್ನು ಮೀರಿಸಿದ ದಕ್ಷಿಣದ ನಟರು

    ಬಾಲಿವುಡ್ ನಟರನ್ನು ಮೀರಿಸಿದ ದಕ್ಷಿಣದ ನಟರು

    'ಪುಷ್ಪ' ಸಿನಿಮಾದ ಬಳಿಕ ದಕ್ಷಿಣ ಭಾರತ ಸಿನಿಮಾಗಳಿಗೆ ಹಿಂದಿ ಬಾಹುಳ್ಯದ ರಾಜ್ಯಗಳಲ್ಲಿ ಹಾಗೂ ಒಟಿಟಿಯಲ್ಲಿ ಬೇಡಿಕೆ ಹೆಚ್ಚಾಗಲಿದೆ ಎನ್ನಲಾಗುತ್ತಿದೆ. ಬಾಲಿವುಡ್ ಸಿನಿಮಾಗಳಿಗಿಂತಲೂ ದೊಡ್ಡ ಮೊತ್ತಕ್ಕೆ ದಕ್ಷಿಣ ಭಾರತದ ಸ್ಟಾರ್ ನಟರ ಸಿನಿಮಾಗಳು ಸೇಲ್ ಆಗುತ್ತಿವೆ. ಬಾಲಿವುಡ್ ನಟರ ಸಿನಿಮಾಗಳಿಗಿಂತಲೂ ಹೆಚ್ಚು ವೀಕ್ಷಣೆಯನ್ನು ಸಹ ದಕ್ಷಿಣ ಭಾರತದ ನಟರ ಸಿನಿಮಾಗಳು ಪಡೆಯುತ್ತಿವೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲ ಅಲ್ಲು ಅರ್ಜುನ್ ಅವರಿಗೆ ಬಾಲಿವುಡ್ ಸಿನಿಮಾಗಳಿಂದ ಆಫರ್‌ಗಳು ಬರಲು ಆರಂಭವಾಗಿದೆಯಂತೆ. ಒಂದು ಪ್ರಮುಖ ನಿರ್ಮಾಣ ಸಂಸ್ಥೆಯೊಂದಿಗೆ ಮಾತುಕತೆ ಚಾಲ್ತಿಯಲ್ಲಿದೆ!

    ಸ್ಯಾಟಲೈಟ್ ಹಕ್ಕಿಗೆ ಇನ್ನೂ ದೊಡ್ಡ ಮೊತ್ತ!

    ಸ್ಯಾಟಲೈಟ್ ಹಕ್ಕಿಗೆ ಇನ್ನೂ ದೊಡ್ಡ ಮೊತ್ತ!

    ಒಟಿಟಿಯಲ್ಲಿ ಮಾತ್ರವೇ ಅಲ್ಲ 'ಪುಷ್ಪ' ಸಿನಿಮಾದ ಟಿವಿ ಸ್ಯಾಟಲೈಟ್ ಹಕ್ಕುಗಳು ಸಹ ಭಾರಿ ದೊಡ್ಡ ಮೊತ್ತಕ್ಕೆ ಮಾರಾಟವಾಗಿದೆ. ಒಟಿಟಿಗಿಂತಲೂ ದೊಡ್ಡ ಬೆಲೆಗೆ ಟಿವಿ ಸ್ಯಾಟಲೈಟ್ ಹಕ್ಕು ಮಾರಾಟವಾಗಿದೆ! ಸಿನಿಮಾವನ್ನು ಸನ್ ನೆಟ್‌ವರ್ಕ್ ಖರೀದಿ ಮಾಡಿದೆ ಎನ್ನಲಾಗುತ್ತಿದೆ. ಒಟಿಟಿಯಲ್ಲಿ 'ಪುಷ್ಪ' ಬಿಡುಗಡೆ ಆದ ಒಂದು ತಿಂಗಳ ಬಳಿಕ ಟಿವಿಯಲ್ಲಿ ಸಿನಿಮಾವನ್ನು ಪ್ರಸಾರ ಮಾಡುವಂತೆ ಒಪ್ಪಂದ ಮಾಡಿಕೊಳ್ಳಲಾಗಿದೆ.

    'ಪುಷ್ಪ' ಎರಡನೇ ಭಾಗ ಏಪ್ರಿಲ್‌ನಲ್ಲಿ ತೆರೆಗೆ?

    'ಪುಷ್ಪ' ಎರಡನೇ ಭಾಗ ಏಪ್ರಿಲ್‌ನಲ್ಲಿ ತೆರೆಗೆ?

    'ಪುಷ್ಪ' ಸಿನಿಮಾವು ರಕ್ತ ಚಂದನ ಕಳ್ಳಸಾಗಣೆ ಮಾಡುವ ವ್ಯಕ್ತಿಯ ಕತೆಯನ್ನು ಹೊಂದಿದೆ. ಸಿನಿಮಾದಲ್ಲಿ ಅಲ್ಲು ಅರ್ಜುನ್ ಎದುರು ಕನ್ನಡತಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಸಿನಿಮಾದಲ್ಲಿ ಕನ್ನಡಿಗ ಡಾಲಿ ಧನಂಜಯ್ ಸಹ ನಟಿಸಿದ್ದಾರೆ. ಹಾಸ್ಯನಟ ಸುನಿಲ್, ಮಲಯಾಳಂನ ಸ್ಟಾರ್ ನಟ ಫಹಾದ್ ಫಾಸಿಲ್ ಮುಖ್ಯ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾವನ್ನು ಹಿಟ್ ನಿರ್ದೇಶಕ ಸುಕುಮಾರ್ ನಿರ್ದೇಶನ ಮಾಡಿದ್ದಾರೆ. 'ಪುಷ್ಪ' ಸಿನಿಮಾದ ಮೊದಲ ಭಾಗವಷ್ಟೆ ಇದೀಗ ಬಿಡುಗಡೆ ಆಗಿದೆ. 'ಪುಷ್ಪ' ಸಿನಿಮಾದ ಎರಡನೇ ಭಾಗ ಏಪ್ರಿಲ್ ತಿಂಗಳ ವೇಳೆಗೆ ಬಿಡುಗಡೆ ಆಗಲಿದೆ. 'ಪುಷ್ಪ' ಸಿನಿಮಾದ ಎರಡನೇ ಭಾಗದಲ್ಲಿ ಡಾಲಿ ಧನಂಜಯ್‌ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಸಿಗಲಿದೆ ಎನ್ನಲಾಗುತ್ತಿದೆ.

    English summary
    Amazon prime paid whooping money for Allu Arjun's Pushpa movie. Movie will stream on amazon prime on January 07.
    Friday, January 7, 2022, 9:14
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X