This week OTT Releases: ಈ ವಾರ ಸಿನಿರಸಿಕರಿಗೆ ಹಬ್ಬ.. ಓಟಿಟಿ ರಿಲೀಸ್ ಸಿನಿಮಾ, ವೆಬ್ ಸೀರಿಸ್ ಪಟ್ಟಿ
ಮತ್ತೊಂದು ವಾರ ಕಳೀತಾ ಬಂತು. ವಾರಾಂತ್ಯದಲ್ಲಿ ಓಟಿಟಿಯಲ್ಲಿ ಜಬರ್ದಸ್ತ್ ಸಿನಿಮಾಗಳು, ವೆಬ್ ಸೀರಿಸ್‌ಗಳು ಸ್ಟ್ರೀಮಿಂಗ್‌ಗೆ ಸಿದ್ಧವಾಗಿದೆ. ಈಗಾಗಲೇ ಒಂದೊಂದೇ ವೆಬ್ ಸೀರಿಸ್ ರಿಲೀಸ್ ಆಗಲು ಆರಂಭಿಸಿದೆ. ಇನ್ನೆರಡು ಸಿನಿಮಾಗಳಲ್ಲಿ ಮನರಂಜನೆಯ ರಸದೌತಣ ಬರಲಿದೆ. ಈ ವಾರವೂ ಕನ್ನಡ ಕಂಟೆಂಟ್ ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಬರ್ತಿಲ್ಲ. ತೆಲುಗು, ತಮಿಳು, ಹಿಂದಿ, ಇಂಗ್ಲೀಷ್ ಕಂಟೆಂಟ್ ಹೆಚ್ಚು ತುಂಬುತ್ತಿದೆ.
ಈ ವಾರ ಕಾಮಿಡಿ, ಆಕ್ಷನ್, ಫ್ಯಾಮಿಲಿ ಎಂಟರ್‌ಟೈನರ್ ಹೀಗೆ ವಿವಿಧ ಜಾನರ್ ಸಿನಿಮಾ, ವೆಬ್ ಸೀರಿಸ್‌ಗಳು ಓಟಿಟಿಗೆ ಲಗ್ಗೆ ಇಡುತ್ತಿವೆ. ಸ್ಟಾರ್ ನಟರ ಯಾವುದೇ ಸಿನಿಮಾಗಳು ಬರ್ತಿಲ್ಲ. ಯುವ ನಟರ ಸಿನಿಮಾಗಳ ಜೊತೆಗೆ ಹಾಲಿವುಡ್ ವೆಬ್ ಸೀರಿಸ್‌ಗಳು ವೀಕ್ಷಕರನ್ನು ರಂಜಿಸಲು ಕಾಯ್ತಿವೆ. ನೆಟ್‌ಫ್ಲಿಕ್ಸ್‌ನಲ್ಲಿ 'ದ ಹಂಟ್ ಫಾರ್ ವೀರಪ್ಪನ್' ವೆಬ್ ಸೀರಿಸ್ ರಿಲೀಸ್ ಆಗ್ತಿದ್ದು ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ.

ನೆಟ್‌ಫ್ಲಿಕ್ಸ್
1.ರಂಗಬಲಿ
ತೆಲುಗಿನಲ್ಲಿ ನಾಗ ಶೌರ್ಯ ಹಾಗೂ ಯುಕ್ತಿ ತರೇಜಾ ಅಭಿನಯದ 'ರಂಗಬಲಿ' ಸಿನಿಮಾ ಆಗಸ್ಟ್ 4ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗಲಿದೆ. ರಾಜವರಂನ ರಂಗಬಲಿ ಎಂಬಲ್ಲಿ ನಡೆಯುವ ಕತೆ ಈ ಸಿನಿಮಾದಲ್ಲಿದೆ. ಪವನ್ ಬಸಂಶೆಟ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಜುಲೈ 7ರಂದು ಬಿಡುಗಡೆಯಾಗಿದ್ದ ಸಿನಿಮಾ ಪ್ರೇಕ್ಷಕರನ್ನು ರಂಜಿಸುವಲ್ಲಿ ವಿಫಲವಾಗಿತ್ತು. ಶರತ್ ಕುಮಾರ್, ಸತ್ಯ, ಮುರಳಿ ಶರ್ಮಾ, ಸಪ್ತಗಿರಿ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.
