ಅಪ್ಪು to ಗಂಧದಗುಡಿ: ಪುನೀತ್ ರಾಜ್‌ಕುಮಾರ್ ನಟನೆಯ ಎಲ್ಲಾ ಚಿತ್ರಗಳು ಯಾವ ಓಟಿಟಿಯಲ್ಲಿ ಲಭ್ಯ?
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್. ಕನ್ನಡ ಚಿತ್ರರಂಗ ಕಂಡ ಪಕ್ಕಾ ಫ್ಯಾಮಿಲಿ ಹೀರೊ. ಬದುಕಿದ್ದಷ್ಟೂ ದಿನ ಇತರರಿಗೆ ಸಹಾಯ ಮಾಡಿ ಸದ್ಯ ಅಭಿಮಾನಿಗಳ ಮನದಲ್ಲಿ ದೇವರ ಸ್ಥಾನ ಗಿಟ್ಟಿಸಿಕೊಂಡು ಇತರರಿಗೆ ಮಾದರಿಯಾಗಿ ನಟನೆಂದರೆ ಹೀಗಿರಬೇಕು ಎನಿಸಿಕೊಂಡಿದ್ದಾರೆ. ಇನ್ನು ಪುನೀತ್ ರಾಜ್‌ಕುಮಾರ್ ತೆರೆಮೇಲೆ ಹಾಗೂ ನಿಜ ಜೀವನದಲ್ಲಿ ಸಮಾಜಕ್ಕೆ ಉತ್ತಮ ಸಂದೇಶ ಕೊಟ್ಟಂತಹ ನಟ. ಹೌದು, ಅಪ್ಪು ನಟಿಸಿದ ಬಹುತೇಕ ಎಲ್ಲಾ ಚಿತ್ರಗಳೂ ಉತ್ತಮ ಸಂದೇಶ ಹೊಂದಿದ್ದ ಸಿನಿಮಾಗಳೇ.
ಕುಟುಂಬದ ಪ್ರಾಮುಖ್ಯತೆ, ಸಂಬಂಧಗಳ ಮೌಲ್ಯ, ಶಿಕ್ಷಣದ ಮಹತ್ವ ಹೀಗೆ ಹಲವಾರು ಬಗೆ ಬಗೆಯ ಸಂದೇಶಗಳನ್ನು ಒಳಗೊಂಡಿದ್ದ ಸಿನಿಮಾಗಳನ್ನು ಪುನೀತ್ ರಾಜ್‌ಕುಮಾರ್ ಸಿನಿ ರಸಿಕರಿಗೆ ಕೊಟ್ಟು ಹೋಗಿದ್ದಾರೆ. ಹೀಗೆ ಸಂದೇಶಗಳನ್ನು ಒಳಗೊಂಡಿದ್ದ ಪುನೀತ್ ರಾಜ್‌ಕುಮಾರ್ ಸಿನಿಮಾಗಳೆಂದರೆ ಕುಟುಂಬ ಸಮೇತರಾಗಿ ಚಿತ್ರಮಂದಿರಗಳಿಗೆ ತೆರಳಿ ವೀಕ್ಷಿಸುವ ಸಿನಿ ರಸಿಕರು ಹೆಚ್ಚಿದ್ದರು. ಆದರೆ ಇನ್ನುಮುಂದೆ ಪುನೀತ್ ರಾಜ್‌ಕುಮಾರ್ ಅಭಿನಯದ ಹೊಸ ಚಿತ್ರಗಳಾವುವೂ ಬಿಡುಗಡೆಯಾಗುವುದಿಲ್ಲ. ಹುಟ್ಟುಹಬ್ಬದ ಪ್ರಯುಕ್ತ ಮಾತ್ರ ಅಪ್ಪು ಅಭಿನಯದ ಹಳೆಯ ಚಿತ್ರಗಳನ್ನೇ ಮರುಬಿಡುಗಡೆ ಮಾಡಲಿದ್ದು, ಆಗ ಮಾತ್ರ ಅಪ್ಪು ಸಿನಿಮಾಗಳನ್ನು ಬೆಳ್ಳಿ ತೆರೆ ಮೇಲೆ ವೀಕ್ಷಿಸಬಹುದಾಗಿದೆ.

ಆದರೆ ಓಟಿಟಿ ಅಪ್ಲಿಕೇಶನ್‌ಗಳಲ್ಲಿ ಹಾಗೂ ಯುಟ್ಯೂಬ್‌ನಲ್ಲಿ ಪುನೀತ್ ರಾಜ್‌ಕುಮಾರ್ ನಟನೆಯ ಚಿತ್ರಗಳನ್ನು ವೀಕ್ಷಿಸಬಹುದಾಗಿದ್ದು, ಅಪ್ಪು ಚಿತ್ರದಿಂದ ಗಂಧದಗುಡಿ ಚಿತ್ರದವರೆಗಿನ ಎಲ್ಲಾ ಸಿನಿಮಾಗಳೂ ಯಾವ ಓಟಿಟಿಯಲ್ಲಿ ಲಭ್ಯ ಎಂಬ ಮಾಹಿತಿ ಈ ಕೆಳಕಂಡಂತಿದೆ.
