twitter
    For Quick Alerts
    ALLOW NOTIFICATIONS  
    For Daily Alerts

    ನೆಟ್‌ಫ್ಲಿಕ್ಸ್‌ ಸಿಇಒಗೆ ಭಗವದ್ಗೀತೆ ಪುಸ್ತಕ ನೀಡಿದ ಸಚಿವ ಅನುರಾಗ್ ಠಾಕೂರ್

    By ಫಿಲ್ಮಿಬೀಟ್ ಡೆಸ್ಕ್
    |

    ವಿಶ್ವದ ಒಟಿಟಿ ದೈತ್ಯ ನೆಟ್‌ಫ್ಲಿಕ್ಸ್‌ನ ಸಹ ಸಂಸ್ಥಾಪಕ ಮತ್ತು ಸಿಇಒ ರೀಡ್ ಹೇಸ್ಟಿಂಗ್ಸ್ ಭಾರತಕ್ಕೆ ಬಂದಿದ್ದು, ಇಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಅವರನ್ನು ಭೇಟಿ ಮಾಡಿದರು.

    ಭಾರತದಲ್ಲಿ ನೆಟ್‌ಫ್ಲಿಕ್ಸ್‌ ಸಾವಿರಾರು ಕೋಟಿ ತೊಡಗಿಸಿದ್ದು, ಇನ್ನೂ ಹಣ ಹೂಡಿಕೆ ಮಾಡಲು ಉತ್ಸುಕತೆ ಹೊಂದಿದೆ. ಹಾಗಾಗಿಯೇ ರೀಡ್ ಹೇಸ್ಟಿಂಗ್ಸ್, ಕೇಂದ್ರ ಸಚಿವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

    ಭೇಟಿಯ ಚಿತ್ರಗಳನ್ನು ಸಚಿವ ಅನುರಾಗ್ ಠಾಕೂರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ರೀಡ್ ಹೇಸ್ಟಿಂಗ್ಸ್‌ಗೆ ಭಗವದ್ಗೀತೆ ಪುಸ್ತಕವನ್ನು ಉಡುಗೊರೆಯಾಗಿ ನೀಡಿದ್ದಾರೆ. ಅನುರಾಗ್ ಹಂಚಿಕೊಂಡಿರುವ ಚಿತ್ರದಲ್ಲಿ ರೀಡ್ ಹೇಸ್ಟಿಂಗ್ಸ್ ಹಿಮಾಚಲ ಪ್ರದೇಶದ ಸಾಂಪ್ರದಾಯಿಕ ಟೋಪಿ ಮತ್ತು ಶಾಲು ಹೊದ್ದುಕೊಂಡಿದ್ದಾರೆ.

    Anurag Thakur Gifted Bhagavad Gita Book To Netflix CEO Reed Hastings

    ''ನೆಟ್‌ಫ್ಲಿಕ್ಸ್‌ನ ಸಹ ಸಂಸ್ಥಾಪಕ ಮತ್ತು ಸಿಇಒ ರೀಡ್‌ ಹ್ಯಾಸ್ಟಿಂಗ್ಸ್ ಜೊತೆ ಒಳ್ಳೆಯ ಚರ್ಚೆ ಆಯಿತು. ಇಂದು ಒಟಿಟಿಯ ಗ್ರಾಹಕರು ವಿವಿಧ ಕತೆಗಳ ಮೂಲಕ ವಿಶ್ವಕ್ಕೆ ಪರಿಚಯ ಪಡೆಯುತ್ತಿದ್ದಾರೆ. ಭಾರತ ಸಹ ಹಲವು ಹೊಸ ಬಗೆಯ ಕತೆಗಳನ್ನು, ಐಡಿಯಾಗಳನ್ನು, ಅವಕಾಶಗಳನ್ನು ನೀಡುತ್ತಿದೆ'' ಎಂದಿದ್ದಾರೆ.

    ಭಾರತದಲ್ಲಿ ದೊಡ್ಡ ಮೊತ್ತದ ಹಣವನ್ನು ಹೂಡಿಕೆ ಮಾಡುವುದಾಗಿ ರೀಡ್‌ ಹ್ಯಾಸ್ಟಿಂಗ್ಸ್ ಕಳೆದ ಬಾರಿ ಭಾರತಕ್ಕೆ ಬಂದಾಗ ಹೇಳಿದ್ದರು. 3000 ಕೋಟಿ ಹಣವನ್ನು ಭಾರತದಲ್ಲಿ ಹೂಡುತ್ತಿರುವುದಾಗಿ ರೀಡ್ ಹೇಳಿದ್ದರು. ''ಭಾರತವು ಅತಿ ದೊಡ್ಡ ವಿಡಿಯೋ ವೀಕ್ಷಕ ದೇಶವಾಗಿ ಬೆಳೆದಿದೆ. ವಿಡಿಯೋ ಕಂಟೆಂಟ್‌ಗೆ ಇಲ್ಲಿ ಬಹಳ ದೊಡ್ಡ ಡಿಮ್ಯಾಂಡ್ ಇದೆ. ಕೆಲವು ವರ್ಷಗಳಿಂದೀಚೆಗೆ ಭಾರತವು ಒಟಿಟಿ ವಿಭಾಗದಲ್ಲಿ ಸ್ಟೋಟ ಮಾದರಿಯ ಪ್ರಗತಿಯನ್ನು ಸಾಧಿಸಿದೆ. ಕೋವಿಡ್‌ ಸಹ ಇದಕ್ಕೆ ಕಾರಣವಾಗಿದೆ'' ಎಂದಿದ್ದರು.

