OTT This week: ಈ ವಾರ ಓಟಿಟಿಯಲ್ಲಿ ಸೂಪರ್ ಹಿಟ್ ಚಿತ್ರಗಳ ಆರ್ಭಟ: ಆ ಸಿನಿಮಾ ಮೇಲೆ ಎಲ್ಲರ ನಿರೀಕ್ಷೆ

ಸ್ವಾತಂತ್ರ್ಯ ದಿನೋತ್ಸವ ಸಂಭ್ರಮದಲ್ಲಿ 4 ದೊಡ್ಡ ದೊಡ್ಡ ಸಿನಿಮಾಗಳು ತೆರೆಗಪ್ಪಳಿಸಿದ್ದವು. ಆದರೆ ಈ ವಾರ ಓಟಿಟಿಯಲ್ಲಿ ಸೂಪರ್ ಹಿಟ್ ಸಿನಿಮಾಗಳ ಆರ್ಭಟ ಶುರುವಾಗಲಿದೆ. ಈ ಲಿಸ್ಟ್‌ನಲ್ಲಿ ಕನ್ನಡದ ಒಂದು ಇಂಟ್ರೆಸ್ಟಿಂಗ್ ಸಿನಿಮಾ ಕೂಡ ಇದೆ. ತೆಲುಗು, ತಮಿಳು, ಹಿಂದಿಯ ಹಿಟ್ ಸಿನಿಮಾಗಳು ಹಾಗೂ ವೆಬ್‌ ಸೀರಿಸ್‌ಗಳು ವೀಕ್ಷಕರನ್ನು ರಂಜಸಲು ಬರ್ತಿವೆ.

ಮತ್ತೊಂದು ವಾರ ಶುರುವಾಗಿದೆ. ಈ ವಾರ ಓಟಿಟಿಯಲ್ಲಿ ಬಿಡುಗಡೆಯಾಗುವ ಸಿನಿಮಾಗಳ ಬಗ್ಗೆ ಚರ್ಚೆ ಶುರುವಾಗಿದೆ. ಈ ವಾರ ಥಿಯೇಟರ್‌ನಲ್ಲಿ ಕನ್ನಡದ 'ಟೋಬಿ', ಹಿಂದಿಯ 'ಡ್ರೀಮ್‌ ಗರ್ಲ್‌- 2' ಸೇರಿದಂತೆ ಒಂದಷ್ಟು ಸಿನಿಮಾಗಳು ರಿಲೀಸ್ ಆಗುತ್ತಿವೆ. ಆದರೆ ಈ ವಾರ ಥಿಯೇಟರ್‌ಗಿಂತ ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲಿರುವ ಸಿನಿಮಾಗಳ ಬಗ್ಗೆ ಕೆಲವರಿಗೆ ಹೆಚ್ಚು ಆಸಕ್ತಿಯಿದೆ. ಕನ್ನಡದ 'ಆಚಾರ್‌ ಅಂಡ್ ಕೋ', ತೆಲುಗಿನ 'ಬೇಬಿ' ಹಾಗೂ 'ಬ್ರೋ' ಸಿನಿಮಾಗಳು ಹೆಚ್ಚು ನಿರೀಕ್ಷೆ ಮೂಡಿಸಿದೆ.

August week 4 OTT Releases: Baby, Bro, Aachar & co and more

ಅಮೇಜಾನ್ ಪ್ರೈಂ

1. ಆಚಾರ್ & ಕೋ

ಪಿಆರ್‌ಕೆ ಪ್ರೊಡಕ್ಷನ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿ ಪ್ರೇಕ್ಷಕರ ಮನಗೆದ್ದ 'ಆಚಾರ್ & ಕೋ' ಸಿನಿಮಾ ಆಗಸ್ಟ್ 22ಕ್ಕೆ ಅಮೇಜಾನ್‌ ಪ್ರೈಂನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಸಿಂಧು ಶ್ರೀನಿವಾಸ್ ಮೂರ್ತಿ ನಿರ್ದೇಶಿಸಿ ಚಿತ್ರದಲ್ಲಿ ನಟಿಸಿದ್ದಾರೆ. ಇನ್ನುಳಿದಂತೆ ಹಿರಿಯ ನಟ ಅಶೋಕ್, ಸುಧಾ ಬೆಳವಾಡಿ ಸೇರದಂತೆ ರಂಗಭೂಮಿಯ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. 60ರ ದಶಕದ ಅವಿಭಕ್ತ ಕುಟುಂಬದ ಕಥೆ ಚಿತ್ರದಲ್ಲಿದೆ. ಈ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ.

ನೆಟ್‌ಫ್ಲಿಕ್ಸ್

1. ಬ್ರೋ

ಪವನ್ ಕಲ್ಯಾಣ್, ಸಾಯಿ ಧರಮ್ ತೇಜ್ ನಟನೆಯ 'ಬ್ರೋ' ಸಿನಿಮಾ ಕೂಡ ಇದೇ ವಾರ ಓಟಿಟಿಗೆ ಬರ್ತಿದೆ. ಆಗಸ್ಟ್ 25ಕ್ಕೆ ಸಿನಿಮಾ 5 ಭಾಷೆಗಳಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಸಿಗಲಿದೆ. ತಮಿಳಿನ 'ವಿನೋದಯ ಸಿತಂ' ರೀಮೇಕ್ ಆಗಿರುವ ಈ ಚಿತ್ರ ಬಾಕ್ಸಾಫೀಸ್‌ನಲ್ಲಿ ಅಷ್ಟಾಗಿ ಸದ್ದು ಮಾಡಲಿಲ್ಲ. ಸಮುದ್ರ ಖನಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಜುಲೈ 28ಕ್ಕೆ ರಿಲೀಸ್ ಆಗಿದ್ದ ಸಿನಿಮಾ ತಿಂಗಳಿಗೂ ಮುನ್ನ ಓಟಿಟಿಗೆ ಬರ್ತಿದೆ.

