ನನ್ನ 04 ಮಕ್ಕಳಿಗೆ ವಿಷ ಕೊಡ್ಲಾ ಅಥವಾ ನಾನೇ ವಿಷ ತಗೊಂಡು ಸಾಯ್ಲಾ- ಕಣ್ಣೀರಾದ ಬಿಗ್ ಬಾಸ್ ಸ್ಫರ್ಧಿ..!

ಬಿಗ್‌ಬಾಸ್ ಶೋ ಎಂಬುದೇ ಹುಚ್ಚರ ಸಂತೆ. ಮತ್ತೊಬ್ಬರ ಖಾಸಗಿ ಬದುಕಿನ ಮೇಲಿರೋ ಮನುಷ್ಯ ಸಹಜ ಕ್ಯೂರಿಯಾಸಿಟಿಯನ್ನೇ ಬಂಡವಾಳ ಮಾಡಿಕೊಂಡ ಈ ಶೋವನ್ನು ಜನ ಬೈದುಕೊಂಡೂ ನೋಡುತ್ತಾರೆ. ನೋಡುತ್ತಲೇ ಬೈಯುತ್ತಾರೆ.

ಇಂಥಾ ಶೋನಲ್ಲಿ ಪ್ರತೀ ಸೀಜನ್ನಿನಲ್ಲಿಯೂ ಚಿತ್ರ ವಿಚಿತ್ರ ವ್ಯಕ್ತಿತ್ವಗಳನ್ನು ಹುಡುಕಾಡಿ ತುಂಬಿಕೊಳ್ಳೋದು ವಾಡಿಕೆ. ಈ ಬಾರಿಯ ಹಿಂದಿ ಬಿಗ್ ಬಾಸ್‌ ಕೂಡ ಇದರಿಂದ ಹೊರತಾಗಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡ ಜನರಿಂದ ತುಂಬಿ ತುಳುಕುತ್ತಿರುವ ಈ ಬಾರಿಯ ಬಿಗ್ ಬಾಸ್‌ ಮನೆಗೆ ಹೈದ್ರಾಬಾದ್ ಮೂಲದ ಯೂಟ್ಯೂಬರ್ ಅರ್ಮಾನ್ ಮಲ್ಲಿಕ್ ತನ್ನ ಇಬ್ಬರು ಹೆಂಡ್ತಿಯರ ಜೊತೆ ಬಿಗ್ ಬಾಸ್ ಮನೆಯನ್ನೂ ಪ್ರವೇಶಿಸಿದ್ದರು. ಸದ್ಯದ ಸಮಾಚಾರ ಏನೆಂದರೆ ಈ ಅರ್ಮಾನ್ ಮಲ್ಲಿಕ್ ಮೊದಲ ಪತ್ನಿ ಪಾಯಲ್ ನಾನು ಆತ್ಮಹತ್ಯೆ ಮಾಡಿಕೊಂಡು ಬಿಡ್ಲಾ ಎಂಬ ಪ್ರಶ್ನೆಯನ್ನೂ ಸಾರ್ವಜನಿಕರಲ್ಲಿ ಕೇಳಿದ್ದಾರೆ.

amid-online-hate-bigg-boss-ott-3s-payal-malik-asks-am-i-supposed-to-consume-poison-and-die

ಹೌದು, ಅಸಲಿಗೆ.. ಅರ್ಮಾನ್ ಮಲ್ಲಿಕ್ ಅವರ ಇಬ್ಬರು ಪತ್ನಿಯರಲ್ಲಿ, ಮೊದಲ ಪತ್ನಿ ಪಾಯಲ್ ಈಗಾಗಲೇ ಮನೆಯಾಚೆ ಬಂದಿದ್ದಾರೆ. ಆದರೆ, ಎರಡನೇ ಪತ್ನಿ ಕೃತಿಕಾ ಇನ್ನೂ ಮನೆಯಲ್ಲಿದ್ದಾರೆ. ಆದರೆ, ಮನೆಯೊಳಗೂ ನೆಮ್ಮದಿಯಿಂದ ಇರಲು ಸಾಧ್ಯವಾಗದೇ ಒದ್ದಾಡಿದ್ದ ಪಾಯಲ್‌ಗೆ ಈಗ ಬಿಗ್ ಬಾಸ್ ಮನೆಯಾಚೆ ಬಂದ ಮೇಲೂ ಕೂಡ ನೆಮ್ಮದಿ ಇಲ್ಲದಂತಾಗಿದೆ. ಯಾಕೆಂದರೆ ಅನೇಕರು ಪಾಯಲ್ ಅವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕೂಡ ಟ್ರೋಲ್ ಮಾಡುತ್ತಿದ್ದಾರೆ. ಹೀಗಾಗಿಯೇ ಮಾನಸಿಕವಾಗಿ ಸಂಪೂರ್ಣ ಕುಗ್ಗಿ ಹೋಗಿರುವ ಪಾಯಲ್ ನಾನು ನನ್ನ ನಾಲ್ಕು ಮಕ್ಕಳಿಗೆ ವಿಷ ಕೊಡಲಾ? ಅಥವಾ ನಾನೇ ವಿಷ ಕುಡಿದು ಸಾಯಲಾ? ಎಂಬ ಪ್ರಶ್ನೆಯನ್ನೂ ಕೇಳಿದ್ದಾರೆ.

