OTT Releases This Week: ಈ ವಾರ ಓಟಿಟಿಗೆ ಬ್ಲಾಕ್‌ಬಸ್ಟರ್ ಚಿತ್ರಗಳು, ಲಿಸ್ಟ್‌ನಲ್ಲಿವೆ ಒಟ್ಟು 27 ಸಿನಿಮಾ, ಸೀರಿಸ್
ಸಂಕ್ರಾಂತಿ ಸಂಭ್ರಮ ಮುಗಿದು ಗಣರಾಜ್ಯೋತ್ಸವ ಸಡಗರ ಶುರುವಾಗಿದೆ. ಈ ವಾರವೂ ದೊಡ್ಡ ದೊಡ್ಡ ಸಿನಿಮಾ ತೆರೆಗಪ್ಪಳಿಸುತ್ತಿವೆ. ಬಾಲಿವುಡ್ 'ಫೈಟರ್' ಜೊತೆಗೆ ಕನ್ನಡದಲ್ಲಿ 'ಉಪಾಧ್ಯಕ್ಷ', 'ಬ್ಯಾಚುಲರ್ ಪಾರ್ಟಿ' ಹೀಗೆ ಹಲವು ಸಿನಿಮಾಗಳು ಶುಕ್ರವಾರ ಬಿಡುಗಡೆಗೆ ಸಜ್ಜಾಗಿವೆ. ಇನ್ನು ಓಟಿಟಿಯಲ್ಲಿ ಕೂಡ ಈ ವೀಕೆಂಡ್ ಸಾಕಷ್ಟು ಸಿನಿಮಾಗಳು, ವೆಬ್ ಸೀರಿಸ್‌ಗಳು ಸ್ಟ್ರೀಮಿಂಗ್ ಆಗಲಿದೆ.
ಓಟಿಟಿಯಲ್ಲಿ ಕೆಲವೊಮ್ಮೆ ದೊಡ್ಡ ಸಿನಿಮಾಗಳು ಓಟಿಟಿಗೆ ಬರಲ್ಲ. ಆದರೆ ಗಣರಾಜ್ಯೋತ್ಸವ ಸಂಭ್ರಮದಲ್ಲಿ ಇಂಟ್ರೆಸ್ಟಿಂಗ್ ಸಿನಿಮಾ ಹಾಗೂ ವೆಬ್ ಸೀರಿಸ್ ಸ್ಟ್ರೀಮಿಂಗ್‌ಗೆ ಸಜ್ಜಾಗಿದೆ. ಇತ್ತೀಚೆಗೆ ನೆಟ್‌ಫ್ಲಿಕ್ಸ್ ಸಂಸ್ಥೆ ದಕ್ಷಿಣ ಭಾಷೆಗಳ ಸಿನಿಮಾಗಳನ್ನು ಕೊಂಡುಕೊಳ್ಳುತ್ತಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಪರಭಾಷೆಯ ಕನ್ನಡ ಡಬ್ಬಿಂಗ್ ವರ್ಷನ್‌ಗಳು ರಿಲೀಸ್ ಆಗುತ್ತಿದೆ.

ಈ ವೀಕೆಂಡ್ ಓಟಿಟಿಯಲ್ಲಿ ಬರೋಬ್ಬರಿ 27 ಸಿನಿಮಾ ಹಾಗೂ ವೆಬ್ ಸೀರಿಸ್ ಬರ್ತಿದೆ. ಬಾಲಿವುಡ್ ಸೂಪರ್ ಹಿಟ್ ಅನಿಮಲ್, ಸಾಮ್ ಬಹದೂರ್ ಮಲಯಾಳಂ 'ನೆರು' ಹೀಗೆ ಹಲವು ಸಿನಿಮಾಗಳು ಬಹಳ ಕುತೂಹಲ ಮೂಡಿಸಿವೆ. ಈಗಾಗಲೇ ಥಿಯೇಟರ್‌ಗಳಲ್ಲಿ ಸಿನಿಮಾ ನೋಡಿದವರಿಗೂ ನೋಡದವರಿಗೂ ಮನೆಯಲ್ಲೇ ಕೂತು ನೋಡಲು ಅವಕಾಶ ಸಿಗುತ್ತಿದೆ.
