'ದಿ ಮಿರ್ಜಾ ಮಲಿಕ್ ಶೋ'ಗಾಗಿ ಸಾನಿಯಾ - ಶೋಯೆಬ್ ಡಿವೋರ್ಸ್ ವದಂತಿ ಹಬ್ಬಿಸಿದ್ರಾ?

ಕಳೆದೊಂದು ವಾರದಿಂದ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಹಾಗೂ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯಬ್ ಮಲಿಕ್ ದಂಪತಿ ವಿಚ್ಛೇದನ ಪಡೆದು ದೂರಾಗುತ್ತಿದ್ದಾರೆ ಎನ್ನುವ ಗುಸುಗುಸು ಕೇಳಿ ಬಂದಿತ್ತು. ಕಹಾನಿಯಲ್ಲಿ ಟ್ವಿಸ್ಟ್ ಎನ್ನುವಂತೆ ಇದೀಗ ಇಬ್ಬರು ಸೇರಿ ಉರ್ದು ಓಟಿಟಿ ಫ್ಲಾಟ್‌ಫಾರ್ಮ್‌ಗಾಗಿ ಒಂದು ಟಾಕ್ ಶೋ ನಡೆಸಿಕೊಡುವ ಸುದ್ದಿ ಹೊರ ಬಿದ್ದಿದೆ. ಇದನ್ನು ನೋಡಿ ಬಿಟ್ಟಿ ಪಬ್ಲಿಸಿಟಿಗಾಗಿ ಡಿವೋರ್ಸ್ ಸುದ್ದಿ ಹಬ್ಬಿಸಿದ್ರಾ? ಎಂದು ಕೇಳುತ್ತಿದ್ದಾರೆ.

ಇತ್ತೀಚೆಗೆ ಸಾನಿಯಾ ಮಿರ್ಜಾ ಮಾಡಿದ್ದ ಒಂದೆರಡು ಇನ್‌ಸ್ಟಾ ಪೋಸ್ಟ್‌ಗಳು ಡಿವೋರ್ಸ್ ಬಗ್ಗೆ ಅನುಮಾನ ಮೂಡುವಂತೆ ಮಾಡಿತ್ತು. ಪಾಕಿಸ್ತಾನದ ಜಿಯೋ ನ್ಯೂಸ್ ಈ ಬಗ್ಗೆ ಸುದ್ದಿ ಪ್ರಕಟಿಸಿತ್ತು. ಹಾಗಾಗಿ ಸಹಜವಾಗಿಯೇ ಈ ಸುದ್ದಿ ನಿಜ ಎನ್ನುವ ಲೆಕ್ಕಾಚಾರ ಶುರುವಾಗಿತ್ತು. ಇನ್ನು ಸಾನಿಯಾ, ಶೋಯೆಬ್ ಕೂಡ ಈ ಬಗ್ಗೆ ಎಲ್ಲೂ ಮಾತನಾಡುವ ಗೋಜಿಗೇ ಹೋಗಿರಲಿಲ್ಲ. ಹಾಗಾಗಿ ಅನುಮಾನದ ಹುತ್ತ ಬೆಳೆದಿತ್ತು. ಆದರೆ ಈಗ ದಿಢೀರನೆ ಉರ್ದು ಫ್ಲಿಕ್ಸ್ 'ದಿ ಮಿರ್ಜಾ ಮಲಿಕ್ ಶೋ' ಎನ್ನುವ ಟಾಕ್ ಶೋ ಘೋಷಣೆ ಮಾಡಿದೆ. ಪೋಸ್ಟರ್‌ನಲ್ಲಿ ಪತಿಯ ಭುಜದ ಮೇಲೆ ಕೈ ಹಾಕಿ ಸಾನಿಯಾ ಮಿರ್ಜಾ ಪೋಸ್ ಕೊಟ್ಟಿದ್ದಾರೆ.

