ರೋಮ್ಯಾನ್ಸ್ ವಿಡಿಯೋ ವೈರಲ್ ಆದ ಬೆನ್ನಲ್ಲಿಯೇ 'ಬಿಗ್ ಬಾಸ್' ಮನೆಯಿಂದ ಹೊರದಬ್ಬಲ್ಪಟ್ಟ ಸ್ಫರ್ಧಿ...!
ತಮ್ಮ ಸಾಂಸಾರಿಕ ಬದುಕಿನ ಕಾರಣಕ್ಕೆ ಸದಾ ಸುದ್ದಿಯಾಗುವವರು ಅರ್ಮಾನ್ ಮಲ್ಲಿಕ್. 2011ರಲ್ಲಿ ಖಾಸಗಿ ಬ್ಯಾಂಕ್ ವೊಂದರಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಲೇ ಅದೇ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದ ಪಾಯಲ್ ಅವರನ್ನು ಮದ್ವೆಯಾದ ಅರ್ಮಾನ್, ಆ ನಂತರ .. ತಮ್ಮ ಹೆಂಡ್ತಿ ಪಾಯಲ್ ಅವರ ಸ್ನೇಹಿತೆ ಕೃತಿಕಾ ಅವರನ್ನೂ ಪ್ರೀತಿಸಿದರು. ಮೊದಲ ಪತ್ನಿ ಪಾಯಲ್ ಅವರನ್ನು ಒಪ್ಪಿಸಿ ಅವರ ಸಮ್ಮುಖದಲ್ಲಿಯೇ ಕೃತಿಕಾ ಜೊತೆ ಮದುವೆಯೂ ಆದರು.
ಇಲ್ಲಿಂದಾಚೆ ಇಬ್ಬರು ಹೆಂಡ್ತಿಯರ ಮುದ್ದಿನ ಗಂಡ ಎಂಬ ಕಾರಣಕ್ಕೆ ಎಲ್ಲರ ಗಮನ ಸೆಳೆಯುತ್ತಾ, ಆಗಾಗ ಟ್ರೋಲಿಗರಿಗೆ ಆಹಾರ ಕೂಡ ಆಗ್ತಾ ಬಂದ ಅರ್ಮಾನ್ ಮಲ್ಲಿಕ್, ಬಿಗ್ ಬಾಸ್ ಕಾರ್ಯಕ್ರಮಕ್ಕೆ ತಮ್ಮ ಇಬ್ಬರು ಹೆಂಡ್ತಿಯರ ಜೊತೆಯಲ್ಲಿಯೇ ತೆರಳಿದ್ದರು.

ಆದರೆ, ದುರಾದೃಷ್ಟವಶಾತ್.. ಅರ್ಮಾನ್ ಮಲ್ಲಿಕ್ ಅವರ ಮೊದಲ ಪತ್ನಿ ಪಾಯಲ್ ಮೊದಲ ವಾರದಲ್ಲಿಯೇ ಬಿಗ್ ಬಾಸ್ ಮನೆಯಿಂದ ಹೊರ ಬಂದರು. ಆ ಮನೆಯಾಚೆ ಬಂದು ತಮ್ಮ ಮನೆಗೆ ಮರಳಿದ ನಂತರ ತಮ್ಮ ಮೂವರ ವಿರುದ್ಧ ಮಾಡಲಾದ ಟ್ರೋಲ್‌ಗಳನ್ನು ಕಂಡು ಬೆಚ್ಚಿ ಬಿದ್ದರು. ಮಾನಸಿಕವಾಗಿ ಕುಗ್ಗಿ ಹೋದರು. ನಾನು ನನ್ನ ನಾಲ್ಕು ಮಕ್ಕಳಿಗೆ ವಿಷ ಕೊಡಲಾ? ಅಥವಾ ನಾನೇ ವಿಷ ಕುಡಿದು ಸಾಯಲಾ..? ಎಂದು ಲೈವ್ ಬಂದು ಅಲವತ್ತುಕೊಂಡರು.
ಆದರೆ, ಇದ್ಯಾವುದರ ಅರಿವು ಇಲ್ಲದ ಅರ್ಮಾನ್ ಮಲ್ಲಿಕ್ ಮತ್ತು ಕೃತಿಕಾ, ಬಿಗ್ ಬಾಸ್ ಮನೆಯಲ್ಲಿ ನೆಮ್ಮದಿಯಿಂದ ಇದ್ದರು. ಇನ್ನೂ ಒಂದು ಹೆಜ್ಜೆ ಮುಂದಕ್ಕೋಗಿ ಬಿಗ್ ಬಾಸ್ ಮನೆಯಲ್ಲಿ ಕತ್ತಲಾದ ಬಳಿಕ ಖುಲ್ಲಂ ಖುಲ್ಲಾ ರೊಮ್ಯಾನ್ಸ್ ಮಾಡಿದರು. ಸರಸದ ವಿಡಿಯೋ ವೈರಲ್ ಆದ ನಂತರ ಪ್ರೇಕ್ಷಕರ ಕೆಂಗಣ್ಣಿಗೆ ಕೂಡ ಗುರಿಯಾದರು. ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗೀಡಾದರು.

