For Quick Alerts
  ALLOW NOTIFICATIONS  
  For Daily Alerts

  ಚಿತ್ರಮಂದಿರ ತೆರೆದರೂ ಒಟಿಟಿಗೆ ಜೈ ಎಂದ ಧನುಶ್-ಅಕ್ಷಯ್ ಕುಮಾರ್

  |

  ಮಹಾರಾಷ್ಟ್ರದಲ್ಲಿ ಕೊನೆಗೂ ಚಿತ್ರಮಂದಿರಗಳು ತೆರದಿದೆ. ಜೊತೆಗೆ ಕರ್ನಾಟಕದಲ್ಲೂ ಥಿಯೇಟರ್‌ಗಳಿಗೆ 100% ಅವಕಾಶ ಸಿಕ್ಕಿದೆ. ಈ ಹಿನ್ನೆಲೆ ಬಾಲಿವುಡ್‌ ಹಾಗೂ ದಕ್ಷಿಣದ ನಿರೀಕ್ಷೆಯ ಚಿತ್ರಗಳು ಚಿತ್ರಮಂದಿರದಲ್ಲಿ ರಿಲೀಸ್ ಆಗುತ್ತಿದ್ದು, ಬಿಡುಗಡೆ ದಿನಾಂಕ ಲಾಕ್ ಮಾಡಿಕೊಂಡಿವೆ.

  ಥಿಯೇಟರ್ ಓಪನ್ ಅಗಲಿ ಎಂದು ಕಾದು ಈಗ ಚಿತ್ರಮಂದಿರಕ್ಕೆ ಬರಲು ಸಜ್ಜಾಗಿವೆ ಕೆಲವು ಚಿತ್ರಗಳು. ಆದರೆ, ಧನುಶ್ ಮತ್ತು ಅಕ್ಷಯ್ ಕುಮಾರ್ ನಟನೆಯ ಸಿನಿಮಾವೊಂದು ಚಿತ್ರಮಂದಿರ ತೆರೆದಿದ್ದರೂ ಒಟಿಟಿ ಕಡೆ ಒಲವು ತೋರಿದೆ ಎಂಬ ಸುದ್ದಿ ಹೊರಬಿದ್ದಿದೆ.

  ಡ್ರಗ್ಸ್ ತೆಗೆದುಕೊಳ್ಳಲು ಸೂಚಿಸಿದ್ದು ಸಾರಾ: ಸೈಫ್ ಮಗಳ ವಿರುದ್ಧ ರಿಯಾ ಗಂಭೀರ ಆರೋಪಡ್ರಗ್ಸ್ ತೆಗೆದುಕೊಳ್ಳಲು ಸೂಚಿಸಿದ್ದು ಸಾರಾ: ಸೈಫ್ ಮಗಳ ವಿರುದ್ಧ ರಿಯಾ ಗಂಭೀರ ಆರೋಪ

  ಹೌದು, ಅಕ್ಷಯ್ ಕುಮಾರ್, ಧನುಶ್ ಮತ್ತು ಸಾರಾ ಅಲಿ ಖಾನ್ ನಟನೆಯ ಅತ್ರಂಗಿ ರೇ ಸಿನಿಮಾ ನೇರವಾಗಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗುತ್ತಿದೆ ಎಂಬ ಸುದ್ದಿ ವರದಿಯಾಗಿದೆ. ಈ ಕುರಿತು ಶೀಘ್ರದಲ್ಲೇ ಅಧಿಕೃತ ಪ್ರಕಟಣೆಯೂ ಆಗುವ ಸಾಧ್ಯತೆ ಇದೆ.

  ಅಕ್ಷಯ್ ಕುಮಾರ್ ನಟನೆಯ ಮುಂದಿನ ಎಲ್ಲಾ ಚಿತ್ರಗಳು ಚಿತ್ರಮಂದಿರದಲ್ಲಿಯೇ ರಿಲೀಸ್ ಆಗುತ್ತಿದೆ. ಪೃಥ್ವಿರಾಜ್, ರಕ್ಷಾ ಬಂಧನ್, ರಾಮ್ ಸೇತು ಸಿನಿಮಾಗಳು ಬಿಡುಗಡೆ ದಿನಾಂಕ ಪ್ರಕಟಿಸಿದೆ. ಆದರೆ, ಅತ್ರಂಗಿ ರೇ ಚಿತ್ರದ ಅಪ್‌ಡೇಟ್ ಇರಲಿಲ್ಲ. ಆದ್ರೀಗ, ಒಟಿಟಿ ಬಿಡುಗಡೆ ಕುರಿತು ಸುದ್ದಿಗಳು ಚರ್ಚೆಯಲ್ಲಿದೆ. ಈ ಕುರಿತು ಅಕ್ಷಯ್ ಕುಮಾರ್ ವೆಬ್‌ಸೈಟ್‌ವೊಂದರ ಜೊತೆ ಮಾತನಾಡಿದ್ದಾರೆ.

