twitter
    For Quick Alerts
    ALLOW NOTIFICATIONS  
    For Daily Alerts

    ಅಮೆಜಾನ್ ಪ್ರೈಮ್ ವಿಡಿಯೋ ಮೊದಲ ಕನ್ನಡ ಚಿತ್ರ ''ಲಾ'' ವಿಶೇಷಗಳೇನು?

    By ಜೇಮ್ಸ್ ಮಾರ್ಟಿನ್
    |

    ಕನ್ನಡದ ಬಹುನಿರೀಕ್ಷಿತ 'ಲಾ' ಸಿನಿಮಾವು ಜುಲೈ 17ರಂದು ಪ್ರದರ್ಶನಗೊಳ್ಳಲಿದೆ ಎಂದು ಪವರ್ ಸ್ಟಾರ್ ಪುನೀತ್ ಟ್ವೀಟ್, ಅಮೆಜಾನ್ ಪ್ರೈಮ್ ವಿಡಿಯೋ ಇಂಡಿಯಾ ಟ್ವೀಟ್ ಮಾಡಿದ ಸುದ್ದಿ ಓದಿರುತ್ತೀರಿ. ಅಮೆಜಾನ್ ಪ್ರೈಮ್ ಒಟಿಟಿಯಲ್ಲಿ ಪ್ರದರ್ಶನವಾಗುತ್ತಿರುವ ಮೊದಲ ಕನ್ನಡ ಚಿತ್ರವಾಗಿ ''ಲಾ'' ಹೊರಹೊಮ್ಮಿದೆ.

    ನಂದಿನಿ ಪಾತ್ರಧಾರಿಯಾಗಿ ನಟ ಪ್ರಜ್ವಲ್ ದೇವರಾಜ್ ಅವರ ಪತ್ನಿ ರಾಗಿಣಿ ಪ್ರಜ್ವಲ್ ಅಭಿನಯಿಸಿದ್ದಾರೆ. ನ್ಯಾಯಕ್ಕಾಗಿ ಅಪರಾಧದ ವಿರುದ್ಧ ಹೋರಾಡುವ ಕತೆ ಇದಾಗಿದ್ದು, ಈ ಚಿತ್ರವು ಮಹಿಳೆಯರ ಮೇಲಿನ ಅನ್ಯಾಯ ಮತ್ತು ಅಪರಾಧದ ವಿರುದ್ಧ ಧ್ವನಿ ಎತ್ತುತ್ತದೆ. ಅಶ್ವಿನಿ ಪುನೀತ್ ರಾಜ್ ಕುಮಾರ್, ಎಂ ಗೋವಿಂದ ನಿರ್ಮಾಣದ 'ಲಾ' ಸಿನಿಮಾವನ್ನು ರಘು ಸಮರ್ಥ ಅವರು ನಿರ್ದೇಶಿಸಿದ್ದಾರೆ. ಮುಖ್ಯಮಂತ್ರಿ ಚಂದ್ರು, ಅಚ್ಯುತ್ ಕುಮಾರ್, ಸುಧಾರಾಣಿ , ಸಿರಿ ಪ್ರಹ್ಲಾದ್ ಮತ್ತಿತರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.

    ಲಾ ಸಿನಿಮಾ ರಿಲೀಸ್ ಬಗ್ಗೆ ಎಲ್ಲಿಯೂ ಪ್ರಮೋಷನ್ ಮಾಡಿರಲಿಲ್ಲ. ಸಿನಿಮಾ ಯಾವಾಗ ರಿಲೀಸ್ ಆಗುತ್ತಿದೆ ಎಂಬುದು ಗೊಂದಲವಾಗಿತ್ತು. ಆದರೆ, ನಂತರ ಬಿಡುಗಡೆ ದಿನಾಂಕ ಪ್ರಕಟಿಸಲಾಗಿದೆ.
    ಈ ಮೊದಲು ಕವಲುದಾರಿ ಮತ್ತು ಮಯಾಬಜಾರ್ ಎರಡೂ ಸಿನಿಮಾಗಳು ಅಪ್ಪು ಬ್ಯಾನರ್ ನಿಂದ ತೆರೆಕಂಡಿವೆ. ವಿಭಿನ್ನ ಮತ್ತು ವಿನೂತನ ವಿಷಯಕ್ಕೆ ಹೆಚ್ಚು ಒತ್ತು ನೀಡುವ ಜೊತೆಗೆ ಪಿ ಆರ್ ಕೆ ಬ್ಯಾನರ್ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುತ್ತಿದೆ. ಕವಲುದಾರಿ ಮತ್ತು ಮಯಾಬಜಾರ್ ಸಿನಿಮಾಗಳು ಉತ್ತಮ ಪ್ರದರ್ಶನ ಕಂಡಿದ್ದು, ಲಾ ಬಗ್ಗೆ ಪ್ರೇಕ್ಷಕರಿಗೆ ಸಹಜ ಕುತೂಹಲವಿದೆ.