ಇಂಥಾ ಅರ್ಮಾನ್ ಮಲ್ಲಿಕ್ ಈಗ 40 ದಿನದ ನಂತರ ಬಿಗ್ ಬಾಸ್ ಮನೆಯಿಂದ ಹೊರದಬ್ಬಲ್ಪಟ್ಟಿದ್ದಾರೆ. ಕೊನೆಯ ಹಂತ ತಲುಪಲಾಗದೇ ಎಲಿಮಿನೇಟ್ ಆಗಿದ್ದಾರೆ. ಆದರೆ.. ಅರ್ಮಾನ್ ಮಲ್ಲಿಕ್ ಎರಡನೇ ಕೃತಿಕಾ ಅವರನ್ನು ಪ್ರೇಕ್ಷಕ ಮಹಾಪ್ರಭುಗಳು ಬಿಗ್ ಬಾಸ್ ಮನೆಯಲ್ಲಿಯೇ ಉಳಿಯುವಂತೆ ಮಾಡಿದ್ದಾರೆ. ಮತದಾನ ಮಾಡುವ ಮೂಲಕ ಕೃತಿಕಾಗೆ ಗ್ರ್ಯಾಂಡ್ ಫಿನಾಲೆಗೆ ಕಳಿಸಿದ್ದಾರೆ.
ಆದರೂ ಅದ್ಯಾಕೋ ಅರ್ಮಾನ್ ಮುಖದಲ್ಲಿ ತಮ್ಮ ಎರಡನೇ ಹೆಂಡತಿ ಕೃತಿಕಾ ಅಂತಿಮ ಹಣಾಹಣಿಗೆ ಸಜ್ಜಾಗಿರುವುದಕ್ಕೆ ಖುಷಿ ಇಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ಸಂದರ್ಶನಗಳ ಮೇಲೆ ಸಂದರ್ಶನ ಕೊಡ್ತಿರುವ ಅರ್ಮಾನ್ ಮಲ್ಲಿಕ್, ಫೈನಲ್ ನಲ್ಲಿ ಬಾಲಿವುಡ್‌ನ ನಟ ರಣವೀರ್ ಶೋರೆ ಗೆಲ್ಲಬೇಕೆಂದು ಹೇಳಿದ್ದಾರೆ. ಬಿಗ್ ಬಾಸ್ ಗೆಲ್ಲುವ ಅರ್ಹತೆ- ಯೋಗ್ಯತೆ ಮತ್ತು ಅಗತ್ಯತೆ ರಣವೀರ್ ಶೋರೆ ಅವರಿಗೆ ಮಾತ್ರ ಇದೆ ಎಂದಿದ್ಧಾರೆ.

ಅರ್ಮಾನ್ ಮಲ್ಲಿಕ್ ಅವರ ಈ ಹೇಳಿಕೆಯ ಕುರಿತು ಈಗ ಚರ್ಚೆ ಶುರುವಾಗಿದೆ. ಮೊದಲ ಪತ್ನಿ ಪಾಯಲ್ ಬಳಿ ಹೋದ ತಕ್ಷಣ ಅರ್ಮಾನ್ ತಮ್ಮ ಎರಡನೇ ಪತ್ನಿ ಕೃತಿಕಾ ಅವರನ್ನು ಮರೆತರಾ ಅನ್ನುವ ಪ್ರಶ್ನೆ ಅನೇಕರನ್ನು ಕಾಡುತ್ತಿದೆ. ಅರ್ಮಾನ್ ಏನೇ ಹೇಳಲಿ, ಬಿಗ್ ಬಾಸ್ ಟ್ರೋಫಿ ಎತ್ತಿ ಹಿಡಿಯುವುದು ಕೃತಿಕಾನೇ ಅನ್ನುವ ಅಭಿಪ್ರಾಯ ಕೂಡ ವ್ಯಕ್ತವಾಗುತ್ತಿದೆ. ಅಂದ್ಹಾಗೇ ಅನಿಕ್ ಕಪೂರ್ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಬಿಗ್ ಬಾಸ್ ಓಟಿಟಿ ಸೀಸನ್ ಮೂರರ ಗ್ರ್ಯಾಂಡ್ ಫಿನಾಲೆ ನಾಳೆ ನಡೆಯಲಿದೆ.


Click it and Unblock the Notifications











