ಮತ್ತೊಂದು ಕನ್ನಡ ಸಿನಿಮಾ ಓಟಿಟಿಗೆ ಬಂತು; ಮಿಸ್ ಮಾಡದೇ ನೋಡಿ
ಈ ವಾರ ದುನಿಯಾ ವಿಜಯ್ ನಿರ್ದೇಶಿಸಿ ನಟಿಸಿರುವ 'ಭೀಮ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಮುಂದಿನ ವಾರ ಗಣೇಶ್ ನಟನೆಯ 'ಕೃಷ್ಣಪ್ರಣಯ ಸಖಿ' ಸಿನಿಮಾ ತೆರೆಗೆ ಬರಲಿದೆ. ಇದೆಲ್ಲದರ ನಡುವೆ ವೀಕೆಂಡ್‌ನಲ್ಲಿ ಕನ್ನಡ ಚಿತ್ರವನ್ನು ಕೂಡ ಓಟಿಟಿಯಲ್ಲಿ ನೋಡಿ ಎಂಜಾಯ್ ಮಾಡಬಹುದು.
ಓಟಿಟಿಯಲ್ಲಿ ಆಗೊಮ್ಮೆ ಈಗೊಮ್ಮೆ ಕನ್ನಡ ಸಿನಿಮಾಗಳು ಸ್ಟ್ರೀಮಿಂಗ್ ಆಗುತ್ತವೆ. ದೊಡ್ಡ ಸಿನಿಮಾಗಳನ್ನು ಬಿಟ್ಟು ಚಿಕ್ಕ ಸಿನಿಮಾಗಳನ್ನು ಓಟಿಟಿ ಪ್ಲಾಟ್‌ಫಾರ್ಮ್‌ಗಳು ಕೊಂಡುಕೊಳ್ಳಲ್ಲ. ಇತ್ತೀಚೆಗೆ ನಟ ದುನಿಯಾ ವಿಜಯ್ ಇದೇ ವಿಚಾರದ ಬಗ್ಗೆ ಬೇಸರ ಹೊರ ಹಾಕಿದ್ದರು. ಬೇರೆ ಭಾಷೆ ಸಿನಿಮಾಗಳಿಗೆ ಇರುವ ಮನ್ನಣೆ ಓಟಿಟಿಯಲ್ಲಿ ಕನ್ನಡ ಸಿನಿಮಾಗಳಿಗೆ ಇಲ್ಲ. ಕನ್ನಡ ಸಿನಿಮಾಗಳು ಹಾಗೂ ಕನ್ನಡಿಗರಿಗೆ ಇದರಿಂದ ಅವಮಾನವಾಗುತ್ತಿದೆ ಎಂದಿದ್ದರು.

ಅಮೇಜಾನ್ ಪ್ರೈಂ ವೀಡಿಯೋ ಸಂಸ್ಥೆ ಮಾತ್ರ ಕನ್ನಡ ಸಿನಿಮಾಗಳನ್ನು ಕೊಂಡುಕೊಳ್ಳಲು ಮುಂದೆ ಬರುತ್ತದೆ. ಕೆಲವೊಮ್ಮೆ ಜೀ5 ಹಾಗೂ ಹಾಟ್‌ಸ್ಟರ್‌ನಲ್ಲಿ ಕನ್ನಡ ಸಿನಿಮಾಗಳು ಸ್ಟ್ರೀಮಿಂಗ್ ಆಗುವುದು ಇದೆ. ಇನ್ನುಳಿದಂತೆ ಪೇ ಫಾರ್ ವೀವ್ ಕಾನ್ಸೆಪ್ಟ್‌ನಲ್ಲಿ ಪ್ರೈಂ ವೀಡಿಯೋ ಕನ್ನಡದ ಸಣ್ಣ ಸಿನಿಮಾಗಳನ್ನು ಖರೀದಿಸುತ್ತದೆ. ಇದರಿಂದ ನಿರ್ಮಾಪಕರಿಗೆ ಹೆಚ್ಚಿನ ಲಾಭವೂ ಇಲ್ಲ.
ಇನ್ನು ಕನ್ನಡ ಸಿನಿಮಾಗಳು ಓಟಿಟಿಗೆ ಬಂದರೂ ಆ ಬಗ್ಗೆ ಯಾವುದೇ ಅನೌನ್ಸ್‌ಮೆಂಟ್ ಇರಲ್ಲ. ಆ ವಿಚಾರದಲ್ಲೂ ಕನ್ನಡ ಸಿನಿಮಾಗಳ ಬಗ್ಗೆ ಓಟಿಟಿ ಸಂಸ್ಥೆಗಳು ತಾತ್ಸಾರ ತೋರುತ್ತವೆ. ಸದ್ಯ ವಸಿಷ್ಠ ಸಿಂಹ ನಟನೆಯ 'ಲವ್‌ಲೀ' ಸಿನಿಮಾ ಪ್ರೈಂ ವೀಡಿಯೋಗೆ ಬಂದಿದೆ. ಯಾವುದೇ ಮಾಹಿತಿ ಇಲ್ಲದೇ ಸಿನಿಮಾ ಸ್ಟ್ರೀಮಿಂಗ್ ಮಾಡಲಾಗುತ್ತಿದೆ.

