ಅಮೆಜಾನ್, ನೆಟ್‌ಫ್ಲಿಕ್ಸ್ ಜೊತೆಗೆ ಅನುಷ್ಕಾ ಶರ್ಮಾ 400 ಕೋಟಿ ರೂ. ಒಪ್ಪಂದ!

ನಟಿ ಅನುಷ್ಕಾ ಶರ್ಮಾ ಇತ್ತೀಚೆಗೆ ಹೆಚ್ಚು ಸುದ್ದಿ ಆಗಿದ್ದು ತಮ್ಮ ಮಗುವಿನ ವಿಚಾರದಲ್ಲಿ. ಅನುಷ್ಕಾ ಮತ್ತು ವಿರಾಟ್‌ ತಮ್ಮ ಮಗಳ ಫೋಟೊವನ್ನು ಬಿತ್ತರ ಮಾಡದಂತೆ ಮಾಧ್ಯಮಗಳಲ್ಲಿ ವಿನಂತಿಸಿಕೊಂಡಿದ್ದರು. ಇದೀಗ ಅನುಷ್ಕಾ ಶರ್ಮಾ ತಮ್ಮ ಸಿನಿಮಾ ವಿಚಾರವಾಗಿ ಸುದ್ದಿ ಆಗುತ್ತಿದ್ದಾರೆ. ಅನುಷ್ಕಾ ಶರ್ಮಾ ಅವರು ದೊಡ್ಡ ಮಟ್ಟದ ಡೀಲ್‌ನೊಂದಿಗೆ ಸುದ್ದಿ ಆಗಿದ್ದಾರೆ.

ಅನುಷ್ಕಾ ಶರ್ಮಾ ಅವರು ಮದುವೆ, ಮಗು ಆದ ಬಳಿಕ ಮತ್ತೆ ಸಿನಿಮಾರಂಗಕ್ಕೆ ಯಾವಾಗ ಕಮ್‌ ಬ್ಯಾಕ್‌ ಮಾಡ್ತಾರೆ? ಅವರು ಮತ್ತೆ ಸಿನಿಮಾಗಳಲ್ಲಿ ನಟಿಸುವುದು ಯಾವಾಗ? ಎನ್ನುವ ಪ್ರಶ್ನೆ ಪ್ರೇಕ್ಷಕರಲ್ಲಿ. ಸಿನಿಮಾಗಳಲ್ಲಿ ಅಭಿನಯಿಸುವುದು ಮಾತ್ರ ಅಲ್ಲ. ಅವರು ಸಿನಿಮಾಗಳನ್ನು ನಿರ್ಮಾಣ ಮಾಡಲು ಕೂಡ ಮುಂದಾಗಿದ್ದಾರೆ.

ಅನುಷ್ಕಾ ಶರ್ಮಾ ಅವರು ಈಗ ಒಟಿಟಿ ಮೇಲೆ ಕಣ್ಣಿಟ್ಟಿದ್ದಾರೆ. ಒಟಿಟಿ ಪ್ಲ್ಯಾಟ್ ಫಾರ್ಮ್‌ಗಳಾದ ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್ ವಿಡಿಯೋ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಮೂಲಕ ಭಾರಿ ಸಂಚಲನ ಮೂಡಿಸಿದ್ದಾರೆ.

ಅನುಷ್ಕಾ ಶರ್ಮಾ ನಿರ್ಮಾಣ ಸಂಸ್ಥೆಯಿಂದ ದೊಡ್ಡ ಯೋಜನೆ!

ಅನುಷ್ಕಾ ಶರ್ಮಾ ನಿರ್ಮಾಣ ಸಂಸ್ಥೆಯಿಂದ ದೊಡ್ಡ ಯೋಜನೆ!

ನಟಿ ಅನುಷ್ಕಾ ಶರ್ಮಾ ಮತ್ತು ಅವರ ಸಹೋದರ ಕರ್ಣೇಶ್ ಅವರು 'ಕ್ಲೀನ್ ಸ್ಲೇಟ್ ಫಿಲ್ಸ್' ಎನ್ನುವ ನಿರ್ಮಾಣ ಸಂಸ್ಥೆಯ ಮಾಲಿಕತ್ವ ಹೊಂದಿದ್ದಾರೆ. ಈ ನಿರ್ಮಾಣ ಸಂಸ್ಥೆಯಿಂದ ಈಗಾಗಲೇ ಕೆಲವೊಂದು ವೆಬ್‌ ಸರಣಿಗಳನ್ನು ನಿರ್ಮಾಣ ಮಾಡಲಾಗಿದೆ. ಈಗ ಇದೇ ಸಂಸ್ಥೆಯ ಮೂಲಕ ಅನುಷ್ಕಾ ಶರ್ಮಾ ಮತ್ತು ಅವರ ಸಹೋದರ ದೊಡ್ಡ ಯೋಜನೆ ಕೈಗೊಂಡಿದ್ದಾರೆ. ಒಟಿಟಿ ವೇದಿಕೆಗಳಾದ ಅಮೆಜಾನ್ ಮತ್ತು ನೆಟ್‌ಫ್ಲಿಕ್ಸ್‌ಗೆ ಸಿನಿಮಾ ಮತ್ತು ವೆಬ್ ಸರಣಿಗಳನ್ನು ಮಾಡಲು ಮುಂದಾಗಿದ್ದಾರೆ. ಇದಕ್ಕೆ ಅವರ ನಿರ್ಮಾಣ ಸಂಸ್ಥೆಗೆ ದಕ್ಕಿರುವುದು 400 ಕೋಟಿ ರೂಪಾಯಿ ಎನ್ನಲಾಗಿದೆ.

8 ತಿಂಗಳು, 54 ಮಿಲಿಯನ್ ಡಾಲರ್!