ಅಪ್ಪು - ವೂಟ್
ಅಭಿ - ವೂಟ್
ವೀರ ಕನ್ನಡಿಗ - ಎಂ ಎಕ್ಸ್ ಪ್ಲೇಯರ್
ಮೌರ್ಯ - ವೂಟ್ ಮತ್ತು ಡಿಸ್ನೆ ಪ್ಲಸ್ ಹಾಟ್ ಸ್ಟಾರ್
ಆಕಾಶ್ - ವೂಟ್
ನಮ್ಮ ಬಸವ - ವೂಟ್
ಅಜಯ್ - ವೂಟ್
ಅರಸು - ಎಂ ಎಕ್ಸ್ ಪ್ಲೇಯರ್
ಮಿಲನ - ಜೀ ಫೈವ್
ಬಿಂದಾಸ್ - ಡಿಸ್ನೆ ಪ್ಲಸ್ ಹಾಟ್ ಸ್ಟಾರ್
ವಂಶಿ - ದ ವೆಗಾ ಶೋ ಹಾಗೂ ಎಸ್ ಜಿ ವಿ ಯುಟ್ಯೂಬ್ ಚಾನೆಲ್‌ಗಳಲ್ಲಿ ಲಭ್ಯ
ರಾಜ್ ದ ಶೋ ಮ್ಯಾನ್ - ಎಂ ಎಕ್ಸ್ ಪ್ಲೇಯರ್
ರಾಮ್ - ಸನ್ ನೆಕ್ಸ್ಟ್
ಪೃಥ್ವಿ - ಎಸ್ ಆರ್ ಎಸ್ ಮೀಡಿಯಾ ವಿಷನ್ ಯುಟ್ಯೂಬ್ ಚಾನೆಲ್
ಜಾಕಿ - ಸನ್ ನೆಕ್ಸ್ಟ್ ಮತ್ತು ದ ವೆಗಾ ಶೋ ಯುಟ್ಯೂಬ್ ಚಾನೆಲ್‌ನಲ್ಲಿಯೂ ಲಭ್ಯ
ಹುಡುಗರು - ಡಿಸ್ನೆ ಪ್ಲಸ್ ಹಾಟ್ ಸ್ಟಾರ್
ಪರಮಾತ್ಮ - ಡಿಸ್ನೆ ಪ್ಲಸ್ ಹಾಟ್ ಸ್ಟಾರ್
ಅಣ್ಣಾಬಾಂಡ್ - ಡಿಸ್ನೆ ಪ್ಲಸ್ ಹಾಟ್ ಸ್ಟಾರ್
ಯಾರೇ ಕೂಗಾಡಲಿ - ಸೋನಿ ಲಿವ್
ನಿನ್ನಿಂದಲೇ - ವೂಟ್
ಪವರ್ ಸ್ಟಾರ್ - ಎಸ್ ಜಿ ವಿ ಡಿಜಿಟಲ್ ಯುಟ್ಯೂಬ್ ಚಾನೆಲ್
ಮೈತ್ರಿ - ಎಸ್ ಆರ್ ಎಸ್ ಮೀಡಿಯಾ ವಿಷನ್ ಯುಟ್ಯೂಬ್ ಚಾನೆಲ್
ರಣವಿಕ್ರಮ - ಎಸ್ ಜಿ ವಿ ಡಿಜಿಟಲ್ ಯುಟ್ಯೂಬ್ ಚಾನೆಲ್
ಚಕ್ರವ್ಯೂಹ - ಸನ್ ನೆಕ್ಸ್ಟ್
ದೊಡ್ಮನೆ ಹುಡ್ಗ - ಜೀ ಫೈವ್
ರಾಜಕುಮಾರ - ಸನ್ ನೆಕ್ಸ್ಟ್
ಅಂಜನಿಪುತ್ರ - ಸನ್ ನೆಕ್ಸ್ಟ್
ನಟಸಾರ್ವಭೌಮ - ಜೀ ಫೈವ್
ಯುವರತ್ನ - ಅಮೆಜಾನ್ ಪ್ರೈಮ್ ವಿಡಿಯೊ
ಜೇಮ್ಸ್ - ಸೋನಿ ಲಿವ್
ಗಂಧದಗುಡಿ - ಅಮೆಜಾನ್ ಪ್ರೈಮ್ ವಿಡಿಯೊ


Click it and Unblock the Notifications











