Kaatera OTT: ಫೆಬ್ರವರಿ 2ನೇ ವಾರವೇ 'ಕಾಟೇರ' ಡಿಜಿಟಲ್ ಸ್ಟ್ರೀಮಿಂಗ್?

ಕನ್ನಡದ ಎಲ್ಲಾ ಸಿನಿಮಾಗಳ ದಾಖಲೆಯನ್ನು ಮುರಿದು 'ಕಾಟೇರ' ಗೆಲುವಿನ ಓಟ ಮುಂದುವರೆದಿದೆ. 20ನೇ ದಿನವೂ ಸಿನಿಮಾ ಕೆಲವೆಡೆ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ತರುಣ್ ನಿರ್ದೇಶನ, ದರ್ಶನ್ ನಟನೆಗೆ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದಾರೆ. ಸಾಮಾನ್ಯ ಪ್ರೇಕ್ಷಕರು ಕೂಡ ಫ್ಯಾಮಿಲಿ ಸಮೇತ ಬಂದು ಸಿನಿಮಾ ನೋಡುತ್ತಿದ್ದಾರೆ.

18 ದಿನಕ್ಕೆ ಸಿನಿಮಾ 190 ಕೋಟಿ ರೂ. ಗಳಿಕೆ ಕಂಡು ಬಾಕ್ಸಾಫೀಸ್ ಶೇಕ್ ಮಾಡ್ತಿದೆ. 'ಕಾಂತಾರ', 'KGF' ಸಿನಿಮಾಗಳ ಕನ್ನಡ ವರ್ಷನ್ ದಾಖಲೆ ಮುರಿದು 'ಕಾಟೇರ' ಸದ್ದು ಮಾಡ್ತಿದೆ ಎನ್ನುವ ಚರ್ಚೆ ನಡೀತಿದೆ. ನಟ ದರ್ಶನ್ ಕರಿಯರ್‌ನಲ್ಲೇ ಬಿಗ್ಗೆಸ್ಟ್ ಬ್ಲಾಕ್‌ಬಸ್ಟರ್ ಸಿನಿಮಾ ಎನಿಸಿಕೊಂಡಿದೆ. ಸಿನಿಮಾ ಶೀಘ್ರದಲ್ಲೇ 200 ಕೋಟಿ ರೂ. ಗಳಿಕೆ ಕಾಣುವ ಲೆಕ್ಕಾಚಾರ ನಡೀತಿದೆ. ಅಭಿಮಾನಿಗಳು 'ಕಾಟೇರ'ನ ಆರ್ಭಟವನ್ನು ಸಂಭ್ರಮಿಸುತ್ತಿದ್ದಾರೆ.

Amid Kaateras success, OTT Release Delayed

ಡಿಸೆಂಬರ್ 29ಕ್ಕೆ 'ಕಾಟೇರ' ಸಿನಿಮಾ ತೆರಗಪ್ಪಳಿಸಿತ್ತು. ಚಿತ್ರತಂಡ ತಮ್ಮ ಕೆಲಸದ ಮೇಲೆ ಬಹಳ ಭರವಸೆಯಿಂದ ಇತ್ತು. ತೆರೆಮೇಲೆ ಅದು ಅನಾವರಣವಾಗಿ ಮ್ಯಾಜಿಕ್ ಕ್ರಿಯೇಟ್ ಆಗಿತ್ತು. ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಹಳ್ಳಿಗಳ ಕಡೆ ಟ್ರ್ಯಾಕ್ಟರ್‌ಗಳಲ್ಲಿ ಬಂದು ಜನ ಸಿನಿಮಾ ವೀಕ್ಷಿಸಿದ್ದಾರೆ. ಕೆಲವರು ಸಿನಿಮಾ ನೋಡಿ ಭಾವುಕರಾಗಿದ್ದಾರೆ.

ಸದ್ಯ 'ಕಾಟೇರ' ಓಟಿಟಿ ರಿಲೀಸ್ ಬಗ್ಗೆ ಊಹಾಪೋಹ ಶುರುವಾಗಿದೆ. ಜೀ5 ಸಂಸ್ಥೆ ಸಿನಿಮಾ ಡಿಜಿಟಲ್ ರೈಟ್ಸ್ ಕೊಂಡುಕೊಂಡಿದೆ. ಸಾಮಾನ್ಯವಾಗಿ ಥಿಯೇಟರ್‌ನಲ್ಲಿ ತೆರೆಕಂಡ 45 ದಿನಗಳ ಬಳಿಕ ಓಟಿಟಿ ಸ್ಟ್ರೀಮಿಂಗ್‌ಗೆ ಒಪ್ಪಂದ ಆಗಿರುತ್ತದೆ. ಆ ಲೆಕ್ಕದಲ್ಲಿ ಫೆಬ್ರವರಿ 2ನೇ ವಾರ ಸಿನಿಮಾ ಸ್ಮಾಲ್‌ ಸ್ಕ್ರೀನ್‌ಗೆ ಬರುತ್ತದೆ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ನಡೀತಿದೆ. ಈ ಹಿಂದೆ ಕೂಡ ದರ್ಶನ್ ನಟನೆಯ ಸಿನಿಮಾಗಳು ತಿಂಗಳಿಗೂ ಮೊದಲೇ ಓಟಿಟಿಗೆ ಬಂದಿತ್ತು.