    ಏನ್ ''ಲಾ'' ವಿಶೇಷ:

    ಏನ್ ''ಲಾ'' ವಿಶೇಷ:

    * ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಪತ್ನಿ ಅಶ್ವಿನಿ ಅವರು ನಿರ್ಮಿಸಿರುವ ಈ ಕ್ರೈಂ ಥಿಲ್ಲರ್ ಆಧರಿಸಿದ ಸಿನಿಮಾವು ನೇರವಾಗಿ ವೀಕ್ಷಕರಿಗೆ ಲಭ್ಯವಾಗುವ ಒಟಿಟಿಯ ಮೊದಲ ಸಿನಿಮಾವಾಗಿದೆ. ಮೊದಲೆರಡು ಚಿತ್ರಗಳಾದ ಕವಲುದಾರಿ ಮತ್ತು ಮಯಾಬಜಾರ್ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡು ನಂತರ ಒಟಿಟಿಯಲ್ಲಿ ಕಾಣಿಸಿಕೊಂಡು ವೀಕ್ಷಕರ ಮೆಚ್ಚುಗೆ ಪಡೆದಿವೆ.

    ರಾಗಿಣಿ ಪ್ರಜ್ವಲ್ ಮೊದಲ ಸಿನಿಮಾ

    ರಾಗಿಣಿ ಪ್ರಜ್ವಲ್ ಮೊದಲ ಸಿನಿಮಾ

    * ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಪ್ರಜ್ವಲ್ ಅವರು ಈ ಸಿನಿಮಾದ ಮೂಲಕ ಪ್ರಮುಖ ನಟಿಯಾಗಿ ಸ್ಯಾಂಡಲ್ ವುಡ್ ಪ್ರವೇಶಿಸಿದ್ದಾರೆ. ಇದಕ್ಕೂ ಮುನ್ನ 'ರಿಷಭ ಪ್ರಿಯ' ಎಂಬ ಕಿರುಚಿತ್ರದಲ್ಲಿ ರಾಗಿಣಿ ಅಭಿನಯಿಸಿದ್ದರು.

    * ಒಟಿಟಿ ರಿಲೀಸ್ ಮೂಲಕ ಮುಖ್ಯ ಭೂಮಿಕೆಯಲ್ಲಿ ಪದಾರ್ಪಣೆ ಮಾಡಿದ ಮೊದಲ ನಟಿ ಎನಿಸಿಕೊಂಡಿದ್ದಾರೆ. ಲಾಕ್ಡೌನ್ ನಂತರ ಬರುತ್ತಿರುವ ಮೊದಲ ಚಿತ್ರದ ನಾಯಕಿಯಾಗಿದ್ದಾರೆ.

    ಒಟಿಟಿ ಮೊದಲ ಡಿಜಿಟಲ್ ಚಿತ್ರ

    ಒಟಿಟಿ ಮೊದಲ ಡಿಜಿಟಲ್ ಚಿತ್ರ

    *‘ಲಾ' ಸಿನಿಮಾವು ಸ್ಯಾಂಡಲ್ ವುಡ್ ಇಂಡಸ್ಟ್ರಿಯಿಂದ ಬಿಡುಗಡೆಯಾಗಲಿರುವ ಮೊದಲ ಡಿಜಿಟಲ್ ಚಿತ್ರವಾಗಿದೆ. ಅಮೆಜಾನ್ ಪ್ರೈಮ್, ನೆಟ್ ಫ್ಲಿಕ್ಸ್ ನಂಥ ಅಂತಾರಾಷ್ಟ್ರೀಯ ಮಟ್ಟದ ವಿಡಿಯೋ ಸ್ಟ್ರೀಮಿಂಗ್, ಒಟಿಟಿ ವೇದಿಕೆಯಲ್ಲಿ ಕನ್ನಡ ಚಿತ್ರವೊಂಡು ಬಿಡುಗಡೆಯಾಗುತ್ತಿದ್ದು, ಕನ್ನಡ ಚಿತ್ರರಂಗವು ಹೊಸ ಸಾಧ್ಯತೆಗೆ ಬಾಗಿಲು ತೆರೆದುಕೊಂಡಿದೆ.

    ಲಾಕ್ ಡೌನ್ ನಂತರ ಬರುತ್ತಿರುವ ಸಿನಿಮಾ

    ಲಾಕ್ ಡೌನ್ ನಂತರ ಬರುತ್ತಿರುವ ಸಿನಿಮಾ

    * ಲಾಕ್ ಡೌನ್ ನಂತರ ಬರುತ್ತಿರುವ ಮೊದಲ ಕನ್ನಡ ಸಿನಿಮಾ
    * ಒಟಿಟಿ ಮೂಲಕ ಒಮ್ಮೆಗೆ ವಿಶ್ವದಾದ್ಯಂತ 200ಕ್ಕೂ ಹೆಚ್ಚು ದೇಶ ಹಾಗೂ ಪ್ರಾಂತ್ರ್ಯದಲ್ಲಿ ಬಿಡುಗಡೆಯಾಗುತ್ತಿರುವ ಮೊದಲ ಸಿನಿಮಾ ಇದಾಗಿದೆ.

    English summary
    Amazon Prime Video today announced that the much-awaited Kannada film Law, will now premiere on 17th July. The crime-thriller Law is produced by Ashwini Puneeth Rajkumar has created many records.
    Friday, June 26, 2020, 12:03
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X