ಆನ್ ಲೈನ್ ನಲ್ಲಿ ನೇರವಾಗಿ ಬಿಡುಗೆಯಾಗುತ್ತಿದೆ ಅಮಿತಾಬ್ ಬಹು ನಿರೀಕ್ಷೆಯ ಸಿನಿಮಾ

ಸದ್ಯಕ್ಕೆ ಲಾಕ್ ಡೌನ್ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಒಂದು ವೇಳೆ ಲಾಕ್ ಡೌನ್ ಮುಗಿದರು ಚಿತ್ರಮಂದಿರಗಳು ತಕ್ಷಣಕ್ಕೆ ಓಪನ್ ಆಗುವುದು ಅನುಮಾನವಿದೆ. ಅಲ್ಲದೆ ಚಿತ್ರಮಂದಿರಗಳಿಗೆ ಜನರು ಬರುವ ಸಾಧ್ಯತೆಯು ತೀರ ಕಡಿಮೆ ಇದೆ. ಹಾಗಾಗಿ ಸದ್ಯ ರಿಲೀಸ್ ಗೆ ರೆಡಿಯಾಗಿರುವ ಸಿನಿಮಾಗಳನ್ನು ಡಿಜಿಟಲ್ ವೇದಿಕೆಯಲ್ಲಿ ಬಿಡುಗಡೆ ಮಾಡುವ ದೊಡ್ಡ ನಿರ್ಧಾರಕ್ಕೆ ಬರುತ್ತಿದ್ದಾರೆ ನಿರ್ಮಾಪಕರು.

ಸದ್ಯ ಬಾಲಿವುಡ್ ನ ಬಹು ನಿರೀಕ್ಷೆಯ ಸಿನಿಮಾ ಆನ್ ಲೈನ್ ನಲ್ಲಿ ತೆರೆಗೆ ಬರಲು ಸಿದ್ಧವಾಗಿದೆ. ಅಲ್ಲದೆ ರಿಲೀಸ್ ದಿನಾಂಕ ಕೂಡ ಅನೌನ್ಸ್ ಆಗಿದೆ. ಹೌದು, ಬಿಗ್ ಬಿ ಅಮಿತಾಬ್ ಬಚ್ಚನ್ ಮತ್ತು ಆಯುಷ್ಮಾನ್ ಖುರಾನ ಅಭಿನಯದ ಗುಲಾಬೋ ಸಿತಾಬೋ ಸಿನಿಮಾ ಡಿಜಿಟಲ್ ಫ್ಲಾಟ್ ಫಾರ್ಮ್ ನಲ್ಲಿ ರಿಲೀಸ್ ಆಗುತ್ತಿದೆ.

ಜೂನ್ 22ರಂದು ಸಿನಿಮಾ ಅಮೆಜಾನ್ ಪ್ರೈಮ್ ನಲ್ಲಿ ರಿಲೀಸ್ ಆಗುತ್ತಿದೆ. ವಿಶೇಷ ಅಂದರೆ ಬಿಗ್ ಬಿ ಅಮಿತಾಬ್ ಬಚ್ಚನ್ ಪಾತ್ರ ಎಲ್ಲರ ಗಮನ ಸೆಳೆಯುತ್ತಿದೆ. ಹಣ್ಣುಹಣ್ಣು ಮುದುಕನ ಪಾತ್ರದಲ್ಲಿ ಬಿಗ್ ಬಿ ಕಾಣಿಸಿಕೊಂಡಿದ್ದಾರೆ. ಮುಂಗೋಪಿ ಮುಸ್ಲಿಂ ವೃದ್ಧನಾಗಿ ಅಮಿತಾಬ್ ಮಿಂಚಿದ್ದಾರೆ.

Amitabh Bachchans Gulabo Sitabo Digital Release On June 22

ಇನ್ನೂ ಪ್ರಮುಖ ಪಾತ್ರದಲ್ಲಿ ನಟ ಆಯುಷ್ಮಾನ್ ಖುರಾನ ನಟಿಸಿದ್ದಾರೆ. ಅಂದ್ಹಾಗೆ ಗುಲಾಬೋ ಸಿತಾಬೋ ನಿರ್ದೇಶಕ ಸುಜಿತ್ ಸರ್ಕಾರ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಪೋಸ್ಟರ್ ಗಳ ಮೂಲಕವೇ ಚಿತ್ರಪ್ರಿಯರ ಹೃದಯ ಗೆದ್ದಿರುವ ಬುಲಾಬೋ ಸಿತಾಬೋ ಜೂನ್ ನಲ್ಲಿ ಆನ್ ಲೈನ್ ನಲ್ಲಿ ತೆರೆಗೆ ಬರುತ್ತಿದೆ. ಮೊದಲ ಬಾರಿಗೆ ದೊಡ್ಡ ಸಿನಿಮಾವೊಂದು ಡಿಜಿಟಲ್ ವೇದಿಕೆಯಲ್ಲಿ ರಿಲೀಸ್ ಆಗುತ್ತಿರುವ ಕಾರಣ ಚಿತ್ರಪ್ರಿಯರ ಪ್ರತಿಕ್ರಿಯೆ ಹೇಗಿರಲಿದೆ ಎನ್ನುವ ಕುತೂಹಲ ಮೂಡಿಸಿದೆ.

More from Filmibeat

English summary
Amitabh Bachchan And Ayushmann Khurrana starrer Gulabo Sitabo digital release on June 22.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X