twitter
    For Quick Alerts
    ALLOW NOTIFICATIONS  
    For Daily Alerts

    'ತಾಂಡವ್' ಗಾಗಿ ಬೇಷರತ್ ಕ್ಷಮೆ ಕೇಳಿದ ಅಮೆಜಾನ್ ಪ್ರೈಂ

    |

    ಸೈಫ್ ಅಲಿ ಖಾನ್, ಡಿಂಪಲ್ ಕಪಾಡಿಯಾ, ಸುನಿಲ್ ಗ್ರೋವರ್ ಇನ್ನೂ ಹಲವರು ನಟಿಸಿದ್ದ ಹಿಂದಿ ರಾಜಕೀಯ ವೆಬ್ ಸರಣಿ 'ತಾಂಡವ್' ಅನ್ನು ಪ್ರಸಾರ ಮಾಡಿದ್ದಕ್ಕೆ ಒಟಿಟಿ ಅಮೆಜಾನ್ ಪ್ರೈಂ ಇಂಡಿಯಾ ಕ್ಷಮೆ ಕೇಳಿದೆ.

    'ತಾಂಡವ್' ವೆಬ್ ಸರಣಿಯಲ್ಲಿ ಹಿಂದು ಭಾವನೆಗಳಿಗೆ ಧಕ್ಕೆ ಆಗುವ ಸನ್ನಿವೇಶಗಳಿವೆ ಎಂದು ಹಲವಾರು ಮಂದಿ ದೂರು ದಾಖಲಿಸಿದ್ದು. ಬಿಜೆಪಿ ಸಚಿವರೇ ಒಬ್ಬರು ಈ ಬಗ್ಗೆ ದೂರು ದಾಖಲಿಸಿದ್ದು ವರದಿ ಆಗಿತ್ತು. ತಾಂಡವ್ ನಿರ್ದೇಶಕ,ನಿರ್ಮಾಪಕರ ಮೇಲೆ ಪ್ರಕರಣ ದಾಖಲಾಗಿದೆ.

    'ತಾಂಡವ್' ವೆಬ್ ಸರಣಿಯು ಅಮೆಜಾನ್ ಪ್ರೈಂ ನಲ್ಲಿ ಬಿಡುಗಡೆ ಆಗಿತ್ತು. ಇದೀಗ ಅಮೆಜಾನ್ ಪ್ರೈಂ ಅಧಿಕೃತ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು. 'ಪ್ರೇಕ್ಷಕರಿಗೆ ಭಾವನೆಗೆ ಧಕ್ಕೆ ತರುವಂಥಹಾ ದೃಶ್ಯಗಳುಳ್ಳ ವೆಬ್ ಸರಣಿ ಪ್ರಸಾರ ಮಾಡಿದ್ದಕ್ಕೆ ಕ್ಷಮೆ ಕೇಳುತ್ತಿದ್ದೇವೆ' ಎಂದು ಪತ್ರಿಕಾಪ್ರಕಟಣೆಯಲ್ಲಿ ಹೇಳಿದೆ.

    Amazon Prime Unconditional Apology For Tandav Web Series

    'ಪ್ರೇಕ್ಷಕರ ಭಾವನೆಗೆ ಧಕ್ಕೆ ತರುವಂಥಹಾ ದೃಶ್ಯಗಳು ವೆಬ್ ಸರಣಿಯಲ್ಲಿರುವುದು ನಮ್ಮ ಗಮನಕ್ಕೆ ಬಂದ ಕೂಡಲೇ ಆ ದೃಶ್ಯಗಳನ್ನು ಡಿಲೀಟ್ ಮಾಡಿದ್ದೇವೆ. ಎಡಿಟ್ ಮಾಡಿದ್ದೆವೆ. ನಾವು ನಮ್ಮ ಪ್ರೇಕ್ಷಕರ ಭಾವನೆಗಳನ್ನು ಗೌರವಿಸುತ್ತೇವೆ. ಆ ದೃಶ್ಯಗಳಿಂದ ಯಾರ ಭಾವನೆಗಾದರೂ ಧಕ್ಕೆಯಾಗಿದ್ದಲ್ಲಿ ಬೇಷರತ್‌ ಕ್ಷಮೆಯನ್ನು ನಾವು ಕೇಳುತ್ತೇವೆ' ಎಂದಿದೆ ಅಮೆಜಾನ್ ಪ್ರೈಂ.

    'ಕಂಟೆಂಟ್ ಮೌಲ್ಯಮಾಪನ ಪದ್ಧತಿಯನ್ನು ನಮ್ಮ ಸಂಸ್ಥೆಯು ಮಾಡುತ್ತಲೇ ಬಂದಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಜವಾಬ್ದಾರಿಯುತವಾಗಿ ಪ್ರೇಕ್ಷಕರಿಗೆ ಮನೊರಂಜನೆ ಒದಗಿಸುತ್ತೇವೆ' ಎಂದು ಅಮೆಜಾನ್ ಪ್ರೈಂ ಹೇಳಿದೆ.

    'ತಾಂಡವ್' ವೆಬ್ ಸರಣಿಯು ರಾಜಕೀಯ ವಿಷಯವನ್ನಾಧರಿಸಿದ ವೆಬ್ ಸರಣಿ ಆಗಿತ್ತು. ವೆಬ್ ಸರಣಿಯಲ್ಲಿ ಜೆಎನ್‌ಯು ವಿಷಯವೂ ಇತ್ತು. ಪ್ರಸ್ತುತ ರಾಜಕೀಯದ ಕತೆಯೂ ಇತ್ತು. ಮುಖ್ಯವಾಗಿ ವೆಬ್ ಸರಣಿಯಲ್ಲಿ ಪಾತ್ರಧಾರಿಯೊಬ್ಬ ಶಿವನ ವೇಷ ಧರಿಸಿ ಅವಾಚ್ಯವಾಗಿ ಮಾತನಾಡುವ ದೃಶ್ಯಗಳಿದ್ದವು. ಅದಕ್ಕೆ ಭಾರಿ ವಿರೋಧ ವ್ಯಕ್ತವಾಯಿತು. ವಿರೋಧದ ಬಳಿಕ ಆ ದೃಶ್ಯಗಳನ್ನು ಡಿಲೀಟ್ ಮಾಡಲಾಯಿತು.

    English summary
    Amazon prime video release unconditional apology for telecasting Tandav web series.
    Wednesday, March 3, 2021, 8:58
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X