ಅನುಪಮಾ ಪರಮೇಶ್ವರನ್ ಹೊಚ್ಚ ಹೊಸ ಸಿನಿಮಾ ಓಟಿಟಿಗೆ ಬಂದಿದೆ; ಈಗ್ಲೇ ನೋಡಿ

ಮೊದಲೆಲ್ಲಾ ಹೊಸ ಸಿನಿಮಾಗಳು ಯಾವಾಗ ತೆರೆಗಪ್ಪಳಿಸುತ್ತವೆ ಎಂದು ಸಿನಿರಸಿಕರು ಕಾಯುತ್ತಿದ್ದರು. ಈಗ ಓಟಿಟಿ ಸ್ಟ್ರೀಮಿಂಗ್ ಸಿನಿಮಾಗಳಿಗಾಗಿ ಎದುರು ನೋಡುವವರ ಸಂಖ್ಯೆ ದೊಡ್ಡದಿದೆ. ಊರಿಗೆ ಬಂದವಳು ನೀರಿಗೆ ಬರಲ್ವಾ ಎನ್ನುವಂತೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಸಿನಿಮಾ ಓಟಿಟಿಗೆ ಬಂದೇ ಬರುತ್ತದೆ ಎಂದು ಕಾದು ಕೂರುತ್ತಾರೆ.

ಇತ್ತೀಚೆಗೆ ಕೆಲ ಸಿನಿಮಾ ಚಿತ್ರಮಂದಿರಗಳಲ್ಲಿ ಮುಗ್ಗರಿಸುತ್ತಿವೆ. ಆದರೆ ಓಟಿಟಿ ರೈಟ್ಸ್‌ನಿಂದ ನಷ್ಟದಿಂದ ಬಚಾವಾಗುತ್ತವೆ. ಓಟಿಟಿ ಬಂದಮೇಲೆ ಚಿತ್ರಮಂದಿರಗಳಿಗೆ ಬರುವವರ ಸಂಖ್ಯೆ ಕಮ್ಮಿ ಆಯಿತು ಎನ್ನುವವರು ಇದ್ದಾರೆ. ಸದ್ಯ ಅನುಪಮಾ ಪರಮೇಶ್ವರನ್ ನಟನೆಯ ಪರದಾ ಸಿನಿಮಾ ಓಟಿಟಿಗೆ ಲಗ್ಗೆ ಇಟ್ಟಿದೆ. ತೆರೆಗಪ್ಪಳಿಸಿದ 20 ದಿನಕ್ಕೆ ಡಿಜಿಟಲ್ ಸ್ಟ್ರೀಮಿಂಗ್ ಆರಂಭಿಸಿದೆ.

Anupama Parameswaran s latest film Hits OTT in 20 Days Explores Superstition with Humor

ಪ್ರವೀಣ್ ಕಂದ್ರೆಗುಲ ನಿರ್ದೇಶನದ ಕಾಮಿಡಿ ಡ್ರಾಮಾ ಚಿತ್ರದಲ್ಲಿ ಅನುಪಮಾ ಜೊತೆಗೆ ದರ್ಶನಾ ರಾಜೇಂದ್ರನ್, ಸಂಗೀತಾ ಕ್ರಿಶ್, ರಾಗ್ ಮಯೂರ್, ಹರ್ಷವರ್ಧನ್ ಹಾಗೂ ರಾಜೇಂದ್ರ ಪ್ರಸಾದ್ ನಟಿಸಿದ್ದಾರೆ. ಮಲಯಾಳಂ ಭಾಷೆಗೂ ಈ ಸಿನಿಮಾ ಬ್ ಆಗಿ ರಿಲೀಸ್ ಆಗಿತ್ತು. ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದ್ದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಸೋತಿತ್ತು.

ಈ ಮಹಿಳಾ ಪ್ರಧಾನ ಸಿನಿಮಾ ಪ್ರೈಂ ವೀಡಿಯೋದಲ್ಲಿ ತೆಲುಗು ಹಾಗೂ ಮಲಯಾಳಂ ವರ್ಷನ್‌ಗಳಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಆನಂದ್ ಮೀಡಿಯಾ ಬ್ಯಾನರ್ ಅಡಿಯಲ್ಲಿ ಶ್ರೀನಿವಾಸುಲು, ವಿಜಯ್ ದೊಂಕಡ ಹಾಗೂವ ಶ್ರೀಧರ್ ಮಕ್ಕುವ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಗೋಪಿ ಸುಂದರ್ ಸಂಗೀತ ಚಿತ್ರಕ್ಕಿದೆ.

