ಮತ್ತೆ ತೆರೆಮೇಲೆ ವೀರಪ್ಪನ್ ಆಗಿ ಮಿಂಚಲಿದ್ದಾರೆ ನಟ ಕಿಶೋರ್

ಕನ್ನಡದ ನಟ ಕಿಶೋರ್ ದಕ್ಷಿಣ ಭಾರತದ ಭಾಷೆಗಳಲ್ಲಿ ಜನಪ್ರಿಯ ನಟ. ಬಹುತೇಕ ಸೂಪರ್‌ ಸ್ಟಾರ್‌ಗಳ ಜೊತೆ ತೆರೆಹಂಚಿಕೊಂಡಿರುವ ಅವರು, ಎಲ್ಲ ವಿದಧ ಪಾತ್ರಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಈಗಾಗಲೇ ಹಿಂದಿಯ ಒಂದು ವೆಬ್ ಸರಣಿಯಲ್ಲಿ ನಟಿಸಿರುವ ನಟ ಕಿಶೋರ್ ಇದೀಗ ಮತ್ತೊಂದು ವೆಬ್ ಸೀರೀಸ್‌ನಲ್ಲಿ ನಟಿಸಲು ಸಿದ್ಧವಾಗಿದ್ದಾರೆ. ಈಗಾಗಲೇ ನಿರ್ವಹಿಸಿರುವ ಪಾತ್ರವನ್ನೇ ಅವರು ಮತ್ತೆ ನಿರ್ವಹಿಸುತ್ತಿದ್ದಾರೆ.

ಹೌದು, ವೆಬ್ ಸರಣಿಯಲ್ಲಿ ಕಿಶೋರ್ ಅವರು ವೀರಪ್ಪನ್ ಪಾತ್ರಧಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದೆ ಅವರು ಅಟ್ಟಹಾಸ ಸಿನಿಮಾದಲ್ಲಿ ವೀರಪ್ಪನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅವರ ನಟನೆ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿತ್ತು.

ಇದೀಗ ಕಿಶೋರ್ ಅವರು ವೆಬ್ ಸರಣಿಯೊಂದರಲ್ಲಿ ಮತ್ತೆ ವೀರಪ್ಪನ್ ಪಾತ್ರ ನಿರ್ವಹಿಸಲಿದ್ದು, ಈ ವೆಬ್ ಸರಣಿಯು ವೀರಪ್ಪನ್ ಜೀವನದ ಕುರಿತು ಸಿನಿಮಾಗಳಿಗಿಂತಲೂ ಹೆಚ್ಚಿನ ಮಾಹಿತಿ ಒಳಗೊಳ್ಳಲಿದೆ ಎನ್ನಲಾಗುತ್ತಿದೆ.

ಅಟ್ಟಹಾಸ ಸಿನಿಮಾ ನಿರ್ದೇಶಿಸಿದ್ದ ಎ.ಎಂ.ಆರ್.ರಮೇಶ್

ಅಟ್ಟಹಾಸ ಸಿನಿಮಾ ನಿರ್ದೇಶಿಸಿದ್ದ ಎ.ಎಂ.ಆರ್.ರಮೇಶ್

ಅಟ್ಟಹಾಸ ಸಿನಿಮಾ ನಿರ್ದೇಶಿಸಿದ್ದ ಎಎಂಆರ್.ರಮೇಶ್ ಅವರೇ ಈ ವೆಬ್ ಸರಣಿಯನ್ನು ನಿರ್ದೇಶಿಸುತ್ತಿದ್ದಾರೆ. ಅಟ್ಟಹಾಸ ಸಿನಿಮಾದಲ್ಲಿ ಹೇಳಲಾಗದಿದ್ದ ಅನೇಕ ವಿಷಯಗಳನ್ನು ಅವರು ವೆಬ್ ಸರಣಿ ಮೂಲಕ ಹೇಳಲು ಹೊರಟಿದ್ದಾರೆ.