  ಅತ್ರಂಗಿ ರೇ ಚಿತ್ರೀಕರಣ ಮುಕ್ತಾಯ: ಧನುಶ್‌ಗೆ ಧನ್ಯವಾದ, ಅಕ್ಷಯ್‌ಗೆ ಕ್ಷಮೆ ಕೇಳಿದ ಸಾರಾಅತ್ರಂಗಿ ರೇ ಚಿತ್ರೀಕರಣ ಮುಕ್ತಾಯ: ಧನುಶ್‌ಗೆ ಧನ್ಯವಾದ, ಅಕ್ಷಯ್‌ಗೆ ಕ್ಷಮೆ ಕೇಳಿದ ಸಾರಾ

  ''ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾನು ಇನ್ನೂ ಅತ್ರಂಗಿ ರೇ ಚಿತ್ರವನ್ನು ಬಿಡುಗಡೆ ಪಟ್ಟಿಯಲ್ಲಿ ಸೇರಿಸಿಲ್ಲ. ಏಕೆಂದರೆ ಈ ಚಿತ್ರ ಥಿಯೇಟರ್‌ನಲ್ಲಿ ಬರಬೇಕಾ ಅಥವಾ ಒಟಿಟಿಯಲ್ಲಿ ಬಿಡುಗಡೆಯಾಗಬೇಕೇ ಎಂದು ನಾವು ಇನ್ನೂ ಯೋಚಿಸುತ್ತಿದ್ದೇವೆ.'' ಎಂದು ಅಕ್ಷಯ್ ಕುಮಾರ್ ತಿಳಿಸಿದ್ದಾರೆ. "ಅತ್ರಂಗಿ ರೇ ಅದ್ಭುತವಾದ ಮತ್ತು ಹಿಂದೆಂದೂ ಕೇಳದ ವಿಷಯ ಹಾಗೂ ಕಥಾಹಂದರವನ್ನು ಹೊಂದಿದೆ. ನನಗೆ ಮತ್ತು ಆನಂದ್ ಎಲ್ ರೈಗೆ ಈ ಚಿತ್ರಕ್ಕೆ ಅತ್ಯಂತ ಪ್ರಮುಖವಾಗಿರಲಿದೆ'' ಎಂದು ಅಕ್ಷಯ್ ಕುಮಾರ್ ಹೇಳಿದರು.

  ಇನ್ನು ಮೂಲವೊಂದು ಪಿಂಕ್‌ವಿಲ್ಲಾಗೆ ಈ ಬಗ್ಗೆ ಮಾಹಿತಿ ನೀಡಿದ್ದು, ''ಅಂತ್ರಂಗಿ ರೇ ದೊಡ್ಡ ಚಿತ್ರವೇನು ಅಲ್ಲ. ಆದ್ದರಿಂದ, ನಿರ್ಮಾಪಕರು ಕಳೆದ ಕೆಲವು ತಿಂಗಳುಗಳಿಂದ ಬಿಡುಗಡೆಯ ಬಗ್ಗೆ ಸೂಕ್ಷ್ಮವಾಗಿ ಚರ್ಚಿಸುತ್ತಿದ್ದಾರೆ. ದೇಶದಾದ್ಯಂತ ಸಿನಿಮಾ ಹಾಲ್‌ಗಳು ತೆರೆದಿದ್ದರೂ ಸಹ ಈಗ ನೇರವಾಗಿ OTT ಬಿಡುಗಡೆ ಮಾಡಲು ಆಸಕ್ತಿ ತೋರಿದ್ದಾರೆ" ಎನ್ನಲಾಗಿದೆ.

  English summary
  Sara Ali Khan-Akshay Kumar and Dhanush starrer 'Atrangi Re' is opting for a Direct OTT release via Netflix.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X