For Quick Alerts
  ALLOW NOTIFICATIONS  
  For Daily Alerts

  'ದಿ ಜರ್ನಿ ಆಫ್ ಇಂಡಿಯಾ' ಹೊಸ ಶೋಗೆ ಅಮಿತಾಬ್ ಬಚ್ಚನ್ ನಿರೂಪಣೆ!

  |

  ಕೆಲವು ತಿಂಗಳುಗಳ ಹಿಂದಷ್ಟೇ ಭಾರತ 75ನೇ ಸ್ವಾತಂತ್ರ್ಯ ದಿನೋತ್ಸವವನ್ನು ಆಚರಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿಯೇ ಡಿಸ್ಕವರಿ+ ಹೊಸ ಸರಣಿಯೊಂದನ್ನು ಶುರು ಮಾಡುತ್ತಿದ್ದು, ದೇಶದ ಶ್ರೀಮಂತ ಪರಂಪರೆಯನ್ನು ಸಮಕಾಲೀನ ಅದ್ಭುತಗಳನ್ನು ಸ್ಮರಿಸಲು ಮುಂದಾಗಿದೆ.

  ಡಿಸ್ಕವರಿ+ ಪ್ರಸಾರ ಮಾಡುತ್ತಿರುವ ದೇಶದ ಹೆಮ್ಮೆಯನ್ನು ಸಾರುವ ಈ ಹೊಸ ಸರಣಿಯೇ 'ದಿ ಜರ್ನಿ ಆಫ್ ಇಂಡಿಯಾ'. ಈ ಸರಣಿಯು ಆರು ಭಾಗಗಳಲ್ಲಿ ಪ್ರಸಾರ ಆಗಲಿದೆ. ಅಕ್ಟೋಬರ್ 10 ರಿಂದ ಡಿಸ್ಕವರಿ+ನಲ್ಲಿ ಸ್ಟ್ರೀಮಿಂಗ್ ಆಗಲಿದ್ದು, ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ನಿರೂಪಣೆ ಮಾಡಲಿದ್ದಾರೆ.

  ಡಿಸ್ಕವರಿ ಚಾನೆಲ್‌ನಲ್ಲಿ ಕನ್ನಡದಲ್ಲಿಯೇ ನೋಡಿ 'Wild Karnataka': ಸಮಯ ಮತ್ತು ದಿನಾಂಕದ ವಿವರಡಿಸ್ಕವರಿ ಚಾನೆಲ್‌ನಲ್ಲಿ ಕನ್ನಡದಲ್ಲಿಯೇ ನೋಡಿ 'Wild Karnataka': ಸಮಯ ಮತ್ತು ದಿನಾಂಕದ ವಿವರ

  ಈ ಸಿರೀಸ್‌ನಲ್ಲಿ ಭಾರತದ ಗೌರವ ತಂದ ಗಣ್ಯರು, ನಾಯಕರ ವಿಶೇಷ ಕೊಡುಗೆಗಳು, ದೇಶದ ಪರಂಪರೆ ಇವೆಲ್ಲವನ್ನೂ ಸ್ಮರಿಸಲಾಗುತ್ತದೆ. ಈ ಸರಣಿಯು ದೇಶದ ಪ್ರಗತಿಯು ಸಾಗಿ ಬಂದ ದಾರಿಯನ್ನು ಹೇಳಲಿದೆ. ಕಳೆದ 75 ವರ್ಷಗಳಲ್ಲಿ ಭಾರತದ ಕಂಡ ಪ್ರಭಾವ ಹಾಗೂ ಸಾಧನೆಯನ್ನು ಹೇಳಲಿದೆ.

  ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಾದ ಬೆಳವಣಿಗೆ. ಅಂತರಿಕ್ಷ ಕ್ಷೇತ್ರದಲ್ಲಿ ನಮ್ಮ ದೇಶದ ಸಾಧನೆಯಿಂದ ಹಿಡಿದು ಸಿನಿಮಾದವರೆಗೂ ಬೆಳಕು ಚೆಲ್ಲಲಿದೆ. ಹಾಗೇ ದೇಶದ ಮೂಲೆ ಮೂಲೆಯಲ್ಲಿರುವ ಆಹಾರ ಪದ್ಧತಿಯ ಬಗ್ಗೆನೂ ಹೇಳಿದೆ. ಭಾರತ ನಿಧಾನವಾಗಿಯಾದೂ ವಿಶ್ವದಲ್ಲಿ ತನ್ನದೇ ಸ್ಥಾನವನ್ನು ಗಿಟ್ಟಿಸಿಕೊಳ್ಳುತ್ತಿದ್ದು, ಭಾರತದ ಏಳಿಕೆಯನ್ನು ಈ ಸಿರೀಸ್‌ನಲ್ಲಿ ಹೇಳಲಾಗುತ್ತದೆ.

  "ಭಾರತವು 75 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸುತ್ತಿದ್ದು, ಈ ನೆನಪಿಗಾಗಿ ಹೊಸ ಸರಣಿಯು ವಾರ್ನರ್ ಬ್ರದರ್ಸ್, ಡಿಸ್ಕವರಿ ಆರಂಭ ಮಾಡುತ್ತಿದೆ. ರಾಷ್ಟ್ರದ ನೈತಿಕತೆ, ಅದರ ವೈವಿಧ್ಯತೆ, ಸಂಸ್ಕೃತಿ ಮತ್ತು ಭಾರತದ ರೋಮಾಂಚಕ ಪ್ರಯಾಣದಲ್ಲಿ ಪ್ರೇಕ್ಷಕರನ್ನು ಕರೆದೊಯ್ಯಲು ಬಾಲಿವುಡ್ ದಿಗ್ಗಜ ಅಮಿತಾಬ್ ಬಚ್ಚನ್ ಅವರೊಂದಿಗೆ ಕೆಲಸ ಮಾಡಲು ನಾವು ಹೆಮ್ಮೆಪಡುತ್ತೇವೆ." ಎಂದು ವಾರ್ನರ್ ಬ್ರದರ್ಸ್‌ ಸಂಸ್ಥೆಯ ದಕ್ಷಿಣ ಏಷ್ಯಾದ ಜನರಲ್ ಮ್ಯಾನೇಜರ್ ಅರ್ಜುನ್ ನೊಹ್ವಾರ್ ತಿಳಿಸಿದ್ದಾರೆ.

  Amitabh Bachchan To Narrate Six Part Series Of The Journey of India

  'ದಿ ಜರ್ನಿ ಆಫ್ ಇಂಡಿಯಾ' ಸರಣಿಯು ಆರು ಭಾಗಗಳಲ್ಲಿ ಪ್ರಸಾರ ಆಗಲಿದೆ. ಅಕ್ಟೋಬರ್ 10 ರಿಂದ ಪ್ರಸಾರ ಆಗಲಿರುವ ಈ ಸರಣಿಯು ಡಿಸ್ಕವರಿ+ನಲ್ಲಿ ಭಾರತ, ಅಮೆರಿಕ, ಇಂಗ್ಲೆಂಡ್ ಹಾಗೂ ಫಿಲಿಪೈನ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ.

  English summary
  Amitabh Bachchan To Narrate Six Part Series Of The Journey of India, Know More.
  Wednesday, September 21, 2022, 23:20
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X