ನೆಟ್‌ಫಿಕ್ಸ್
1. ಅನಿಮಲ್
ಕಳೆದ ವರ್ಷ ಬಾಲಿವುಡ್ ಬಾಕ್ಸಾಫೀಸ್ ಶೇಕ್ ಮಾಡಿದ 'ಅನಿಮಲ್' ಸಿನಿಮಾ ಜನವರಿ 26ಕ್ಕೆ ಸ್ಟ್ರೀಮಿಂಗ್ ಆಗಲಿದೆ. ಕನ್ನಡ ಸೇರಿದಂತೆ 4 ಭಾಷೆಗಳಲ್ಲಿ ಸಿನಿಮಾ ನೆಟ್‌ಫ್ಲಿಕ್ಸ್‌ಗೆ ಎಂಟ್ರಿ ಕೊಡಲಿದೆ. ಪರೋಕ್ಷವಾಗಿ ಈ ವಿಚಾರವನ್ನು ಚಿತ್ರತಂಡ ಹೇಳಿದೆ. ರಣ್‌ಬೀರ್ ಕಪೂರ್, ರಶ್ಮಿಕಾ ಮಂದಣ್ಣ ನಟನೆಯ ಈ ಚಿತ್ರವನ್ನು ಸಂದೀಪ್ ರೆಡ್ಡಿ ವಂಗಾ ನಿರ್ದೇಶನ ಮಾಡಿದ್ದಾರೆ. ಥಿಯೇಟರ್‌ನಲ್ಲಿ 3 ಗಂಟೆ 12 ನಿಮಿಷಗಳ ಸುದೀರ್ಘ ಸಿನಿಮಾ ಬಂದಿತ್ತು. ಓಟಿಟಿ ವರ್ಷನ್‌ನಲ್ಲಿ ಇನ್ನು 12 ನಿಮಿಷ ಕಾಲಾವಧಿ ಹೆಚ್ಚಾಗಲಿದೆ.
2. ಲವ್ ಡೆಡ್‌ಲೈನ್(ಜಪಾನೀಸ್ ಸೀರಿಸ್) ಜನವರಿ 23
3. ಕ್ವೀರ್ ಐ: ಸೀಸನ್-8 (ಇಂಗ್ಲೀಷ್ ಸೀರಿಸ್) ಜನವರಿ 24
4. ಜಾಕ್ವೆಲಿನ್ ನೊವಾಕ್: ಗೆಟ್ ಆನ್ ಯುವರ್ ನೀಸ್(ಇಂಗ್ಲೀಷ್ ಸಿನಿಮಾ) ಜನವರಿ 23
5. ನಾಟ್ ಕ್ವೈಟ್ ನರ್ವಾಲ್: ಸೀಸನ್ 2(ಇಂಗ್ಲೀಷ್ ಸೀರಿಸ್) ಜನವರಿ 22
6. ಗ್ರಿಸೆಲ್ಡಾ(ಇಂಗ್ಲೀಷ್ ಸೀರಿಸ್) ಜನವರಿ 23
7. ಸಿಕ್ಸ್ ನೇಷನ್ಸ್: ಫುಲ್ ಕಾಂಟ್ಯಾಕ್ಟ್(ಇಂಗ್ಲೀಷ್ ಸೀರಿಸ್) ಜನವರಿ 24
8. ಬೂಗ್ಗೀಮ್ಯಾನ್(ಅರಾಬಿಕ್ ಸಿನಿಮಾ) ಜನವರಿ 25
9. ಕ್ರಿಷ್, ಟ್ರಿಷ್, ಬಲ್ಟಿ ಬಾಯ್: ಸೀಸನ್-2(ಹಿಂದಿ ಸೀರಿಸ್) ಜನವರಿ 28
10. ಬ್ಯಾಡ್ ಲ್ಯಾಂಡ್ ಹಂಟರ್ಸ್(ಕೊರಿಯನ್ ಸಿನಿಮಾ)- ಜನವರಿ 26
11. ಮಾಸ್ಟರ್ ಆಫ್ ದಿ ಯೂನಿವರ್ಸ್(ಇಂಗ್ಲೀಷ್ ಸೀರಿಸ್) ಜನವರಿ- 25
ಹಾಟ್‌ಸ್ಟರ್
1. ನೆರು
ಡಿಸೆಂಬರ್ 3ನೇ ವಾರದಲ್ಲಿ ಪ್ರಭಾಸ್ ನಟನೆಯ 'ಸಲಾರ್' ಹಾಗೂ ಶಾರುಖ್ ಖಾನ್ ನಟನೆಯ 'ಡಂಕಿ' ಸಿನಿಮಾಗಳ ಜೊತೆಗೆ ಮಲಯಾಳಂ 'ನೆರು' ಸಿನಿಮಾ ತೆರೆಗೆ ಬಂದಿತ್ತು. ಮೋಹನ್ ಲಾಲ್ ಜೊತೆಗೆ ಪ್ರಿಯಾಮಣಿ ಈ ಕೋರ್ಟ್ ಡ್ರಾಮಾ ಚಿತ್ರದಲ್ಲಿ ಮಿಂಚಿದ್ದರು. 'ದೃಶ್ಯಂ' ಸರಣಿ ರುವಾರಿ ಜಿತು ಜೋಸೆಫ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಜನವರಿ 23ಕ್ಕೆ ಹಾಟ್‌ಸ್ಟರ್‌ನಲ್ಲಿ 'ನೆರು' ಸಿನಿಮಾ ಸ್ಟ್ರೀಮಿಂಗ್ ಆಗಲಿದೆ.