ವೀರಪ್ಪನ್ ಬಗ್ಗೆ ಸಾಕಷ್ಟು ಸಂಶೋಧನೆ

ವೀರಪ್ಪನ್ ಬಗ್ಗೆ ಸಾಕಷ್ಟು ಸಂಶೋಧನೆ

ಅಟ್ಟಹಾಸ ಸಿನಿಮಾ ನಿರ್ದೇಶಿಸುವ ಸಮಯದಲ್ಲಿ ವೀರಪ್ಪನ್ ಬಗ್ಗೆ ಸಾಕಷ್ಟು ಸಂಶೋಧನೆಯನ್ನು ಮಾಡಿದ್ದರಂತೆ ರಮೇಶ್, ಆದರೆ ಎರಡೂವರೆ ಗಂಟೆಯ ಸಿನಿಮಾದಲ್ಲಿ ಎಲ್ಲವನ್ನೂ ಹೇಳಲಾಲು ಸಾಧ್ಯವಾಗಿಲ್ಲ. ಹಾಗಾಗಿ ಈ ವೆಬ್ ಸರಣಿ ಮೂಲಕ ವೀರಪ್ಪನ್ ಜೀವನ ಹಿಡಿದಿಡುವ ಪ್ರಯತ್ನ ಮಾಡುತ್ತಿದ್ದಾರೆ.

ಅಟ್ಟಹಾಸದಲ್ಲಿ ಕಿಶೋರ್ ಅದ್ಭುತ ನಟನೆ

ಅಟ್ಟಹಾಸದಲ್ಲಿ ಕಿಶೋರ್ ಅದ್ಭುತ ನಟನೆ

ಅಟ್ಟಹಾಸ ಸಿನಿಮಾದಲ್ಲಿ ಅದ್ಭುತವಾಗಿ ವೀರಪ್ಪನ್ ಪಾತ್ರದಲ್ಲಿ ಮಿಂಚಿದ್ದ ಕಿಶೋರ್ ಅವರನ್ನೇ ವೆಬ್ ಸರಣಿಗೂ ಆಯ್ಕೆ ಮಾಡಿದ್ದು, ವೆಬ್ ಸರಣಿಗೆ 'ವೀರಪ್ಪನ್; ಹಂಗ್ರಿ ಫಾರ್ ಕಿಲ್' ಎಂದು ಹೆಸರಿಡಲಾಗಿದೆ. ವೆಬ್ ಸರಣಿ ಕನ್ನಡದಲ್ಲಿರುತ್ತದೆಯೋ ಅಥವಾ, ಇಂಗ್ಲಿಷ್-ಹಿಂದಿಯಲ್ಲಿರುತ್ತದೆಯೋ ನೋಡಬೇಕಿದೆ.

ಹಿಂದಿ ವೆಬ್‌ ಸರಣಿಯಲ್ಲಿ ಕಿಶೋರ್ ನಟಿಸಿದ್ದಾರೆ

ಹಿಂದಿ ವೆಬ್‌ ಸರಣಿಯಲ್ಲಿ ಕಿಶೋರ್ ನಟಿಸಿದ್ದಾರೆ

ಇನ್ನು ಕಿಶೋರ್ ಅವರು ಈಗಾಗಲೇ ಒಂದು ವೆಬ್ ಸರಣಿಯಲ್ಲಿ ನಟಿಸಿದ್ದಾರೆ. 'ಶೀ' ಎಂಬ ಮುಂಬೈ ಮಾಫಿಯಾ ಕುರಿತಾ ವೆಬ್ ಸರಣಿಯಲ್ಲಿ ಕಿಶೋರ್ ದೊಡ್ಡ ಗ್ಯಾಂಗ್‌ಸ್ಟರ್ ಪಾತ್ರದಲ್ಲಿ ನಟಿಸಿದ್ದಾರೆ. ಮೊದಲ ಸೀಸನ್‌ ಪ್ರಸಾರವಾಗಿದ್ದು, ಎರಡನೇ ಸೀಸನ್‌ ಬಿಡುಗಡೆ ಆಗಬೇಕಿದೆ.

More from Filmibeat

English summary
Attahasa movie director AMR Ramesh directing web series about Veerappa. Kishore is portraying Veerappan character.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X