2. ಲೈಟ್ ಹೌಸ್ (ಜಪಾನೀಸ್ ಸೀರಿಸ್) - ಆಗಸ್ಟ್ 22 ರಂದು ರಿಲೀಸ್

3. ಬಕಿ ಹಮಾ ಸೀಸನ್ 2: ಭಾಗ 2 (ಜಪಾನೀಸ್ ಸರಣಿ) - ಆಗಸ್ಟ್ 24 ರಂದು ಬಿಡುಗಡೆ

4. ರಗ್ನಾರೋಕ್ ಸೀಸನ್- 3 (ಇಂಗ್ಲೀಷ್ ಸೀರಿಸ್) - ಆಗಸ್ಟ್ 24 ರಂದು ಬಿಡುಗಡೆ

5. ಕಿಲ್ಲರ್ ಬುಕ್ ಕ್ಲಬ್ (ಇಂಗ್ಲೀಷ್ ಸಿನಿಮಾ) - ಆಗಸ್ಟ್ 25 ರಂದು ಬಿಡುಗಡೆ

6. ಯುವರ್ ಸೋ ನ್ಯಾಟ್ ಇನ್‌ವೈಟೆಡ್ ಟೂ ಮೈ ಬ್ಯಾಟ್ ಮಿತ್ವಾ (ಇಂಗ್ಲೀಷ್ ಸಿನಿಮಾ) - ಆಗಸ್ಟ್ 25 ರಂದು ಬಿಡುಗಡೆ

ಡಿಸ್ನಿ ಪ್ಲಸ್ ಹಾಟ್‌ಸ್ಟರ್

1. ಅಶೋಕ (ಇಂಗ್ಲೀಷ್ ಸೀರಿಸ್) - ಆಗಸ್ಟ್ 23 ರಂದು ಬಿಡುಗಡೆ

2. ಐರನ್ ಹಾರ್ಟ್ (ಇಂಗ್ಲೀಷ್ ಸೀರಿಸ್) - ಆಗಸ್ಟ್ 25 ರಂದು ರಿಲೀಸ್

3. ಆಖರಿ ಸಚ್ (ಹಿಂದಿ ಸೀರಿಸ್) - ಆಗಸ್ಟ್ 25 ರಂದು ಬಿಡುಗಡೆ

ಆಹಾ

1. ಬೇಬಿ

ತೆಲುಗಿನಲ್ಲಿ ಈ ವರ್ಷ ಸೂಪರ್ ಹಿಟ್ ಆಗಿದ್ದ 'ಬೇಬಿ' ಸಿನಿಮಾ ಆಗಸ್ಟ್ 25ಕ್ಕೆ ಅಹಾ ಓಟಿಟಿ ಫ್ಲಾಟ್‌ಫಾರ್ಮ್‌ಗೆ ಎಂಟ್ರಿ ಕೊಡಲಿದೆ. ಸಾಯಿ ರಾಜೇಶ್ ನೀಲಂ ನಿರ್ದೇಶನದ ಈ ಚಿತ್ರದಲ್ಲಿ ಆನಂದ್ ದೇವರಕೊಂಡ, ವೈಷ್ಣವಿ ಆಚಾರ್ಯ ಲೀಡ್‌ ರೋಲ್‌ಗಳಲ್ಲಿ ನಟಿಸಿದ್ದಾರೆ. ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಈ ಎಮೋಷನಲ್ ಲವ್ ಸ್ಟೋರಿ ಸೂಪರ್ ಹಿಟ್ ಆಗಿತ್ತು. 70 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಹಾಗಾಗಿ ಈ ಸಿನಿಮಾ ಕೊಂಚ ಹೆಚ್ಚೇ ನಿರೀಕ್ಷೆ ಮೂಡಿಸಿದೆ.

August week 4 OTT Releases: Baby, Bro, Aachar & co and more

ಬುಕ್ ಮೈ ಶೋ

1. ಸ್ಯಾಮ್ ವೇರ್ ಇನ್ ಕ್ವೀನ್ಸ್ - ಇಂಗ್ಲೀಷ್ ಸಿನಿಮಾ - ಆಗಸ್ಟ್ 21 ರಂದು ಬಿಡುಗಡೆ

ಆಪಲ್ ಪ್ಲಸ್ ಟಿವಿ

1. ಇನ್ ವೆಜನ್ ಸೀಸನ್ -2 (ಇಂಗ್ಲೀಷ್ ಸೀರಿಸ್) - ಆಗಸ್ಟ್ 23 ರಂದು ಬಿಡುಗಡೆ

2. ವಾಂಟೆಡ್: ದ ಎಸ್ಕೆಪ್ ಆಫ್ ಕಾರ್ಲೋಸ್ ಗೋಸ್ನ್ (ಇಂಗ್ಲೀಷ್ ಸೀರಿಸ್) - ಆಗಸ್ಟ್ 25 ರಂದು ರಿಲೀಸ್

ಮನೋರಮ್ ಮ್ಯಾಕ್ಸ್

1. ಕುರುಕ್ಕನ್ (ಮಲಯಾಳಂ ಸಿನಿಮಾ) - ಆಗಸ್ಟ್ 25 ರಂದು ಬಿಡುಗಡೆ

More from Filmibeat

English summary
Baby to Aachar & co: new OTT Releases This week.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X