2. 'ದಿ ಹಂಟ್ ಫಾರ್ ವೀರಪ್ಪನ್'
ಕಾಡುಗಳ್ಳ ವೀರಪ್ಪನ್ ಕುರಿತು ನಿರ್ಮಾಣವಾಗಿರುವ 'ದಿ ಹಂಟ್ ಫಾರ್ ವೀರಪ್ಪನ್' ಡಾಕ್ಯೂ ಸೀರಿಸ್ ಆಗಸ್ಟ್ 4ರಂದು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಈ ಸೀರಿಸ್ 4 ಭಾಗಗಳಾಗಿ ತಮಿಳು, ಇಂಗ್ಲಿಷ್, ಹಿಂದಿ, ಕನ್ನಡ, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ನೋಡಲು ಸಿಗಲಿದೆ. ಇತ್ತೀಚೆಗಷ್ಟೆ ಭೀಮನ ಅಮಾವಾಸ್ಯೆ ಆಚರಿಸಲಾಯಿತು. ಭೀಮನ ಅಮಾವಾಸ್ಯೆ ದಿನವೇ(2000, ಜುಲೈ 30) ವೀರಪ್ಪನ್, ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅಪಹರಣ ಮಾಡಿದ್ದ. ಈ ವೆಬ್ ಸೀರಿಸ್‌ನಲ್ಲಿ ವೀರಪ್ಪನ್ ಕುರಿತ ಸಾಕಷ್ಟು ಸಂಗತಿಗಳನ್ನು ಕಟ್ಟಿಕೊಡಲಾಗಿದೆ. ಸೆಲ್ವಮಣಿ ಸೆಲ್ವರಾಜ್ ನಿರ್ದೇಶನದ ಈ ವೆಬ್ ಸೀರಿಸ್‌ನ ಅಪೂರ್ವ ಬಕ್ಷಿ ಮತ್ತು ಮೋನಿಶಾ ತ್ಯಾಗರಾಜನ್ ನಿರ್ಮಿಸಿದ್ದಾರೆ.
3. ಸೋಲ್‌ಕ್ಯಾಚರ್ (ಪೋಲೆಂಡ್ ಸಿನಿಮಾ)
4. ಪಾಯ್ಜನ್ ದಿ ಡರ್ಟಿ ಥ್ರೂಥ್ ಎಬೋಟ್ ಇವರ್ ಫುಡ್ (ಹಾಲಿವುಡ್ ಸಿನಿಮಾ)
5. ಮಾರ್ಕ್ ಕ್ಯಾವೆಂಡಿಶ್ ನೆವರ್ ಇನಫ್ (ಹಾಲಿವುಡ್ ಸಿನಿಮಾ)
6. ಜಾಮ್ 100 (ಜಪಾನೀಸ್ ಸಿನಿಮಾ)
7. ಚುನಾ (ವೆಬ್‌ಸರಣಿ)
8. ಹೆಡ್ ಟು ಹೆಡ್ (ಅರೇಬಿಕ್ ಸೀರಿಸ್)
9. ಲಿಂಕನ್ ಲಾಯರ್ ಸೀಸನ್- 2
10. ಫೆಟಲ್ ಸೆಡಕ್ಷನ್ ವಾಲ್ಯೂಮ್- 2

ಸೋನಿ-ಲಿವ್
1. ಪರೇಷಾನ್
ತಿರುವೀರ್ ಮತ್ತು ಪಾವನಿ ಕರಣ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಪರೇಷಾನ್ ಸಿನಿಮಾ ಆಗಸ್ಟ್ 4ರಂದು ಸೋನಿ-ಲಿವ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ರೂಪಕ್ ರೊನಾಲ್ಡ್ ಸನ್ ನಿರ್ದೇಶನದ ಈ ಚಿತ್ರದಲ್ಲಿ ಸಿಂಗರೇಣಿ ಭಾಗದ ಯುವಕರ ಜೀವನವನ್ನು ಬಹಳ ತಮಾಷೆಯಾಗಿ ಹೇಳುವ ಪ್ರಯತ್ನ ಮಾಡಲಾಗಿದೆ. ಸಿದ್ದಾರ್ಥ್ ರಾಣಪಲ್ಲಿ ಹಾಗೂ ನಟ ರಾಣಾ ದಗ್ಗುಬಾಟಿ ಬಂಡವಾಳ ಹೂಡಿದ್ದಾರೆ.