ನಿಮಗೆ ಗೊತ್ತಿರಲಿ.. ಪಾಯಲ್ ಅವರಿಗೆ ಅರ್ಮಾನ್ ಮಲ್ಲಿಕ್ ವಿಚ್ಚೇದನ ನೀಡಿಲ್ಲ. ಆದರೂ..ಅರ್ಮಾನ್ ಎರಡನೇ ಮದ್ವೆಯಾಗಿದ್ದಾರೆ. ಇನ್ನೂ.. ಅರ್ಮಾನ್ ಮಲ್ಲಿಕ್ ಮದುವೆಯಾದ ಎರಡನೇ ಹುಡುಗಿ ಕೃತಿಕಾ ಬೇರೆ ಯಾರು ಅಲ್ಲ ಬದಲಿಗೆ ಅರ್ಮಾನ್ ಮೊದಲ ಪತ್ನಿ ಪಾಯಲ್ ಅವರ ಸ್ನೇಹಿತೆ. ಹೀಗಾಗಿಯೇ.. ಪಾಯಲ್ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದೇ ತಡ ಅನೇಕರು ಪಾಯಲ್ ಮೇಲೆ ಕೆಂಡ ಕಾರುತ್ತಿದ್ಧಾರೆ. ಪಾಯಲ್, ಕೃತಿಕಾ, ಅರ್ಮಾನ್ ಅವರು ಬಹುಪತ್ನಿತ್ವವನ್ನು ಬೆಂಬಲಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೇವಲ ಜನಸಾಮಾನ್ಯರಷ್ಟೇ ಅಲ್ಲ ಈ ವಿಚಾರದಲ್ಲಿ ಅನೇಕ ಸೆಲೆಬ್ರೀಟಿಗಳೂ ಕೂಡ ಈ ಮೂವರ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

amid-online-hate-bigg-boss-ott-3s-payal-malik-asks-am-i-supposed-to-consume-poison-and-die

ಇನ್ನೂ ಕೆಲವರು ಪಾಯಲ್ ಗೆ ಕೆಟ್ಟಾ ಕೊಳಕಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರಂತೂ ಪಾಯಲ್‌, ಕೃತಿಕಾಗೆ ಸಲಿಂಗಕಾಮಿಗಳು ಅಂತ ಕೂಡ ಕರೆದಿದ್ದಾರೆ. ಹೀಗಾಗಿಯೇ ತಮ್ಮ ಅಳಲನ್ನೂ ತೋಡಿಕೊಂಡಿರುವ ಪಾಯಲ್, ಪ್ರತಿ ಸೆಲೆಬ್ರಿಟಿಯ ಜೀವನದಲ್ಲಿ ಏನಾದರೊಂದು ವಿವಾದಗಳು ಇರುತ್ತವೆ. ಕೆಲವರಂತೂ ನಮ್ಮ ಬಗ್ಗೆ ಅತಿಯಾಗಿ ಕಾಮೆಂಟ್ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಅರ್ಮಾನ್ ಮಾಡಿದ ತಪ್ಪನ್ನು ಭಾರತದ ಯಾವುದೇ ಪುರುಷ ಮಾಡಬಾರದು. ಕೃತಿಕಾ ಹಾಗೂ ನಾನು ಪ್ರೀತಿಯಿಂದ ಇರೋದಿಕ್ಕೆ ನಾವಿಬ್ಬರು ಇಂದು ಒಂದೇ ಮನೆಯಲ್ಲಿ ಬದುಕುತ್ತಿದ್ದೇವೆ. ಯಾವ ಹೆಣ್ಣು ಕೂಡ ಇದನ್ನು ಸಹಿಸೋದಿಲ್ಲ ಎಂದಿದ್ದಾರೆ. ಕೆಲ ವರ್ಷಗಳಿಂದಲೂ ನಾವು ಬಹುಪತ್ನಿತ್ವವನ್ನು ಬೆಂಬಲಿಸೋದಿಲ್ಲ ಅಂತ ಹೇಳುತ್ತಲೇ ಬಂದಿದ್ದೇವೆ ಆದರೂ ನಮ್ಮನ್ನು ಯಾರು ನಂಬುವುದಿಲ್ಲ ಎಂದು ಬಿಕ್ಕಿದ್ದಾರೆ ಪಾಯಲ್.

ನಮ್ಮ ಮೇಲೆ ದೌರ್ಜನ್ಯ ಮಾಡುತ್ತಿರುವವರಿಗೆ ಏನು ಬೇಕು? ನಾನು ನನ್ನ ನಾಲ್ಕು ಮಕ್ಕಳಿಗೆ ವಿಷ ಕೊಡಲಾ? ಅಥವಾ ನಾನೇ ವಿಷ ಕುಡಿದು ಸಾಯಲಾ? ಎಂದು ಕೂಡ ಕಣ್ಣೀರಿಟ್ಟಿರುವ ಪಾಯಲ್, ನನಗೆ ಈಗ ಜನರು ಕಷ್ಟಕೊಡುವುದನ್ನು ನೋಡಿದರೆ ನನಗೆ ಯಾವಾಗಲೂ ಇಷ್ಟ ಇರಲೇ ಇಲ್ಲ. ಕೃತಿಕಾ, ಅರ್ಮಾನ್ ಅವರನ್ನು ಬಿಗ್ ಬಾಸ್ ಮನೆಯಿಂದ ಹೊರಗಡೆ ಕಳಿಸಿ ಅಥವಾ ನಮಗೆ ವಿಷ ಕೊಟ್ಟುಬಿಡಿ. ಆಗ ಸಮಸ್ಯೆ ಪರಿಹಾರ ಆಗುತ್ತದೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ ಪಾಯಲ್ ಮಲ್ಲಿಕ್.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X