Amid Kaateras success, OTT Release Delayed

'ಕ್ರಾಂತಿ' ಸಿನಿಮಾ ತೆರೆಕಂಡ 28 ದಿನಕ್ಕೆ ಅಮೇಜಾನ್ ಪ್ರೈಂನಲ್ಲಿ ಸ್ಟ್ರೀಮಿಂಗ್ ಆಗಿತ್ತು. ಅಂದರೆ ತಿಂಗಳಿಗೂ ಮೊದಲೇ ಬಂದಂತಾಗಿತ್ತು. ಓಟಿಟಿ ಸಂಸ್ಥೆಗಳು ದೊಡ್ಡ ಮೊತ್ತದ ಹಣ ಕೊಡುವುದರಿಂದ ಇಂತಹ ಒಪ್ಪಂದಗಳು ನಡೆಯುತ್ತದೆ. ಆದರೆ 'ಕಾಟೇರ' ಸಿನಿಮಾ ಇಷ್ಟು ಬೇಗ ಓಟಿಟಿಗೆ ಬರುತ್ತಾ? ಇಲ್ವಾ? ಎನ್ನುವ ಗೊಂದಲ ಶುರುವಾಗಿದೆ. ಕೆಲವೊಮ್ಮೆ ಥಿಯೇಟರ್‌ಗಳಲ್ಲಿ ಬಹಳ ಚೆನ್ನಾಗಿ ಪ್ರದರ್ಶನ ಕಾಣುವ ಚಿತ್ರಗಳನ್ನು ತಡವಾಗಿ ಓಟಿಟಿ ತರುವ ಪ್ರಯತ್ನ ನಡೆಯುತ್ತದೆ.

'ಕಾಂತಾರ' ಸೇರಿದಂತೆ ಕೆಲ ಸಿನಿಮಾಗಳನ್ನು ಥಿಯೇಟರ್‌ನಲ್ಲಿ ಬಿಡುಗಡೆಯಾದ 47 ದಿನಗಳ ಬಳಿಕವೂ ಓಟಿಟಿಗೆ ಬಿಡಲಿಲ್ಲ. 'ಕಾಟೇರ' ಸಿನಿಮಾ ಕೂಡ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಶೀಘ್ರದಲ್ಲೇ 25 ದಿನ ಪೂರೈಸಲಿದೆ. ಹಾಗಾಗಿ ಸದ್ಯಕ್ಕೆ ಡಿಜಿಟಲ್ ಸ್ಟ್ರೀಮಿಂಗ್ ಸಾಧ್ಯವೇ ಇಲ್ಲ ಎನ್ನಲಾಗ್ತಿದೆ. ಚಿತ್ರತಂಡದ ಆಪ್ತ ಮೂಲಗಳು ಇದೇ ವಿಚಾರವನ್ನು ಹೇಳುತ್ತಿವೆ. ಫೆಬ್ರವರಿಯಲ್ಲಿ 'ಕಾಟೇರ' ಓಟಿಟಿ ರಿಲೀಸ್ ಅನುಮಾನ ಎನ್ನಲಾಗ್ತಿದೆ.

3ನೇ ವಾರವೂ 412 ಸಿಂಗಲ್ ಸ್ಕ್ರೀನ್ ಹಾಗೂ 72 ಮಲ್ಟಿಪ್ಲೆಕ್ಸ್‌ಗಳಲ್ಲಿ 'ಕಾಟೇರ' ಸಿನಿಮಾ ಪ್ರದರ್ಶನ ಕಾಣುತ್ತಿದೆ. ವೀಕೆಂಡ್ ಹಾಗೂ ಸಂಜೆಯ ಶೋಗಳು ಹೌಸ್‌ಫುಲ್ ಆಗುತ್ತಿದೆ. ಇನ್ನು ತೆಲುಗು, ತಮಿಳಿಗೂ ಚಿತ್ರವನ್ನು ಡಬ್ ಮಾಡಿ ರಿಲೀಸ್ ಮಾಡುವ ಪ್ರಯತ್ನಗಳು ನಡೀತಿದೆ. ಹಾಗಾಗಿ ಸದ್ಯಕ್ಕೆ 'ಕಾಟೇರ' ಚಿಕ್ಕ ಸ್ಕ್ರೀನ್‌ಗಳಿಗೆ ಬರೋದಿಲ್ಲ ಎನ್ನಬಹುದು. ಅಭಿಮಾನಿಗಳು ಸಹ ಇಷ್ಟು ಬೇಗ ಸಿನಿಮಾ ಓಟಿಟಿಗೆ ಬರುವುದನ್ನು ಒಪ್ಪುವುದಿಲ್ಲ.

ಹಲವರು ಮತ್ತೆ ಮತ್ತೆ 'ಕಾಟೇರ' ಸಿನಿಮಾ ನೋಡುವ ಲೆಕ್ಕಾಚಾರದಲ್ಲಿದ್ದಾರೆ. ದೊಡ್ಡ ಪರದೆಯಲ್ಲೇ ಈ ಅದ್ಧೂರಿ ಚಿತ್ರವನ್ನು ಕಣ್ತುಂಬಿಕೊಳ್ಳಬೇಕು ಎಂದು ಕಾಯುತ್ತಿದ್ದಾರೆ. ಮುಂದಿನ ತಿಂಗಳು ತೆಲುಗು, ತಮಿಳಿಗೆ ಡಬ್ ಆಗಿ ಆಂಧ್ರ, ತೆಲಂಗಾಣ, ತಮಿಳುನಾಡಿನಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.

More from Filmibeat

English summary
Darshan's Kaatera OTT Release Date And Platform.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X