2. ಫಟಾಫತಿ (ಬಂಗಾಳಿ ಸಿನಿಮಾ)
3. ಮೊರಿಬಸ್ (ಹಾಲಿವುಡ್ ಸಿನಿಮಾ)
ಡಿಸ್ನಿ ಪ್ಲಸ್ ಹಾಟ್‌ಸ್ಟಾರ್
1. ದಯಾ ವೆಬ್‌ಸರಣಿ
ಇನ್ನು ತೆಲುಗು ನಟ JD ಚಕ್ರವರ್ತಿ ಅವರ ಚೊಚ್ಚಲ ವೆಬ್ ಸೀರಿಸ್ 'ದಯಾ' ಆಗಸ್ಟ್ 4ರಂದು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಪವನ್ ಸಾದಿನೇನಿ ಈ ವೆಬ್ ಸೀರೀಸ್‌ಗೆ ಆಕ್ಷನ್ ಕಟ್ ಹೇಳಿದ್ದು ಇಶಾರೆಬ್ಬಾ ಮತ್ತು ವಿಷ್ಣುಪ್ರಿಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದೊಂದು ಕ್ರೈಂ ಥ್ರಿಲ್ಲರ್ ವೆಬ್ ಸೀರಿಸ್ ಆಗಿದೆ.
2. ಗಾರ್ಡಿಯನ್ಸ್ ಆಫ್ ದಿ ಗ್ಯಾಲಕ್ಸಿ ವಾಲ್ಯೂಮ್- 3
ಲಯನ್ಸ್ ಗೇಟ್ ಪ್ಲೇ
1. ಡೆವಿಲ್ಸ್ ವರ್ಕ್‌ಶಾಪ್ (ಹಾಲಿವುಡ್ ಸಿನಿಮಾ)
2. ಸೀಕ್ರೆಟ್ ಇನ್ ದೆಯರ್ ಐಸ್ (ಹಾಲಿವುಡ್ ಸಿನಿಮಾ)
ಅಮೆಜಾನ್ ಪ್ರೈಮ್ ವಿಡಿಯೋ
1. ರುದ್ರಂಗಿ
ಜಗಪತಿ ಬಾಬು, ಮಮತಾ ಮೋಹನ್ ದಾಸ್ ನಟನೆಯ 'ರುದ್ರಂಗಿ' ಸಿನಿಮಾ ಈಗಾಗಲೇ ಅಮೇಜಾನ್ ಪ್ರೈಮ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ವಿಮಲಾ ರಾಮನ್ ಹಾಗೂ ಕನ್ನಡ ನಟಿ ಗಾನವಿ ಲಕ್ಷ್ಮಣ್ ಕೂಡ ತಾರಾಗಣದಲ್ಲಿದ್ದಾರೆ. ಥಿಯೇಟರ್‌ಗಳಲ್ಲಿ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿತ್ತು. ಇದೀಗ ಸಿನಿಮಾ ಓಟಿಟಿಗೆ ಎಂಟ್ರಿ ಕೊಡುತ್ತಿದೆ.
2. ಎರುಂಬು (ತಮಿಳು ಸಿನಿಮಾ)
3. ಪೇಂಟ್ (ಹಾಲಿವುಡ್ ಸಿನಿಮಾ)
4. ದಿ ಲಾಸ್ಟ್ ಫ್ಲವರ್ಸ್ ಆಫ್ ಎಲಿಸ್ ಹಾರ್ಟ್
5. ಮೇಡ್ ಇನ್ ಹೆವೆನ್(ಹಿಂದಿ ವೆಬ್ ಸೀರಿಸ್)


Click it and Unblock the Notifications