2. ಎ ರಿಯಲ್ ಬಗ್ಸ್ ಲೈಫ್(ಇಂಗ್ಲೀಷ್ ಸೀರಿಸ್) ಜನವರಿ 24
3. ಫೈಟ್ ಕ್ಲಬ್(ತಮಿಳು ಸಿನಿಮಾ) ಜನವರಿ 27
4. ಫ್ಲೆಕ್ಸ್ X ಕಾಪ್(ಕೊರಿಯನ್ ಸೀರಿಸ್) ಜನವರಿ 26
5. ಕರ್ಮ ಕಾಲಿಂಗ್(ಹಿಂದಿ ಸೀರಿಸ್)- ಜನವರಿ 26

ಸೋನಿಲಿವ್
1. ಏಜೆಂಟ್
ಕಳೆದ ವರ್ಷ ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಸೋಲುಂಡಿದ್ದ ತೆಲುಗಿನ 'ಏಜೆಂಟ್' ಸಿನಿಮಾ ಡಿಜಿಟಲ್ ಸ್ಟ್ರೀಮಿಂಗ್‌ಗೆ ಸಜ್ಜಾಗಿದೆ. ಅಖಿಲ್ ಅಕ್ಕಿನೇನಿ ನಟನೆಯ ಸಿನಿಮಾ ಜನವರಿ 26ಕ್ಕೆ ಸೋನಿಲಿವ್‌ನಲ್ಲಿ ಅಪ್‌ಲೋಡ್ ಆಗುವ ಸಾಧ್ಯತೆಯಿದೆ. ಈಗಾಗಲೇ ಸಾಕಷ್ಟು ಬಾರಿ ಸಿನಿಮಾ ಓಟಿಟಿ ಸ್ಟ್ರೀಮಿಂಗ್ ಡೇಟ್ ಬದಲಾಗಿತ್ತು.
ಅಮೇಜಾನ್ ಪ್ರೈಂ
1. ಹಾಸ್ಲರ್ಸ್(ಹಿಂದಿ ಸೀರಿಸ್) ಜನವರಿ 24
2. ಎಕ್ಸ್‌ಪಾಟ್ಸ್(ಇಂಗ್ಲೀಷ್ ಸೀರಿಸ್) ಜನವರಿ 26
3. ಪಂಚಾಯತ್, ಸೀಸನ್-3(ಹಿಂದಿ ಸೀರಿಸ್) ಜನವರಿ 26
4. ಕಜಿಮ್ಯಾನ್(ಇಂಡೋನೇಷ್ಯಾ ಸಿನಿಮಾ) ಜನವರಿ 25
5. ಕೆವಿನ್ ಜೇಮ್ಸ್: ಇರ್ ರಿಗಾರ್ಡ್‌ಲೆಸ್(ಇಂಗ್ಲೀಷ್ ಸ್ಯಾಂಡಪ್ ಕಾಮಿಡಿ) ಜನವರಿ 23
ಜೀ5
1. ಸಾಮ್ ಬಹದೂರ್
ವಿಕ್ಕಿ ಕೌಶಲ್ ಹಾಗೂ ಫಾತಿಮಾ ಸನಾ ಶೇಕ್ ನಟನೆಯ 'ಸಾಮ್ ಬಹದೂರ್' ಸಿನಿಮಾ ಜನವರಿ 26ಕ್ಕೆ ಓಟಿಟಿಗೆ ಬರ್ತಿದೆ. ಮೇಘನಾ ಗುಲ್ಜಾರ್ ನಿರ್ದೇಶನದ ಈ ಸಿನಿಮಾ ಕಳೆದ ವರ್ಷ ಬಿಡುಗಡೆಯಾಗಿ ಪ್ರೇಕ್ಷಕರ ಮನಗೆದ್ದಿತ್ತು. 'ಅನಿಮಲ್' ಸಿನಿಮಾ ಜೊತೆಗೆ ಬಂದರೂ ಬಾಕ್ಸಾಫೀಸ್‌ನಲ್ಲೂ ಸದ್ದು ಮಾಡಿತ್ತು. ಜೀ5ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ.
ಬುಕ್‌ಮೈ ಶೋ
1. ಅಕ್ವಾಮನ್ ಅಂಡ್ ದ ಲಾಸ್ಟ್ ಕಿಂಗ್‌ಡಮ್(ಇಂಗ್ಲೀಷ್ ಸಿನಿಮಾ) ಜನವರಿ 23
2. ವೊಂಕಾ(ಇಂಗ್ಲೀಷ್ ಸಿನಿಮಾ) ಜನವರಿ 22
3. ಫಿಯರ್(ಇಂಗ್ಲೀಷ್ ಸಿನಿಮಾ) ಜನವರಿ 23
ಅಪಲ್ ಪ್ಲಸ್ ಟಿವಿ
1. ಮಾಸ್ಟರ್ಸ್ ಆಫ್ ದ ಏರ್(ಇಂಗ್ಲೀಷ್ ಸೀರಿಸ್) ಜನವರಿ 26
ಜಿಯೋ ಸಿನಿಮಾ
1. ಮೈ ಬಿಗ್ ಫಾಟ್ ಗ್ರೀಕ್ ವೆಡ್ಡಿಂಗ್-3 (ಇಂಗ್ಲೀಷ್ ಸಿನಿಮಾ) ಜನವರಿ 22


Click it and Unblock the Notifications











