twitter
    For Quick Alerts
    ALLOW NOTIFICATIONS  
    For Daily Alerts

    ಭಾರತೀಯ ಬಳಕೆದಾರರಿಗೆ ಶಾಕ್ ನೀಡಿದ ಅಮೆಜಾನ್ ಪ್ರೈಂ

    |

    ಒಟಿಟಿ ದೈತ್ಯ ಅಮೆಜಾನ್ ಪ್ರೈಂ ಭಾರತೀಯ ಬಳಕೆದಾರರಿಗೆ ಚಂದಾದಾರಿಕೆಯಲ್ಲಿ ಬದಲಾವಣೆಯನ್ನು ಮಾಡಿದೆ.

    ಅಮೆಜಾನ್ ಪ್ರೈಂಗೆ ಕಡಿಮೆ ಹಣ ತೆತ್ತು ಒಂದು ತಿಂಗಳ ಮಟ್ಟಿಗೆ ಚಂದಾದಾರರಾಗಿ ಸಿನಿಮಾ, ವೆಬ್ ಸರಣಿಗಳನ್ನು ವೀಕ್ಷಿಸಬಹುದಾದ ಅವಕಾಶ ಇತ್ತು. ಅದನ್ನು ರದ್ದು ಮಾಡಿದೆ ಅಮೆಜಾನ್ ಪ್ರೈಂ. ರಿಸರ್ವ್‌ ಬ್ಯಾಂಕ್ ಆಫ್ ಇಂಡಿಯಾದ ಹೊಸ ನಿರ್ದೇಶನದ ಕಾರಣ ಅಮೆಜಾನ್ ಪ್ರೈಂ ಈ ನಿರ್ಣಯ ಕೈಗೊಂಡಿದೆ.

    ಆಟೋಮೇಟೆಡ್ ಟ್ರ್ಯಾನ್ಸಾಕ್ಷನ್‌ಗಳನ್ನು ಮಾಡಬಾರದೆಂದು ಬ್ಯಾಂಕುಗಳಿಗೆ ಆರ್‌ಬಿಐ ಸೂಚಿಸಿದ್ದು, ಅದೇ ಕಾರಣದಿಂದ ಇನ್ನು ಮುಂದೆ ತಿಂಗಳ ಚಂದಾದಾರಿಕೆ ನಿಲ್ಲಿಸಿ ಅದರ ಬದಲಿಗೆ ಮೂರು ತಿಂಗಳು ಹಾಗೂ ವರ್ಷದ ಸಬ್‌ಸ್ಕ್ರಿಪ್ಷನ್ ಅನ್ನು ಮಾತ್ರವೇ ಬಳಸುವಂತೆ ಅಮೆಜಾನ್ ಪ್ರೈಂ ಪ್ರಕಟಣೆ ಹೊರಡಿಸಿದೆ.

    Amazon Prime Stops Monthly Subscription In India

    ಅಮೆಜಾನ್ ಪ್ರೈಂನ ಒಂದು ತಿಂಗಳ ಸಬ್‌ಸ್ಕ್ರಿಪ್ಷನ್ ದರ 129 ರುಗಳಿತ್ತು. ಆದರೆ ಇನ್ನು ಮುಂದೆ ಇದರ ಬದಲಿಗೆ ಅಮೆಜಾನ್‌ ಪ್ರೈಂನ ಮೂರು ತಿಂಗಳ ಸಬ್‌ಸ್ಕ್ರಿಷನ್‌ಗೆ 299 ರು ನೀಡಬೇಕಾಗಿದೆ. ಅಥವಾ ಒಂದು ವರ್ಷದ ಸಬ್‌ಸ್ಕ್ರಿಪ್ಷನ್ ಪಡೆಯಲು 999 ರು ನೀಡಬೇಕಾಗಿರುತ್ತದೆ.

    ಪ್ರಸ್ತುತ ಚಾಲ್ತಿಯಲ್ಲಿರುವ ಒಂದು ತಿಂಗಳ ಪ್ಲಾನ್‌ಗಳು ತಿಂಗಳ ನಂತರ ನಿಂತು ಹೋಗಲಿವೆ. ಒಂದು ತಿಂಗಳ ಸಬ್‌ಸ್ಕ್ರಿಪ್ಷನ್ ಅನ್ನು ಏಪ್ರಿಲ್ 27 ರಿಂದಲೇ ರದ್ದು ಮಾಡಿ ಮೂರು ತಿಂಗಳ ಹಾಗೂ ವರ್ಷದ ಪ್ಲಾನ್‌ಗಳನ್ನಷ್ಟೆ ಚಾಲ್ತಿಯಲ್ಲಿ ಇಡಲಾಗಿದೆ. ಅಮೆಜಾನ್ ಪ್ರೈಂಗೆ ಭಾರತದಲ್ಲಿ ಸುಮಾರು 10 ಕೋಟಿ ಬಳಕೆದಾರರಿದ್ದಾರೆ.

    ನೆಟ್‌ಫ್ಲಿಕ್ಸ್‌ಗೆ ಹೋಲಿಸಿದರೆ ಭಾರತದ ಸ್ಥಳೀಯ ಕಂಟೆಂಟ್‌ ಅಮೆಜಾನ್ ಪ್ರೈಂನಲ್ಲಿ ಹೆಚ್ಚಿಗಿದೆ. ಹಿಂದಿ, ತೆಲುಗು, ತಮಿಳು, ಮಲಯಾಳಂ, ಕನ್ನಡ, ಮರಾಠಿ ಭಾಷೆಯ ಸಿನಿಮಾಗಳು, ವೆಬ್ ಸರಣಿಗಳು ಅಮೆಜಾನ್ ಪ್ರೈಂನಲ್ಲಿ ಹೆಚ್ಚು. ನೆಟ್‌ಫ್ಲಿಕ್ಸ್‌ಗೆ ಹೋಲಿಸಿದರೆ ಬೆಲೆ ಸಹ ಬಹಳ ಕಡಿಮೆ ಇರುವ ಕಾರಣ ಸಹಜವಾಗಿಯೇ ಅಮೆಜಾನ್ ಪ್ರೈಂ ಭಾರತೀಯರ ಮೆಚ್ಚಿನ ಒಟಿಟಿ ಆಗಿದೆ.

    English summary
    Amazon prime stop monthly subscription in India due to new guidelines of RBI. Users may continue watching by taking three month or one year subscription.
    Monday, May 17, 2021, 17:04
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X