    Anurag Thakur Gifted Bhagavad Gita Book To Netflix CEO Reed Hastings

    ''ಕಳೆದ ಐದು ವರ್ಷಗಳಲ್ಲಿ ನೆಟ್‌ಫ್ಲಿಕ್ಸ್‌ ಭಾರತದ ಗ್ರಾಹಕರ ಮನಸ್ಸನ್ನು ಅರ್ಥ ಮಾಡಿಕೊಂಡಿದ್ದು, ಭಾರತದ ಗ್ರಾಹಕರ ರುಚಿಗೆ ಅನುಗುಣವಾದ ಕಂಟೆಂಟ್ ಅನ್ನು ನೀಡುತ್ತಿದೆ. ಭಾರತವು ವಿಶ್ವ ಮಟ್ಟದಲ್ಲಿ ದೊಡ್ಡ ಒಟಿಟಿ ಮಾರುಕಟ್ಟೆಯಾಗಿದ್ದು, ಬಹಳ ಭಿನ್ನ ರೀತಿಯ ಕಂಟೆಂಟ್ ಅನ್ನು ಸಹ ಒದಗಿಸುತ್ತಿದೆ. ಹಾಗಾಗಿ ಭಾರತದಲ್ಲಿ ದೊಡ್ಡ ಹೂಡಿಕೆ ಮಾಡುವ ಉದ್ದೇಶ ನೆಟ್‌ಫ್ಲಿಕ್ಸ್‌ಗೆ ಇದೆ'' ಎಂದಿದ್ದಾರೆ ರೀಡ್ಸ್.

    ನೆಟ್‌ಫ್ಲಿಕ್ಸ್ ಭಾರತದ ಜನಪ್ರಿಯ ಒಟಿಟಿಗಳಲ್ಲಿ ಒಂದಾಗಿದೆ. ಭಾರತದ ಕೆಲವು ಪ್ರಾದೇಶಿಕ ಭಾಷೆಯ ಕಂಟೆಂಟ್ ಅನ್ನು ಸಹ ನೆಟ್‌ಫ್ಲಿಕ್ಸ್‌ ನೀಡುತ್ತಿದೆ. ಭಾರತದ ಒಟ್ಟು ಒಟಿಟಿ ಬಳಕೆದಾರರಲ್ಲಿ ಅತಿ ಹೆಚ್ಚು ಮಂದಿ ನೆಟ್‌ಫ್ಲಿಕ್ಸ್‌ ಚಂದಾದಾರರಾಗಿದ್ದಾರೆ. ಎರಡನೇ ಸ್ಥಾನ ಅಮೆಜಾನ್‌ಗಿದೆ. ಅಮೆಜಾನ್ ಪ್ರೈಂಗೆ ಹೋಲಿಸಿದರೆ ನೆಟ್‌ಫ್ಲಿಕ್ಸ್ ಹೆಚ್ಚು ದುಬಾರಿಯಾದರೂ ಭಾರತೀಯರು ಗುಣಮಟ್ಟ ಹಾಗೂ ಒಳ್ಳೆಯ ಕಂಟೆಂಟ್ ದೃಷ್ಟಿಯಿಂದ ನೆಟ್‌ಫ್ಲಿಕ್ಸ್‌ ಅನ್ನು ಆರಿಸಿಕೊಂಡಿದ್ದಾರೆ. ಭಾರತದ ಒಟ್ಟು ಒಟಿಟಿ ಬಳಕೆದಾರರಲ್ಲಿ 26% ಮಂದಿ ನೆಟ್‌ಫ್ಲಿಕ್ಸ್ ಬಳಸುತ್ತಿದ್ದಾರೆ, ಅಮೆಜಾನ್ ಪ್ರೈಂ ಅನ್ನು 19%, ಡಿಸ್ನಿ ಹಾಟ್‌ಸ್ಟಾರ್ ಅನ್ನು 17% , ಜಿಯೋ ಟಿವಿಯನ್ನು 14% ಮಂದಿ ಬಳಸುತ್ತಿದ್ದಾರೆ.

    English summary
    Central information and broadcast minister Anurag Thakur gifted Bhagavad Gita book to Netflix co founder and CEO Reed Hastings.
    Wednesday, September 22, 2021, 20:51
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X