ಪೋಸ್ಟರ್‌ನಲ್ಲಿ ಬುರ್ಜ್‌ ಖಲೀಫಾವನ್ನು ನೋಡಬಹುದು. ಹಾಗಾಗಿ ಈ ಶೋ ಕಂಪ್ಲೀಟ್ ಆಗಿ ದುಬೈನಲ್ಲಿ ಚಿತ್ರೀಕರಣವಾಗುವ ಸುಳಿವು ಸಿಗುತ್ತಿದೆ. ಒಟ್ನಲ್ಲಿ ಈ ಸುದ್ದಿ ಕೇಳಿ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ. 'ನಿಮ್ಮಬ್ಬರನ್ನು ಹೀಗೆ ನೋಡುವುದು ಖುಷಿ ಅನ್ನಿಸ್ತಿದೆ. ಹೀಗೆ ಒಟ್ಟಾಗಿರಿ' ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

 'ದಿ ಮಿರ್ಜಾ ಮಲಿಕ್ ಶೋ'

'ದಿ ಮಿರ್ಜಾ ಮಲಿಕ್ ಶೋ'

ಸದ್ಯ ಎಲ್ಲಾ ಕಡೆ ಓಟಿಟಿಗಳ ಟ್ರೆಂಡ್ ನಡೀತಿದೆ. ಚಂದಾದಾರರನ್ನು ಉಳಿಸಿಕೊಳ್ಳಲು ಹಾಗೂ ಹೆಚ್ಚಿಸಿಕೊಳ್ಳಲು ಸಿನಿಮಾಗಳ ಜೊತೆಗೆ ಭಿನ್ನ ವಿಭಿನ್ನ ಶೋಗಳನ್ನು ಪ್ರಸಾರ ಮಾಡಲಾಗುತ್ತಿದೆ. ಅದರಲ್ಲಿ ಟಾಕ್‌ ಶೋಗಳು ಕೂಡ ಇದೆ. 'ದಿ ಮಿರ್ಜಾ ಮಲಿಕ್ ಶೋ' ಕೂಡ ಟಾಕ್ ಶೋ ರೀತಿ ಕಾಣುತ್ತಿದೆ. ಇದರ ಕಾನ್ಸೆಪ್ಟ್ ಏನು ಎನ್ನುವುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಒಟ್ನಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮಲಿಕ್ ದಂಪತಿ ಸೇರಿ ಹೋಸ್ಟ್ ಮಾಡುತ್ತಿರುವುದರಿಂದ ಸಹಜವಾಗಿಯೇ ಶೋ ಕುತೂಹಲ ಕೆರಳಿಸಿದೆ.

 ಡಿವೋರ್ಸ್ ಸುದ್ದಿಯಲ್ಲಿ ಪಾಕ್ ನಟಿ ಹೆಸರು

ಡಿವೋರ್ಸ್ ಸುದ್ದಿಯಲ್ಲಿ ಪಾಕ್ ನಟಿ ಹೆಸರು

ಇನ್ನು ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮಲಿಕ್ ದಾಂಪತ್ಯದಲ್ಲಿ ಬಿರುಕು ಮೂಡಲು ಪಾಕ್ ನಟಿ ಆಯೇಷಾ ಓಮರ್ ಕಾರಣ ಎನ್ನುವ ವಂದತಿ ಹರಿದಾಡಿತ್ತು. ಯಾಕೆಂದರೆ ಈ ಹಿಂದೆ ಶೋಯೆಬ್ ಹಾಗೂ ಆಯೇಷಾ ಒಂದು ಫೋಟೊಶೂಟ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಹಾಗಾಗಿ ಇಂತಾದೊಂದು ಸುದ್ದಿಗೆ ರೆಕ್ಕೆಪುಕ್ಕ ಬಂದಿತ್ತು. ಆದರೆ ಈಗ ಡಿವೋರ್ಸ್ ಸುದ್ದಿಯೇ ಸುಳ್ಳು ಎನ್ನುವುದು ಗೊತ್ತಾಗುತ್ತಿದೆ. ಆಯೇಷಾ ಸಾಕಷ್ಟು ಉರ್ದು ಸಿನಿಮಾಗಳಲ್ಲಿ ಕಿರುತೆರೆ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾಳೆ.