Anupama Parameswaran s latest film Hits OTT in 20 Days Explores Superstition with Humor

ಪಡತಿ ಎಂಬ ಒಂದು ಕಾಲ್ಪನಿಕ ಹಳ್ಳಿ. ಅಲ್ಲಿ ಪ್ರತಿ ಮಹಿಳೆ ಮುಖಕ್ಕೆ ಪರದೆ ಕಟ್ಟಿಕೊಂಡು ಇರುತ್ತಾರೆ. ಕುಟುಂಬಸ್ಥರು ಹೊರತುಪಡಿಸಿ ಬೇರೆ ಯಾರಿಗೂ ಅವರ ನೋಡಲು ಅವಕಾಶವಿಲ್ಲ. ಈ ಸಂಪ್ರದಾಯವನ್ನು ಉಲ್ಲಂಘಿಸಿದರೆ ಗ್ರಾಮ ದೇವತೆ ಜ್ವಾಲಮ್ಮನ ಕೋಪಕ್ಕೆ ಗುರಿಯಾಗಬೇಕಾಗುತ್ತದೆ ಎನ್ನುವುದು ಗ್ರಾಮಸ್ಥರ ನಂಬಿಕೆ. ಅದೇ ಊರಿನ ಯುವತಿ ಸುಬ್ಬಲಕ್ಷ್ಮಿ(ಅನುಪಮಾ ಪರಮೇಶ್ವರನ್) ಈ ನಿಯಮನ್ನು ಪಾಲಿಸಿಕೊಂಡು ಬರುತ್ತಿರುತ್ತಾಳೆ. ಆದರೆ ಅದೊಂದು ಅನೀಕ್ಷಿತ ಘಟನೆ ಅವಳ ಬದುಕಿಗೆ ದೊಡ್ಡ ತಿರುವು ಕೊಡುತ್ತದೆ.

ಕಾರಣಾಂತರಗಳಿಂದ ಸುಬ್ಬಲಕ್ಷ್ಮಿ ಧರ್ಮಶಾಲಗೆ ಹೊರಡಬೇಕಾಗುತ್ತದೆ. ಈ ಹಾದಿಯಲ್ಲಿ ಅಮಿಷ್ಟ(ದರ್ಶನಾ ರಾಜೇಂದ್ರನ್) ಹಾಗೂ ರತ್ನ(ಸಂಗೀತಾ) ಕೂಡ ಜೊತೆಯಾಗುತ್ತಾರೆ. ಮುಂದೇನು? ಎನ್ನುವುದು ಸಿನಿಮಾ ಕಥೆ.

ಇತ್ತಿಚಿನ ವರ್ಷಗಳಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಪುರುಷರಿಗಿಂತ ನಾವು ಯಾವುದರಲ್ಲೂ ಕಮ್ಮಿ ಇಲ್ಲ ಎಂದು ಸಾಬೀತು ಮಾಡುತ್ತಾ ಬರ್ತಿದ್ದಾರೆ. ಆದರೂ ಕೆಲವು ಕಡೆಗಳ ಅಸಮಾನತೆ ಮುಂದುವರೆದಿದೆ. ಆಚಾರ, ವಿಚಾರ, ಸಂಪ್ರದಾಯ ಹಾಗೂ ಮೂಢ ನಂಬಿಕೆಯಿಂದ ನಾನಾ ರೀತಿಯಲ್ಲಿ ಶೋಷಣೆಗೆ ಗುರಿಯಾಗುತ್ತಿದ್ದಾರೆ. ಅಂಥದ್ದೇ ಒಂದು ಹಳ್ಳಿಯ ಕಥೆಯನ್ನು ಚಿತ್ರದಲ್ಲಿ ಹೇಳಲಾಗಿದೆ.

ತಮಾಷೆಯಾಗಿಯೇ ಗಂಭೀರ ವಿಚಾರದ ಬಗ್ಗೆ 'ಪರದಾ' ಚಿತ್ರದಲ್ಲಿ ಚರ್ಚಿಸಲಾಗಿದೆ. ಅನುಪಮಾ ಪಾತ್ರದ ಸುತ್ತಾ ಬಹುತೇಕ ಸಿನಿಮಾ ಕಥೆ ಸುತ್ತುತ್ತದೆ. ಸುಬ್ಬಲಕ್ಷ್ಮಿ ಪಾತ್ರದಲ್ಲಿ ಆಕೆಯ ನಟನೆ ಮೆಚ್ಚಿಕೊಳ್ಳಲೇಬೇಕು. ಲಾಜಿಕ್ ಇಲ್ಲದ ಸಾಕಷ್ಟು ದೃಶ್ಯಗಳು ಚಿತ್ರದಲ್ಲಿದೆ.

More from Filmibeat

English summary
Anupama Parameswaran's women-centric film, directed by Praveen Kandregula, is now streaming in Telugu and Malayalam
Read more about: anupama parameswaran tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X