ಜೂನ್ 14ಕ್ಕೆ 'ಲವ್‌ಲೀ' ಸಿನಿಮಾ ತೆರೆಗಪ್ಪಳಿಸಿತ್ತು. ಆದರೆ ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ರೆಸ್ಪಾನ್ಸ್ ಸಿಕ್ಕಿರಲಿಲ್ಲ. ಚೇತನ್ ಕೇಶವ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ಸ್ಟೆಫಿ ಪಟೇಲ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ವಸಿಷ್ಠ ಸಿಂಹ ಸದಾ ರಡಗ್ ಪಾತ್ರಗಳಿಂದಲೇ ಹೆಚ್ಚು ಗಮನ ಸೆಳೆದವರು. ಈ ಚಿತ್ರದಲ್ಲೂ ಅಂಥದ್ದೇ ಪಾತ್ರ ಸಿಕ್ಕಿದೆ. ಆದರೆ ಕಂಪ್ಲೀಟ್ ಸಿನಿಮಾ ಅದೇ ರೀತಿ ಅವರ ಪಾತ್ರ ಇರಲ್ಲ.
ಅಭುವನಸ ಕ್ರಿಯೇಶನ್ಸ್' ಬ್ಯಾನರಿನಲ್ಲಿ ರವೀಂದ್ರ ಕುಮಾರ್ 'ಲವ್‌ಲೀ' ಸಿನಿಮಾ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಜೈ ಎನ್ನುವ ಅನಾಥನ ಪಾತ್ರದಲ್ಲಿ ವಸಿಷ್ಠ ನಟಿಸಿದ್ದಾರೆ. ಮೃಗೀಯ ಗುಣದ ಜೈ ಸದಾ ಹೊಡಿ ಬಡಿ ಕಡಿ ಎಂದು ಅಬ್ಬರಿಸುತ್ತಿರುತ್ತಾನೆ. ಆತನ ಬದುಕಿಗೆ ನಾಯಕಿಯ ಎಂಟ್ರಿ ಆದಮೇಲೆ ಅವನ ಜೀವನ ಮದುವೆ, ಮಗು ಎಂದು ಹೊಸ ತಿರುವು ಪಡೆದುಕೊಳ್ಳುತ್ತದೆ. ಆದರೆ ಅದೊಂದು ಘಟನೆ ಮತ್ತೆ ಅವನ ಬದುಕಿನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸುತ್ತದೆ.
'ಲವ್‌ಲೀ' ಚಿತ್ರಕ್ಕೆ ಅಶ್ವಿನ್ ಕೆನಡಿ ಛಾಯಾಗ್ರಹಣ, ಹರೀಶ್ ಕೊಮ್ಮೆ ಸಂಕಲನ ಇದೆ. ಇನ್ನು ಚಿತ್ರದ ಹಾಡುಗಳಿಗೆ ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿದ್ದು, ಕೆ. ಕಲ್ಯಾಣ್ ಸಾಹಿತ್ಯ ಬರೆದಿದ್ದಾರೆ. ಸಮೀಕ್ಷಾ, ಮಾಳವಿಕಾ, ಅಚ್ಯುತ್ ಕುಮಾರ್, ದತ್ತಣ್ಣ ಮೊದಲಾದವರು ತಾರಾಗಣದಲ್ಲಿದ್ದಾರೆ.
ಈ ವಾರ 'ಲವ್‌ಲೀ' ಜೊತೆಗೆ ರಾಜ್. ಬಿ ಶೆಟ್ಟಿ ನಟನೆಯ ಮಲಯಾಳಂ ಸಿನಿಮಾ 'ಟರ್ಬೊ' ಸಹ ಓಟಿಟಿಗೆ ಬರ್ತಿದೆ. ಕನ್ನಡಕ್ಕೂ ಸಿನಿಮಾ ಡಬ್ ಆಗಿ ಸ್ಟ್ರೀಮಿಂಗ್ ಆಗಲಿದೆ. ಮಮ್ಮುಟ್ಟಿ ಚಿತ್ರದ ನಾಯಕನಾಗಿ ನಟಿಸಿದ್ದರು ರಾಜ್ ಕೂಡ ಖಡಕ್ ರೋಲ್‌ನಲ್ಲಿ ಸವಾಲ್ ಹಾಕುವ ಪಾತ್ರದಲ್ಲಿ ಮಿಂಚಿದ್ದಾರೆ.


Click it and Unblock the Notifications