8 ತಿಂಗಳು, 54 ಮಿಲಿಯನ್ ಡಾಲರ್!

ಅನುಷ್ಕಾ ಅವರ ಈ 'ಕ್ಲೀನ್ ಸ್ಲೇಟ್ ಫಿಲ್ಸ್' ನಿರ್ಮಾಣ ಸಂಸ್ಥೆ ಅಮೆಜಾನ್ ಮತ್ತು ನೆಟ್‌ಫ್ಲಿಕ್ಸ್‌ ಎರಡೂ ಸಂಸ್ಥೆಗಳ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಒಟ್ಟು 8 ತಿಂಗಳುಗಳ ಕಾಲ ಸಿನಿಮಾಗಳು ಮತ್ತು ವೆಬ್‌ ಸರಣಿಯನ್ನು ಅನುಷ್ಕಾ ಶರ್ಮಾ ಅವರ ನಿರ್ಮಾಣ ಸಂಸ್ಥೆ ನಿರ್ಮಾಣ ಮಾಡಲಿದೆಯಂತೆ. ಈ ಒಟಿಟಿ ಯೋಜನೆ ಒಟ್ಟು 54 ಮಿಲಿಯನ್‌ ಡಾಲರ್ ಅಂದರೆ 400 ಕೋಟಿ ರೂ.ಗೆ ಡೀಲ್‌ ಆಗಿದೆ ಎಂದು ವರದಿ ಆಗಿದೆ. ಆದರೆ ಈ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಂಡಿಲ್ಲ. ಈ ಬಗ್ಗೆ ಎಲ್ಲಾ ಕೆಲಸಗಳು ಪೂರ್ಣ ಆದ ಬಳಿಕ ಅಧಿಕೃತವಾಗಿ ಪ್ರಕಟ ಮಾಡಲು ಅನುಷ್ಕಾ ಶರ್ಮಾ ನಿರ್ಧಾರ ಮಾಡಿದ್ದಾರಂತೆ.

ವೆಬ್‌ ಸರಣಿಯಲ್ಲಿ ನಟಿಸುತ್ತಾರಾ ಅನುಷ್ಕಾ!

ವೆಬ್‌ ಸರಣಿಯಲ್ಲಿ ನಟಿಸುತ್ತಾರಾ ಅನುಷ್ಕಾ!

ಇನ್ನು ನಟಿ ಅನುಷ್ಕಾ ಶರ್ಮಾ ಅವರ ಕಮ್‌ ಬ್ಯಾಕ್‌ ಬಗ್ಗೆಯೂ ಸಾಕಷ್ಟು ನಿರೀಕ್ಷೆಗಳು ಹುಟ್ಟುಕೊಂಡಿವೆ. ಈಗ ಈ ಸುದ್ದಿ ಬಂದಿರುವುದರಿಂದ, ಅನುಷ್ಕಾ ಶರ್ಮಾ ಅವರು ತಮ್ಮ ಪ್ರೊಡಕ್ಷನ್‌ ಹೌಸ್‌ನಲ್ಲೇ ನಿರ್ಮಾಣ ಆಗಲಿರುವ ಸಿನಿಮಾ ಮತ್ತು ವೆಬ್‌ ಸರಣಿಗಳಲ್ಲಿ ನಟಿಸುವ ಸಾಧ್ಯತೆ ಇದೆ. ಆದರೆ ಅದು ಯಾವ ಸಿನಿಮಾ, ಯಾವ ವೆಬ್‌ ಸರಣಿ ಎನ್ನುವ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಯಲಿದೆ.

3 ದೊಡ್ಡ ಚಿತ್ರಗಳೊಂದಿಗೆ ಅನುಷ್ಕಾ ಶರ್ಮಾ ಕಮ್‌ ಬ್ಯಾಕ್!

3 ದೊಡ್ಡ ಚಿತ್ರಗಳೊಂದಿಗೆ ಅನುಷ್ಕಾ ಶರ್ಮಾ ಕಮ್‌ ಬ್ಯಾಕ್!

ಅನುಷ್ಕಾ ಶರ್ಮಾ ಅವರು ಮತ್ತೆ ಸಿನಿಮಾ ಮಾಡುತ್ತಾರೆ ಎನ್ನುವ ಸುದ್ದಿ ಇತ್ತೀಚೆಗೆ ಹರಿದಾಡಿತ್ತು. ಅನುಷ್ಕಾ ಶರ್ಮಾ ಈಗಾಗಲೇ ಮೂರು ಚಿತ್ರಗಳಿಗೆ ಸಹಿ ಹಾಕಿದ್ದಾರೆ ಎನ್ನುವ ಸುದ್ದಿ ಕೂಡ ಹೊರ ಬಂದಿತ್ತು. ಮೂರು ಚಿತ್ರಗಳ ಕಥೆ ಕೇಳಿ ಅಭಿನಯಿಸಲು ಅನುಷ್ಕಾ ಶರ್ಮಾ ಒಪ್ಪಿಕೊಂಡಿದ್ದಾರಂತೆ. ಅದರಲ್ಲಿ ಎರಡು ಚಿತ್ರಗಳು ನೇರವಾಗಿ ಥಿಯೇಟರ್‌ನಲ್ಲಿ ರಿಲೀಸ್ ಆಗುತ್ತವೆ ಅಂತೆ. ಇನ್ನು ಒಂದು ಚಿತ್ರ ಒಟಿಟಿಯಲ್ಲಿ ತೆರೆ ಕಾಣಲಿದೆ ಎನ್ನುವ ಬಗ್ಗೆ ವರದಿ ಆಗಿದೆ.

More from Filmibeat

English summary
Anushka Sharma Production House Strikes Rs 400 crore Deal With OTT: Full Details Out Soon,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X