 ದೇಶದ ಗಡಿ ದಾಟಿದ ಲವ್ ಸ್ಟೋರಿ!

ದೇಶದ ಗಡಿ ದಾಟಿದ ಲವ್ ಸ್ಟೋರಿ!

ಹೊಬಾರ್ಟ್‌ ಓಪನ್‌ ಸಲುವಾಗಿ ಸಾನಿಯಾ ಮಿರ್ಜಾ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದ ಸಂದರ್ಭದಲ್ಲಿ ಇಬ್ಬರ ನಡುವೆ ಲವ್‌ ಸ್ಟೋರಿ ಶುರುವಾಯಿತಂತೆ. ಅಲ್ಲೇ ರೆಸ್ಟೋರೆಂಟ್‌ವೊಂದರಲ್ಲಿ ಇಬ್ಬರು ಮೊದಲ ಬಾರಿಗೆ ಭೇಟಿ ಆಗಿದ್ದರು. ಏಪ್ರಿಲ್ 12, 2010ರಲ್ಲಿ ಹೈದರಾಬಾದ್‌ನ ತಾಜ್ ಕೃಷ್ಣ ಹೋಟೆಲ್‌ನಲ್ಲಿ ಸಾನಿಯಾ- ಶೋಯೆಬ್ ಮದುವೆ ನೆರವೇರಿತ್ತು. ಪಾಕಿಸ್ತಾನದಲ್ಲಿ ಡಿಸೆಪ್ಷನ್ ಪಾರ್ಟಿ ನಡೆದಿತ್ತು.

 ಡಿವೋರ್ಸ್ ಗಾಸಿಪ್ ಹುಟ್ಟಿಕೊಂಡಿದ್ದೇಗೆ?

ಡಿವೋರ್ಸ್ ಗಾಸಿಪ್ ಹುಟ್ಟಿಕೊಂಡಿದ್ದೇಗೆ?

"ಹೃದಯ ಒಡೆದು ಹೋದ ಬಳಿಕ ಎಲ್ಲಿಗೆ ಹೋಗಬೇಕು? ಅಲ್ಲಾನ ಹುಡುಕಲು ಹೋಗಬೇಕೆ?" ಎಂದು ಸಾನಿಯಾ ಮಿರ್ಜಾ ಇತ್ತೀಚೆಗೆ ಇನ್‌ಸ್ಟಾ ಸ್ಟೋರಿಯಲ್ಲಿ ಬರೆದುಕೊಂಡಿದ್ದರು. ನಂತರ ಮಗ ಇಝ್ಹಾ ನ್‌ ಮಿರ್ಜಾ ಮಲಿಕ್‌ ಜೊತೆಗಿನ ಫೋಟೊ ಶೇರ್ ಮಾಡಿ "ನನ್ನ ಕಠಿಣ ದಿನಗಳನ್ನು ಕಳೆಯುವ ಕ್ಷಣಗಳಿವು" ಎಂದು ಬರೆದುಕೊಂಡಿದ್ದರು. ಈ ಎರಡು ಪೋಸ್ಟ್‌ಗಳು ಸಾನಿಯಾ ಹಾಗೂ ಶೇಯೆಬ್ ದೂರಾಗುತ್ತಿದ್ದಾರೆ. ಡಿವೋರ್ಸ್ ಪಡೆದುಕೊಳ್ಳುತ್ತಿದ್ದಾರೆ ಎನ್ನುವ ಊಹಾಪೋಹಕ್ಕೆ ಕಾರಣವಾಗಿತ್ತು.

More from Filmibeat

English summary
Amid divorce rumours Sania Mirza, Shoaib Malik announce The Mirza Malik Show together For Urduflix. Shooting of the show is going to start this month in UAE. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X